ರಾಜ್‌ ಪರಿವಾರ ರಸಮಂಜರಿ ಕಾರ್ಯಕ್ರಮ

 


ವರದಿ: ಗೂಳಿಪುರ ಮಣಿಕಂಠ ನಾಯಕ್ 

ಪೇಕ್ಷಕರನ್ನು ರಂಜಿಸಿದ ರಾಜ್‌ ಪರಿವಾರ ರಸಮಂಜರಿ ಕಾರ್ಯಕ್ರಮ
   
ಚಾಮರಾಜನಗರ: ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಭಾನುವಾರ ನಾದಶ್ರೀ ಮೆಲೋಡಿಸ್ ವತಿಯಿಂದ ಡಾ. ರಾಜ್ ಕುಮಾರ್ ಅವರ 20ನೇವರ್ಷದ ಪುಣ್ಯಸ್ಮರಣೆ ಹಾಗೂ ನಾದಶ್ರೀ ಮೆಲೋಡಿಸ್ 25ನೇ ವಾರ್ಷಿಕೋತ್ಸವ ಪ್ರಯುಕ್ತ ನಡೆದ ರಾಜ್ ಪರಿವಾರ ರಸಮಂಜರಿ ಕಾರ್ಯಕ್ರಮವನ್ನು ಕೆಲ್ಲಂಬಳ್ಳಿ ಸೋಮನಾಯಕ ಉದ್ಘಾಟನೆ ಮಾಡಿ ಪುಷ್ಪಾರ್ಚನೆ ನೆರವೇರಿಸಿದರು.

ನಂತರ ಮಾತನಾಡಿ ವರನಟ ಡಾ. ರಾಜ್‌ಕುಮಾರ್ ಅವರು ಕನ್ನಡ ಬೆಳವಣಿಗಾಗಿ ಶ್ರಮಿಸಿದ್ದರು. ಅವರು ಜಿಲ್ಲೆಯಲ್ಲಿ ಹುಟ್ಟಿ ಕನ್ನಡ ಚಿತ್ರರಂಗದ ಮೂಲಕ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದರು. ಅವರನ್ನು ಶ್ರೀ ಚಾಮರಾಜೇಶ್ವರ ಕೊಟ್ಟ ಕೊಡುಗೆ ಎಂದರೆ ತಪ್ಪಾಗಲಾರದು. ಚಾಮರಾಜನಗರ ಕಲೆಗಳ ತವರೂರಾಗಿದ್ದು. ಜಿಲ್ಲೆಯಲ್ಲಿ ಎಲ್ಲಾ ಬಗೆಯ ಕಲಾವಿದರು ಇದ್ದಾರೆ.

ಕಲಾಸೇವೆ ಮಾಡಿ ಕೆಲವರು ಅನಾರೋಗ್ಯಕ್ಕೊಳಾಗಿದ್ದು, ತುಂಬಾ ತೊಂದರೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ ಎಂದರು. ಎಲ್ಲಾ ಕಲಾವಿದರಿಗೆ ಸರ್ಕಾರ ಮಾಸಾಶಾಸನ ನೀಡಬೇಕು. ಇಲ್ಲದಿದ್ದರೆ ಕಲಾವಿದರೊಂದಿಗೆ ಸರ್ಕಾರದ ವಿರುದ್ಧ ಮುಂದಿನ ದಿನಗಳಲ್ಲಿ ಚಳವಳಿ ರೂಪಿಸಬೇಕಾಗುತ್ತದೆ ಎಂದರು.

       ಮುಖಂಡರಾದ ಸಿಂಗನಪುರ ಮಹೇಶ್ ಮಾತನಾಡಿ  ಡಾ.ರಾಜ್‌ಕುಮಾರ್ ಅವರಂತಹ ಕಲಾವಿದರು ಇಡೀ ಪ್ರಪಂಚದಲ್ಲೇ ಇಲ್ಲ. ಅಂತಹ ರಾಜ್‌ಕುಮಾ‌ರ್ ಅವರನ್ನು ಕೊಟ್ಟಂತಹ ನೆಲೆ ಚಾಮರಾಜನಗರ ಬಹಳ ಶ್ರೇಷ್ಠವಾದದ್ದು. ರಾಜ್ ಕುಮಾರ್ ಅವರ ಚಿತ್ರಗಳ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ಸಾರಿದರು. ಅವರ ಬಂಗಾರ ಮನುಷ್ಯ ಚಿತ್ರವು ಅನೇಕರನ್ನು ಕೃಷಿಯತ್ತ ಕೊಂಡೊಯ್ಯದಿದೆ. ಹೊಸ ಬದುಕು ಕಟ್ಟಿಕೊಂಡಿದ್ದಾರೆ. ದೇಶ, ವಿದೇಶಗಳಲ್ಲೂ
ಅಭಿಮಾನಿಗಳಿದ್ದಾರೆ. ದೇಶದಲ್ಲಿ ಕೊರೋನಾ ಬಂದ ಮೇಲೆ ಕಾರ್ಯಕ್ರಮಗಳು ಕಡಿಮೆಯಾಗಿದ್ದು, ಕಲಾವಿದರು ತುಂಬಾ ಕಷ್ಟದಲ್ಲಿ ಜೀವನಸಾಗಿಸುತ್ತಿದ್ದಾರೆ. ಇಂತಹ ಕಲಾವಿದರಿಗೆ ರಾಜ್ಯ ಸರ್ಕಾರ ಕಲಾಸೇವೆಗೆ ಮಾಸಾಶಾಸನ ನೀಡಬೇಕು ಎಂದು ಒತ್ತಾಯಿಸಿದರು.

