ಹೊನ್ನೂರು ಪ್ರಕಾಶ್ ಬಿಗ್ ಬಾಸ್ ಕನ್ನಡಕ್ಕೆ ಬರಲಿ: ಚಾಮರಾಜನಗರ ರೈತ ಹೋರಾಟಗಾರನಿಗೆ ಅಭಿಮಾನಿಗಳ ಆಗ್ರಹ
![]() |
ಕರ್ನಾಟಕದ ದಕ್ಷಿಣ ಭಾಗದ ಚಾಮರಾಜನಗರ ಜಿಲ್ಲೆಯಲ್ಲಿ ಕಳೆದ ಮೂವತ್ತು ವರ್ಷಗಳಿಂದ ರೈತರ ಜಮೀನು, ನೀರಾವರಿ, ಬೆಳೆ ಪರಿಹಾರ ಮತ್ತು ಕನಿಷ್ಠ ಬೆಂಬಲ ಬೆಲೆ ವಿಚಾರದಲ್ಲಿ ಸರ್ಕಾರದ ವಿರುದ್ಧ ನಿರಂತರ ಜನಪರ ಹೋರಾಟ ನಡೆಸುತ್ತಿರುವ ಹೊನ್ನೂರು ಗ್ರಾಮದ ಪ್ರಸಿದ್ಧ ರೈತ ಹೋರಾಟಗಾರ ಪ್ರಕಾಶ್ ಅವರಿಗೆ ಈ ಬಾರಿಯ ಬಿಗ್ ಬಾಸ್ ಕನ್ನಡ ಕಾರ್ಯಕ್ರಮದಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಜಿಲ್ಲೆಯ ಪ್ರಮುಖ ಯುವ ರೈತ ಮುಖಂಡರಾದ ಚಿಕ್ಕಬಸಪ್ಪ ಹಾಗೂ ಪಣೀಶ್ ಕುಮಾರ್ ಕುದೇರು ಅವರು ಬಲವಾದ ಆಗ್ರಹ ಮಾಡಿದ್ದಾರೆ.
G1 News ಜೊತೆ ಮಾತನಾಡಿದ ಉಮ್ಮತ್ತೂರಿನ ರೈತ ಯುವ ಮುಖಂಡ ಚಿಕ್ಕಬಸಪ್ಪ, ನಮ್ಮ ಪ್ರಕಾಶ್ ಅಣ್ಣ ದಿನ ರಾತ್ರಿ ಅಂತ ನೋಡದೆ ರೈತರಿಗಾಗಿ ಹೋರಾಟ ನಡೆಸುತ್ತಾರೆ. ಅವರಿಗೆ ಬಿಗ್ ಬಾಸ್ ನಲ್ಲಿ ಅವರಿಗೆ ಒಂದು ಅವಕಾಶ ಕೊಡಿ ಎಂದು ಮನವಿ ಮಾಡಿದರು.
ಮಣ್ಣಿನ ಮಗನಿಗೆ ಬಿಗ್ ಬಾಸ್ ವೇದಿಕೆ ಕೊಡಿ, ಒಂದು ಕೋಟಿ ಜನಕ್ಕೆ ರೈತರ ಕಷ್ಟ ತಿಳಿಯಲಿ ಎಂದು ಚಾಮರಾಜನಗರ, ಮೈಸೂರು ಭಾಗದ ಸಾವಿರಾರು ಯುವಕರು ಮತ್ತು ರೈತರು ಪೋಸ್ಟ್ ಹಾಕಿ ಬೆಂಬಲ ಸೂಚಿಸುತ್ತಿದ್ದಾರೆ. ಹೊನ್ನೂರು ಪ್ರಕಾಶ್ ಅವರು ಕಳೆದ ಮೂವತ್ತು ವರ್ಷಗಳಿಂದ ರೈತರ ಭೂಮಿ, ನೀರು ಮತ್ತು ಬೆಳೆಗಳಿಗೆ ನ್ಯಾಯ ಒದಗಿಸಲು ಶ್ರಮಿಸುತ್ತಿದ್ದಾರೆ. ಬೆಳೆ ನಷ್ಟ ಪರಿಹಾರ, ಕನಿಷ್ಠ ಬೆಂಬಲ ಬೆಲೆ ಮತ್ತು ಸಾಲ ಮನ್ನಾ ವಿಚಾರದಲ್ಲಿ ಸರ್ಕಾರದ ಗಮನ ಸೆಳೆಯಲು ಅನೇಕ ಪ್ರತಿಭಟನೆಗಳನ್ನು ಮುನ್ನಡೆಸಿದ್ದಾರೆ.
