ಪೋಸ್ಟ್‌ಗಳು

ಜುಲೈ, 2026 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ

ಇಮೇಜ್
ವರದಿ: ಲಕ್ಕೂರು ಚಂದ್ರು   ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ. ಗುಂಡ್ಲುಪೇಟೆ : ಪಟ್ಟಣದ ಜೆಎಸ್ಎಸ್ ಪದವಿ ಕಾಲೇಜಿನ ಸಭಾಂಗಣದಲ್ಲಿ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಮಹಿಳಾ ಸಬಲೀಕರಣ ಘಟಕ, ವಿವಿಧ ಇಲಾಖೆಗಳು ಹಾಗೂ ಜೆಎಸ್ಎಸ್ ಕಾಲೇಜಿನ ಸಂಯುಕ್ತಶ್ರಯದಲ್ಲಿ  ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾದೀಶ ಈಶ್ವರ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಉದ್ಘಾಟನಾ ಭಾಷಣ ಮಾಡಿದ ಅವರು, ವಿದ್ಯಾರ್ಥಿಗಳು ಶಿಕ್ಷಣದ ಕಡೆಗೆ ಗಮನ ಹರಿಸಬೇಕು. ಹದಿನೆಂಟು ವರ್ಷದ ಒಳಗಿನ ಹೆಣ್ಣು ಮಕ್ಕಳಿಗೆ ವಿವಾಹ ಮಾಡಬಾರದು. ಗಂಡು ಮಕ್ಕಳಿಗೆ 21 ವರ್ಷದ ಒಳಗೆ ವಿವಾಹ ಮಾಡಬಾರದು  ಎಂದರು. ಬಾಲ್ಯ ವಿವಾಹ, ವೇಶ್ಯಾವಾಟಿಕೆ, ಅಂಗಾಂಗಗಳ ಕಳ್ಳಸಾಗಾಣೆ, ಬಲವಂತದ ದುಡಿಮೆ, ಹಾಗೂ ಲೈಂಗಿಕ ಶೋಷಣೆಯಂತಹ ಕೃತ್ಯಗಳು ಮಾನವ ಕಳ್ಳ ಸಾಗಾಣಿಕೆಯ ರೂಪಗಳಾಗಿವೆ. ಇವೆಲ್ಲವನ್ನೂ ತಡೆಗಟ್ಟಲು ಭಾರತೀಯ ನ್ಯಾಯ ಸಂಹಿತೆ, ಮಕ್ಕಳ ರಕ್ಷಣಾ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಸೇರಿದಂತೆ ಹಲವು ಕಾನೂನುಗಳು ಜಾರಿಯಲ್ಲಿವೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಜಿಲ್ಲಾಧಿಕಾರಿ ಶ್ರೀರೂಪ ಮಾತನಾಡಿ, ಗುಂಡ್ಲುಪೇಟೆ ಎರಡು ರಾಜ್ಯಗಳ ಗಡಿ ಭಾಗವಾದ್ದರಿಂದ ಉದ್ಯೋಗದ ಆಮಿಷವನ್ನು ...

ತಮಿಳುನಾಡಿಗೆ ನೀರು ಬಿಡುತ್ತಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ರೈತರಿಂದ ಪ್ರತಿಭಟನೆ.

ಇಮೇಜ್
  ತಮಿಳುನಾಡಿಗೆ ನೀರು ಬಿಡುತ್ತಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ರೈತರಿಂದ ಪ್ರತಿಭಟನೆ  ಸಂತೇಮರಹಳ್ಳಿ : ಇಲ್ಲಿನ ವೃತ್ತದಲ್ಲಿ   ಕಾವೇರಿ ನೀರು ನಿಯಂತ್ರಣ ಸಮಿತಿಯು ತಮಿಳುನಾಡಿಗೆ ನೀರು ಹರಿಸುವುದನ್ನು ಖಂಡಿಸಿ ನೂರಾರು ಸಂಖ್ಯೆಯಲ್ಲಿ ರೈತರು ಜಮಾಯಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ರಸ್ತೆ ತಡೆದು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲಾ ರೈತ ಸಂಘದ ಅಧ್ಯಕ್ಷ ಬಸವಣ್ಣ ಮಾತನಾಡಿ ರಾಜ್ಯ ಸರ್ಕಾರ ಕದ್ದು ಮುಚ್ಚಿ ರಾತ್ರೋರಾತ್ರಿ ತಮಿಳುನಾಡಿಗೆ ನೀರು ಬಿಟ್ಟು ರೈತರ ಬಾಯಿಗೆ ಮಣ್ಣು ಹಾಕುವ ಕೆಲಸಕ್ಕೆ ಮಾಡುವುದು ಖಂಡನೀಯ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.  ಈಗಾಗಲೇ ಮುಂಗಾರು ಮಳೆ ಕೊರತೆಯ ಹಿನ್ನೆಲೆಯಲ್ಲಿ ಕಾವೇರಿ ಕೊಳ್ಳದ ರೈತರು ಸಂಕಷ್ಟಕ್ಕೆ ಸಿಲುಕಿದರು ತಮಿಳು ನಾಡಿಗೆ ನೀರು ಹರಿಸುವುದನ್ನು ಮೊದಲು ನಿಲ್ಲಿಸಬೇಕು ಇಲ್ಲವಾದರೆ ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ರೈತರು ಟೈರ್ ಗೆ ಬೆಂಕಿ ಹಚ್ಚುವ ಮೂಲಕ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಘಂಟೆ ರವಾನಿಸಿದ್ದಾರೆ. ಕಾವುದವಾಡಿ ನಾಗೇಶ್ ಮಾತನಾಡಿ ರಾಜ್ಯಕ್ಕೆ ಭರಬಂದು ಬಾವಿಗಳಲ್ಲಿ ನೀರಿಲ್ಲದೆ ಕೆರೆಕಟ್ಟೆಗಳು ಒಣಗುತ್ತಿದ್ದರು ರೈತರ ಹಿತಾಸಕ್ತಿಯನ್ನು ಕಡೆಗಣಿಸಿ ನಮ್ಮ ಕರ್ನಾಟಕ ಸರ್ಕಾರ ತಮಿಳು...

ಯಳಂದೂರಿನಲ್ಲಿ ಅದ್ಧೂರಿಯಾಗಿ ನಡೆದ ಬಸವ ಜಯಂತಿ ಮಹೋತ್ಸವ

ಇಮೇಜ್
ಯಳಂದೂರಿನಲ್ಲಿ ಅದ್ಧೂರಿಯಾಗಿ ನಡೆದ  ಬಸವ ಜಯಂತಿ ಮಹೋತ್ಸವ ಯಳಂದೂರು, ಜು. 25: ಕರ್ನಾಟಕದ ಸಾಂಸ್ಕೃತಿಕ ನಾಯಕ, ವಿಶ್ವಗುರು, ಜಗಜ್ಯೋತಿ ಶ್ರೀ ಬಸವೇಶ್ವರರ 893ನೇ ಜಯಂತಿ ಅಂಗವಾಗಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಬಸವ ಜಯಂತಿ ಆಚರಣಾ ಸಮಿತಿ ಹಾಗೂ ಬಸವ ಬಳಗಗಳ ಒಕ್ಕೂಟ, ಯಳಂದೂರು ತಾಲ್ಲೂಕು ವತಿಯಿಂದ ಶನಿವಾರ ಆಯೋಜಿಸಿದ್ದ ಬಸವ ಜಯಂತಿ ಮಹೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಿತು. ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಬಸವ ಅನುಯಾಯಿಗಳು, ಹಳ್ಳಿಕಾರ್ ಹೋರಿಗಳು, ಎತ್ತಿನಗಾಡಿಗಳು, ಟ್ರ್ಯಾಕ್ಟರ್‌ಗಳು ಹಾಗೂ ಆಟೋಗಳಲ್ಲಿ ಶ್ರೀ ಬಸವೇಶ್ವರರು ಮತ್ತು ಶರಣರ ಭಾವಚಿತ್ರಗಳನ್ನು ಪುಷ್ಪಾಲಂಕೃತ ಪಲ್ಲಕ್ಕಿಗಳಲ್ಲಿ ತಂದು ಮೆರವಣಿಗೆಯಲ್ಲಿ ಭಾಗವಹಿಸಿದ್ದು ವಿಶೇಷ ಆಕರ್ಷಣೆಯಾಗಿತ್ತು. ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಅವರು ನಂದಿ ಧ್ವಜ ಹಾಗೂ ಶ್ರೀ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು.  ಬಳಿಕ ಆಶೀರ್ವಚನ ನೀಡಿ, ಬಸವಣ್ಣನವರು ಸಾರಿದ ಸಮಾನತೆ, ಸೌಹಾರ್ದತೆ ಮತ್ತು ಕಾಯಕದ ತತ್ವಗಳು ಇಂದಿನ ಸಮಾಜಕ್ಕೂ ಮಾರ್ಗದರ್ಶಿಯಾಗಿವೆ. "ವಚನಗಳು ಕೇವಲ ಓದುವುದಕ್ಕಲ್ಲ, ಬದುಕುವುದಕ್ಕೆ" ಎಂದು ಹೇಳಿದ ಅವರು, ಯುವಜನತೆ ಬಸವ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕರೆ ...

ಬೆಲ್ಲ ಉತ್ಪಾದನೆ ಕುರಿತು ಪಿಎಚ್.ಡಿ. ಪಡೆದ ಕೆಂಪನಪುರ ಮಹದೇವಸ್ವಾಮಿಗೆ ಬಸವಪರ ಸಂಘಟನೆಗಳಿಂದ ಸನ್ಮಾನ

ಇಮೇಜ್
 ಚಾಮರಾಜನಗರ ಜುಲೈ 22: ತಾಲ್ಲೂಕಿನ ಕೆಂಪನಪುರ ಗ್ರಾಮದ ಡಾ.ಮಹದೇವಸ್ವಾಮಿ ರವರು ಅಲೆಮನೆ ವ್ಯವಸ್ಥೆಗೆ ಸಂಬಂಧಿಸಿದ ಸಂಶೋಧನೆಯ ಮೂಲಕ ಪಿ ಎಚ್ ಡಿ ಪಡೆದ ಚಾಮರಾಜನಗರದ ಸಿದ್ದಾರ್ಥ ಕಾಲೇಜು ಪ್ರಾಂಶುಪಾಲ ಡಾ. ಮಹದೇವಸ್ವಾಮಿ ರವರನ್ನು ಪ್ರಮುಖರು ಆತ್ಮೀಯವಾಗಿ ಅಭಿನಂದಿಸಿ ಸನ್ಮಾನಿಸಿದರು  ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಪಂಡಿತರು ಹಾಗೂ ಎಮ್ ಸಿ ಎಸ್ ಶಾಲೆಯ ಮುಖ್ಯೋಪಾಧ್ಯಾಯರಾದ ಮಹಾದೇವಸ್ವಾಮಿ ಅವರು ಚಾಮರಾಜನಗರ ಜಿಲ್ಲೆಯ ಪ್ರಮುಖ ಕೃಷಿ ಆಧಾರಿತ ಉತ್ಪನ್ನವಾದ ಬೆಲ್ಲ ಉತ್ಪಾದನೆ ಕುರಿತು ಪಿ ಎಚ್ ಡಿ ಪಡೆದಿರುವುದು ಇಡೀ ಜಿಲ್ಲೆಯ ಹೆಮ್ಮೆ ಹಾಗೂ ಸಂತಸದ ವಿಷಯವಾಗಿದೆ ಎಂದು ಹೇಳಿದರು ಡಾಕ್ಟರ್ ಮಹದೇವಸ್ವಾಮಿ ಕೆಂಪನಪುರ ಅವರು ಕೃಷಿ ಪ್ರಧಾನ ಕುಟುಂಬದಲ್ಲಿ ಜನಿಸಿ ಬೆಳೆದವರಾಗಿದ್ದು ಇಂದಿಗೂ ಕೃಷಿಯನ್ನೇ ತಮ್ಮ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಂಡಿದ್ದಾರೆ ತಮ್ಮ ಜೀವನಾನುಭವ, ರೈತರ ಬದುಕಿನೊಂದಿಗೆ ಇರುವ ನಿಕಟ ಬಾಂಧವ್ಯ ಹಾಗೂ ಅಲೆಮನೆಗಳಲ್ಲಿ ಬೆಲ್ಲ ತಯಾರಿಕೆಯ ಅನುಭವವನ್ನು ಸಂಶೋಧನೆಯ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡಿರುವುದು ತಿಳಿಸಿದರು ಬೆಲ್ಲ ಉತ್ಪಾದನೆಯಲ್ಲಿ ಎದುರಾಗುವ ಸವಾಲುಗಳು, ಉತ್ಪಾದನಾ ವಿಧಾನಗಳು, ಗುಣಮಟ್ಟ ಸುಧಾರಣೆ, ಮಾರುಕಟ್ಟೆ ಸಮಸ್ಯೆಗಳು, ಅವುಗಳಿಗೆ ಅಗತ್ಯವಾದ ಪರಿಹಾರೋಪಾಯಗಳು ಕುರಿತು ನಡೆಸಿರುವ ಅಧ್ಯಯನವು ಮುಂದಿನ ಪೀಳಿಗೆಗೆ ರೈತ ಸಮುದಾಯಕ್ಕೆ ಹಾಗೂ ಸರ್ಕಾರದ ನೀತಿ ರೂಪಿಸುವ ಪ್ರಕ್ರಿಯೆಗೆ ಉಪಯೋಗ ಮ...

