ಪೋಸ್ಟ್‌ಗಳು

ಜೂನ್, 2026 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರು

ಇಮೇಜ್
   ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿಯವರು – ವಚನ ಸಾಹಿತ್ಯದ ಪುನರುಜ್ಜೀವನದ ಮಹಾನ್ ಶಿಲ್ಪಿ. ಜೂನ್ 29 ಎಂದರೆ ವಚನ ಸಾಹಿತ್ಯದ ಪುನರುಜ್ಜೀವನಕ್ಕಾಗಿ ತಮ್ಮ ಸಂಪೂರ್ಣ ಬದುಕನ್ನೇ ಅರ್ಪಿಸಿದ ಮಹಾನ್ ಸಾಧಕ ಡಾ. ಫಕೀರಪ್ಪ ಗುರುಬಸಪ್ಪ ಹಳಕಟ್ಟಿಯವರ ಪುಣ್ಯಸ್ಮರಣೆ. ಜುಲೈ 2 ಅವರ ಜಯಂತಿ. ಈ ಎರಡೂ ದಿನಗಳು ಕೇವಲ ಸ್ಮರಣಾ ದಿನಗಳಲ್ಲ; ಬಸವಾದಿ ಶರಣರ ಅಮೂಲ್ಯ ವಚನ ಪರಂಪರೆಯನ್ನು ಉಳಿಸಿ ಬೆಳೆಸಿದ ಮಹಾನ್ ತಪಸ್ವಿಯನ್ನು ಕೃತಜ್ಞತೆಯಿಂದ ನೆನೆಯುವ ಪವಿತ್ರ ಸಂದರ್ಭಗಳಾಗಿವೆ. ಡಾ. ಫ. ಗು. ಹಳಕಟ್ಟಿಯವರು 1880ರ ಜುಲೈ 2ರಂದು ಧಾರವಾಡದಲ್ಲಿ ಜನಿಸಿ, 1964ರ ಜೂನ್ 29ರಂದು ಲಿಂಗೈಕ್ಯರಾದರು. ಅವರ ಅಸಾಧಾರಣ ಸೇವೆಯಿಂದ ಅವರಿಗೆ "ವಚನ ಪಿತಾಮಹ" ಎಂಬ ಗೌರವಪೂರ್ಣ ಬಿರುದು ಲಭಿಸಿತು. ಬಾಲ್ಯ ಮತ್ತು ಶಿಕ್ಷಣ. ಫ. ಗು. ಹಳಕಟ್ಟಿಯವರ ತಂದೆ ಗುರುಬಸಪ್ಪ ಹಳಕಟ್ಟಿ ಶಿಕ್ಷಕರಾಗಿದ್ದು, ಸಾಹಿತ್ಯಾಸಕ್ತರೂ ಆಗಿದ್ದರು. ಈ ಸಾಹಿತ್ಯಿಕ ವಾತಾವರಣವೇ ಹಳಕಟ್ಟಿಯವರಲ್ಲಿ ಕನ್ನಡ, ವಚನ ಮತ್ತು ಸಂಶೋಧನೆಯ ಆಸಕ್ತಿಯನ್ನು ಬೆಳೆಸಿತು. ಉನ್ನತ ಶಿಕ್ಷಣ ಪಡೆದು ಕಾನೂನು ಪದವೀಧರರಾದ ಅವರು ವಕೀಲರಾಗಿದ್ದರೂ, ಜೀವನದ ನಿಜವಾದ ಧ್ಯೇಯವನ್ನು ಸಮಾಜ ಮತ್ತು ಸಾಹಿತ್ಯ ಸೇವೆಯನ್ನಾಗಿ ಮಾಡಿಕೊಂಡರು. ವಚನಗಳಿಗಾಗಿ ಜೀವಮಾನವಿಡೀ ತಪಸ್ಸು ಇಂದು ನಾವು ಓದುತ್ತಿರುವ ಸಾವಿರಾರು ವಚನಗಳು ಸುಲಭವಾಗಿ ದೊರೆಯುತ್ತವೆ. ಆದರೆ ಒಂದು ಕಾಲದಲ್ಲಿ ಅವು ಹಳ್ಳಿಗಳ ಮನೆಗಳಲ್ಲಿ, ಮಠಗಳಲ್ಲಿ, ತ...