     ವೆಂಕಟೇಶ್ ಮಾತನಾಡಿ, ಕನ್ನಡ ಚಿತ್ರರಂಗದ ಧ್ರುವತಾರೆ ಡಾ.ರಾಜ್ ಕುಮಾರ್ ಕೇವಲ ನಟರಾಗಿರದೆ ಕನ್ನಡ ಭಾಷೆಯ ಉಳಿವಿಗಾಗಿ ಹೋರಾಡಿದರು. ಕನ್ನಡಕ್ಕೆ ಪ್ರಥಮ ಆದ್ಯತೆ ನೀಡಬೇಕು ಎಂದು ಆಗ್ರಹಿಸಿ ನಡೆದ ಐತಿಹಾಸಿಕ ಗೋಕಾಕ್ ಚಳವಳಿಗೆ ತಮ್ಮ ನಾಯಕತ್ವ ನೀಡಿ ನಾಡನ್ನು ಒಗ್ಗೂಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.




        ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರಿ ಸಮಿತಿ ಅಧ್ಯಕ್ಷ ಹೊಂಗನೂರು ಚಂದ್ರು,ಮುಖಂಡ ಕೆಲ್ಲಂಬಳ್ಳಿ ಶ್ರೀನಿವಾಸ್ ನಾಯಕ,ಅಂತಾರಾಷ್ಟ್ರೀಯ ಜಾನಪದ ಕಲಾವಿದ ಸಿ.ಎಂ.ನರಸಿಂಹಮೂರ್ತಿ,ಪರಿಸರ ಪ್ರೇಮಿ ಸಿ.ಎಂ.ವೆಂಕಟೇಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಿಜೆಪಿ ಎಸ್‌.ಟಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ಜಯಸುಂದ್ರ ಜಿಲ್ಲಾಧ್ಯಕ್ಷ ಚಂದ್ರಶೇಖರ್, ಕನ್ನಡ ಯುವಸೇನೆ ಜಿಲ್ಲಾಧ್ಯಕ್ಷ ಕಂಡಕ್ಟರ್ ಚಾ.ಸಿ.ಸೋಮನಾಯಕ, ನಟ ರವಿಸಂತು,ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಜಿಲ್ಲಾಧ್ಯಕ್ಷ ನಂದೀಶ್ ಮೂಡ್ಲುಪುರ, ಜಿ.ಪಂ.ಮಾಜಿ ಸದಸ್ಯ ಎಸ್‌.ಸೋಮನಾಯಕ, ಕರ್ನಾಟಕ ಸೇನಾಪಡೆ ಅಧ್ಯಕ್ಷ ಶ್ರೀನಿವಾಸಗೌಡ, ಸುರೇಶ್ ಗೌಡ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ಕ್ವಾಲಿಟಿ ನವೀನ್, ವೆಂಕಟೇಶ್ ನಾಯಕ, ಗಾಯಕರಾದ ವಿ.ರಾಮದಾಸ್‌, ಜ.ಸುರೇಶ್‌ನಾಗ್, ವಿ.ಶ್ರೀನಿವಾಸ್, ರಾಜಬುದ್ದಿ, ನಂಜುಂಡಯ್ಯ, ಸಿಂಚನ, ಅನುಭವ್ಯ,
ಸುಗಂದ್‌ರಾಜ್ ಇತರರು ಹಾಜರಿದ್ದರು.ಸುಗಂದ್‌ರಾಜ್





ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹರವೆ ಶ್ರೀ ಗುರುಮಲ್ಲೇಶ್ವರ ಅನುದಾನಿತ ಪ್ರೌಢಶಾಲೆ ಯಲ್ಲಿ, ಅಂತಾರಾಷ್ಟ್ರೀಯ ಯೋಗ ದಿನಾಚರಣೆ.

ಇನ್‌ಸ್ಪೈರ್ ಅವಾರ್ಡ್‌ಗೆ ಯಳಂದೂರಿನ 5 ವಿದ್ಯಾರ್ಥಿಗಳು ಆಯ್ಕೆ: ಮೆಲ್ಲಹಳ್ಳಿ ಸರ್ಕಾರಿ ಶಾಲೆಗೆ ರಾಷ್ಟ್ರಮಟ್ಟದ ಗರಿ`

ಹೊನ್ನೂರು ಪ್ರಕಾಶ್ ಬಿಗ್ ಬಾಸ್ ಕನ್ನಡಕ್ಕೆ ಬರಲಿ: ಚಾಮರಾಜನಗರ ರೈತ ಹೋರಾಟಗಾರನಿಗೆ ಅಭಿಮಾನಿಗಳ ಆಗ್ರಹ