ರೇಷ್ಮೆ ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡು ಹೆಚ್ಚಿನ ಆದಾಯ ಗಳಿಸಿ ರೇಣುಕೇಶ್ ಕರೆ.

ಇಮೇಜ್
ವರದಿ: ಗೂಳಿಪುರ ಮಣಿಕಂಠ ನಾಯಕ್  ರೇಷ್ಮೆ ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡು ಹೆಚ್ಚಿನ ಆದಾಯ ಗಳಿಸಿ ರೇಣುಕೇಶ್ ಕರೆ. ಬೇಗೂರು: ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ನ (SVYM) ವಿವೇಕ ಗ್ರಾಮೀಣ ಜೀವನಧಾರ ಕೇಂದ್ರ, ಕುದೇರು ರೇಷ್ಮೆ ಕೃಷಿ ತರಬೇತಿ ಸಂಸ್ಥೆ, ರೇಷ್ಮೆ ಇಲಾಖೆ ಹಾಗೂ ಟೈಟನ್ ಕಂಪನಿ ಲಿಮಿಟೆಡ್ ಸಹಯೋಗದಲ್ಲಿ ರೇಷ್ಮೆ ಕೃಷಿ ಬೆಳೆಗಾರರಿಗಾಗಿ ಮೂರು ದಿನಗಳ ತರಬೇತಿ ಕಾರ್ಯಗಾರಕ್ಕೆ ಸೋಮವಾರ ದಂದು ಗುಂಡ್ಲುಪೇಟೆ ತಾಲೂಕಿನ ಬೇಗೂರು ಸರ್ಕಾರಿ ಐಟಿಐ ಕಾಲೇಜ್ ನಲ್ಲಿ ಚಾಲನೆ ನೀಡಲಾಯಿತು. ಕಾರ್ಯಕ್ರಮವನ್ನು ಚಾಮರಾಜನಗರ ಜಿಲ್ಲಾ ಪಂಚಾಯಿತಿ ರೇಷ್ಮೆ ಇಲಾಖೆ ಉಪ ನಿರ್ದೇಶಕ ರೇಣುಕೇಶ್ ಉದ್ಘಾಟಿಸಿ ಮಾತನಾಡಿ ರೇಷ್ಮೆ ಕೃಷಿಗೆ ಸರ್ಕಾರದಿಂದ ವಿವಿಧ ಸೌಲಭ್ಯಗಳು ಹಾಗೂ ಪ್ರೋತ್ಸಾಹ ದೊರೆಯುತ್ತಿದ್ದು ರೈತರು ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ವೈಜ್ಞಾನಿಕ ಪದ್ಧತಿಯಲ್ಲಿ ರೇಷ್ಮೆ ಕೃಷಿ ಕೈಗೊಂಡರೆ ಉತ್ತಮ ಆದಾಯ ಗಳಿಸಬಹುದು ಎಂದು ತಿಳಿಸಿದರು. ರೈತರಿಗೆ ಇಲಾಖೆಯಿಂದ ನಿರಂತರವಾಗಿ ತಾಂತ್ರಿಕ ಮಾರ್ಗದರ್ಶನ ನೀಡಲಾಗುತ್ತಿದ್ದು ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್  ಮತ್ತು ರೇಷ್ಮೆ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾಗುತ್ತಿರುವ ಇಂತಹ ತರಬೇತಿಗಳು ರೈತರ ಅಭಿವೃದ್ಧಿಗೆ ಪೂರಕವಾಗಿದೆ ಎಂದರು, ತರಬೇತಿಯಲ್ಲಿ ಭಾಗವಹಿಸಿರುವ ವಿಜ್ಞಾನಿಗಳಿಂದ ಹೊಸ ತಂತ್ರಜ್ಞಾನ ವೈಜ್ಞಾನಿಕ ಬೇಸಾಯ ಪದ್ಧತಿ ಹಾಗೂ ರೇಷ್ಮೆ ಉತ್ಪಾದನೆ ಹೆಚ್...

ಕೊಳ್ಳೇಗಾಲ ಬ್ಲಾಕ್ ಕಾಂಗ್ರೆಸ್ ಕಾನೂನು ಮಾನವ ಹಕ್ಕುಗಳು ಮತ್ತು ಮಾಹಿತಿ ಹಕ್ಕೂ ವಿಭಾಗದ ನೂತನ ಅಧ್ಯಕ್ಷರಾಗಿ ಡಿ ಕೆಂಪಯ್ಯ ಆಯ್ಕೆ.

ಇಮೇಜ್
ವರದಿ:G1 ನ್ಯೂಸ್  ಕೊಳ್ಳೇಗಾಲ ಬ್ಲಾಕ್ ಕಾಂಗ್ರೆಸ್ ಕಾನೂನು ಮಾನವ ಹಕ್ಕುಗಳು ಮತ್ತು ಮಾಹಿತಿ ಹಕ್ಕೂ ವಿಭಾಗದ ನೂತನ ಅಧ್ಯಕ್ಷರಾಗಿ ಡಿ ಕೆಂಪಯ್ಯ ಆಯ್ಕೆ.  ಕೊಳ್ಳೇಗಾಲ 21: ಎಐಸಿಸಿ ಕಾನೂನು, ಮಾನವ ಹಕ್ಕುಗಳು ಮತ್ತು ಮಾಹಿತಿ ಹಕ್ಕು ವಿಭಾಗದ ಮಾನ್ಯ ಅಧ್ಯಕ್ಷರಾದ ಡಾಕ್ಟರ್ ಅಭಿಷೇಕ್ ಮನು ಸಿಂಘ್ವಿ ರವರ ಆದೇಶದ ಮೇರೆಗೆ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಬಿ ಕೆ ಹರಿಪ್ರಸಾದ್ ರವರ ಮಾರ್ಗದರ್ಶನದಲ್ಲಿ ಕೊಳ್ಳೇಗಾಲ ಬ್ಲಾಕ್ ಕಾಂಗ್ರೆಸ್ ಕಾನೂನು ಹಕ್ಕುಗಳು ಮತ್ತು ಮಾಹಿತಿ ಹಕ್ಕು ವಿಭಾಗದ ನೂತನ ಅಧ್ಯಕ್ಷರಾಗಿ ಕೊಳ್ಳೇಗಾಲ ತಾಲೂಕು ವಕೀಲರ ಸಂಘದ ಕಾರ್ಯದರ್ಶಿಗಳಾದ ಸಿಲ್ಕಲ್ಪುರ ಗ್ರಾಮದ ಶ್ರೀ ಡಿ ಕೆಂಪಯ್ಯ ಅವರನ್ನು ನೇಮಕ ಮಾಡಲಾಯಿತು. ಈ ನೇಮಕಾತಿಯು ಪಕ್ಷದ ಸಂಘಟನೆಗೆ ಮತ್ತಷ್ಟು ಬಲ ತುಂಬುವ ನೀರಿಕ್ಷೆ ಮೂಡಿಸಿದ್ದು ಕಾನೂನು ಹಕ್ಕುಗಳು ಹಾಗೂ ಮಾಹಿತಿ ಹಕ್ಕುಗಳ ಕುರಿತು ಜನಜಾಗೃತಿ ಮೂಡಿಸುವ ಜೊತೆಗೆ ಸಾರ್ವಜನಿಕರ ಹಕ್ಕುಗಳ ರಕ್ಷಣೆಗೆ ಅವರು ಸಮರ್ಪಕವಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂಬ ವಿಶ್ವಾಸವನ್ನು ಪಕ್ಷದ ಮುಖಂಡರು ವ್ಯಕ್ತಪಡಿಸಿದರು. ನಂತರ ಮಾತನಾಡಿ ಶ್ರೀ ಡಿ ಕೆಂಪಯ್ಯ ರವರು ಮಾತನಾಡಿ ಪಕ್ಷದ ತತ್ವ ಸಿದ್ಧಾಂತಗಳನ್ನು ಜನರಿಗೆ ತಲುಪಿಸುವುದು ಸಂಘಟನೆಯನ್ನು ಮಟ್ಟದಲ್ಲಿ ಇನ್ನಷ್ಟು ಸದೃಢಗೊಳಿಸುವುದು ಹಾಗೂ ಜನಸೇವೆಗೆ ಆದ್ಯತೆ ನೀಡುವುದಾಗಿ ತಿಳಿಸಿದ್ದಾರೆ ಅವರ ನೇಮಕಕ್ಕೆ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಅಭಿಮಾನಿ...

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರಿಗೆ ಜೆಡಿಎಸ್ ನಿಂದ ಶ್ರದ್ಧಾಂಜಲಿ.

ಇಮೇಜ್
ವರದಿ: ಗೂಳಿಪುರ ಮಣಿಕಂಠ ನಾಯಕ್   ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರಿಗೆ ಜೆಡಿಎಸ್ ನಿಂದ ಶ್ರದ್ಧಾಂಜಲಿ.  ಯಳಂದೂರು: ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ರವರ ಪತ್ನಿ ಚೆನ್ನಮ್ಮ ಅವರ ನಿಧನಕ್ಕೆ ಸಂತಾಪ ಸೂಚಿಸಿ ಯಳಂದೂರು ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಕೊಳ್ಳೇಗಾಲ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಬಿ ಪುಟ್ಟಸ್ವಾಮಿ ಅಭಿಮಾನಿಗಳ ಬಳಗ ಹಾಗೂ ಜೆಡಿಎಸ್ ತಾಲೂಕು ಘಟಕದ ವತಿಯಿಂದ ಶ್ರದ್ಧಾಂಜಲಿ ಸಭೆ ನಡೆಯಿತು ಸಭೆಯಲ್ಲಿ ಚೆನ್ನಮ್ಮ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಎರಡು ನಿಮಿಷಗಳ ಮೌನಚರಣೆ ಮೂಲಕ ಗೌರವ ನಮನ ಸಲ್ಲಿಸಲಾಯಿತು.  ಬಳಿಕ ಮಾತನಾಡಿದ ಮುಖಂಡರಾದ ಸಿದ್ದರಾಜನಾಯಕ ಟೌನ್ ಘಟಕದ ಅಧ್ಯಕ್ಷ ಚಂದ್ರು ಹಾಗೂ ಮದ್ದೂರು ನಿಂಗರಾಜಪ್ಪ ಚೆನ್ನಮ್ಮ ರವರು ಸರಳತೆ, ಸೌಜನ್ಯ ಮತ್ತು ಕುಟುಂಬ ಮೌಲ್ಯಗಳಿಗೆ ಹೆಸರುವಾಸಿಯಾಗಿದ್ದು ಅವರ ಜೀವನ ಎಲ್ಲರಿಗೂ ಮಾದರಿಯಾಗಿದೆ ಎಂದು ಸ್ಮರಿಸಿದರು ಅವರ ಅಗಲಿಕೆ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದ್ದು ದೇವೇಗೌಡರ ಕುಟುಂಬದ ದುಃಖದಲ್ಲಿ ನಾವು ಭಾಗಿಯಾಗಿದ್ದೇವೆ ಎಂದು ಸಂತಾಪ ಸೂಚಿಸಿದರು,  ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಕೆಸ್ತೂರು ಆನಂದ್, ಪ್ರಧಾನ ಕಾರ್ಯದರ್ಶಿ ಅಂಬಳೆ ರವೀಶ್, ಖಜಾಂಚಿ ವೈ ಕೆ ಮೋಳೆ ಸೋಮಣ್ಣ, ಗುರುಲಿಂಗಯ್ಯ, ಜವರಶೆಟ್ಟಿ, ಯರಿಯೂರು ಜಯಣ್ಣ, ಒಡಗೆರೆ ಸುಂದರಣ್ಣ, ಯೋಗೇಂದ್ರ ಲಿಂಗರಾಜು, ಕುದೇರು ಶಂಕರ್, ಉಪ್ಪಿನ ಮೊ...

ಯಳಂದೂರು ಗ್ರೀನ್ ವೇ ರೋಟರಿ 2026 27ನೇ ಸಾಲಿನ ಅಧ್ಯಕ್ಷರಾಗಿ ರೋ. ರಿತೇಶ್ ಎಂ ಎಸ್ ಅಧಿಕಾರ ಸ್ವೀಕಾರ.