ಯಳಂದೂರು ಬಸ್ ನಿಲ್ದಾಣದಲ್ಲಿ ಮಕ್ಕಳಿಗೆ ಪೋಲಿಯೊ ಲಸಿಕೆ ವಿತರಣೆ

ಇಮೇಜ್
ವರದಿ: ಮಣಿಕಂಠ ನಾಯಕ್ ಗೂಳಿಪುರ  ಯಳಂದೂರು: ತಾಲ್ಲೂಕಿನ ಪ್ರಮುಖ ಸಾರಿಗೆ ಸಂಪರ್ಕ ಕೇಂದ್ರವಾದ ಯಳಂದೂರು ಬಸ್ ನಿಲ್ದಾಣದಲ್ಲಿ ಇಂದು ರಾಷ್ಟ್ರೀಯ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನದ ಅಂಗವಾಗಿ ಸಾರ್ವಜನಿಕ ಬೂತ್ (ಬೂತ್ ಸಂಖ್ಯೆ - 08) ಒಂದನ್ನು ತೆರೆಯಲಾಗಿತ್ತು. ಪ್ರಯಾಣದಲ್ಲಿರುವ ಹಾಗೂ ಸ್ಥಳೀಯ 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕುವ ಮೂಲಕ ಯಶಸ್ವಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಚಾಮರಾಜನಗರ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಈ ಲಸಿಕಾ ಕೇಂದ್ರದಲ್ಲಿ, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು ಸಕ್ರಿಯವಾಗಿ ಪಾಲ್ಗೊಂಡು ಬಸ್ಸುಗಳಿಗಾಗಿ ಕಾಯುತ್ತಿದ್ದ ಮತ್ತು ಪ್ರಯಾಣ ಬೆಳೆಸುತ್ತಿದ್ದ ಪೋಷಕರನ್ನು ಸಂಪರ್ಕಿಸಿ ಅವರ ಮಕ್ಕಳಿಗೆ ಲಸಿಕೆ ಹಾಕಿದರು. ಪೋಷಕರು ತಮ್ಮ ಪುಟ್ಟ ಮಗುವನ್ನು ಕರೆತಂದು ಅತ್ಯಂತ ಜವಾಬ್ದಾರಿಯಿಂದ ಲಸಿಕೆ ಹಾಕಿಸುತ್ತಿರುವುದು ಕಂಡುಬಂದಿತು. ಆರೋಗ್ಯ ಕಾರ್ಯಕರ್ತೆ ಲಸಿಕೆ ಹಾಕಲು ನೆರವಾಗುತ್ತಿದ್ದು, ಸ್ಥಳೀಯರು ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮಗುವಿನ ಆರೋಗ್ಯ ರಕ್ಷಣೆಗಾಗಿ ಮತ್ತು ದೇಶದಿಂದ ಪೋಲಿಯೊ ನಿರ್ಮೂಲನೆ ಮಾಡುವ ಉದ್ದೇಶದಿಂದ ಸರ್ಕಾರ ಹಮ್ಮಿಕೊಂಡಿರುವ ಈ ಲಸಿಕಾ ಆಂದೋಲನಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.ಈ ಸಂದರ್ಭದಲ್ಲಿ ಸಿಬ್ಬಂದಿಗಳು ಸುನಂದ. ಎಂ, ಆನಂದ್. ಎಂ ಹಾಗೂ ಸಾರ್ವಜನಿಕರು ಉಪಸ್ಥಿತರಿದ್...

