ಪೋಸ್ಟ್‌ಗಳು

ಮನರಂಜನೆ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ರಾಜ್‌ ಪರಿವಾರ ರಸಮಂಜರಿ ಕಾರ್ಯಕ್ರಮ

ಇಮೇಜ್
  ವರದಿ: ಗೂಳಿಪುರ ಮಣಿಕಂಠ ನಾಯಕ್   ಪೇಕ್ಷಕರನ್ನು ರಂಜಿಸಿದ ರಾಜ್‌ ಪರಿವಾರ ರಸಮಂಜರಿ ಕಾರ್ಯಕ್ರಮ     ಚಾಮರಾಜನಗರ: ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಭಾನುವಾರ ನಾದಶ್ರೀ ಮೆಲೋಡಿಸ್ ವತಿಯಿಂದ ಡಾ. ರಾಜ್ ಕುಮಾರ್ ಅವರ 20ನೇವರ್ಷದ ಪುಣ್ಯಸ್ಮರಣೆ ಹಾಗೂ ನಾದಶ್ರೀ ಮೆಲೋಡಿಸ್ 25ನೇ ವಾರ್ಷಿಕೋತ್ಸವ ಪ್ರಯುಕ್ತ ನಡೆದ ರಾಜ್ ಪರಿವಾರ ರಸಮಂಜರಿ ಕಾರ್ಯಕ್ರಮವನ್ನು ಕೆಲ್ಲಂಬಳ್ಳಿ ಸೋಮನಾಯಕ ಉದ್ಘಾಟನೆ ಮಾಡಿ ಪುಷ್ಪಾರ್ಚನೆ ನೆರವೇರಿಸಿದರು. ನಂತರ ಮಾತನಾಡಿ  ವರನಟ ಡಾ. ರಾಜ್‌ಕುಮಾರ್ ಅವರು ಕನ್ನಡ ಬೆಳವಣಿಗಾಗಿ ಶ್ರಮಿಸಿದ್ದರು. ಅವರು ಜಿಲ್ಲೆಯಲ್ಲಿ ಹುಟ್ಟಿ ಕನ್ನಡ ಚಿತ್ರರಂಗದ ಮೂಲಕ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದರು. ಅವರನ್ನು ಶ್ರೀ ಚಾಮರಾಜೇಶ್ವರ ಕೊಟ್ಟ ಕೊಡುಗೆ ಎಂದರೆ ತಪ್ಪಾಗಲಾರದು. ಚಾಮರಾಜನಗರ ಕಲೆಗಳ ತವರೂರಾಗಿದ್ದು. ಜಿಲ್ಲೆಯಲ್ಲಿ ಎಲ್ಲಾ ಬಗೆಯ ಕಲಾವಿದರು ಇದ್ದಾರೆ. ಕಲಾಸೇವೆ ಮಾಡಿ ಕೆಲವರು ಅನಾರೋಗ್ಯಕ್ಕೊಳಾಗಿದ್ದು, ತುಂಬಾ ತೊಂದರೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ ಎಂದರು. ಎಲ್ಲಾ  ಕಲಾವಿದರಿಗೆ ಸರ್ಕಾರ ಮಾಸಾಶಾಸನ ನೀಡಬೇಕು. ಇಲ್ಲದಿದ್ದರೆ ಕಲಾವಿದರೊಂದಿಗೆ ಸರ್ಕಾರದ ವಿರುದ್ಧ ಮುಂದಿನ ದಿನಗಳಲ್ಲಿ ಚಳವಳಿ ರೂಪಿಸಬೇಕಾಗುತ್ತದೆ ಎಂದರು.        ಮುಖಂಡರಾದ ಸಿಂಗನಪುರ ಮಹೇಶ್ ಮಾತನಾಡಿ  ಡಾ.ರಾಜ್‌ಕುಮಾರ್ ಅವರಂತಹ ಕಲಾವಿದರು ಇಡೀ ಪ್ರಪ...