ಶಿಕ್ಷಕರು ಯೋಗಾಸನದಲ್ಲಿ ಹರವೆ ಶ್ರೀ ಗುರುಮಲ್ಲೇಶ್ವರ ಶಾಲೆಯಲ್ಲಿ ಯೋಗ ದಿನ: ಮೊಬೈಲ್ ಬಿಟ್ಟು ಯೋಗ ಮಾಡಿ ಎಂದ ಮುಖ್ಯ ಶಿಕ್ಷಕರು ಪ್ರಭುಸ್ವಾಮಿ ಚಾಮರಾಜನಗರ : ತಾಲ್ಲೂಕಿನ ಹರವೆ ಗ್ರಾಮದ ಶ್ರೀ ಗುರುಮಲ್ಲೇಶ್ವರ ಅನುದಾನಿತ ಪ್ರೌಢಶಾಲೆಯಲ್ಲಿ, ಜೂನ್ 21 ನೇ ಭಾನುವಾರ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಮತ್ತು ವಿಜೃಂಭಣೆಯಿಂದ ಆಚರಿಸಲಾಯಿತು. 2026ನೇ ವರ್ಷದ ಅಂತರರಾಷ್ಟ್ರೀಯ ಯೋಗ ದಿನದ ಧ್ಯೇಯವಾಕ್ಯ "ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ" (Yoga for Healthy Ageing). ಎಲ್ಲಾ ವಯೋಮಾನದ ಜನರಲ್ಲಿ ದೈಹಿಕ ಫಿಟ್ನೆಸ್, ಮಾನಸಿಕ ಸ್ಥೈರ್ಯ ಮತ್ತು ಸಮಗ್ರ ಯೋಗ ಕ್ಷೇಮವನ್ನು ನಡುವಿನ ನಿಕಟ ಸಂಬಂಧವನ್ನು ಸಾರುವ ಜಾಗತಿಕ ದೃಷ್ಟಿಕೋನವಾಗಿದೆ. ಇದು ನಮ್ಮ ವೈಯಕ್ತಿಕ ಆರೋಗ್ಯ ಕಾಳಜಿ ಮತ್ತು ಪ್ರಕೃತಿಯ ಸಂರಕ್ಷಣೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಪ್ರತಿಪಾದಿಸುತ್ತದೆ. ಈ ಕಾರ್ಯಕ್ರಮವು ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಯೋಗದ ಬಗ್ಗೆ ಹೊಸ ಅರಿವು ಮೂಡಿಸಿತು. ಬೆಳಗ್ಗೆ 7 ಗಂಟೆಗೆ ಶಾಲಾ ಆವರಣದಲ್ಲಿ ಎಲ್ಲ ವಿದ್ಯಾರ್ಥಿಗಳು, ಶಿಕ್ಷಕ ವೃಂದ ಮತ್ತು ಬೋಧಕೇತರ ಸಿಬ್ಬಂದಿ ಒಟ್ಟಾಗಿ ಸೇರುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ, ಮೊದಲು ಎಲ್ಲರೂ ಸೇರಿ ಯೋಗ ಪ್ರತಿಜ್ಞೆ ಸ್ವೀಕರಿಸಿದರು. ಕಾರ್ಯಕ್ರಮದ ಮುಖ್ಯ ಸಂಪನ್ಮೂಲ ವ್...
ಸಾನ್ವಿ ಎಸ್ ಜಿ ದಿಗಂತ್ ವೈ ಪಿ ರಾಜವರ್ಧನ ಯಳಂದೂರು: 2024-25 ಮತ್ತು 2025-26ನೇ ಸಾಲಿನ ರಾಷ್ಟ್ರಮಟ್ಟದ ಅತ್ಯುನ್ನತ ವಿಜ್ಞಾನ ಸ್ಪರ್ಧಿಯಾದ 'ಇನ್ಸ್ಪೈರ್ ಅವಾರ್ಡ್ ಮಾನಕ್' ಸ್ಪರ್ಧೆಗೆ ಯಳಂದೂರು ತಾಲ್ಲೂಕಿನ ಮೆಲ್ಲಹಳ್ಳಿ ಸರ್ಕಾರಿ ಆದರ್ಶ ವಿದ್ಯಾಲಯವು ನೋಂದಣಿಯಾಗಿರುವುದರಿಂದ, ಐದು ವಿದ್ಯಾರ್ಥಿಗಳು ಆಯ್ಕೆಯಾಗಿರುತ್ತಾರೆ, ಆಯ್ಕೆಯಾದ ವಿದ್ಯಾರ್ಥಿಗಳ ಮಾದರಿ ಈ ಕೆಳಕಂಡಂತೆ ಇದ್ದು ಶಾಲೆಗೆ ಕೀರ್ತಿ ತಂದು ಕೊಟ್ಟಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಾರಯ್ಯ ಮತ್ತು ಶಾಲೆಯ ಮುಖ್ಯಶಿಕ್ಷಕರು ವಿನಯ್ ಹಾಗೂ ಸಹಶಿಕ್ಷಕರು ಅಭಿನಂದನೆಗಳನ್ನು ತಿಳಿಸಿದ್ದಾರೆ. ಆಯ್ಕೆಯಾದ ವಿದ್ಯಾರ್ಥಿಗಳು 1. ದಿಗಂತ್ ವೈ. ಪಿ - ಆಟೋಮ್ಯಾಟಿಕ್ ವೀಲ್ ಚೇರ್ 2. ಸಾನಿಕ ಎಸ್ - ಸಿಟ್ಟಿಂಗ್ ಅಲರ್ಟ್, ರೆಡ್ ಅಲರ್ಟ್ 3. ನಂದಿನಿ ಎನ್ - ಫಾರ್ಮರ್ ಅಂಬ್ರಲ್ಲಾ 4. ರಾಜವರ್ಧನ್ - ರಿಮೋಟ್ ಕಂಟ್ರೋಲ್ ಹೋಮ್ ಅಪ್ಲೈಯನ್ಸಸ್ 5. ಸಾನ್ವಿ ಎಸ್. ಜಿ - ಬ್ಲೈಂಡ್ ಗ್ಲಾಸ್ ಫಾರ್ ಆಲ್ ವಿದ್ಯಾರ್ಥಿಗಳ ಈ ಸಾಧನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಮಾರಯ್ಯ, ಶಾಲೆಯ ಮುಖ್ಯಶಿಕ್ಷಕ ವಿನಯ್ ಹಾಗೂ ಸಹಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ. 🙏 🙏✍️ವಿನಂತಿ: ಯಳಂದೂರಿನ ಈ ಸಾಧಕ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಈ ಸುದ್ದಿಯನ್ನು ನಿಮ್ಮ WhatsApp Status ಹಾಗೂ Groups ಗಳಿಗೆ Share ಮಾಡಿ. ಧನ್ಯವಾದಗಳು - G1 NEWS Honnur...
