ಪೋಸ್ಟ್‌ಗಳು

ಆಗಸ್ಟ್, 2026 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಚಾಮುಂಡೇಶ್ವರಿ ತಾಯಿಯ ಜನ್ಮೋತ್ಸವ ಆಚರಣೆ.

ಇಮೇಜ್
  ಚಾಮುಂಡೇಶ್ವರಿ ತಾಯಿಯ ಜನ್ಮೋತ್ಸವ ಆಚರಣೆ. ಯಳಂದೂರು : ತಾಲ್ಲೂಕಿನ ಹೊನ್ನೂರು ಗ್ರಾಮದ  ಚಾಮುಂಡೇಶ್ವರಿ ತಾಯಿ ದೇವಸ್ಥಾನದಲ್ಲಿ ಚಾಮುಂಡೇಶ್ವರಿ ಜನ್ಮದಿನೋತ್ಸವದ ಪ್ರಯುಕ್ತ ವಿಶೇಷ ಧಾರ್ಮಿಕ  ಕಾರ್ಯಕ್ರಮ ಭಕ್ತಿಭಾವದಿಂದ ನೆರವೇರಿದವು... ತಾಯಿಗೆ ಮುಂಜಾನೆ ದೇವಿಗೆ ವಿಶೇಷ ದ್ರವ್ಯ ಅಭಿಷೇಕ, ಹಾಗೂ ವಿವಿಧ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ಈ ವೇಳೆ ಮಹಿಳೆಯರು ತಾಯಿ ಚಾಮುಂಡೇಶ್ವರಿಗೆ ನಿಂಬೆಹಣ್ಣಿನ ಆರತಿ ಬೆಳಗಿದರು.  ಈ ಹಿನ್ನೆಲೆಯಲ್ಲಿ ಅಕ್ಕ ಪಕ್ಕದ ಗ್ರಾಮದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಾಯಿಯ ದರ್ಶನ ಪಡೆದು ಆಶೀರ್ವಾದ ಪಡೆದರು..  ಪ್ರತಿ ಪ್ರತಿವರ್ಷವು ತಾಯಿ ಚಾಮುಂಡೇಶ್ವರಿಯ ಜನ್ಮದಿನ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ಪ್ರಸಾದ ಸ್ವೀಕರಿಸಿ ತಾಯಿಯ ಕೃಪೆಗೆ ಪಾತ್ರರಾಗುತ್ತಾರೆ.. ಕ್ಷೇತ್ರದ ಶಾಸಕ ಎ ಆರ್ ಕೃಷ್ಣಮೂರ್ತಿ ಹಾಗೂ ಜಿಲ್ಲಾ ಗ್ಯಾರಂಟಿ ಯೋಜನೆ ಜಿಲ್ಲಾ ಅಧ್ಯಕ್ಷ ಚಂದ್ರು ದೇವಾಲಯಕ್ಕೆ ಆಗಮಿಸಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ಭಕ್ತರು ಹಾಗೂ ದಾನಿಗಳು ಪ್ರತಿ ವರ್ಷವೂ ಉದಾರವಾಗಿ ಧನಸಹಾಯ ನೀಡುತ್ತಿದ್ದು, ಅವರ ಸಹಕಾರದಿಂದ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯುತ್ತಿವೆ ಎಂದು ದೇವಸ್ಥಾನದ ಅರ್ಚಕರು ತಿಳಿಸಿದ್ದಾರೆ........