ರೈತರ ಅಭಿಪ್ರಾಯ
ಹೊನ್ನೂರು ಪ್ರಕಾಶ್ ರವರಿಗೆ ನಮ್ಮ ಹಾಗೆ ಮಣ್ಣಿನ ಮಗ. ಅವರಿಗೆ ಬಿಗ್ ಬಾಸ್‌ನಲ್ಲಿ ಅವಕಾಶ ಸಿಕ್ಕರೆ ಇಡೀ ರಾಜ್ಯದ ರೈತರ ನೋವು, ಸಂಕಷ್ಟಗಳು ಜನರಿಗೆ ತಿಳಿಯುತ್ತವೆ. ಟಿಆರ್‌ಪಿ ಗಳಿಸ್ಕೋರ ಅಲ್ಲ, ರೈತರ ನಿಜವಾದ ಸಮಸ್ಯೆಗಳನ್ನು ಹೇಳಲು ಅವರಿಗೆ ವೇದಿಕೆ ಬೇಕು ಎಂದು ಉಮ್ಮತ್ತೂರಿನ ರೈತ ಮುಖಂಡ ಚಿಕ್ಕಬಸಪ್ಪ ತಿಳಿಸಿದರು.
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಪೋಸ್ಟರ್‌ಗಳಲ್ಲಿ ರೈತನ ಧ್ವನಿ ಬಿಗ್ ಬಾಸ್ ಮನೆಯಲ್ಲಿ ಮೂಡಲಿ ಎಂದು ಬರೆಯಲಾಗಿದೆ.ಚಾಮರಾಜನಗರ ಜಿಲ್ಲೆಯ ನೂರಾರು ಯುವ ರೈತರು ಹಸಿರು ಶಾಲು ತೊಟ್ಟು ರೈತರ ಧ್ವನಿ ಬಿಗ್ ಬಾಸ್‌ಗೆ ಎಂದು ಘೋಷಣೆ ಕೂಗುತ್ತಿರುವ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸದ್ದು ಮಾಡುತ್ತಿವೆ. ರೈತರ ಹಕ್ಕುಗಳಿಗಾಗಿ ಹೋರಾಡಿದ ಧೈರ್ಯವಂತ ನಾಯಕ ಎಂದು ಹೊನ್ನೂರು ಪ್ರಕಾಶ್ ಅವರನ್ನು ರೈತರು ಬಣ್ಣಿಸಿದ್ದಾರೆ.
ಈ ಬಾರಿ ಕೇವಲ ಸಿನಿಮಾ, ಕಿರುತೆರೆ ನಟರಿಗೆ ಮಾತ್ರವಲ್ಲದೆ ಸಮಾಜ ಸೇವಕರು, ರೈತ ನಾಯಕರಿಗೂ ಅವಕಾಶ ನೀಡಬೇಕು. ಹೊನ್ನೂರು ಪ್ರಕಾಶ್ ಅವರಂತಹ ನಿಸ್ವಾರ್ಥ ಹೋರಾಟಗಾರರು ಬಿಗ್ ಬಾಸ್ ಮನೆಗೆ ಬಂದರೆ ಕಾರ್ಯಕ್ರಮಕ್ಕೆ ಹೊಸ ಆಯಾಮ ಸಿಗಲಿದೆ. ಅವರ ಸರಳತೆ, ನೇರ ನುಡಿ ಮತ್ತು ಹೋರಾಟದ ಅನುಭವಗಳು ಯುವ ಪೀಳಿಗೆಗೆ ಸ್ಫೂರ್ತಿಯಾಗಲಿ ಎಂದು ರೈತ ಸಂಘಟನೆಗಳು ಅಭಿಪ್ರಾಯಪಟ್ಟಿದೆ.
