ಆರೋಗ್ಯ ಸೇವಾ ರತ್ನ ಪ್ರಶಸ್ತಿಗೆ ಭಾಜನರಾದ ಮೈಸೂರಿನ ಹೀಲರ್ ನವೀನ್ ಕುಮಾರ್ ಡಿ.ಎಂ

ವರದಿ: ಗೂಳಿಪುರ ಮಣಿಕಂಠ ನಾಯಕ್ 
ಆರೋಗ್ಯ ಸೇವಾ ರತ್ನ ಪ್ರಶಸ್ತಿಗೆ ಭಾಜನರಾದ ಮೈಸೂರಿನ ಹೀಲರ್ ನವೀನ್ ಕುಮಾರ್ ಡಿ.ಎಂ

ಮೈಸೂರು: ಪರ್ಯಾಯ ಔಷಧಿ ಕ್ಷೇತ್ರದಲ್ಲಿ ಗಮನಾರ್ಹ ಸೇವೆ ಸಲ್ಲಿಸಿರುವ ಮೈಸೂರಿನ ಅಮ್ಮ ಹೀಲಿಂಗ್ ಸೆಂಟರ್‌ನ ಹೀಲರ್ ನವೀನ್ ಕುಮಾರ್ ಡಿ.ಎಂ ಅವರು ಬೆಂಗಳೂರು ಬಸವ ಅಕಾಡೆಮಿಯ 2025-2026ನೇ ಸಾಲಿನ ‘ಆರೋಗ್ಯ ಸೇವಾ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪರ್ಯಾಯ ಔಷಧಿ ಕ್ಷೇತ್ರದಲ್ಲಿ ಕ್ರಾಂತಿ ಸೃಷ್ಟಿಸುವ ಉದ್ದೇಶದಿಂದ ಡಾ. ಬಸವರಾಜ್ ಕೆ ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಸವ ಅಕಾಡೆಮಿಯು ಟ್ರೆಡಿಷನಲ್ ಎನರ್ಜಿ ಮೆಡಿಸಿನ್ ಮೂಲಕ ಶಿಕ್ಷಣ ಮತ್ತು ತರಬೇತಿ ನೀಡುತ್ತಿದೆ. ಆಕ್ಯುಪ್ರೆಶರ್, ಕಲರ್ ಥೆರಪಿ, ಸೀಡ್ ಥೆರಪಿ ಸೇರಿದಂತೆ ವಿವಿಧ ಥೆರಪಿಗಳ ಮೂಲಕ ಈಗಾಗಲೇ ಸಾವಿರಾರು ರೋಗಿಗಳಿಗೆ ಸೇವೆ ಒದಗಿಸಿದೆ.

ಬಸವ ಅಕಾಡೆಮಿಯ ಮಾರ್ಗದರ್ಶನದಲ್ಲಿ 1st ಕ್ರಾಸ್, ತ್ಯಾಗರಾಜ ರಸ್ತೆ, ಅಗ್ರಹಾರ, ಮೈಸೂರು ನಲ್ಲಿ ‘ಅಮ್ಮ ಹೀಲಿಂಗ್ ಸೆಂಟರ್’ ಸ್ಥಾಪಿಸಿರುವ ನವೀನ್ ಕುಮಾರ್ ಅವರು 2023ರಿಂದ ಆಕ್ಯುಪ್ರೆಶರ್, ಕಲರ್ ಥೆರಪಿ, ಸೀಡ್ ಥೆರಪಿ ಹಾಗೂ ಮರ್ಮ ಚಿಕಿತ್ಸೆಗಳ ಮೂಲಕ ಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡಿ ಉತ್ತಮ ಫಲಿತಾಂಶ ಪಡೆದಿದ್ದಾರೆ. ಇವರ ಸೇವೆಯನ್ನು ಗುರುತಿಸಿ 2024–25ನೇ ಸಾಲಿನಲ್ಲಿ ‘ಬೆಸ್ಟ್ ಹೀಲರ್’ ಪ್ರಶಸ್ತಿಯೂ ನೀಡಲಾಗಿತ್ತು.

ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ 2026ರ ಟ್ರೆಡಿಷನಲ್ ಎನರ್ಜಿ ಮೆಡಿಸಿನ್ ಮೊದಲ ರಾಷ್ಟ್ರೀಯ ಸಮ್ಮೇಳನದಲ್ಲಿ ಸಂಸ್ಥೆಯ ಚೀಫ್ ಮೆಂಟರ್ ಡಾ. ಬಸವರಾಜ್ ಕೆ ಡಿಆರ್‌ಡಿಒ ನಿವೃತ್ತ ವಿಜ್ಞಾನಿ ಡಾ. ಭೋಜರಾಜ್ ಹಾಗೂ ಇತರ ಗಣ್ಯರ ಸಮ್ಮುಖದಲ್ಲಿ ನವೀನ್ ಕುಮಾರ್ ಡಿ.ಎಂ ಅವರಿಗೆ ಆರೋಗ್ಯ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ನವೀನ್ ಕುಮಾರ್ ಅವರ ಪತ್ನಿ ವಿಂಧ್ಯಾ ಹೀಲರ್ಗಳಾದ ಬಲರಾಮ್ ದುಬೆ, ಸಾವಿತ್ರಿ ಗೋಪಿನಾಥ್, ಕುಸುಮ, ಕವಿತಾ, ರಚನಾ ಸೇರಿದಂತೆ ಆತ್ಮೀಯರು ಉಪಸ್ಥಿತರಿದ್ದರು.

ನಿಮ್ಮ ಧ್ವನಿ ನಮ್ಮ ಸುದ್ದಿ 📢

G1 NEWS Honnur - ಜನರ ಪರ ಸಮಸ್ಯೆ ಇದ್ರೆ ತಕ್ಷಣ ತಿಳಿಸಿ: 99644 81518Follow ಮಾಡಿ ಮತ್ತು Share ಮಾಡಿ 🙏


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹರವೆ ಶ್ರೀ ಗುರುಮಲ್ಲೇಶ್ವರ ಅನುದಾನಿತ ಪ್ರೌಢಶಾಲೆ ಯಲ್ಲಿ, ಅಂತಾರಾಷ್ಟ್ರೀಯ ಯೋಗ ದಿನಾಚರಣೆ.

ಇನ್‌ಸ್ಪೈರ್ ಅವಾರ್ಡ್‌ಗೆ ಯಳಂದೂರಿನ 5 ವಿದ್ಯಾರ್ಥಿಗಳು ಆಯ್ಕೆ: ಮೆಲ್ಲಹಳ್ಳಿ ಸರ್ಕಾರಿ ಶಾಲೆಗೆ ರಾಷ್ಟ್ರಮಟ್ಟದ ಗರಿ`

ಹೊನ್ನೂರು ಪ್ರಕಾಶ್ ಬಿಗ್ ಬಾಸ್ ಕನ್ನಡಕ್ಕೆ ಬರಲಿ: ಚಾಮರಾಜನಗರ ರೈತ ಹೋರಾಟಗಾರನಿಗೆ ಅಭಿಮಾನಿಗಳ ಆಗ್ರಹ