ಇಮೇಜ್
ವರದಿ: ಗೂಳಿಪುರ ಮಣಿಕಂಠ ನಾಯಕ್  ಯಳಂದೂರು ಗ್ರೀನ್ ವೇ ರೋಟರಿ 2026 27ನೇ ಸಾಲಿನ ಅಧ್ಯಕ್ಷರಾಗಿ ರೋ. ರಿತೇಶ್ ಎಂ ಎಸ್ ಪದಗ್ರಹಣ.  ಯಳಂದೂರು: ರೋಟರಿ ಸಂಸ್ಥೆ ಯಳಂದೂರು ರೋಟರಿ ಗ್ರೀನ್ ವೇ ವತಿಯಿಂದ 2026-27ನೇ ಸಾಲಿನ ಅಧ್ಯಕ್ಷರಾಗಿ ರೋ. ರಿತೇಶ್ ಎಂ ಎಸ್ ಹಾಗೂ ನೂತನ ಪದಾಧಿಕಾರಿಗಳ ಪದವಿ ಪ್ರಧಾನ ಸಮಾರಂಭವು ಸೋಮವಾರ ಪಟ್ಟಣದ ಶಂಕರ ಭವನದಲ್ಲಿ ಅದ್ದೂರಿಯಾಗಿ ನಡೆಯಿತು ಕಾರ್ಯಕ್ರಮವನ್ನು ಜಿಲ್ಲಾ ಗವರ್ನರ್ 2027-28 ಎಂ ಪಿ ಎಚ್ ಎಫ್ ರೋ. ಯಶಸ್ವಿ ಎಸ್ ಸೋಮಶೇಖರ್ ಅವರು ಉದ್ಘಾಟಿಸಿ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಪದವಿ ಪ್ರಮಾಣವಚನ ಬೋಧಿಸಿದರು. ಸಹಾಯಕ ಗವರ್ನರ್ ಎಂ ಪಿ ಹೆಚ್  ಎಫ್ ರೋ. ವೈ ಹೆಚ್ ಹನುಮಂತೇಗೌಡ ಹಾಗೂ ವಲಯ ಸೇನಾನಿ ಪಿ ಹೆಚ್ ಎಫ್ ರೋ. ಆರ್ ದಕ್ಷಿಣಮೂರ್ತಿ ಅವರು ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು  ನಿಕಟ ಪೂರ್ವ ಅಧ್ಯಕ್ಷರು ರೋ. ನಿರಂಜನಸ್ವಾಮಿ ವೈ ಜಿ ಹಾಗೂ ಕಾರ್ಯದರ್ಶಿ ರೋ. ಪುಟ್ಟರಾಜು ಸಿ ಅವರು ಸ್ವಾಗತಿಸಿದರು ನೂತನ ಕಾರ್ಯದರ್ಶಿ ನಾಗರಾಜು ವೈ ಕೆ ಮೋಳೆ ಅವರು ಅಧಿಕಾರ ಸ್ವೀಕರಿಸಿದರು. 2026-27ನೇ ಸಾಲಿನ ಇತರೆ ಪದಾಧಿಕಾರಿಗಳಾಗಿ ಉಪಾಧ್ಯಕ್ಷರು ರೋ ಶಿವಕುಮಾರ್ ಎನ್, ಖಜಾಂಚಿ ರೋ ಬಂಗಾರಸ್ವಾಮಿ ಆರ್, ದಂಡಯುಧಪಾಣಿ ರೋ.ಮಹದೇವ ಎಸ್ ಅವರು ಆಯ್ಕೆಯಾಗಿದ್ದಾರೆ. ಸಂಘ ಸೇವೆ, ವೃತ್ತಿ ಸೇವೆ ಅಂತರಾಷ್ಟ್ರೀಯ ಸೇವೆ ಮತ್ತು ಯುವಜನ ಸೇವೆಗೆ ಪ್ರತ್ಯೇಕ ನಿರ್ದೇಶಕರನ್ನು ನೇಮಿಸಲಾಗಿದೆ "...

ಹೆಚ್ ಕೆ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆ.

ಇಮೇಜ್
ಹೆಚ್ ಕೆ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆ. ಕೊಳ್ಳೇಗಾಲ, ಜುಲೈ 17: ಶಿಕ್ಷಣಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಹೆಚ್.ಕೆ. ಟ್ರಸ್ಟ್ ವತಿಯಿಂದ ಕೊಳ್ಳೇಗಾಲ ತಾಲ್ಲೂಕು ಮತ್ತು ಹನೂರು ತಾಲೂಕಿನ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕಗಳನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಶುಕ್ರವಾರ ಸಾಂಕೇತಿಕವಾಗಿ ದೊಡ್ಡಿಂದುವಾಡಿ ಮತ್ತು ಮಂಗಲ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆ ಮಾಡಿದ ಹೆಚ್.ಕೆ ಟ್ರಸ್ಟ್ ಕಾರ್ಯದರ್ಶಿ ರವರಾದ ಪ್ರೇಮಲತಾ ಕ್ರಷ್ಣ ಸ್ವಾಮಿ ರವರು ಮಾತನಾಡಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗುವ ಉದ್ದೇಶದಿಂದ ಪ್ರತಿವರ್ಷ ಶಿಕ್ಷಣ ಸಂಬಂಧಿತ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ಲಭ್ಯವಾಗುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಶಾಲೆಯ ಮುಖ್ಯ ಶಿಕ್ಷಕರು ಹೆಚ್.ಕೆ. ಟ್ರಸ್ಟ್‌ನ ಸಮಾಜಮುಖಿ ಸೇವೆಯನ್ನು ಶ್ಲಾಘಿಸಿ, ವಿದ್ಯಾರ್ಥಿಗಳಿಗೆ ಅಗತ್ಯವಾದ ಶೈಕ್ಷಣಿಕ ಸಾಮಗ್ರಿಗಳನ್ನು ಒದಗಿಸುವ ಮೂಲಕ ಶಿಕ್ಷಣದ ಮೇಲಿನ ಆಸಕ್ತಿ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುವ ಕಾರ್ಯವನ್ನು ಟ್ರಸ್ಟ್ ಮಾಡುತ್ತಿದೆ ಎಂದು ಮೆಚ್ಚುಗೆ ವ್...

ಜಿಲ್ಲಾಧಿಕಾರಿ ರೂಪ ಹನೂರು ಪ್ರವಾಸ,ದೊಡ್ಡಿಂದುವಾಡಿ ಶಾಲೆ ವೀಕ್ಷಣೆ, ಕುಡಿಯುವ ನೀರು ಸಮಸ್ಯೆ ಪರಿಶೀಲನೆ

ಇಮೇಜ್
ವರದಿ: ಮಣಿಕಂಠ ನಾಯಕ್  ಚಾಮರಾಜನಗರ.ಜುಲೈ17: ಜಿಲ್ಲಾಧಿಕಾರಿ ಶ್ರೀರೂಪ ಅವರು ಹನೂರು ತಾಲ್ಲೂಕಿನ ಮಾರ್ಟಳ್ಳಿ, ಚಂಗಡಿ ಹಾಗೂ ಇನ್ನಿತರ ಗ್ರಾಮಗಳಿಗೆ ಇಂದು ಭೇಟಿ ನೀಡಿ ಕುಡಿಯುವ ನೀರು ಇನ್ನಿತರ ಸಮಸ್ಯೆಗಳನ್ನು ಪರಿಶೀಲಿಸಿದರು. ಜನರೊಂದಿಗೆ ನೇರ ಸಂವಾದ ನಡೆಸಿ ಅಹವಾಲುಗಳನ್ನು ಆಲಿಸಿದರು. ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಸ್ಥಳೀಯ ಸಾರ್ವಜನಿಕ ಸಮಸ್ಯೆಗಳ ಕುರಿತು ಮಾಹಿತಿ ಪಡೆದು  ವಿವರವಾಗಿ ಪರಿಶೀಲನೆ ನಡೆಸಿದರು. ಮಾರ್ಟಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಗ್ರಾಮಸ್ಥರ ಅಹವಾಲುಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳು, ಸ್ಥಳದಲ್ಲಿದ್ದ ಕಾರ್ಯಪಾಲಕ ಇಂಜಿನಿಯರ್ ಗೆ ನೀರು ಸರಬರಾಜು ವಿಭಾಗದ ಅಧಿಕಾರಿಗಳು ಹಾಗೂ ಸಂಬಂಧಿತ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಚಂಗಡಿ ಗ್ರಾಮ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಗೆ ಶೀಘ್ರ  ಪರಿಹಾರ ಕಲ್ಪಿಸಲು  ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಸಾರ್ವಜನಿಕರು ಹಾಗೂ ಗ್ರಾಮದ ಮುಖಂಡರೊಂದಿಗೆ  ಸಂವಾದ ನಡೆಸಿದರು.  ದೊಡ್ಡಿಂದುವಾಡಿ ಗ್ರಾಮದಲ್ಲಿ   ಸಿ ಎಸ್ ಆರ್ ಅನುದಾನದ ಡಿ ಮೇಲ್ದರ್ಜೆಗೆರುತ್ತಿರುವ ದೊಡ್ಡಿಂದುವಾಡಿಯ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳಿಗೆ ಭೇಟಿ ನೀಡಿ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿದರು. ...

ಗೂಳಿಪುರ ಗ್ರಾಮದಲ್ಲಿ ಎಸ್‌ಐಆರ್ ಪ್ರಕ್ರಿಯೆ ಕುರಿತು ಅರಿವು ಮಾಜಿ ಸಚಿವ ಎನ್ ಮಹೇಶ್ ಭಾಗಿ

ಇಮೇಜ್
  ವರದಿ:ಗೂಳಿಪುರ ಮಣಿಕಂಠನಾಯಕ ಗೂಳಿಪುರ ಗ್ರಾಮದಲ್ಲಿ ಎಸ್‌ಐಆರ್ ಪ್ರಕ್ರಿಯೆ ಕುರಿತು ಅರಿವು ಮಾಜಿ ಸಚಿವ ಎನ್ ಮಹೇಶ್ ಭಾಗಿ ಯಳಂದೂರು/ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗೂಳಿಪುರ ಗ್ರಾಮದಲ್ಲಿ ನಡೆದ ಎಸ್‌ಐಆರ್ (Special Intensive Revision) ಪ್ರಕ್ರಿಯೆಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷರು ಹಾಗೂ ಮಾಜಿ ಸಚಿವರಾದ ಎನ್ ಮಹೇಶ್ ಭಾಗವಹಿಸಿ ಸಾರ್ವಜನಿಕರಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕುರಿತು ಅರಿವು ಮೂಡಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರಿಗೆ ಎಸ್‌ಐಆರ್ ಪ್ರಕ್ರಿಯೆಯ ಮಹತ್ವ, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಅಗತ್ಯ ದಾಖಲೆಗಳನ್ನು ಸಲ್ಲಿಸುವ ವಿಧಾನ ಕುರಿತು ಮಾಹಿತಿ ನೀಡಲಾಯಿತು. ಅರ್ಹ ಮತದಾರರು ತಪ್ಪದೇ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾಗವಹಿಸಿ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸರಿಯಾಗಿ ನೋಂದಣಿಯಾಗುವಂತೆ ಕ್ರಮವಹಿಸಬೇಕು ಎಂದು ಅವರು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ಬಿಜೆಪಿ ಮುಖಂಡರು ಮೋಹನ್, ಮಹದೇವಸ್ವಾಮಿ,ಉಮೇಶ್, ಗಜೇಂದ್ರ, ಮತಾಪ್ (ಮಧು), ಚಂದ್ರು, ವೆಂಕಟೇಶ್, ಶೇಖ, ಬಿ ಎಲ್ ಓ ಮಂಜುಳ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದು, ಎಸ್‌ಐಆರ್ ಪ್ರಕ್ರಿಯೆಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿ ಸಲ್ಲಿಸಿದರು. ಬಳಿಕ ಗ್ರಾಮಸ್ಥರೊಂದಿಗೆ ಚರ್ಚಿಸಿ ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸ...

ಗೂಳಿಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ ಚುನಾವಣೆ ಯಶಸ್ವಿ

ಇಮೇಜ್
  ಗೂಳಿಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ ಚುನಾವಣೆ ಯಶಸ್ವಿ ಚಾಮರಾಜನಗರ: ತಾಲ್ಲೂಕಿನ ಗೂಳಿಪುರ ಗ್ರಾಮದ ಶ್ರೀ ವಿ. ಮಹಾಂತದೇವರ ಸರ್ಕಾರಿ ಪ್ರೌಢಶಾಲೆಯಲ್ಲಿ 2026-27ನೇ ಸಾಲಿನ ವಿದ್ಯಾರ್ಥಿ ಸಂಸತ್ ಚುನಾವಣೆ ಪ್ರಜಾಪ್ರಭುತ್ವದ ಮಾದರಿಯಲ್ಲಿ ಯಶಸ್ವಿಯಾಗಿ ನಡೆಯಿತು. ಚುನಾವಣೆಯಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ಮತ ಚಲಾಯಿಸಿದರು. ಮತದಾರರ ಪಟ್ಟಿಯ ಪರಿಶೀಲನೆ, ಮತದಾನ, ಮತಪೆಟ್ಟಿಗೆ ಬಳಕೆ ಹಾಗೂ ಮತ ಎಣಿಕೆ ಸೇರಿದಂತೆ ಚುನಾವಣೆಯ ಎಲ್ಲಾ ಹಂತಗಳನ್ನು ಚುನಾವಣಾ ನಿಯಮಾವಳಿಯಂತೆ ನಡೆಸಲಾಯಿತು. ವಿದ್ಯಾರ್ಥಿಗಳು ಮತದಾನದ ಮಹತ್ವವನ್ನು ಅರಿತು ಶಿಸ್ತಿನಿಂದ ತಮ್ಮ ಹಕ್ಕನ್ನು ಚಲಾಯಿಸಿದರು. ಮತ ಎಣಿಕೆ ಬಳಿಕ ಆಯ್ಕೆಯಾದ ವಿದ್ಯಾರ್ಥಿ ಪ್ರತಿನಿಧಿಗಳನ್ನು ಘೋಷಿಸಲಾಯಿತು. ಈ ಮೂಲಕ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ, ಜವಾಬ್ದಾರಿಯ ಮನೋಭಾವ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶವನ್ನು ಶಾಲೆ ಯಶಸ್ವಿಯಾಗಿ ಸಾಕಾರಗೊಳಿಸಿತು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ ಹಾಗೂ ಸಿಬ್ಬಂದಿ ಚುನಾವಣಾ ಪ್ರಕ್ರಿಯೆಯನ್ನು ಸುಗಮವಾಗಿ ನಡೆಸಿಕೊಟ್ಟರು. ವಿದ್ಯಾರ್ಥಿಗಳು ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪ್ರಜಾಪ್ರಭುತ್ವದ ವ್ಯವಸ್ಥೆಯ ಬಗ್ಗೆ ಪ್ರಾಯೋಗಿಕ ಅನುಭವ ಪಡೆದರು. ನಿಮ್ಮ ಧ್ವನಿ ನಮ್ಮ ಸುದ್ದಿ 📢 G1 NEWS Honnur - ಜನರ ಪರ ಸಮಸ್ಯೆ ಇದ್ರೆ ತಕ್ಷಣ ತಿಳಿಸಿ: 9...

ಸಿಮ್ಸ್ ಮೆದುಳು ಆರೋಗ್ಯ ಕೇಂದ್ರದಲ್ಲಿ ಭೌತಚಿಕಿತ್ಸೆ ಸಲಕರಣೆ ಸಾರ್ವಜನಿಕ ಸೇವೆಗೆ ಸಮರ್ಪಣೆ

ಇಮೇಜ್
ವರದಿ: ಗೂಳಿಪುರ ಮಣಿಕಂಠ ನಾಯಕ್  ಸಿಮ್ಸ್ ಮೆದುಳು ಆರೋಗ್ಯ ಕೇಂದ್ರದಲ್ಲಿ ಭೌತಚಿಕಿತ್ಸೆ ಸಲಕರಣೆ ಸಾರ್ವಜನಿಕ ಸೇವೆಗೆ ಸಮರ್ಪಣೆ ಚಾಮರಾಜನಗರ, ಜುಲೈ 17 (ಕರ್ನಾಟಕ ವಾರ್ತೆ):- ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿರುವ ಮೆದುಳು ಆರೋಗ್ಯ ಕೇಂದ್ರಕ್ಕೆ (ಬಿಎಚ್‍ಸಿ) ಉಜ್ಜೀವನ್ ಸ್ಮಾಲ್ ಫೈನಾನ್ಸ್ ಸಂಸ್ಥೆಯಿಂದ ಕೊಡುಗೆ ನೀಡಿರುವ ಭೌತಚಿಕಿತ್ಸೆಯ ಸಲಕರಣೆಗಳಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ಕುಮಾರ್ ಅವರು ಚಾಲನೆ ನೀಡಿದರು.         ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ಕಾರ್ಯಕ್ರಮದಡಿ ಸಿಮ್ಸ್ ನಲ್ಲಿ ನರರೋಗಗಳಿಗೆ ಪರಿಣಾಮಕಾರಿ ಚಿಕಿತ್ಸೆ ನೀಡುವ ಸಲುವಾಗಿ ಸ್ಥಾಪಿಸಲಾಗಿರುವ ಮೆದುಳು ಆರೋಗ್ಯ ಕೇಂದ್ರಕ್ಕೆ ನೀಡಲಾಗಿರುವ ಭೌತಚಿಕಿತ್ಸೆಯ ಸಲಕರಣೆಗಳನ್ನು ಆರೋಗ್ಯಾಧಿಕಾರಿಗಳು ಟೇಪ್ ಕತ್ತರಿಸುವ ಮೂಲಕ ಸಾರ್ವಜನಿಕರ ಉಚಿತ ಸೇವೆಗೆ ಸಮರ್ಪಿಸಿದರು.          ಇದೇ ವೇಳೆ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ಕುಮಾರ್ ಅವರು ತಲೆನೋವು, ಅಪಸ್ಮಾರ, ಬುದ್ಧಿಮಾಂದ್ಯತೆ ಮತ್ತು ಪಾಶ್ರ್ವವಾಯುನಂತಹ ನಾಲ್ಕು ಪ್ರಮುಖ ನರ ವೈಜ್ಞಾನಿಕ ಸಮಸ್ಯೆಗಳನ್ನು ಪರಿಹರಿಸಲು ಭೌತಚಿಕಿತ್ಸೆಯ ಸಲಕರಣೆಗಳು ನೆರವಾಗಲಿದೆ. ರೋಗಿಯ ಫಲಿತಾಂಶಗಳನ್ನು ಸುಧಾರಿಸಲು ಆರಂಭಿಕ ಗುರುತಿಸುವಿಕೆ, ಸಕಾಲಿಕ ಚಿಕಿತ್ಸೆ ಮತ್ತು ಟೆಲಿ ನರಶ...

ಗಣಿಗನೂರು ಸುರೇಶ್‌ಗೆ ರಾಷ್ಟ್ರಮಟ್ಟದ ಜಾನಪದ ಕಣ್ಮಣಿ ಪ್ರಶಸ್ತಿ

ಇಮೇಜ್
  ವರದಿ: ಗೂಳಿಪುರ ಮಣಿಕಂಠ ನಾಯಕ್  ಗಣಿಗನೂರು ಸುರೇಶ್‌ಗೆ ರಾಷ್ಟ್ರಮಟ್ಟದ ಜಾನಪದ ಕಣ್ಮಣಿ ಪ್ರಶಸ್ತಿ ಯಳಂದೂರು: ಬೆಳಕು ಸಾಹಿತ್ಯಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ (ರಿ) ವತಿಯಿಂದ ಆಯೋಜಿಸಿದ್ದ 125ನೇ ಬೆಳಕು ಸಮ್ಮೇಳನದಲ್ಲಿ ಯಳಂದೂರು ತಾಲ್ಲೂಕಿನ ಗಣಿಗನೂರು ಸುರೇಶ್ ಅವರಿಗೆ ರಾಷ್ಟ್ರಮಟ್ಟದ ಜಾನಪದ ಕಣ್ಮಣಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕು ಗಣಿಗನೂರು ಗ್ರಾಮದ ಶ್ರೀ ಡಿ. ಸುರೇಶ್ ರವರು ಜಾನಪದ ಗಾಯಕರಾಗಿ ಮತ್ತು ಚಿತ್ರ ಬರಹಗಾರರಾಗಿ ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಜಾನಪದ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಯಿತು. 12-07-2026 ರಂದು ಹುಬ್ಬಳ್ಳಿಯ ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. G1 NEWS ವತಿಯಿಂದ ಸುರೇಶ್‌ ರವರಿಗೆ ಹೃತ್ಪೂರ್ವಕ ಅಭಿನಂದನೆಗಳು 💐💐💐💐💐 ನಿಮ್ಮ ಧ್ವನಿ ನಮ್ಮ ಸುದ್ದಿ 📢 G1 NEWS Honnur - ಜನರ ಪರ ಸಮಸ್ಯೆ ಇದ್ರೆ ತಕ್ಷಣ ತಿಳಿಸಿ: 9964481518 Follow ಮಾಡಿ ಮತ್ತು Share ಮಾಡಿ 🙏

ಪತ್ರಿಕಾ ದಿನಾಚರಣೆ ದತ್ತಿ ಪ್ರಶಸ್ತಿಗಳಿಗೆ ಪತ್ರಕರ್ತರ ಆಯ್ಕೆ

ಇಮೇಜ್
ಚಾಮರಾಜನಗರ : ಪತ್ರಿಕಾ ದಿನಾಚರಣೆ ಅಂಗವಾಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಸ್ಥಾಪಿಸಿರುವ ವಿವಿಧ ದತ್ತಿ ಪ್ರಶಸ್ತಿಗಳಿಗೆ 6 ಪತ್ರಕರ್ತರನ್ನು ಆಯ್ಕೆ ಮಾಡಲಾಗಿದೆ.  ಜು.19 ರಂದು ನಗರದ ವರ್ತಕರ ಭವನದಲ್ಲಿ ಆಯೋಜಿಸಿರುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಈ  ಪ್ರಶಸ್ತಿಗಳನ್ನು ಪ್ರದಾನ   ಮಾಡಲಾಗುವುದು. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಲ್ಲಿಸಿರುವ ಅತ್ಯುತ್ತಮ ಸೇವೆಯನ್ನು ಪರಿಗಣಿಸಿ ವಿಶೇಷ ದತ್ತಿ ಪ್ರಶಸ್ತಿಗಳಿಗೆ ಜಿಲ್ಲೆಯ 6 ಪತ್ರಕರ್ತರನ್ನು ಆಯ್ಕೆ ಮಾಡಲಾಗಿದೆ. ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ತಮ್ಮ ತಂದೆ-ತಾಯಿಯವರ ಹೆಸರಿನಲ್ಲಿ ಸ್ಥಾಪಿಸಿರುವ ಶ್ರೀಮತಿ ಗೌರಮ್ಮ- ಬಿ.ರಾಚಯ್ಯ ದತ್ತಿ ಪ್ರಶಸ್ತಿಗೆ ಸುದ್ದಿಸಂಜೆ ಪತ್ರಿಕೆ  ವರದಿಗಾರರಾದ ಎಂ.ಬಸವರಾಜು ಆಯ್ಕೆಯಾಗಿದ್ದಾರೆ. ಕೊಳ್ಳೇಗಾಲದ ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ.ದತ್ತೇಶ್ ಕುಮಾರ್ ತಮ್ಮ ತಂದೆ ತಾಯಿ ಹೆಸರಿನಲ್ಲಿ ಸ್ಥಾಪಿಸಿರುವ ಲಿಂಗಮ್ಮ ಮತ್ತು ಆರ್. ಸಿದ್ದೇಗೌಡ ದತ್ತಿ ಪ್ರಶಸ್ತಿಗೆ ಹನೂರು ತಾಲ್ಲೂಕಿನ ಆಂದೋಲನ ಪತ್ರಿಕೆ ವರದಿಗಾರ ಎಂ. ಮಹಾದೇಶ ಆಯ್ಕೆಯಾಗಿದ್ದಾರೆ. ಚಾಮರಾಜನಗರದ ಗುತ್ತಿಗೆದಾರರಾದ ಹೊಸೂರು ಜಗದೀಶ್ ತಮ್ಮ ತಂದೆಯ ಸ್ಮರಣಾರ್ಥ ಸ್ಥಾಪಿಸಿರುವ ಸಿದ್ದಲಿಂಗ ದೇವರು ಹಿರಿಯ ಛಾಯಾಗ್ರಾಹಕ ಪ್ರಶಸ್ತಿಗೆ ಪತ್ರಿಕಾ ಛಾಯಾಗ್ರಾಹಕರಾದ ಬದನಗುಪ್ಪೆ ಮಲ್ಲಣ್ಣ ಆಯ್...

ಮೂರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಜ್ಯುವೆಲರಿ ಮಾಲೀಕ ಅಹಮದಾಬಾದ್‌ನಲ್ಲಿ ಬಂಧನ. 100ಕ್ಕೂ ಹೆಚ್ಚು ಜನರಿಂದ ಚಿನ್ನ ಗಿರವಿ ಪಡೆದು ವಾಪಸ್ ನೀಡದೆ ಪರಾರಿಯಾಗಿದ್ದ ಆರೋಪಿ

ಇಮೇಜ್
ವರದಿ: ಗೂಳಿಪುರ ಮಣಿಕಂಠ ನಾಯಕ್   ಹುಣಸೂರು: ಕಳೆದ ಸುಮಾರು ಮೂರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಹುಣಸೂರಿನ ವಿನಾಯಕ ಜ್ಯುವೆಲರಿ ಶಾಪ್ ಮಾಲೀಕ ಪ್ರೀತೇಶ್ ಅಲಿಯಾಸ್ ಪಿಂಟು ಎಂಬ ಆರೋಪಿಯನ್ನು ಗುಜರಾತ್ ರಾಜ್ಯದ ಅಹಮದಾಬಾದ್‌ನಲ್ಲಿ ಬಂಧಿಸುವಲ್ಲಿ ಹುಣಸೂರು ಪಟ್ಟಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಹುಣಸೂರು ಪಟ್ಟಣದ ಬಜಾರ್ ರಸ್ತೆಯಲ್ಲಿರುವ ವಿನಾಯಕ ಜ್ಯುವೆಲರಿ ಮಾಲೀಕನಾಗಿದ್ದ ಆರೋಪಿ, ಹುಣಸೂರು ಭಾಗದ 100ಕ್ಕೂ ಹೆಚ್ಚು ಜನರಿಂದ ಚಿನ್ನಾಭರಣಗಳನ್ನು ಗಿರವಿ ಪಡೆದುಕೊಂಡಿದ್ದ ಎನ್ನಲಾಗಿದೆ. ಬಳಿಕ ಗ್ರಾಹಕರಿಗೆ ಚಿನ್ನಾಭರಣಗಳನ್ನು ವಾಪಸ್ ನೀಡದೆ ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್ ಹಾಗೂ ರಾಜಸ್ಥಾನ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ತಲೆಮರೆಸಿಕೊಂಡಿದ್ದ ಎಂಬ ಆರೋಪ ಕೇಳಿಬಂದಿತ್ತು. ಆರೋಪಿಯ ಪತ್ತೆಗೆ ಹುಣಸೂರು ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸಿದ್ದು, ಕೊನೆಗೂ ಗುಜರಾತ್‌ನ ಅಹಮದಾಬಾದ್‌ನಲ್ಲಿ ಆರೋಪಿ ಇರುವ ಬಗ್ಗೆ ಮಾಹಿತಿ ಕಲೆ ಹಾಕಿ ಜುಲೈ 10ರಂದು ಬಂಧಿಸಿದ್ದಾರೆ. ಹುಣಸೂರು ಟೌನ್ ಪೊಲೀಸ್ ಠಾಣೆಯ ನೂತನ ಇನ್ಸ್‌ಪೆಕ್ಟರ್ ಶಿವಮಾದಯ್ಯ ಅವರ ಮಾರ್ಗದರ್ಶನದಲ್ಲಿ, ಪಿಎಸ್‌ಐ ಟಿ.ಎಂ. ತಾಜುದ್ದೀನ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತು. ಹೆಡ್ ಕಾನ್‌ಸ್ಟೆಬಲ್ ರಾಜರತ್ನಂ (ಎಚ್‌ಸಿ-166), ಅರುಣ್ (ಎಚ್‌ಸಿ-130) ಹಾಗೂ ಇರ್ಫಾನ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಬಂಧಿತ ಆರೋಪಿಯನ್ನು ಹುಣಸೂರಿಗೆ ಕರೆತಂದು ಕಾನೂನು ಕ್ರಮ ...

ಮಕ್ಕಳ ಹಕ್ಕುಗಳ ಬಗ್ಗೆ ಅರಿವು ಮೂಡಿಸಿ ನ್ಯಾಯಾಧೀಶರಾದ ಈಶ್ವರ್ ಕರೆ

ಇಮೇಜ್
  ಚಾಮರಾಜನಗರ : ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಹಾಗೂ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಇವರ ಸಹಯೋಗದಲ್ಲಿ ಬುಧವಾರ ದಂದು ಮರಿಯಾಲದ ಶ್ರೀಮುರುಘರಾಜೇಂದ್ರ ಸ್ವಾಮಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಮಕ್ಕಳಲ್ಲಿ ಕಾನೂನು ಅರಿವು ಮತ್ತು ಕ್ರೀಡಾ ಮಹತ್ವ ಕುರಿತು ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀಯುತ ಈಶ್ವರ್ ರವರು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಕ್ಕಳ ಹಕ್ಕುಗಳು, ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿ, ಮಕ್ಕಳ ಅಪಹರಣ ಕಾಯ್ದೆ ಕುರಿತು ವಿದ್ಯಾರ್ಥಿಗಳಿಗೆ ಸುದೀರ್ಘ ಮಾಹಿತಿ ನೀಡಿದರು. ಜೊತೆಗೆ ಅವುಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆಯೂ ತಿಳಿಸಿದರು. 18 ವರ್ಷದೊಳಗಿನ ಮಕ್ಕಳು ಚಾಲನಾ ಪರವಾನಿಗೆ ಇಲ್ಲದೆ ಮೋಟಾರ್ ಬೈಕ್ ಚಾಲನೆ ಮಾಡುವುದು ಅಪರಾಧ ಎಂದು ಎಚ್ಚರಿಸಿದರು. ಲೈಂಗಿಕ ಶೋಷಣೆಯ ವಿರುದ್ಧವೂ ಅರಿವು ಮೂಡಿಸಿದರು. ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಆರೋಗ್ಯವಂತ ಜೀವನ ರೂಢಿಸಿಕೊಳ್ಳಬಹುದು ಎಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪಿ. ಮಹಾದೇವಸ್ವಾಮಿ ರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಪುಟ್ಟಸ್ವಾಮಿ ರಾಷ್ಟ್ರೀಯ ಫುಟ್ಬಾಲ್ ತರಬೇತುದಾರ ಯೋನ್ಹ ಜೋಸೆಫ್...

72 ವರ್ಷಗಳ ಸೇವೆ ವೆಂಕಟೇಶ ಬೇಕರಿ ಮಾಲೀಕ ಬದ್ರಿ ನಾರಾಯಣ್‌ಗೆ ಸನ್ಮಾನ.

ಇಮೇಜ್
  ವರದಿ: ಗೂಳಿಪುರ ಮಣಿಕಂಠ ನಾಯಕ್ ಚಾಮರಾಜನಗರ: ನಗರದ ಶ್ರೀ ವೆಂಕಟೇಶ ಬೇಕರಿಯ 72ನೇ ವರ್ಷದ ಸಂಭ್ರಮದ ಅಂಗವಾಗಿ  ಜೈಹಿಂದ್  ಪ್ರತಿಷ್ಠಾನ  ಹಾಗೂ   ಋಗ್ವೇದಿ ಯೂತ್ ಕ್ಲಬ್   ವತಿಯಿಂದ ಬೇಕರಿ ಮಾಲೀಕ ಬದ್ರಿ ನಾರಾಯಣ್ ಅವರನ್ನು ಸುರೇಶ್ ಎನ್ ಋಗ್ವೇದಿ ಸನ್ಮಾನಿಸಿದರು. 1954ರಲ್ಲಿ ಆರಂಭವಾದ ವೆಂಕಟೇಶ ಬೇಕರಿ ಗುಣಮಟ್ಟದ ಪದಾರ್ಥಗಳ ಮೂಲಕ ದೇಶ-ವಿದೇಶಗಳಲ್ಲಿ ಪ್ರಸಿದ್ಧಿ ಪಡೆದು ಚಾಮರಾಜನಗರದ ಕೀರ್ತಿ ಹೆಚ್ಚಿಸಿದೆ. ಸಂಕಷ್ಟದ ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಬ್ರೆಡ್, ಬನ್ ವಿತರಿಸಿ ಸೇವೆ ಸಲ್ಲಿಸಿರುವುದು ಸ್ಮರಣೀಯ ಎಂದು ಸುರೇಶ್ ಹೇಳಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಬದ್ರಿ ನಾರಾಯಣ್, ತಂದೆ ವೆಂಕಟವರದಾಚಾರ್ ಹಾಗೂ ತಾಯಿ ಪದ್ಮ ಸ್ಥಾಪಿಸಿದ ಬೇಕರಿ 72 ವರ್ಷಗಳಿಂದ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ಕಾರ್ಯಕ್ರಮದಲ್ಲಿ ಚೇತನ್, ಸುರೇಶ್ ಕುಮಾರ್, ಶರಣ್ಯ, ಸಾನಿಕ ಹಾಗೂ ಶಾವ್ಯ ಉಪಸ್ಥಿತರಿದ್ದರು. ನಿಮ್ಮ ಧ್ವನಿ ನಮ್ಮ ಸುದ್ದಿ 📢 G1 NEWS Honnur - ಜನರ ಪರ ಸಮಸ್ಯೆ ಇದ್ರೆ ತಕ್ಷಣ ತಿಳಿಸಿ: 9964481518 Follow ಮಾಡಿ ಮತ್ತು Share ಮಾಡಿ 🙏

ಹಿರಿಯರನ್ನು ಗೌರವಿಸಿ, ಅವರ ‘ನೆಮ್ಮದಿ’ಗೆ ಸಹಕರಿಸಿ: ಕದಂಬ ನಾ. ಅಂಬರೀಷ್ ಮನವಿ

ಇಮೇಜ್
  ವರದಿ: ಗೂಳಿಪುರ ಮಣಿಕಂಠ ನಾಯಕ್   ಚಾಮರಾಜನಗರ: ಜೀವನದುದ್ದಕ್ಕೂ ಕುಟುಂಬ ಮತ್ತು ಸಮಾಜದ ಏಳಿಗೆಗಾಗಿ ಶ್ರಮಿಸಿದ ಹಿರಿಯ ನಾಗರಿಕರನ್ನು ಗೌರವದಿಂದ ಕಾಣುವುದು ಪ್ರತಿಯೊಬ್ಬರ ಕರ್ತವ್ಯ. ಅವರ ಜೀವನದ ಸಂಧ್ಯಾಕಾಲ ನೆಮ್ಮದಿ ಮತ್ತು ಸಂತೋಷದಿಂದ ಕೂಡಿರಲು ಎಲ್ಲರೂ ಸಹಕಾರ ನೀಡಬೇಕು ಎಂದು ಜನಮಿತ್ರ ಸೇವಾ ಟ್ರಸ್ಟ್ ಅಧ್ಯಕ್ಷ ಕದಂಬ ನಾ. ಅಂಬರೀಷ್ ಮನವಿ ಮಾಡಿದರು. ನಗರದ ಡಾ. ಬಿ.ಆರ್. ಅಂಬೇಡ್ಕರ್ ಉದ್ಯಾನವನದ ಸಮೀಪ ಜನಮಿತ್ರ ಸೇವಾ ಟ್ರಸ್ಟ್ ವತಿಯಿಂದ ನಡೆಸಲಾಗುತ್ತಿರುವ ನೆಮ್ಮದಿ ಹಿರಿಯ ನಾಗರಿಕರ ಆರೈಕೆ ಕೇಂದ್ರದ ಕುರಿತು ಮಾತನಾಡಿದ ಅವರು, ವೃದ್ಧಾಪ್ಯದಲ್ಲಿ ಹಿರಿಯರಿಗೆ ಪ್ರೀತಿ, ಆರೈಕೆ ಮತ್ತು ಆತ್ಮೀಯತೆಯ ಅಗತ್ಯ ಹೆಚ್ಚಿರುತ್ತದೆ. ಅವರನ್ನು ನಿರ್ಲಕ್ಷಿಸದೆ ಗೌರವಯುತ ಜೀವನ ನಡೆಸಲು ನೆರವಾಗಬೇಕು ಎಂದರು. ಹಿರಿಯರ ಮುಖದಲ್ಲಿ ನಗು ಮೂಡಿಸುವ ಸೇವೆಯೇ ನಿಜವಾದ ಮಾನವೀಯ ಸೇವೆ. ಅನಾಥ, ನಿರ್ಗತಿಕ ಹಾಗೂ ಆರೈಕೆಯ ಅಗತ್ಯವಿರುವ ಹಿರಿಯರ ನೆಮ್ಮದಿಗಾಗಿ ನಮ್ಮ ಕೇಂದ್ರ ಶ್ರಮಿಸುತ್ತಿದೆ. ಸಾರ್ವಜನಿಕರು, ದಾನಿಗಳು ಹಾಗೂ ಸಂಘ-ಸಂಸ್ಥೆಗಳು ಈ ಮಾನವೀಯ ಕಾರ್ಯಕ್ಕೆ ಕೈಜೋಡಿಸಬೇಕು” ಎಂದು ಕದಂಬ ನಾ. ಅಂಬರೀಷ್ ಕೋರಿದರು. ನೆಮ್ಮದಿ ಕೇಂದ್ರದಲ್ಲಿ ಹಿರಿಯ ನಾಗರಿಕರಿಗೆ ಸುರಕ್ಷಿತ ಹಾಗೂ ಶಾಂತಿಯುತ ವಾತಾವರಣ ಕಲ್ಪಿಸುವ ಉದ್ದೇಶ ಹೊಂದಲಾಗಿದ್ದು, ಸಮಾಜದ ಸಹೃದಯರು ಕೇಂದ್ರದ ಸೇವಾ ಚಟುವಟಿಕೆಗಳಿಗೆ ಪ್ರೋತ್ಸಾಹ ಮತ್ತು ಸಹಕಾರ ನೀಡುವಂತೆ ಮನವಿ ಮಾಡಿದ...