ಸಂತೇಮರಹಳ್ಳಿ: ಜೂನ್ 28ರಂದು 'ಪಲ್ಸ್ ಪೋಲಿಯೋ ಲಸಿಕೆ ಅಭಿಯಾನ' - 5 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯ

ಇಮೇಜ್
ಸಂತೇಮರಹಳ್ಳಿ : ಪೋಲಿಯೋ ಮುಕ್ತ ಭಾರತ ನಿರ್ಮಾಣದ ಮಹತ್ವದ ಹೆಜ್ಜೆಯಾಗಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸಂತೇಮರಹಳ್ಳಿಯಲ್ಲಿ 'ಪಲ್ಸ್ ಪೋಲಿಯೋ ಲಸಿಕೆ ಅಭಿಯಾನ-2026'ನ್ನು ಜೂನ್ 28 ಭಾನುವಾರದಂದು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮಕ್ಕೆ ಮಕ್ಕಳ ತಜ್ಞರಾದ ಡಾ.ವರ್ಷ ಚಾಲನೆ ನೀಡಿದರು. ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಎಂ ಪಿ ಶಂಕರ್ ಮಾತನಾಡಿ ಅಭಿಯಾನದ ಮುಖ್ಯ ಉದ್ದೇಶ ದೇಶದಿಂದ ಪೋಲಿಯೋ ರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ಈ ಅಭಿಯಾನದ ಪ್ರಮುಖ ಗುರಿಯಾಗಿದೆ.    5 ವರ್ಷದೊಳಗಿನ ಪ್ರತಿಯೊಂದು ಮಗುವಿಗೂ ಪೋಲಿಯೋ ಹನಿ ಹಾಕಿಸುವ ಮೂಲಕ ಮಕ್ಕಳನ್ನು ಜೀವನಪರ್ಯಂತ ಅಂಗವೈಕಲ್ಯದಿಂದ ರಕ್ಷಿಸುವುದು ಇದರ ಆಶಯವಾಗಿದೆ,  ಈ ಅಭಿಯಾನದಲ್ಲಿ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ, ಅದು ಗಂಡಾಗಲಿ ಅಥವಾ ಹೆಣ್ಣಾಗಲಿ, ಉಚಿತವಾಗಿ ಪೋಲಿಯೋ ಹನಿ ನೀಡಲಾಗುವುದು. ನವಜಾತ ಶಿಶುಗಳಿಗೂ ಹನಿ ಹಾಕಿಸುವುದು ಕಡ್ಡಾಯವಾಗಿದೆ ಎಂದರು. ಮಕ್ಕಳ ತಜ್ಞರಾದ ಡಾ.ವರ್ಷ ಮಾತನಾಡಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಉಪ-ಕೇಂದ್ರಗಳು, ಅಂಗನವಾಡಿ ಕೇಂದ್ರಗಳು ಹಾಗೂ ಆಯ್ದ ಶಾಲೆಗಳಲ್ಲಿ ಬೆಳಿಗ್ಗೆ 8 ರಿಂದ ಸಂಜೆ 5 ಗಂಟೆಯವರೆಗೆ ವಿಶೇಷ ಲಸಿಕಾ ಬೂತ್‌ಗಳನ್ನು ತೆರೆಯಲಾಗುವುದು. ಇದರ ಜೊತೆಗೆ, ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯ...