ಇಂದಿನ ಯುವಕರಿಗೆ ರೈತ ಸಂಘ, ಹೋರಾಟದ ಅರಿವು ಮೂಡುತ್ತದೆ. ಬಿಗ್ ಬಾಸ್ ನಂತಹ ಮನರಂಜನೆ ವೇದಿಕೆಯಲ್ಲಿ ಒಬ್ಬ ರೈತ ನಾಯಕ ನಿಂತರೆ, ಲಕ್ಷ ಯುವಕರು ರೈತರ ಕಡೆ ನೋಡ್ತಾರೆ. ಒಂದು ಕೋಟಿ ಪ್ರೇಕ್ಷಕರು ಇರುವ ಬಿಗ್ ಬಾಸ್ ವೇದಿಕೆಯಲ್ಲಿ ರೈತರ ಕಷ್ಟ, ಬೆಳೆ ನಷ್ಟ, ಸಾಲದ ಬಾಧೆ ಬಗ್ಗೆ ಮಾತನಾಡಿದರೆ ಸರ್ಕಾರದ ಕಿವಿಗೂ ಬೀಳುತ್ತದೆ, ಯುವ ಪೀಳಿಗೆಗೂ ಅರಿವು ಮೂಡುತ್ತದೆ.
ಹೊನ್ನೂರು ಪ್ರಕಾಶ್ ರೈತರ ಪರ ಮಾತಾಡೋ ಶೈಲಿ, ಭ್ರಷ್ಟ ಅಧಿಕಾರಿಗಳಿಗೆ ಪ್ರಶ್ನೆ ಮಾಡೋ ದೈರ್ಯ ಇದು ಇಡೀ ಕರ್ನಾಟಕಕ್ಕೆ ಗೊತ್ತಾಗಬೇಕು ಬಿಗ್ ಬಾಸ್ ಅಂದ್ರೆ ಒಂದು ಕೋಟಿ ಜನ ನೋಡ್ತಾರೆ. ಅಲ್ಲಿ ಒಂದು ನಿಮಿಷ ರೈತರ ಕಷ್ಟ ಹೇಳಿದ್ರೂ, ಒಂದು ಕೋಟಿ ಮನೆಗೆ ಸಂದೇಶ ತಲುಪುತ್ತದೆ
ಚಾಮರಾಜನಗರ ಜಿಲ್ಲೆಯ ಭಾಗದ ರೈತರು ಕಳೆದ ಮೂರು ವರ್ಷದಿಂದ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆ ವಿಮೆ, ಪಂಪ್‌ಸೆಟ್ ಗಳಿಗೆ ಸಮರ್ಪಕ ವಿದ್ಯುತ್, ಸಾಲ ಮನ್ನಾ ಸಮಸ್ಯೆಗಳು ಬಗೆಹರಿದಿಲ್ಲ.
ರೈತರ ಸಮಸ್ಯೆ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಬೇಕು. ಬಿಗ್ ಬಾಸ್ ನಂತಹ ವೇದಿಕೆಯಲ್ಲಿ ಹೊನ್ನೂರು ಪ್ರಕಾಶ್ ಅವರು ಕೃಷಿ ಕಾನೂನು, ಕನಿಷ್ಠ ಬೆಂಬಲ ಬೆಲೆ ಬಗ್ಗೆ ಮಾತನಾಡಿದರೆ ಒಂದು ಕೋಟಿ ಜನಕ್ಕೆ ಸಂದೇಶ ತಲುಪುತ್ತದೆ.
ಸದ್ಯ ಬಿಗ್ ಬಾಸ್ ಕನ್ನಡ ಮುಂದಿನ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಕಲರ್ಸ್ ಕನ್ನಡ ವಾಹಿನಿ ಮತ್ತು ಆಯೋಜಕರು ರೈತರ ಈ ಬೇಡಿಕೆಗೆ ಹೇಗೆ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಈ ಸಲ ಸ್ಥಾನ ಸಿಗಲಿ ಹೊನ್ನೂರು ಪ್ರಕಾಶ್ ರವರಿಗೆ ರಾಜ್ಯದ ಸಾವಿರಾರು ರೈತರು ಈ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ.
ಈ ಸಂದರ್ಭದಲ್ಲಿ ಕಲಾವಿದ ಬಸವರಾಜು ಉಮ್ಮತ್ತೂರು, ಚೇತನ್ ಆಟೋ, ಸುಂದರಪ್ಪ ಉಮ್ಮತ್ತೂರು, ಮಂಜು ಮೂಡಲ ಅಗ್ರಹಾರ, ಗಿರೀಶ್ ಅಗ್ರಹಾರ, ಅಷ್ಟಾ ಹೆಗ್ಗವಾಡಿ, ಶಿವು ಕುದೇರು, ಮಂಜು, ಮಹೇಶ್, ಮಹೇಂದ್ರ, ಪ್ರಸನ್ನ ರಾಜೇಶ್. ಹಾಗೂ ಇನ್ನೂ ಹಲವಾರು ರೈತರು ಉಪಸ್ಥಿತರಿದ್ದರು

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