ಶಿವಶರಣ ಹಡಪದ ಅಪ್ಪಣ್ಣ ಜಯಂತಿ

ಇಮೇಜ್
ವರದಿ: ಲಕ್ಕೂರು ಚಂದ್ರು ಶಿವಶರಣ ಹಡಪದ ಅಪ್ಪಣ್ಣ ಜಯಂತಿ  ಗುಂಡ್ಲುಪೇಟೆ  : ತಾಲೂಕಿನ ಬೇಗೂರು ಹೋಬಳಿಯ ಸವಿತಾ ಸಮಾಜ ಬಳಗದ ವತಿಯಿಂದ ಶ್ರೀ ಶಿವಶರಣ ಹಡಪದ ಅಪ್ಪಣ್ಣ ಅವರ ಜಯಂತಿ ಆಚರಿಸಲಾಯಿತು. ಬೇಗೂರು ಗ್ರಾಮದ ನಾಗಶೆಟ್ಟಿ ಕಾಂಪ್ಲೆಕ್ಸ್ ಆವರಣದಲ್ಲಿ ಸಮಾವೇಶಗೊಂಡ ಬೇಗೂರು ಹೋಬಳಿಯ ಸುತ್ತಮುತ್ತಲ ಗ್ರಾಮಗಳ ಸವಿತಾ ಸಮಾಜ ಬಳಗದ ಕುಲ ಬಾಂಧವರು ಶ್ರೀ ಶಿವಶರಣ  ಹಡಪದ ಅಪ್ಪಣ್ಣ ಅವರ  ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸಿಹಿ ಹಂಚಿ ಜಯಂತಿ ಆಚರಿಸಿದರು. ನಂತರ ಸಂಘದ ಅಧ್ಯಕ್ಷರಾದ ಸುರೇಶ್ ಮಾತನಾಡಿ, ಹೋಬಳಿಯ ಸಮಾಜ ಕುಲಬಾಂಧವರು ಒಟ್ಟಾಗಿ ಒಗ್ಗಟ್ಟಿನಿಂದ ಅಪ್ಪಣ್ಣ ಅವರ ಜಯಂತಿಯನ್ನು ಇಂದು ಆಚರಿಸಲಾಗಿದೆ. ಮುಂದಿನ ದಿನಗಳಲ್ಲಿ ಸಮಾಜದ ಮೇಲೆ ಬೆಳಕು ಚೆಲ್ಲುವಂತಹ  ವಿವಿಧ ಕಾರ್ಯಕ್ರಮಗಳನ್ನು  ಹಮ್ಮಿಕೊಳ್ಳಲಾಗುವುದು ಹಾಗೂ  ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು  ಅಂಕ ಪಡೆದ ವಿದ್ಯಾರ್ಥಿಗಳನ್ನು  ಸನ್ಮಾನಿಸಲಾಗುವುದು ಎಂದರು. ಸವಿತಾ ಸಮಾಜದ ಕುಲಬಾಂಧವರಿಗೆ ರಾಜಕೀಯ ಸ್ಥಾನಮಾನ ಕಲ್ಪಿಸುವಂತೆ ಆಗ್ರಹಿಸಿ  ಬೇಗೂರು ಹೋಬಳಿ ಕೇಂದ್ರದಲ್ಲಿ  ಸವಿತಾ ಸಮಾಜದ ಸಭೆ ಸಮಾರಂಭ, ಅಪ್ಪಣ್ಣ ಅವರ ಜಯಂತಿ ಹಾಗೂ ವಿವಿಧ ಕಾರ್ಯಕ್ರಮಗಳಿಗಾಗಿ  ಸಮುದಾಯ ಭವನ ನಿರ್ಮಿಸಿ ಕೊಡುವಂತೆ ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ರವರಲ್ಲಿ ಮನವಿ ಮಾಡಿದ್ದು ಮುಂದಿನ ದಿನಗಳಲ್ಲಿ  ಸಮು...

ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಪ್ರಥಮ ಸ್ಥಾನ ಪಡೆದ ಬೇಗೂರು ಗ್ರಾಮದ ದರ್ಶಿತ್.ಎಸ್