ಕರ್ನಾಟಕದಲ್ಲಿ ದೇಶದ ಮೊದಲ ಸರ್ಕಾರಿ ನೇತೃತ್ವದ ಎಐ ವಿಶ್ವವಿದ್ಯಾಲಯ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಣೆ

ಇಮೇಜ್
  ವರದಿ: ಗೂಳಿಪುರ ಮಣಿಕಂಠ ನಾಯಕ್  ಬೆಂಗಳೂರು, ಜು.14: ಕರ್ನಾಟಕವನ್ನು ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದ ಜಾಗತಿಕ ಕೇಂದ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ, ದೇಶದ ಮೊದಲ ಸರ್ಕಾರಿ ನೇತೃತ್ವದ ಕೃತಕ ಬುದ್ಧಿಮತ್ತೆ ವಿಶ್ವವಿದ್ಯಾಲಯವನ್ನು ಕರ್ನಾಟಕದಲ್ಲಿ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದರು. ಮಂಗಳವಾರ ಬೆಂಗಳೂರಿನ ಬಿಐಇಸಿಯಲ್ಲಿ ನಡೆದ ಗೂಗಲ್ ಐ/ಒ ಕನೆಕ್ಟ್ ಇಂಡಿಯಾ–2026 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಐ ಸಂಶೋಧನೆ ಮತ್ತು ಅಭಿವೃದ್ಧಿಗೆ ಉತ್ತೇಜನ ನೀಡಲು ಸ್ಟಾರ್ಟ್‌ಅಪ್‌ಗಳು ಹಾಗೂ ಕಂಪನಿಗಳಿಗೆ ನೆರವಾಗುವ ಎಐ ಹಬ್ ಮತ್ತು ಇನ್‌ಕ್ಯುಬೇಷನ್ ಕೇಂದ್ರ ಸ್ಥಾಪಿಸಲಾಗುವುದು ಎಂದು ತಿಳಿಸಿದರು. ಪ್ರಸ್ತಾವಿತ ಎಐ ವಿಶ್ವವಿದ್ಯಾಲಯವು ವಿಶ್ವಮಟ್ಟದ ಎಐ ಪ್ರತಿಭೆಗಳನ್ನು ರೂಪಿಸುವುದು, ಉನ್ನತ ಸಂಶೋಧನೆಗೆ ಉತ್ತೇಜನ ನೀಡುವುದು ಹಾಗೂ ಶಿಕ್ಷಣ ಸಂಸ್ಥೆಗಳು, ಉದ್ಯಮ ಮತ್ತು ಸರ್ಕಾರದ ನಡುವಿನ ಸಹಕಾರವನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದರು.  ಬೆಂಗಳೂರು ಕೇವಲ ಭಾರತದ ತಂತ್ರಜ್ಞಾನ ರಾಜಧಾನಿಯಲ್ಲ. ವಿಶ್ವದ ಅತ್ಯಂತ ಚಟುವಟಿಕೆಯ ನಾವೀನ್ಯತಾ ಕೇಂದ್ರಗಳಲ್ಲಿ ಒಂದಾಗಿದೆ. ಕರ್ನಾಟಕವನ್ನು ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆಯ ಜಾಗತಿಕ ಕೇಂದ್ರವನ್ನಾಗಿ ರೂಪಿಸುವುದು ನಮ್ಮ ಗುರಿ, ಎಂದು ಹೇಳಿದರು. ಕರ್ನಾಟಕವು ದೇಶದ ಸಾಫ್ಟ್‌ವೇರ್ ರಫ್ತಿನಲ್ಲಿ ...

ಪತ್ರಿಕೋದ್ಯಮ–ಸಮಾಜ ಸೇವೆಗೆ ಡಾ. ರಾಜೇಶ್ ನಾಯಕ್‌ಗೆ ನಾಡಪ್ರಭು ಕೆಂಪೇಗೌಡ ರಾಷ್ಟ್ರೀಯ ಪ್ರಶಸ್ತಿ

ಇಮೇಜ್
ವರದಿ:ಗುಳಿಪೂರ ಮಣಿಕಂಠ ನಾಯಕ್  ಚಾಮರಾಜನಗರ, ಜು.12: ಪತ್ರಿಕೋದ್ಯಮ ಮತ್ತು ಸಮಾಜ ಸೇವೆ ಕ್ಷೇತ್ರದಲ್ಲಿ ಸಲ್ಲಿಸಿರುವ ವಿಶಿಷ್ಟ ಸೇವೆಯನ್ನು ಗುರುತಿಸಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ಡಾ. ರಾಜೇಶ್ ನಾಯಕ್ ಅವರಿಗೆ ಪ್ರತಿಷ್ಠಿತ ನಾಡಪ್ರಭು ಕೆಂಪೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಬೆಂಗಳೂರು ಗಂಧದ ಗುಡಿ ಕನ್ನಡ ಸಂಘ ಹಾಗೂ ಧಾರವಾಡದ ಚೇತನ ಪ್ರತಿಷ್ಠಾನದ ಸಂಯುಕ್ತಾಶ್ರಯದಲ್ಲಿ, ನವಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ತು (ರಿ), ಬೆಂಗಳೂರು ಸಹಯೋಗದೊಂದಿಗೆ ಭಾನುವಾರ ನೆಲಮಂಗಲದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಕನ್ನಡ ನುಡಿ ಸಮ್ಮೇಳನ ದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಡಾ. ಭೇರ್ಯ ರಾಮ್ ಕುಮಾರ್ ರವರು ಸಮ್ಮೇಳನ ಉದ್ಘಾಟನೆ ನೆರವೇರಿಸಿ ಮಾತನಾಡಿ, ಕನ್ನಡ ನಾಡು, ನುಡಿ, ಸಂಸ್ಕೃತಿ ಮತ್ತು ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸಾಧಕರನ್ನು ಗುರುತಿಸಿ ಗೌರವಿಸುವುದು ಅತ್ಯಂತ ಮಹತ್ವದ ಕಾರ್ಯವಾಗಿದೆ. ನಾಡಪ್ರಭು ಕೆಂಪೇಗೌಡರ ಆದರ್ಶಗಳು ಇಂದಿನ ಪೀಳಿಗೆಗೆ ಪ್ರೇರಣೆಯಾಗಿದ್ದು ಪ್ರಶಸ್ತಿ ಪುರಸ್ಕೃತರು ಇನ್ನಷ್ಟು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿ ಎಂದು ಆಶಿಸಿದರು. ಕಾರ್ಯಕ್ರಮದಲ್ಲಿ ಗಂಧದ ಗುಡಿ ಕನ್ನಡ ಸಂಘದ ರಾಜ್ಯಾಧ್ಯಕ್ಷ ಡಾ. ಚಂದ್ರಶೇಖರ ಮಾಡಲಗೇರಿ ಅವ...

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಚಾಮರಾಜನಗರ ಜಿಲ್ಲಾ ಘಟಕದ ಸಭೆ

ಇಮೇಜ್
ವರದಿ:ಹೊನ್ನೂರು ಪುಟ್ಟಸ್ವಾಮಿ  ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಚಾಮರಾಜನಗರ ಜಿಲ್ಲಾ ಘಟಕದ ಸಭೆ. ಸಂತೇಮರಹಳ್ಳಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚಾಮರಾಜನಗರ ಜಿಲ್ಲಾ ಘಟಕದ ಸಭೆಯು ಶನಿವಾರ ಸಂತೇಮರಹಳ್ಳಿ ಗ್ರಾಮದ ಲೋಕೋಪಯೋಗಿ ಇಲಾಖೆ ಅತಿಥಿ ಗೃಹದಲ್ಲಿ ನಡೆಯಿತು. ಜಿಲ್ಲಾ ಅಧ್ಯಕ್ಷ ಪ್ರಕಾಶ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ಪತ್ರಕರ್ತರ ಸಂಘಟನೆ ಹಾಗೂ ಪತ್ರಿಕಾ ರಂಗದ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಸದಸ್ಯತ್ವ ನೋಂದಣಿ ಜಿಲ್ಲೆಯಲ್ಲಿ ಹೊಸ ಸದಸ್ಯರ ಸೇರ್ಪಡೆ ಮಾಡುವ ಮೂಲಕ ಸಂಘಟನೆಯನ್ನು ಬಲಪಡಿಸಲು ತೀರ್ಮಾನಿಸಲಾಯಿತು. ಮಾಸಿಕ ಸಭೆ ಪ್ರತಿ ತಿಂಗಳ ಎರಡನೇ ಶನಿವಾರ ತಾಲೂಕು ಕೇಂದ್ರದಲ್ಲಿ ಸಭೆ ಆಯೋಜಿಸಿ ಪತ್ರಕರ್ತರ ಸಮಸ್ಯೆ ಹಾಗೂ ಸಂಘಟನೆಯ ವಿಚಾರಗಳ ಕುರಿತು ಚರ್ಚಿಸಲು ನಿರ್ಧರಿಸಲಾಯಿತು. ಸದಸ್ಯತ್ವ ಶುಲ್ಕ ಈ ತಿಂಗಳ ಒಳಗೆ ಎಲ್ಲಾ ಸದಸ್ಯರು 1500 ರೂ. ಸದಸ್ಯತ್ವ ಶುಲ್ಕವನ್ನು ಅಧ್ಯಕ್ಷರಿಗೆ ಪಾವತಿಸಬೇಕು ಎಂದು ತಿಳಿಸಲಾಯಿತು. ರಾಜ್ಯ ಮಟ್ಟದ ಕಾರ್ಯಕ್ರಮ ಇದೇ ತಿಂಗಳು ಮಂಡ್ಯ ಜಿಲ್ಲಾ ಕೇಂದ್ರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಬೇಕು ಎಂದು ತೀರ್ಮಾನಿಸಲಾಯಿತು. ಸಭೆಯಲ್ಲಿ ಜಿಲ್ಲಾ ಅಧ್ಯಕ್ಷ ಪ್ರಕಾಶ್, ಉಪಾಧ್ಯಕ್ಷರಾದ ಗವಿಸ್ವಾಮಿ, ಪ್ರದೀಪ್,ಕಾರ್ಯದರ್ಶಿ ಹೊಸಮಲಗಿ ಶಿವಮಲ್...

ಭಾರತ್ ಭೀಮ್ ಸೇನೆ ಚಾಮರಾಜನಗರ ಜಿಲ್ಲಾಧ್ಯಕ್ಷರಾಗಿ ಆನಂದ್ ಎಂ ಆಯ್ಕೆ

ಇಮೇಜ್
ಭಾರತ್ ಭೀಮ್ ಸೇನೆ ಚಾಮರಾಜನಗರ ಜಿಲ್ಲಾಧ್ಯಕ್ಷರಾಗಿ ಆನಂದ್ ಎಂ ಆಯ್ಕೆ ಸಂತೇಮರಹಳ್ಳಿ:ಸಮಾಜದ ದೀನದಲಿತರು, ಹಿಂದುಳಿದವರು ಹಾಗೂ ನೊಂದವರ ಪರ ಧ್ವನಿ ಎತ್ತುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಭಾರತ್ ಭೀಮ್ ಸೇನೆ ಸಂಘಟನೆಯ ಚಾಮರಾಜನಗರ ಜಿಲ್ಲಾ ಘಟಕದ ನೂತನ ಜಿಲ್ಲಾಧ್ಯಕ್ಷರಾಗಿ ಆನಂದ್ ಎಂ ಅವರನ್ನು ಆಯ್ಕೆ ಮಾಡಲಾಯಿತು. ಸಂತೇಮರಹಳ್ಳಿಯ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ರಾಜ್ಯಮಟ್ಟದ ಭಾರತ್ ಭೀಮ್ ಸೇನೆ ಸಂಘದ ಸಂಸ್ಥಾಪಕರು ಹಾಗೂ ರಾಜ್ಯಾಧ್ಯಕ್ಷರಾದ ದಿನೇಶ್ ಅವರ ಅಧ್ಯಕ್ಷತೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥಾಪಕ ದಿನೇಶ್ ಅವರು, "ಭಾರತ್ ಭೀಮ್ ಸೇನೆ ರಾಜ್ಯದ ಪ್ರಪ್ರಥಮ ಸಂಘಟನೆಯಾಗಿದ್ದು, ಎಲ್ಲಾ ವರ್ಗಗಳ ಸದಸ್ಯರನ್ನು ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ. ಈ ಸಂಘಟನೆಯು ಕೇವಲ ಒಂದು ಜಾತಿಗೆ ಸೀಮಿತವಾಗದೆ ರಾಜ್ಯಾದ್ಯಂತ ಎಲ್ಲಾ ವರ್ಗಗಳ ಜನರನ್ನು ಒಳಗೊಂಡಿದೆ. ಜಿಲ್ಲೆಯಲ್ಲಿ ನೊಂದವರ ಮತ್ತು ಹಿಂದುಳಿದವರ ಪರವಾಗಿ ನಿಲ್ಲುವ ಏಕೈಕ ಸಂಘಟನೆಯಾಗಿದೆ" ಎಂದು ತಿಳಿಸಿದರು. ಇಡೀ ರಾಜ್ಯದ್ಯಂತ ಈ ಸಂಘಟನೆಯು 20,830 ಸದಸ್ಯರನ್ನು ಹೊಂದಿದೆ. ಅನಾಥಾಶ್ರಮ, ವೃದ್ಧಾಶ್ರಮ ಸೇರಿದಂತೆ ಸಮಾಜದ ದುರ್ಬಲ ವರ್ಗಗಳಿಗೆ ಸಹಾಯ ಮಾಡುವುದೇ ನಮ್ಮ ಮುಖ್ಯ ಉದ್ದೇಶವಾಗಿದೆ. ಬುದ್ಧ, ಬಸವ, ಅಂಬೇಡ್ಕರ್ ಅವರ ಆದರ್ಶಗಳ ಹಾದಿಯಲ್ಲಿ ನಾವು ಸಾಗುತ್ತೇವೆ ಎಂದು ಅವರು ಹೇಳಿದರು. ಜಿಲ್ಲಾ ಬಸವ ಕೇಂದ್ರದ ...