ಕಾಳಿಕಾಂಬಾ-ಕಮಟೇಶ್ವರ ದೇವಾಲಯದ 4ನೇ ವಾರ್ಷಿಕೋತ್ಸವ ಸಂಭ್ರಮ ಸಹಸ್ರಾರು ಭಕ್ತರಿಗೆ ಅನ್ನ ಸಂತರ್ಪಣೆ

ಇಮೇಜ್
ಸಂತೇಮರಹಳ್ಳಿ : ಸಮೀಪದ ಉಮ್ಮತ್ತೂರು ಗ್ರಾಮದ ಶ್ರೀ ಕಾಳಿಕಾಂಬಾ ಕಮಟೇಶ್ವರ ದೇವಾಲಯದ ಪುನರ್ ಪ್ರತಿಷ್ಠಾಪನೆಯ 4ನೇ ವಾರ್ಷಿಕೋತ್ಸವವು ಶನಿವಾರ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ಧಾರ್ಮಿಕ ಕಾರ್ಯಕ್ರಮಗಳು ಬೆಳಿಗ್ಗೆ 7 ಗಂಟೆಯಿಂದ ಪುರೋಹಿತರಾದ ಬಿ ಎಸ್ ಪರಮೇಶ್ವರ್ ಶರ್ಮ ಅವರ ಆಚಾರ್ಯತ್ವದಲ್ಲಿ ಗಣಪತಿ ಪೂಜೆ, ನವಗ್ರಹ ಪೂಜೆ, ಮೃತ್ಯುಂಜಯ ಪೂಜೆ, ವಿಶ್ವಕರ್ಮ ಹೋಮ, ಪ್ರಧಾನ ಹೋಮ ನಾನಾ ರೀತಿಯ ಅಭಿಷೇಕ ನೆರವೇರಿಸಲಾಯಿತು. ಬಳಿಕ ಮೂಲ ವಿಗ್ರಹಗಳಿಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಪೂರ್ಣಾಹುತಿ, ಮಹಾಮಂಗಳಾರತಿ ನಡೆದು ತೀರ್ಥ-ಪ್ರಸಾದ ವಿನಿಯೋಗ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಮುಖರು ಜಗದ ಜನನಿ ಕಾಳಿಕಾಂಬಾ ಪುಣ್ಯ ಸ್ಥಳದಲ್ಲಿ 4ನೇ ವಾರ್ಷಿಕೋತ್ಸವದ ಅಂಗವಾಗಿ ಹಲವಾರು ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಈ ಕಾಳಿಕಾಂಬಾ ದೇವಾಲಯವು ಸುಮಾರು 250 ವರ್ಷಗಳ ಇತಿಹಾಸ ಹೊಂದಿದೆ. ಶಿಥಿಲಾವಸ್ಥೆಯಲ್ಲಿದ್ದ ದೇವಾಲಯವನ್ನು ಉಮ್ಮತ್ತೂರು ಗ್ರಾಮದ ನಾಗಲಿಂಗ ಚಾರ್ ಅವರ ಅಧ್ಯಕ್ಷತೆಯಲ್ಲಿ ಕ್ಷೇಮಾಭಿವೃದ್ಧಿ ಸಂಘ ರಚಿಸಿ, ಹಿರಿಯ ಮುತ್ಸದ್ದಿ ವೇ. ಬ್ರ. ಶ್ರೀ ನಂಜುಂಡಸ್ವಾಮಿಯವರ ಸಾನಿಧ್ಯದಲ್ಲಿ ಪುನರ್ ಜೀರ್ಣೋದ್ಧಾರ ಮಾಡಿ ಪ್ರತಿಷ್ಠಾಪನೆ ಮಾಡಲಾಗಿದೆ. ಇಂದು ಇದು ಪುಣ್ಯ ಕ್ಷೇತ್ರವಾಗಿ ಮಾರ್ಪಾಡಾಗಿದೆ" ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಾವಿರಕ್ಕೂ ಹೆಚ್ಚು ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಆಯೋಜಿಸಲಾಗಿತ್ತು. ವಿಶ್ವ...