ಇಮೇಜ್
  ವರದಿ: ಲಕ್ಕೂರು ಚಂದ್ರು ಗುಂಡ್ಲುಪೇಟೆ: ಚನ್ನಪಟ್ಟಣದಲ್ಲಿ ನಡೆದ ರಾಷ್ಟ್ರಮಟ್ಟದ ಓಪನ್ ಕರಾಟೆ ಚಾಂಪಿಯನ್‌ ಶಿಪ್ 2026 ರ ಕಥಾ ವಿಭಾಗದಲ್ಲಿ ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಗ್ರಾಮದ ಪ್ರತಿಭೆ ದರ್ಶಿತ್ ಎಸ್ ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ. ಚೆಸ್ಕಾಂ ಸೋಮಣ್ಣ ಮತ್ತು ದೀಪ ದಂಪತಿಗಳ ಪುತ್ರನಾದ ದರ್ಶಿತ್ ಕಠಿಣ ತರಬೇತಿಯೊಂದಿಗೆ ಈ ಸಾಧನೆ ಮಾಡಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ಸ್ಪರ್ಧಿಗಳನ್ನು ಹಿಂದಿಕ್ಕಿ ಪ್ರಥಮ ಸ್ಥಾನ ಪಡೆದು ಟ್ರೋಫಿ ಗೆದ್ದಿದ್ದಾರೆ. ಈ ಸಾಧನೆಗೆ ಗ್ರಾಮಸ್ಥರು ಮತ್ತು ಕುಟುಂಬಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ. ದರ್ಶಿತ್ ಅವರ ಈ ಗೆಲುವು ಇಡೀ ತಾಲ್ಲೂಕಿಗೆ ಸ್ಪೂರ್ತಿಯಾಗಿದೆ. G1 ನ್ಯೂಸ್ ವತಿಯಿಂದ ದರ್ಶಿತ್ ಹಾಗೂ ಸಾಧನೆಗೆ ಸಹಕಾರ ನೀಡಿದ ಕುಟುಂಬಕ್ಕೆ ಅಭಿನಂದನೆಗಳು💐💐 ನಿಮ್ಮ ಧ್ವನಿ ನಮ್ಮ ಸುದ್ದಿ 📢 G1 NEWS Honnur - ಜನರ ಪರ ಸಮಸ್ಯೆ ಇದ್ರೆ ತಕ್ಷಣ ತಿಳಿಸಿ: 9964481518 Follow ಮಾಡಿ ಮತ್ತು Share ಮಾಡಿ 🙏

ಸಿಡಬ್ಲ್ಯೂಆರ್‌ಸಿ ಆದೇಶ ಖಂಡಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಪ್ರತಿಭಟನೆ.

ಇಮೇಜ್
ವರದಿ:ಗೂಳಿಪುರ ಮಣಿಕಂಠ ನಾಯಕ್  ಸಿಡಬ್ಲ್ಯೂಆರ್‌ಸಿ ಆದೇಶ ಖಂಡಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಪ್ರತಿಭಟನೆ.  ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶ ಹಿಂಪಡೆಯುವಂತೆ ಮಲ್ಲು ಯರಗಂಬಳ್ಳಿ, ಆಗ್ರಹ ಚಾಮರಾಜನಗರ : ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶ ಖಂಡಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.      ನಗರದ ಶ್ರೀಚಾಮರಾಜೇಶ್ವರ ಉದ್ಯಾನವನ ಮುಂಭಾಗದಲ್ಲಿ ವೇದಿಕೆಯ ಜಿಲ್ಲಾಧ್ಯಕ್ಷ ಮಲ್ಲು ಯರಗಂಬಳ್ಳಿ ಅವರ ನೇತೃತ್ವದಲ್ಲಿ ಸಮಾವೇಶಗೊಂಡ ಪ್ರತಿಭಟನಾನಿರತರು ಅಲ್ಲಿಂದ ಮೆರವಣಿಗೆಯಲ್ಲಿ ಭುವನೇಶ್ವರಿ ವೃತ್ತಕ್ಕೆ ತೆರಳಿ ಕೆಲಕಾಲ ರಸ್ತೆ ತಡೆ ನಡೆಸಿ, ತಮಿಳುನಾಡು ಸರ್ಕಾರ, ಕಾವೇರಿ ನೀರು ವಿಯಂತ್ರಣ ಸಮಿತಿ, ತಮಿಳುನಾಡು ಮುಖ್ಯಮಂತ್ರಿ ವಿಜಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.    ಪ್ರತಿಭಟನೆ ನೇತೃತ್ವ ವಹಿಸಿದ್ದ ವೇದಿಕೆ ಜಿಲ್ಲಾಧ್ಯಕ್ಷ ಮಲ್ಲು ಯರಗಂಬಳ್ಳಿ ಮಾತನಾಡಿ, ಕಾವೇರಿ ನೀರು ನಿಯಂತ್ರಣ ಸಮಿತಿಯು ಕಾವೇರಿಯಿಂದ ತಮಿಳುನಾಡಿಗೆ 15 ದಿನಗಳ ಕಾಲ ಪ್ರತಿನಿತ್ಯ 3.500 ಕ್ಯೂಸೆಕ್‌ ನೀರನ್ನು ಹರಿಸುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಿರುವುದು ಖಂಡನೀಯ. ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.      ರಾಜ್ಯದಲ್ಲಿ ಕುಡಿಯುವುದಕ್ಕೆ ನೀರಿಲ್ಲ. ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿನ...