ಯಳಂದೂರು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ಇಮೇಜ್
ವರದಿ: ಗೂಳಿಪುರ ಮಣಿಕಂಠ ನಾಯಕ್  ಯಳಂದೂರು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಬೂದಂಬಳ್ಳಿ ಗಿರೀಶ್ ಪ್ರಧಾನ ಕಾರ್ಯದರ್ಶಿ ಜಿಲ್ಲಾ ದತ್ತಿ ಪ್ರಶಸ್ತಿಗೆ ವೈ ಎಂ.ಭಾನುಪ್ರಕಾಶ್ ಆಯ್ಕೆ. ಯಳಂದೂರು: ಪಟ್ಟಣದ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಯಳಂದೂರು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಶನಿವಾರ ನಡೆಯಿತು. ಸಂಘದ ಅಧ್ಯಕ್ಷ ವಿ. ನಾಗರಾಜು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಘದ ಕಾರ್ಯಚಟುವಟಿಕೆ, ಸಂಘಟನೆ ಬಲವರ್ಧನೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಬೂದಂಬಳ್ಳಿ ಗಿರೀಶ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸಹ ಕಾರ್ಯದರ್ಶಿಯಾಗಿ ಕೆಸ್ತೂರು ಪ್ರಸನ್ನ, ನಿರ್ದೇಶಕರಾಗಿ ವೈ.ಕೆ. ಮೋಳೆ ನಾಗರಾಜು, ಫೈರೋಜ್ ಖಾನ್, ಮದ್ದೂರು ಮಂಜುನಾಥ್, ರಾಜಶೇಖರ್, ಮುಷರಫ್ ಹಾಗೂ ಮಣಿಕಂಠ ನಾಯಕ ಅವರನ್ನು ಆಯ್ಕೆ ಮಾಡಲಾಯಿತು. ಚಾಮರಾಜನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ 2026-27ನೇ ಸಾಲಿನ ಪತ್ರಿಕಾ ದಿನಾಚರಣೆ ಸಂದರ್ಭದಲ್ಲಿ ನೀಡಲಾಗುವ ಜಿಲ್ಲಾ ದತ್ತಿ ಪ್ರಶಸ್ತಿಗೆ ಯಳಂದೂರು ತಾಲ್ಲೂಕಿನ ಹಿರಿಯ ಪತ್ರಕರ್ತ ವೈ.ಎಂ. ಭಾನುಪ್ರಕಾಶ್ ಅವರನ್ನು ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಯರಿಯೂರು ನಾಗೇಂದ್ರ, ಖಜ...

11ರಂದು ನಗರದಲ್ಲಿ ಎರಡನೇ ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮ

ಇಮೇಜ್
ವರದಿ: ಗೂಳಿಪುರ ಮಣಿಕಂಠ ನಾಯಕ್ ಜು. 11ರಂದು ನಗರದಲ್ಲಿ ಎರಡನೇ ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮ ಚಾಮರಾಜನಗರ, ಜುಲೈ 10 (ಕರ್ನಾಟಕ ವಾರ್ತೆ):- ರಾಷ್ಟ್ರೀಯ ಹಾಗೂ ರಾಜ್ಯ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕೊಳ್ಳೇಗಾಲ ಗುಂಡ್ಲುಪೇಟೆ ಯಳಂದೂರು ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ಚಾಮರಾಜನಗರ ಜಿಲ್ಲಾ ಬಾರ್ ಅಸೋಸಿಯೇಷನ್ ಸಹಯೋಗದಲ್ಲಿ ಎರಡನೇ ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮವನ್ನು ಜುಲೈ 11ರಂದು ಬೆಳಿಗ್ಗೆ 10 ಗಂಟೆಗೆ ನಗರದ ನ್ಯಾಯಾಲಯ ಸಂಕೀರ್ಣದಲ್ಲಿ ಹಮ್ಮಿಕೊಳ್ಳಲಾಗಿದೆ.   ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳು ಹಾಗೂ ಚಾಮರಾಜನಗರ ಆಡಳಿತಾತ್ಮಕ ನ್ಯಾಯಾಧೀಶರಾದ ಡಾ. ಕೆ. ಮನ್ಮಧ ರಾವ್ ಅವರು ಕಾರ್ಯಕ್ರಮ ಉದ್ಘಾಟಿಸುವರು. ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಪ್ರಭಾವತಿ ಜಿ. ಅವರು ಅಧ್ಯಕ್ಷತೆ ವಹಿಸುವರು.  ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಎಸ್.ಜೆ. ಕೃಷ್ಣ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಪುಟ್ಟಸ್ವಾಮಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.

ಆರೋಗ್ಯ ಸೇವಾ ರತ್ನ ಪ್ರಶಸ್ತಿಗೆ ಭಾಜನರಾದ ಮೈಸೂರಿನ ಹೀಲರ್ ನವೀನ್ ಕುಮಾರ್ ಡಿ.ಎಂ

ಇಮೇಜ್
ವರದಿ: ಗೂಳಿಪುರ ಮಣಿಕಂಠ ನಾಯಕ್  ಆರೋಗ್ಯ ಸೇವಾ ರತ್ನ ಪ್ರಶಸ್ತಿಗೆ ಭಾಜನರಾದ ಮೈಸೂರಿನ ಹೀಲರ್ ನವೀನ್ ಕುಮಾರ್ ಡಿ.ಎಂ ಮೈಸೂರು: ಪರ್ಯಾಯ ಔಷಧಿ ಕ್ಷೇತ್ರದಲ್ಲಿ ಗಮನಾರ್ಹ ಸೇವೆ ಸಲ್ಲಿಸಿರುವ ಮೈಸೂರಿನ ಅಮ್ಮ ಹೀಲಿಂಗ್ ಸೆಂಟರ್‌ನ ಹೀಲರ್ ನವೀನ್ ಕುಮಾರ್ ಡಿ.ಎಂ ಅವರು ಬೆಂಗಳೂರು ಬಸವ ಅಕಾಡೆಮಿಯ 2025-2026ನೇ ಸಾಲಿನ ‘ಆರೋಗ್ಯ ಸೇವಾ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪರ್ಯಾಯ ಔಷಧಿ ಕ್ಷೇತ್ರದಲ್ಲಿ ಕ್ರಾಂತಿ ಸೃಷ್ಟಿಸುವ ಉದ್ದೇಶದಿಂದ ಡಾ. ಬಸವರಾಜ್ ಕೆ ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಸವ ಅಕಾಡೆಮಿಯು ಟ್ರೆಡಿಷನಲ್ ಎನರ್ಜಿ ಮೆಡಿಸಿನ್ ಮೂಲಕ ಶಿಕ್ಷಣ ಮತ್ತು ತರಬೇತಿ ನೀಡುತ್ತಿದೆ. ಆಕ್ಯುಪ್ರೆಶರ್, ಕಲರ್ ಥೆರಪಿ, ಸೀಡ್ ಥೆರಪಿ ಸೇರಿದಂತೆ ವಿವಿಧ ಥೆರಪಿಗಳ ಮೂಲಕ ಈಗಾಗಲೇ ಸಾವಿರಾರು ರೋಗಿಗಳಿಗೆ ಸೇವೆ ಒದಗಿಸಿದೆ. ಬಸವ ಅಕಾಡೆಮಿಯ ಮಾರ್ಗದರ್ಶನದಲ್ಲಿ 1st ಕ್ರಾಸ್, ತ್ಯಾಗರಾಜ ರಸ್ತೆ, ಅಗ್ರಹಾರ, ಮೈಸೂರು ನಲ್ಲಿ ‘ಅಮ್ಮ ಹೀಲಿಂಗ್ ಸೆಂಟರ್’ ಸ್ಥಾಪಿಸಿರುವ ನವೀನ್ ಕುಮಾರ್ ಅವರು 2023ರಿಂದ ಆಕ್ಯುಪ್ರೆಶರ್, ಕಲರ್ ಥೆರಪಿ, ಸೀಡ್ ಥೆರಪಿ ಹಾಗೂ ಮರ್ಮ ಚಿಕಿತ್ಸೆಗಳ ಮೂಲಕ ಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡಿ ಉತ್ತಮ ಫಲಿತಾಂಶ ಪಡೆದಿದ್ದಾರೆ. ಇವರ ಸೇವೆಯನ್ನು ಗುರುತಿಸಿ 2024–25ನೇ ಸಾಲಿನಲ್ಲಿ ‘ಬೆಸ್ಟ್ ಹೀಲರ್’ ಪ್ರಶಸ್ತಿಯೂ ನೀಡಲಾಗಿತ್ತು. ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ 2026ರ ಟ್ರೆಡಿಷನ...

ನಾಡಪ್ರಭು ಕೆಂಪೇಗೌಡ ಜಯಂತ್ಯೋತ್ಸವ: ಮಾಜಿ ಮುಖ್ಯಮಂತ್ರಿಗಳಾದ ಡಾ.ಅಶ್ವತ್ ನಾರಾಯಣ್ ಭಾಗಿ

ಇಮೇಜ್
  ಇಂದು ಚಾಮರಾಜನಗರದಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾ ಆಯೋಜಿಸಲಾಗಿದ್ದ ನಾಡಪ್ರಭು ಶ್ರೀ ಕೆಂಪೇಗೌಡರವರ ಜಯಂತ್ಯೋತ್ಸವ ಕಾರ್ಯಕ್ರಮಕ್ಕೆ ಭಾಗವಹಿಸಲು ಆಗಮಿಸಿದ ಮಾಜಿ ಉಪಮುಖ್ಯಮಂತ್ರಿಗಳಾದ ಡಾ. ಅಶ್ವತ್ ನಾರಾಯಣ್ ರವರನ್ನು  ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಹೊನ್ನೂರು ಮಹದೇವಸ್ವಾಮಿರವರ ನೇತ್ರತ್ವತದಲ್ಲಿ ಸ್ವಾಗತಿಸಲಾಯಿತು  ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಶ್ರೀ ಎನ್ ಮಹೇಶ್ ರವರು ಮಾಜಿ ಶಾಸಕರಾದ ಎಸ್. ಬಾಲರಾಜ್ ರವರು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಹೊನ್ನೂರು ಮಹದೇವಸ್ವಾಮಿ ರವರು ಮಾನಸ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರಾದ ಶ್ರೀ ದತ್ತೇಶ್ ಕುಮಾರ್ ಅವರು, ಚಾಮರಾಜನಗರದ ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ನಾರಾಯಣ ಪ್ರಸಾದ್ ರವರು ಶ್ರೀ ಅರಕಲವಾಡಿ ನಾಗೇಂದ್ರ ರವರು ಸಾಹಿತಿಗಳಾದ ಶ್ರೀ ಕೋಡಿ ಉಗನೇ ಮಂಜು ರವರು ಮತ್ತು ಇತರೆ ಮುಖಂಡರು ಉಪಸ್ಥಿತರಿದ್ದರು. ನಿಮ್ಮ ಧ್ವನಿ ನಮ್ಮ ಸುದ್ದಿ 📢 G1 NEWS Honnur - ಜನರ ಪರ ಸಮಸ್ಯೆ ಇದ್ರೆ ತಕ್ಷಣ ತಿಳಿಸಿ: 99644 81518Follow ಮಾಡಿ ಮತ್ತು Share ಮಾಡಿ 🙏

ಕೊಳ್ಳೇಗಾಲ ಬಸ್ ನಿಲ್ದಾಣ ಶೌಚಾಲಯದ ಅಸ್ವಚ್ಛತೆಗೆ ಕ್ರಮಕ್ಕೆ ಆಗ್ರಹಿಸಿದ ಎಸ್.ಎಂ.ವಿ ರಾಜ್ಯಾಧ್ಯಕ್ಷ ಪೂರ್ವಿತ್ ನಾಯಕ