ಕರ್ನಾಟಕದ ದಕ್ಷಿಣ ಭಾಗದ ಚಾಮರಾಜನಗರ ಜಿಲ್ಲೆಯಲ್ಲಿ ಕಳೆದ ಮೂವತ್ತು ವರ್ಷಗಳಿಂದ ರೈತರ ಜಮೀನು, ನೀರಾವರಿ, ಬೆಳೆ ಪರಿಹಾರ ಮತ್ತು ಕನಿಷ್ಠ ಬೆಂಬಲ ಬೆಲೆ ವಿಚಾರದಲ್ಲಿ ಸರ್ಕಾರದ ವಿರುದ್ಧ ನಿರಂತರ ಜನಪರ ಹೋರಾಟ ನಡೆಸುತ್ತಿರುವ ಹೊನ್ನೂರು ಗ್ರಾಮದ ಪ್ರಸಿದ್ಧ ರೈತ ಹೋರಾಟಗಾರ ಪ್ರಕಾಶ್ ಅವರಿಗೆ ಈ ಬಾರಿಯ ಬಿಗ್ ಬಾಸ್ ಕನ್ನಡ ಕಾರ್ಯಕ್ರಮದಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಜಿಲ್ಲೆಯ ಪ್ರಮುಖ ಯುವ ರೈತ ಮುಖಂಡರಾದ ಚಿಕ್ಕಬಸಪ್ಪ ಹಾಗೂ ಪಣೀಶ್ ಕುಮಾರ್ ಕುದೇರು ಅವರು ಬಲವಾದ ಆಗ್ರಹ ಮಾಡಿದ್ದಾರೆ. G1 News ಜೊತೆ ಮಾತನಾಡಿದ ಉಮ್ಮತ್ತೂರಿನ ರೈತ ಯುವ ಮುಖಂಡ ಚಿಕ್ಕಬಸಪ್ಪ, ನಮ್ಮ ಪ್ರಕಾಶ್ ಅಣ್ಣ ದಿನ ರಾತ್ರಿ ಅಂತ ನೋಡದೆ ರೈತರಿಗಾಗಿ ಹೋರಾಟ ನಡೆಸುತ್ತಾರೆ. ಅವರಿಗೆ ಬಿಗ್ ಬಾಸ್ ನಲ್ಲಿ ಅವರಿಗೆ ಒಂದು ಅವಕಾಶ ಕೊಡಿ ಎಂದು ಮನವಿ ಮಾಡಿದರು. ಮಣ್ಣಿನ ಮಗನಿಗೆ ಬಿಗ್ ಬಾಸ್ ವೇದಿಕೆ ಕೊಡಿ, ಒಂದು ಕೋಟಿ ಜನಕ್ಕೆ ರೈತರ ಕಷ್ಟ ತಿಳಿಯಲಿ ಎಂದು ಚಾಮರಾಜನಗರ, ಮೈಸೂರು ಭಾಗದ ಸಾವಿರಾರು ಯುವಕರು ಮತ್ತು ರೈತರು ಪೋಸ್ಟ್ ಹಾಕಿ ಬೆಂಬಲ ಸೂಚಿಸುತ್ತಿದ್ದಾರೆ. ಹೊನ್ನೂರು ಪ್ರಕಾಶ್ ಅವರು ಕಳೆದ ಮೂವತ್ತು ವರ್ಷಗಳಿಂದ ರೈತರ ಭೂಮಿ, ನೀರು ಮತ್ತು ಬೆಳೆಗಳಿಗೆ ನ್ಯಾಯ ಒದಗಿಸಲು ಶ್ರಮಿಸುತ್ತಿದ್ದಾರೆ. ಬೆಳೆ ನಷ್ಟ ಪರಿಹಾರ, ಕನಿಷ್ಠ ಬೆಂಬಲ ಬೆಲೆ ಮತ್ತು ಸಾಲ ಮನ್ನಾ ವಿಚಾರದಲ್ಲಿ ಸರ್ಕಾರದ ಗಮನ ಸೆಳೆಯಲು ಅನೇಕ ಪ್ರತಿಭಟನೆಗಳನ್ನು ಮುನ್ನಡೆಸಿದ್ದಾರೆ. ...
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