ಯೋಗವೇ ಆರೋಗ್ಯ, ಯೋಗವೇ ಶಕ್ತಿ, ಸರ್ವರಿಗೂ ಅಂತರರಾಷ್ಟ್ರೀಯ ಯೋಗ ದಿನದ ಹಾರ್ದಿಕ ಶುಭಾಶಯಗಳು 🧘♂️
ಯೋಗ ರಮೇಶ್ ಅಂತರರಾಷ್ಟ್ರೀಯ ಯೋಗ ದಿನ: ಪ್ರತಿದಿನ 20 ನಿಮಿಷ ಯೋಗ ಮಾಡಿದರೆ ಆಗುವ 10 ಅದ್ಭುತ ಪ್ರಯೋಜನಗಳು ಭಾರತದ ಸಾವಿರಾರು ವರ್ಷಗಳ ಪರಂಪರೆಯಾದ ಯೋಗ, ಇಂದು ವಿಶ್ವದಾದ್ಯಂತ ಕೋಟ್ಯಂತರ ಜನರ ಜೀವನ ಶೈಲಿ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯತ್ನದಿಂದ ಜೂನ್ 21 ಅನ್ನು ವಿಶ್ವಸಂಸ್ಥೆ ಅಂತರರಾಷ್ಟ್ರೀಯ ಯೋಗ ದಿನ ಎಂದು ಘೋಷಿಸಿದೆ. ಭಾರತದ ಸಾವಿರಾರು ವರ್ಷಗಳ ಪರಂಪರೆಯಾದ ಯೋಗ, ಇಂದು ವಿಶ್ವದಾದ್ಯಂತ ಕೋಟ್ಯಂತರ ಜನರ ಜೀವನ ಶೈಲಿ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯತ್ನದಿಂದ ಜೂನ್ 21 ಅನ್ನು ವಿಶ್ವಸಂಸ್ಥೆ ಅಂತರರಾಷ್ಟ್ರೀಯ ಯೋಗ ದಿನ ಎಂದು ಘೋಷಿಸಿದೆ. ಆದರೆ ಯೋಗ ಕೇವಲ ಒಂದು ದಿನದ ಆಚರಣೆ ಅಲ್ಲ. ಇದು ನಮ್ಮ ಜೀವನದ ಭಾಗವಾಗಬೇಕು. ಇಂದಿನ ಒತ್ತಡದ ಜೀವನದಲ್ಲಿ ಬೆನ್ನು ನೋವು, ಸಕ್ಕರೆ ಕಾಯಿಲೆ, ಬೊಜ್ಜು, ನಿದ್ರಾಹೀನತೆ ಸಾಮಾನ್ಯ ಆಗಿದೆ. ಇದಕ್ಕೆಲ್ಲಾ ರಾಮಬಾಣ ಒಂದೇ - ಯೋಗ. ದಿನಕ್ಕೆ ಕೇವಲ 20 ನಿಮಿಷ ಯೋಗ ಮಾಡಿದರೆ ನಿಮ್ಮ ಜೀವನವೇ ಬದಲಾಗುತ್ತೆ. ಹೇಗೆ ಅಂತ ನೋಡೋಣ. ಯೋಗ ಎಂದರೇನು ? ಯೋಗ ಎಂದರೆ ಕೇವಲ ದೇಹವನ್ನು ಬಳುಕಿಸುವುದು ಅಲ್ಲ. 'ಯುಜ್' ಎಂಬ ಸಂಸ್ಕೃತ ಶಬ್ದದಿಂದ ಬಂದ ಯೋಗದ ಅರ್ಥ 'ಜೋಡಿಸುವುದು' ಅಥವಾ 'ಒಂದಾಗಿಸುವುದು'. ಅಂದರೆ ನಮ್ಮ ದೇಹ, ಮನಸ್ಸು ಮತ್ತು ಆತ್ಮವನ್ನು ಒಂದಾಗಿಸುವ ಪ್ರಾಚೀನ ಪದ್ಧತಿಯೇ ಯೋಗ. ಮಹರ್ಷಿ ಪತಂಜಲಿ ಅವರು ಯೋಗಸೂತ್ರದಲ್ಲಿ ಯೋಗದ 8 ಅಂಗಗಳನ್ನು ವಿವರಿಸಿ...