ಮನೆ ಚಾವಣೆಯಲ್ಲಿ ಸಿಲುಕಿದ್ದ ಕೇರೆ ಹಾವು ರಕ್ಷಣೆ ಮಾಡಿ ಪ್ರಥಮ ಚಿಕಿತ್ಸೆ ನೀಡಿ ಕಾಡಿಗೆ ಬಿಡಲಾಯಿತು
ವರದಿ:G1News ಯಳಂದೂರು : ತಾಲ್ಲೂಕಿನ ಮನೆಯ ಚಾವಣೆಯಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದ್ದ ಸುಮಾರು 6 ಅಡಿ ಉದ್ದದ ಕೇರೆ ಹಾವನ್ನು ಸ್ನೇಕ್ ಮಂಜು ಅತ್ಯಂತ ಜಾಗರೂಕತೆಯಿಂದ ರಕ್ಷಿಸಿ, ಪ್ರಥಮ ಚಿಕಿತ್ಸೆ ನೀಡಿ ಕಾಡಿಗೆ ಬಿಟ್ಟ ಮಾನವೀಯ ಘಟನೆ ಮೆಲ್ಲಹಳ್ಳಿಯಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಶಿವಣ್ಣರವರ ಮನೆಯ ಚಾವಣೆಯಲ್ಲಿ ಬೆಳಗ್ಗೆ ಬೃಹತ್ ಗಾತ್ರದ ಹಾವು ಸಿಲುಕಿಕೊಂಡಿತ್ತು. ಹಾವು ಹೊರಬರಲಾಗದೆ ಜೀವನ್ಮರಣ ಹೋರಾಟ ನಡೆಸುತ್ತಿತ್ತು. ಮನೆಮಂದಿ ಗಾಬರಿಯಾಗಿ ಕೂಡಲೇ ಸ್ಥಳೀಯ ಉರಗ ತಜ್ಞ ಸ್ನೇಕ್ ಮಂಜು ಅವರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಉರಗ ತಜ್ಞರು ಮತ್ತು ಸ್ಥಳೀಯ ಯುವಕರು ಸೇರಿ ಸುಮಾರು ಅರ್ಧ ಗಂಟೆ ಕಾರ್ಯಾಚರಣೆ ನಡೆಸಿ ಹಾವನ್ನು ಸುರಕ್ಷಿತವಾಗಿ ಹೊರತೆಗೆದರು. ಇದು ಇಂಡಿಯನ್ ರಾಟ್ ಸ್ನೇಕ್ ಅಲಿಯಾಸ್ ಕೇರೆ ಹಾವು ಎಂದು ಗುರುತಿಸಲಾಗಿದೆ. ಚಾವಣೆಯಲ್ಲಿ ಸಿಲುಕಿದ್ದರಿಂದ ಹಾವಿನ ಮೈಮೇಲೆ ಸಣ್ಣಪುಟ್ಟ ಗಾಯಗಳಾಗಿದ್ದವು. ಸ್ನೇಕ್ ಮಂಜು ಹಾಗೂ ಮಾನಸ ರವರು ತಕ್ಷಣವೇ ಗಾಯಕ್ಕೆ ಆಂಟಿಸೆಪ್ಟಿಕ್ ಔಷಧಿ ಹಾಕಿ ಉಪಚರಿಸಲಾಯಿತು. ಬಳಿಕ ಅದನ್ನು ಜನವಸತಿ ಪ್ರದೇಶದಿಂದ ದೂರದ ಕಾಡಿಗೆ ಕೊಂಡೊಯ್ದು ಸುರಕ್ಷಿತವಾಗಿ ಬಿಡಲಾಯಿತು. ಕೇರೆ ಹಾವು ವಿಷರಹಿತ ಇಂಡಿಯನ್ ರಾಟ್ ಸ್ನೇಕ್ ಸಂಪೂರ್ಣ ವಿಷರಹಿತ ಹಾವಾಗಿದ್ದು, ಇಲಿ, ಹೆಗ್ಗಣ, ಕಪ್ಪೆಗಳನ್ನು ತಿಂದು ರೈತರ ಸ್ನೇಹಿತನಾಗಿ ಕೆಲಸ ಮಾಡುತ್ತದೆ. ಇದನ್ನು ಕೊಲ್ಲುವುದು 1972ರ ವನ್ಯಜೀವಿ ಸಂರಕ್ಷಣಾ ಕ...