ಪೋಸ್ಟ್‌ಗಳು

Vasanthakumar D C ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಹರವೆ ಶ್ರೀ ಗುರುಮಲ್ಲೇಶ್ವರ ಅನುದಾನಿತ ಪ್ರೌಢಶಾಲೆ ಯಲ್ಲಿ, ಅಂತಾರಾಷ್ಟ್ರೀಯ ಯೋಗ ದಿನಾಚರಣೆ.

ಇಮೇಜ್
  ಶಿಕ್ಷಕರು ಯೋಗಾಸನದಲ್ಲಿ ಹರವೆ ಶ್ರೀ ಗುರುಮಲ್ಲೇಶ್ವರ ಶಾಲೆಯಲ್ಲಿ ಯೋಗ ದಿನ: ಮೊಬೈಲ್ ಬಿಟ್ಟು ಯೋಗ ಮಾಡಿ ಎಂದ ಮುಖ್ಯ ಶಿಕ್ಷಕರು ಪ್ರಭುಸ್ವಾಮಿ  ಚಾಮರಾಜನಗರ : ತಾಲ್ಲೂಕಿನ ಹರವೆ ಗ್ರಾಮದ ಶ್ರೀ ಗುರುಮಲ್ಲೇಶ್ವರ ಅನುದಾನಿತ ಪ್ರೌಢಶಾಲೆಯಲ್ಲಿ, ಜೂನ್ 21 ನೇ ಭಾನುವಾರ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಮತ್ತು ವಿಜೃಂಭಣೆಯಿಂದ ಆಚರಿಸಲಾಯಿತು. 2026ನೇ ವರ್ಷದ ಅಂತರರಾಷ್ಟ್ರೀಯ ಯೋಗ ದಿನದ ಧ್ಯೇಯವಾಕ್ಯ "ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ" (Yoga for Healthy Ageing). ಎಲ್ಲಾ ವಯೋಮಾನದ ಜನರಲ್ಲಿ ದೈಹಿಕ ಫಿಟ್‌ನೆಸ್, ಮಾನಸಿಕ ಸ್ಥೈರ್ಯ ಮತ್ತು ಸಮಗ್ರ ಯೋಗ ಕ್ಷೇಮವನ್ನು ನಡುವಿನ ನಿಕಟ ಸಂಬಂಧವನ್ನು ಸಾರುವ ಜಾಗತಿಕ ದೃಷ್ಟಿಕೋನವಾಗಿದೆ. ಇದು ನಮ್ಮ ವೈಯಕ್ತಿಕ ಆರೋಗ್ಯ ಕಾಳಜಿ ಮತ್ತು ಪ್ರಕೃತಿಯ ಸಂರಕ್ಷಣೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಪ್ರತಿಪಾದಿಸುತ್ತದೆ. ಈ ಕಾರ್ಯಕ್ರಮವು ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಯೋಗದ ಬಗ್ಗೆ ಹೊಸ ಅರಿವು ಮೂಡಿಸಿತು. ಬೆಳಗ್ಗೆ 7 ಗಂಟೆಗೆ ಶಾಲಾ ಆವರಣದಲ್ಲಿ ಎಲ್ಲ ವಿದ್ಯಾರ್ಥಿಗಳು, ಶಿಕ್ಷಕ ವೃಂದ ಮತ್ತು ಬೋಧಕೇತರ ಸಿಬ್ಬಂದಿ ಒಟ್ಟಾಗಿ ಸೇರುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ, ಮೊದಲು ಎಲ್ಲರೂ ಸೇರಿ ಯೋಗ ಪ್ರತಿಜ್ಞೆ ಸ್ವೀಕರಿಸಿದರು. ಕಾರ್ಯಕ್ರಮದ ಮುಖ್ಯ ಸಂಪನ್ಮೂಲ ವ್...