ಇಮೇಜ್
ವರದಿ: ಗೂಳಿಪುರ ಮಣಿಕಂಠ ನಾಯಕ್ ಕೊಳ್ಳೇಗಾಲ ಬಸ್ ನಿಲ್ದಾಣ ಶೌಚಾಲಯದ ಅಸ್ವಚ್ಛತೆಗೆ ಕ್ರಮಕ್ಕೆ ಆಗ್ರಹಿಸಿದ ಎಸ್.ಎಂ.ವಿ ರಾಜ್ಯಾಧ್ಯಕ್ಷ ಪೂರ್ವಿತ್ ನಾಯಕ ಕೊಳ್ಳೇಗಾಲ: ಕೊಳ್ಳೇಗಾಲ ಬಸ್ ನಿಲ್ದಾಣದಲ್ಲಿರುವ ಸಾರ್ವಜನಿಕ ಶೌಚಾಲಯದಲ್ಲಿ ತೀವ್ರ ಅಸ್ವಚ್ಛತೆ, ದುರ್ವಾಸನೆ ಹಾಗೂ ನೀರಿನ ಕೊರತೆ ಉಂಟಾಗಿದೆ. ತಕ್ಷಣ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸೇವಾ ಸಮಿತಿ(ರಿ) ರಾಜ್ಯಾಧ್ಯಕ್ಷರಾದ ಶ್ರೀ ಪೂರ್ವಿತ್ ನಾಯಕ ಅವರು ಕೊಳ್ಳೇಗಾಲ ನಗರಸಭೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ. ನಂತರ ಮಾತನಾಡಿ ಬಸ್ ನಿಲ್ದಾಣಕ್ಕೆ ಪ್ರತಿದಿನ ಸಾವಿರಾರು ಪ್ರಯಾಣಿಕರು, ಮಹಿಳೆಯರು, ಮಕ್ಕಳು ಹಾಗೂ ಹಿರಿಯ ನಾಗರಿಕರು ಬರುತ್ತಾರೆ. ಆದರೆ ಶೌಚಾಲಯವನ್ನು ನಿಯಮಿತವಾಗಿ ಸ್ವಚ್ಛಗೊಳಿಸದ ಕಾರಣ ಅಸ್ವಚ್ಛತೆ ಹೆಚ್ಚಾಗಿದೆ. ಸಮರ್ಪಕ ನೀರಿನ ವ್ಯವಸ್ಥೆ ಇಲ್ಲದ ಕಾರಣ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಿದೆ. ಜೊತೆಗೆ ಕೆಲವರು ಶೌಚಾಲಯದ ಒಳಗೆ ಧೂಮಪಾನ ಮಾಡುತ್ತಿರುವುದು ಸಾರ್ವಜನಿಕರಿಗೆ ಅಸೌಕರ್ಯ ಉಂಟುಮಾಡುತ್ತಿದೆ ಎಂದು ಅವರು ದೂರಿದರು. ಹಾಗಾಗಿ ಶೌಚಾಲಯವನ್ನು ದಿನನಿತ್ಯ ಸ್ವಚ್ಛಗೊಳಿಸುವುದು, 24 ಗಂಟೆ ನೀರಿನ ವ್ಯವಸ್ಥೆ ಕಲ್ಪಿಸುವುದು, ಸಮರ್ಪಕ ನಿರ್ವಹಣೆ ಮಾಡುವುದು ಮತ್ತು "ಧೂಮಪಾನ ನಿಷೇಧ" ಫಲಕಗಳನ್ನು ಅಳವಡಿಸುವಂತೆ ಒತ್ತಾಯಿಸಿ ಸಾರ್ವಜನಿಕರ ಆರೋಗ್ಯ ಮತ್ತ...

ಕೆಎಸ್‌ಒಯು 2026-27 ಪ್ರವೇಶಾತಿ ಆರಂಭ: ವಿವಿಧ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನ

ಇಮೇಜ್
  ವರದಿ: ಗೂಳಿಪುರ ಮಣಿಕಂಠ ನಾಯಕ್  ಕೆಎಸ್‌ಒಯು 2026-27 ಪ್ರವೇಶಾತಿ ಆರಂಭ: ವಿವಿಧ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನ. ಚಾಮರಾಜನಗರ, ಜು. 10: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‌ಒಯು) 2026–27ನೇ ಶೈಕ್ಷಣಿಕ ಸಾಲಿನ ವಿವಿಧ ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್‌ಗಳಿಗೆ ಪ್ರವೇಶಾತಿ ಪ್ರಕ್ರಿಯೆಯನ್ನು ಆರಂಭಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ವಿಶ್ವವಿದ್ಯಾಲಯವು ಬಿ.ಎ., ಬಿ.ಕಾಂ., ಬಿ.ಬಿ.ಎ., ಬಿ.ಎಸ್‌ಸಿ., ಬಿ.ಎಸ್‌.ಡಬ್ಲ್ಯು., ಎಂ.ಎ., ಎಂ.ಕಾಂ., ಎಂ.ಎಸ್‌.ಡಬ್ಲ್ಯು., ಎಂ.ಲಿಬ್.ಐ.ಎಸ್‌ಸಿ., ಎಂ.ಎಸ್‌ಸಿ., ಡಿಪ್ಲೊಮಾ ಹಾಗೂ ಸರ್ಟಿಫಿಕೇಟ್ ಸೇರಿದಂತೆ ವಿವಿಧ ಕೋರ್ಸ್‌ಗಳಿಗೆ ಪ್ರವೇಶಾತಿ ನೀಡುತ್ತಿದೆ. ನಿಯಮಿತ ಶಿಕ್ಷಣ ಪಡೆಯಲು ಸಾಧ್ಯವಾಗದ ವಿದ್ಯಾರ್ಥಿಗಳು, ಉದ್ಯೋಗದಲ್ಲಿರುವವರು, ಗೃಹಿಣಿಯರು ಹಾಗೂ ಉನ್ನತ ಶಿಕ್ಷಣ ಮುಂದುವರಿಸಲು ಬಯಸುವವರಿಗೆ ಈ ಮುಕ್ತ ವಿಶ್ವವಿದ್ಯಾಲಯದ ಶಿಕ್ಷಣ ವ್ಯವಸ್ಥೆ ಉತ್ತಮ ಅವಕಾಶವಾಗಿದೆ ಎಂದು ಪ್ರಾದೇಶಿಕ ಕೇಂದ್ರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಚಾಮರಾಜನಗರ ಪ್ರಾದೇಶಿಕ ಕೇಂದ್ರ ಕಚೇರಿಯ ವಿಳಾಸ ಇಮ್ಯಾನುವಲ್ ಕ್ರಿಶ್ಚಿಯನ್ ಸ್ಕೂಲ್ ಹತ್ತಿರ ರಾಮಸಮುದ್ರ ಬಡಾವಣೆ, ಚಾಮರಾಜನಗರಕ್ಕೆ ಭೇಟಿ ನೀಡಿ ಪ್ರವೇಶ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ 9986564913, 8453114419, 9902995879,ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ ಎ...

ಯಳಂದೂರಿನಲ್ಲಿ ಮಾಜಿ ಡಿಸಿಎಂ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ್‌ಗೆ ಅದ್ದೂರಿ ಸ್ವಾಗತ

ಇಮೇಜ್
  ವರದಿ: ಗೂಳಿಪುರ ಮಣಿಕಂಠ ನಾಯಕ್    ಯಳಂದೂರಿನಲ್ಲಿ ಮಾಜಿ ಡಿಸಿಎಂ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ್‌ಗೆ ಅದ್ದೂರಿ ಸ್ವಾಗತ ಯಳಂದೂರು, ಜು.10: ಬೆಂಗಳೂರು ಮಲ್ಲೇಶ್ವರಂ ಶಾಸಕರು, ಒಕ್ಕಲಿಗ ಸಮುದಾಯದ ಹಿರಿಯ ಮುಖಂಡರು ಹಾಗೂ ರಾಜ್ಯದ ಮಾಜಿ ಉಪಮುಖ್ಯಮಂತ್ರಿಗಳಾದ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ್ ಅವರು ಗುರುವಾರ ಯಳಂದೂರು ಮೂಲಕ ಸಾಗಿದ ವೇಳೆ ತಾಲ್ಲೂಕು ಒಕ್ಕಲಿಗರ ಸಂಘದ ವತಿಯಿಂದ ಆತ್ಮೀಯ ಸ್ವಾಗತ ಕೋರಲಾಯಿತು. ಚಾಮರಾಜನಗರದಲ್ಲಿ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸುತ್ತಿದ್ದ ಅವರನ್ನು ಯಳಂದೂರು ಪಟ್ಟಣದ ಅರಣ್ಯ ಇಲಾಖೆ ಮುಂಭಾಗದ ಬೈಪಾಸ್ ರಸ್ತೆಯಲ್ಲಿ ತಡೆದು ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ತಾಲ್ಲೂಕು ಒಕ್ಕಲಿಗರ ಸಂಘದ ಪದಾಧಿಕಾರಿಗಳು, ಸಮುದಾಯದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಮುಖಂಡರು ಹಾರ ಹಾಕಿ, ಶಾಲು ಹೊದಿಸಿ ಗೌರವ ಸಮರ್ಪಿಸಿದರು.  ಸ್ವಾಗತದ ನಂತರ ಸಮುದಾಯದ ಅಭಿವೃದ್ಧಿ ಮತ್ತು ಸಂಘಟನೆ ಕುರಿತು ಮುಖಂಡರು ಡಾ. ಅಶ್ವತ್ಥ್ ನಾರಾಯಣ್ ಅವರೊಂದಿಗೆ ಸಂಕ್ಷಿಪ್ತ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಮುಖಂಡರು ಕೆ.ಪಿ ಪ್ರಕಾಶ್, ದಾಸನಹುಂಡಿ ಬಾಬು, ಕುಮಾರ್ ,ಗೋವಿಂದ, ವಡಗೆರೆ ರೇವಣ್ಣ, ಗುಂಬಳ್ಳಿ ಸುಂದ್ರಾ ಇತರರು ಹಾಜರಿದ್ದರು.

1 ಮತಕ್ಕೆ ರಾಷ್ಟ್ರಮಟ್ಟದಲ್ಲಿ ಸುದ್ದಿ, ಆದ್ರೆ ಬಸ್ ಸ್ಟ್ಯಾಂಡ್ ಮಾತ್ರ ಇಲ್ಲ!

ಇಮೇಜ್
ವರದಿ:ಗುರುರಾಜ್ ತೆಳ್ಳನೂರು  ಚಾಮರಾಜನಗರ: ತಾಲ್ಲೂಕಿನ ಸಂತೇಮರಹಳ್ಳಿಯು 1962 ರಲ್ಲಿ ಸಂತೇಮರಹಳ್ಳಿ ಮೀಸಲು ವಿಧಾನಸಭಾ ಕ್ಷೇತ್ರವಾಗಿ ಉದಯವಾಯಿತು. ರಾಜ್ಯ ರಾಜಕೀಯದಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಈ ಕ್ಷೇತ್ರ 2008 ರಲ್ಲಿ ಕೇವಲ ಒಂದು ಮತದ ಅಂತರದ ಫಲಿತಾಂಶ ನೀಡಿ ಇಡೀ ದೇಶವೇ ತಿರುಗಿ ನೋಡುವ ಹಾಗೆ ಮಾಡಿತ್ತು. ಅಷ್ಟು ಮಹತ್ವದ ಕ್ಷೇತ್ರ ಇದಾಗಿದೆ. 1962 ರಿಂದ 2026 ರವರೆಗೆ ಹಲವಾರು ಘಟಾನುಘಟಿ ಶಾಸಕರನ್ನು ಕೊಡುಗೆಯಾಗಿ ನೀಡಿದ ಹೆಗ್ಗಳಿಕೆ ಈ ಕ್ಷೇತ್ರಕ್ಕಿದೆ. ಆದರೆ ಅಭಿವೃದ್ಧಿಯ ವಿಚಾರಕ್ಕೆ ಬಂದಾಗ ಮಾತ್ರ ಈ ಕ್ಷೇತ್ರ ಇಂದಿಗೂ ಹಿಂದೆಯೇ ಉಳಿದಿದೆ ಎಂಬುದು ಸ್ಥಳೀಯರ ಆರೋಪ. ಹೌದು ದಶಕಗಳ ಇತಿಹಾಸ ಹೊಂದಿರುವ ಸಂತೇಮರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಇಂದಿಗೂ ಸುಸಜ್ಜಿತ ಬಸ್ ನಿಲ್ದಾಣವೇ ಇಲ್ಲ. ಇದು ಶಾಪವೋ ಅಥವಾ ಜನಪ್ರತಿನಿಧಿಗಳ ನಿರ್ಲಕ್ಷವೋ ಎಂದರೆ ತಪ್ಪಾಗಲಾರದು. ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ಇಲ್ಲಿಂದ ಚಾಮರಾಜನಗರ, ಮೈಸೂರು, ಬೆಂಗಳೂರು ಮತ್ತು ತಮಿಳುನಾಡಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. "ಸಂತೇಮರಹಳ್ಳಿ ಸರ್ಕಲ್" ಎಂದೇ ಪ್ರಖ್ಯಾತಿಯಾಗಿರುವ ಈ ಸ್ಥಳದಲ್ಲಿ ಬಿಸಿಲು, ಮಳೆ, ಚಳಿ, ಹಳ್ಳ ಕೊಳ್ಳ ಎನ್ನದೆ ಜನರು ರಸ್ತೆ ಬದಿಯಲ್ಲಿಯೇ ನಿಂತು ಬಸ್ ಗಾಗಿ ಕಾಯುವ ದುಸ್ಥಿತಿ ಇದೆ. ಮಹಿಳೆಯರು, ಮಕ್ಕಳು, ವೃದ್ಧರು ಪರದಾಡುವ ಪರಿಸ್ಥಿತಿ ಬಂದಿದೆ. ಸಂತೇಮರಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ 33 ಎಕರೆಗೂ ಹೆಚ್ಚು ...