ಪೋಸ್ಟ್‌ಗಳು

ಪರಿಸರ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ವಿದ್ಯಾರ್ಥಿಗಳ ಮೂಲಕ ವಿಶ್ವ ಪರಿಸರ ದಿನಾಚರಣೆ

ಇಮೇಜ್
  ವಿಶ್ವ ಪರಿಸರ ದಿನಾಚರಣೆ ಚಾಮರಾಜನಗರ: ತಾಲ್ಲೂಕಿನ ಹರವೆ ಗ್ರಾಮದ ಶ್ರೀ ಗುರುಮಲ್ಲೇಶ್ವರ ಅನುದಾನಿತ ಪ್ರೌಢಶಾಲೆ ಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನೂ ವಿದ್ಯಾರ್ಥಿಗಳ ಕೈಯಲ್ಲಿ ಗಿಡ ನೆಡುವುದರ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಹೊಸದಾಗಿ ಶಾಲೆಗೆ ಸೇರಿದ ವಿದ್ಯಾರ್ಥಿಗಳಿಗೆ ಶಿಕ್ಷಕರು ಹಾಗೂ ಹಿರಿಯ ವಿದ್ಯಾರ್ಥಿಗಳು ಮತ್ತು ಅತಿಥಿಗಳು ಸೇರಿ ಶ್ರೀಗಂಧ ತಿಲಕವನ್ನಿಟ್ಟು ವಿವಿಧ ಹೂವುಗಳಿಂದ ಪುಷ್ಪದ ಮಳೆಗೆರೆದು, ಬ್ಯಾಂಡ್ ಸೆಟ್ ವಾದ್ಯದ ನಾದದ ಮೂಲಕ ಸ್ವಾಗತಿಸಿದರು. ಈ ತರಹದ ಕಾರ್ಯಕ್ರಮ ಮಕ್ಕಳಿಗೆ ತುಂಬಾ ಖುಷಿ ತಂದಿತು. ಗ್ರಾಮದ ಮುಖಂಡರು ಮತ್ತು ನಿವೃತ್ತ ಶಿಕ್ಷಕರಾದ ಬಸವರಾಜಪ್ಪ ಮತ್ತು ಮಹದೇವಸ್ವಾಮಿ ಅವರು ವಿದ್ಯಾರ್ಥಿಗಳ ಜೊತೆಗೂಡಿ ವಿವಿಧ ಗಿಡಗಳನ್ನು ನೆಟ್ಟು ನೀರೆದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಬಸವರಾಜಪ್ಪ ರವರು ಮಾತನಾಡಿ ವಿದ್ಯಾರ್ಥಿಗಳಿಗೆ, “ಉತ್ತಮ ಪರಿಸರವಿಲ್ಲದೆ ಉತ್ತಮ ಆರೋಗ್ಯವಿಲ್ಲ. ಪರಿಸರವೇ ಮನುಷ್ಯ ಕುಲದ ರಕ್ಷಕ. ನಾವು ಪರಿಸರವನ್ನು ರಕ್ಷಿಸಿದರೆ ಪರಿಸರ ನಮ್ಮನ್ನು ರಕ್ಷಿಸುತ್ತದೆ” ಎಂದು ಪರಿಸರದ ಬಗ್ಗೆ ವಿಶ್ಲೇಷಣಾತ್ಮಕವಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು,ನಿವೃತ್ತ ಶಿಕ್ಷಕರಾದ ಬಸವರಾಜಪ್ಪ, ಮಹದೇವಸ್ವಾಮಿ, ಮುಖ್ಯ ಶಿಕ್ಷಕರಾದ ಪ್ರಭುಸ್ವಾಮಿ,.ಸಹಶಿಕ್ಷಕರು ಮತ್ತು ಸಿಬ್ಬಂದಿ ವೃಂದದವರು  ಉಪಸ್ಥಿತರಿದ್ದರು.