ಸಂತೇಮರಹಳ್ಳಿ: ಜ್ಞಾನ ಸಿಂಧು ವೃದ್ಧಾಶ್ರಮದಲ್ಲಿ ಹಿರಿಯ ನಾಗರಿಕರಿಗೆ ಕಾನೂನು ಅರಿವು ಕಾರ್ಯಕ್ರಮ - ಆಸ್ತಿ ವಾಪಸ್ ಪಡೆಯಬಹುದು ಎಂದ ನ್ಯಾಯಾಧೀಶರು.
ಸಂತೇಮರಹಳ್ಳಿ ಜ್ಞಾನ ಸಿಂಧು ವೃದ್ಧಾಶ್ರಮದಲ್ಲಿ ವಿಶ್ವ ಹಿರಿಯ ನಾಗರಿಕರ ನಿಂದನೆ ಜಾಗೃತಿ ದಿನ. ಆಸ್ತಿ ಬರೆಸಿಕೊಂಡು ತಂದೆ-ತಾಯಿಯನ್ನು ದೂರ ತಳ್ಳಿದ್ರೆ ಕಾನೂನು ಕ್ರಮ - ನ್ಯಾಯಾಧೀಶ ಈಶ್ವರ್ ಎಚ್ಚರಿಕೆ. ಸಂತೇಮರಹಳ್ಳಿ: ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿಯ ಜ್ಞಾನ ಸಿಂಧು ವೃದ್ಧಾಶ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘ(ರಿ) ಚಾಮರಾಜನಗರ ಇವರ ವತಿಯಿಂದ ವಿಶ್ವ ಹಿರಿಯ ನಾಗರಿಕರ ನಿಂದನೆ ಜಾಗೃತಿ ದಿನದ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಜ್ಞಾನ ಸಿಂಧು ವೃದ್ಧಾಶ್ರಮಕ್ಕೆ ಆಗಮಿಸಿದ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀಯುತ ಈಶ್ವರ್ ರವರು ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ನ್ಯಾಯಾಧೀಶ ಈಶ್ವರ್ "ಹಿರಿಯ ನಾಗರಿಕರಲ್ಲಿ ಕಾನೂನು ಅರಿವು ಹೆಚ್ಚಿಸಿ, ಹಿರಿಯ ನಾಗರಿಕರ ಹಕ್ಕುಗಳು, ಕಾನೂನು ರಕ್ಷಣೆ, ಪಿಂಚಣಿ ಸೌಲಭ್ಯಗಳ ಬಗ್ಗೆ ತಿಳಿಸಿ ಅವರ ಜೀವನವನ್ನು ಸುರಕ್ಷಿತ ಹಾಗೂ ಗೌರವಯುತವಾಗಿಸುವುದು ಈ ಕಾರ್ಯಕ್ರಮದ ಉದ್ದೇಶ" ಎಂದರು. "ಹಿರಿಯರನ್ನು ಆಸ್ತಿ ಬರೆಸಿಕೊಂಡು ಪೋಷಕರನ್ನು ದೂರ ತಳ್ಳುವ ಮಕ್ಕಳ ವಿರುದ್ಧ ಕಾನೂನು ರೀತಿಯಲ್ಲಿ ಆಸ್ತಿಯನ್ನು ವಶಕ್ಕೆ ಪಡೆದುಕೊಳ್ಳುವ ಅವಕಾಶವಿದೆ. ಇಲ್ಲವಾದಲ್ಲಿ ಕಾನೂನು ರೀತಿಯಲ್ಲಿ ತಕ್ಕ ಪಾಠ ಕಲಿಸಬಹುದು. ಚಿಕ್ಕವ...