ವಯೋನಿವೃತ್ತ ಮುಖ್ಯ ಶಿಕ್ಷಕರಿಗೆ ಸನ್ಮಾನ.

ಇಮೇಜ್
  ವರದಿ: ಲಕ್ಕೂರು ಚಂದ್ರು   ವಯೋನಿವೃತ್ತ ಮುಖ್ಯ ಶಿಕ್ಷಕರಿಗೆ ಸನ್ಮಾನ. ಗುಂಡ್ಲುಪೇಟೆ : ಪಟ್ಟಣದ ಕುರುಬಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿ, ವಯೋನಿವೃತ್ತಿ ಹೊಂದಿದ ಬಿ. ಸಿ. ಸಿದ್ದರಾಜು ಅವರನ್ನು ಕರ್ನಾಟಕ ಕಾವಲು ಪಡೆ ಸಂಘಟನೆಯ ವತಿಯಿಂದ, ಶುಭ ಹಾರೈಸಿ, ಗೌರವಿಸಿ, ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕಾವಲು ಪಡೆಯ ತಾಲೂಕು ಅಧ್ಯಕ್ಷ ಎ.ಅಬ್ದುಲ್ ಮಾಲಿಕ್, ತಾಲೂಕು ಕಾರ್ಯದರ್ಶಿ ಎಸ್.ಮುಬಾರಕ್, ಜಿಲ್ಲಾ ಕಾರ್ಯಧ್ಯಕ್ಷ ಅಬ್ದುಲ್ ರಷೀದ್, ಸೇರಿದಂತೆ ಹಲವು ಶಾಲೆಯ ಶಿಕ್ಷಕರು ಹಾಗೂ ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು. ನಿಮ್ಮ ಧ್ವನಿ ನಮ್ಮ ಸುದ್ದಿ 📢 G1 NEWS Honnur - ಜನರ ಪರ ಸಮಸ್ಯೆ ಇದ್ರೆ ತಕ್ಷಣ ತಿಳಿಸಿ: 9964481518 Follow ಮಾಡಿ ಮತ್ತು Share ಮಾಡಿ 🙏

ಶಿಕ್ಷಣವು ಪ್ರತಿಯೊಬ್ಬರ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ: ಶಾಂತು ಆರ್ ಬೆಳ್ಳಿ

ಇಮೇಜ್
ಶಿಕ್ಷಣವು ಪ್ರತಿಯೊಬ್ಬರ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ: ಶಾಂತು ಆರ್ ಬೆಳ್ಳಿ. ಕೊಳ್ಳೇಗಾಲ, ಆ. 01: ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸಿಲ್ಕಲ್ ಪುರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆ ಮಾಡಿದ ಕೊಳ್ಳೇಗಾಲ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಾದ ಶಾಂತು ಆರ್ ಬೆಳ್ಳಿ ರವರು ಮಾತನಾಡಿ ಶಿಕ್ಷಣವು ಪ್ರತಿಯೊಬ್ಬರ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು ಪ್ರಾಥಮಿಕ ಶಿಕ್ಷಣ ಹಂತದಲ್ಲಿಯೇ ಶಿಸ್ತು, ಪರಿಶ್ರಮ ಮತ್ತು ಗುರಿಯೊಂದಿಗೆ ವಿದ್ಯಾಭ್ಯಾಸ ಮಾಡಿ ಸಮಾಜಕ್ಕೆ ಉತ್ತಮ ಪ್ರಜೆಗಳಾಗಿ ಬೆಳೆಯಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಉಚಿತ ನೋಟ್‌ಬುಕ್‌ಗಳನ್ನು ಪಡೆದ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಶಿವಮಾಧು , ರಾಜೇಂದ್ರ ಸಾಮ್ರಾಟ್, ಶಿಕ್ಷಕಿ ಮಂಗಳ, ಹಾಗೂ. ನಟರಾಜು , ಅತಿಥಿ ಶಿಕ್ಷಕಿ ಮನಿಷಾ ಎಸ್.ಆರ್.ಬೆಳ್ಳಿ, ಗೌತಮ್ ಉಪಸ್ಥಿತರಿದ್ದರು. ನಿಮ್ಮ ಧ್ವನಿ ನಮ್ಮ ಸುದ್ದಿ 📢 G1 NEWS Honnur - ಜನರ ಪರ ಸಮಸ...