ಮನೆ ಚಾವಣೆಯಲ್ಲಿ ಸಿಲುಕಿದ್ದ ಕೇರೆ ಹಾವು ರಕ್ಷಣೆ ಮಾಡಿ ಪ್ರಥಮ ಚಿಕಿತ್ಸೆ ನೀಡಿ ಕಾಡಿಗೆ ಬಿಡಲಾಯಿತು



ವರದಿ:G1News

ಯಳಂದೂರು : ತಾಲ್ಲೂಕಿನ ಮನೆಯ ಚಾವಣೆಯಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದ್ದ ಸುಮಾರು 6 ಅಡಿ ಉದ್ದದ ಕೇರೆ ಹಾವನ್ನು ಸ್ನೇಕ್ ಮಂಜು ಅತ್ಯಂತ ಜಾಗರೂಕತೆಯಿಂದ ರಕ್ಷಿಸಿ, ಪ್ರಥಮ ಚಿಕಿತ್ಸೆ ನೀಡಿ ಕಾಡಿಗೆ ಬಿಟ್ಟ ಮಾನವೀಯ ಘಟನೆ ಮೆಲ್ಲಹಳ್ಳಿಯಲ್ಲಿ ನಡೆದಿದೆ.


ಇಲ್ಲಿನ ನಿವಾಸಿ ಶಿವಣ್ಣರವರ ಮನೆಯ ಚಾವಣೆಯಲ್ಲಿ ಬೆಳಗ್ಗೆ ಬೃಹತ್ ಗಾತ್ರದ ಹಾವು ಸಿಲುಕಿಕೊಂಡಿತ್ತು. ಹಾವು ಹೊರಬರಲಾಗದೆ ಜೀವನ್ಮರಣ ಹೋರಾಟ ನಡೆಸುತ್ತಿತ್ತು. ಮನೆಮಂದಿ ಗಾಬರಿಯಾಗಿ ಕೂಡಲೇ ಸ್ಥಳೀಯ ಉರಗ ತಜ್ಞ ಸ್ನೇಕ್ ಮಂಜು ಅವರಿಗೆ ಮಾಹಿತಿ ನೀಡಿದ್ದರು.

ಸ್ಥಳಕ್ಕೆ ಆಗಮಿಸಿದ ಉರಗ ತಜ್ಞರು ಮತ್ತು ಸ್ಥಳೀಯ ಯುವಕರು ಸೇರಿ ಸುಮಾರು ಅರ್ಧ ಗಂಟೆ ಕಾರ್ಯಾಚರಣೆ ನಡೆಸಿ ಹಾವನ್ನು ಸುರಕ್ಷಿತವಾಗಿ ಹೊರತೆಗೆದರು. ಇದು ಇಂಡಿಯನ್ ರಾಟ್ ಸ್ನೇಕ್ ಅಲಿಯಾಸ್ ಕೇರೆ ಹಾವು ಎಂದು ಗುರುತಿಸಲಾಗಿದೆ.

ಚಾವಣೆಯಲ್ಲಿ ಸಿಲುಕಿದ್ದರಿಂದ ಹಾವಿನ ಮೈಮೇಲೆ ಸಣ್ಣಪುಟ್ಟ ಗಾಯಗಳಾಗಿದ್ದವು. ಸ್ನೇಕ್ ಮಂಜು ಹಾಗೂ ಮಾನಸ ರವರು ತಕ್ಷಣವೇ ಗಾಯಕ್ಕೆ ಆಂಟಿಸೆಪ್ಟಿಕ್ ಔಷಧಿ ಹಾಕಿ ಉಪಚರಿಸಲಾಯಿತು. ಬಳಿಕ ಅದನ್ನು ಜನವಸತಿ ಪ್ರದೇಶದಿಂದ ದೂರದ ಕಾಡಿಗೆ ಕೊಂಡೊಯ್ದು ಸುರಕ್ಷಿತವಾಗಿ ಬಿಡಲಾಯಿತು.



ಕೇರೆ ಹಾವು ವಿಷರಹಿತ ಇಂಡಿಯನ್ ರಾಟ್ ಸ್ನೇಕ್ ಸಂಪೂರ್ಣ ವಿಷರಹಿತ ಹಾವಾಗಿದ್ದು, ಇಲಿ, ಹೆಗ್ಗಣ, ಕಪ್ಪೆಗಳನ್ನು ತಿಂದು ರೈತರ ಸ್ನೇಹಿತನಾಗಿ ಕೆಲಸ ಮಾಡುತ್ತದೆ. ಇದನ್ನು ಕೊಲ್ಲುವುದು 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಅಪರಾಧವಾಗಿದೆ ಎಂದರು.

ಹಾವು ಕಂಡ ತಕ್ಷಣ ಭಯಪಟ್ಟು ಹೊಡೆಯಬೇಡಿ. ಅರಣ್ಯ ಇಲಾಖೆ ಸಹಾಯವಾಣಿ 1926 ಅಥವಾ ಸ್ಥಳೀಯ ಉರಗ ರಕ್ಷಕರಿಗೆ ಕರೆ ಮಾಡಿ ಎಂದು ಸ್ನೇಕ್ ಮಂಜು ಸಾರ್ವಜನಿಕರಲ್ಲಿ ಮನವಿ ಮಾಡಿದ್ದರು


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹರವೆ ಶ್ರೀ ಗುರುಮಲ್ಲೇಶ್ವರ ಅನುದಾನಿತ ಪ್ರೌಢಶಾಲೆ ಯಲ್ಲಿ, ಅಂತಾರಾಷ್ಟ್ರೀಯ ಯೋಗ ದಿನಾಚರಣೆ.

ಇನ್‌ಸ್ಪೈರ್ ಅವಾರ್ಡ್‌ಗೆ ಯಳಂದೂರಿನ 5 ವಿದ್ಯಾರ್ಥಿಗಳು ಆಯ್ಕೆ: ಮೆಲ್ಲಹಳ್ಳಿ ಸರ್ಕಾರಿ ಶಾಲೆಗೆ ರಾಷ್ಟ್ರಮಟ್ಟದ ಗರಿ`

ಹೊನ್ನೂರು ಪ್ರಕಾಶ್ ಬಿಗ್ ಬಾಸ್ ಕನ್ನಡಕ್ಕೆ ಬರಲಿ: ಚಾಮರಾಜನಗರ ರೈತ ಹೋರಾಟಗಾರನಿಗೆ ಅಭಿಮಾನಿಗಳ ಆಗ್ರಹ