ಯಳಂದೂರು ಕೆಪಿಎಸ್ ಶಾಲೆಯಲ್ಲಿ ಕೆಂಪೇಗೌಡ ಜಯಂತಿ: ಬೆಂಗಳೂರು ನಿರ್ಮಾತೃಗೆ ವಿದ್ಯಾರ್ಥಿಗಳಿಂದ ಭಾವಪೂರ್ಣ ನಮನ

ಇಮೇಜ್
KPS School ವರದಿ: ಮಣಿಕಂಠ ನಾಯಕ್ ಗೂಳಿಪುರ  ಯಳಂದೂರು, ಜೂ.27:ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಶನಿವಾರ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಅತ್ಯಂತ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು. ಕೆಪಿಎಸ್ ಶಾಲೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕರು, ಬೋಧಕ ವೃಂದ ಹಾಗೂ ವಿದ್ಯಾರ್ಥಿಗಳು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. ಈ ವೇಳೆ ಮಾತನಾಡಿದ ಶಿಕ್ಷಕ, "16ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದ ಕೆಂಪೇಗೌಡರು ಕೇವಲ ಬೆಂಗಳೂರಿನ ನಿರ್ಮಾತೃ ಮಾತ್ರವಲ್ಲ, ದೂರದೃಷ್ಟಿಯ ಆಡಳಿತಗಾರರೂ ಹೌದು. ಅವರು ಕಟ್ಟಿಸಿದ ಭದ್ರಕೋಟೆ, ಪೇಟೆಗಳು, ಮತ್ತು ಧರ್ಮಾಂಬುಧಿ, ಕೆಂಪಾಂಬುಧಿ, ಸಂಪಂಗಿ, ಕರಣಜಿ ಕೆರೆಗಳು ಇಂದಿಗೂ ಬೆಂಗಳೂರಿನ ಜೀವನಾಡಿಯಾಗಿವೆ" ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು. ಕೆಂಪೇಗೌಡರು ಬೆಂಗಳೂರಿಗೆ ನಾಲ್ಕು ದಿಕ್ಕಿನಲ್ಲಿ ನಿರ್ಮಿಸಿದ ನಾಲ್ಕು ಗೋಪುರಗಳು ನಗರದ ವಿಸ್ತರಣೆಗೆ ಮಿತಿಯಾಗಿತ್ತು ಎಂಬ ಐತಿಹಾಸಿಕ ಸಂಗತಿಯನ್ನು ಶಿಕ್ಷಕರು ವಿವರಿಸಿದರು. "ವ್ಯಾಪಾರ-ವಹಿವಾಟಿಗೆ ಅನುಕೂಲವಾಗುವಂತೆ ಚಿಕ್ಕಪೇಟೆ, ದೊಡ್ಡಪೇಟೆ, ಬಳೇಪೇಟೆಗಳನ್ನು ಸ್ಥಾಪಿಸಿ, ಎಲ್ಲಾ ಜಾತಿ-ಧರ್ಮದ ಜನರು ಒಟ್ಟಾಗಿ ಬದುಕುವಂತಹ ಸಾಮರಸ್ಯದ ನಗರವನ್ನು ಕಟ್ಟಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ" ಎಂದು ಶಿಕ್ಷಕಿ ತಿಳಿಸಿದರು. ಈ ಸಂದರ್ಭದಲ...

ಯಳಂದೂರು ನಿಷೇಧಿತ ಕೇರಳ ಲಾಟರಿ ಮಾರಾಟಗಾರನ ಬಂಧನ

ಇಮೇಜ್
ವರದಿ: ಮಣಿಕಂಠ ನಾಯಕ್ ಗೂಳಿಪುರ ಯಳಂದೂರು: ಪಟ್ಟಣದ ಬಸ್ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಕೇರಳ ರಾಜ್ಯದ ಲಾಟರಿ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಯಳಂದೂರು ಪೊಲೀಸ್ ಠಾಣೆಯ ಸಹಾಯಕ ಉಪನಿರೀಕ್ಷಕ (ASI) ಶ್ರೀ ನಂದಕುಮಾರ್ ಮತ್ತು ಸಿಬ್ಬಂದಿ ಬಂಧಿಸಿದ್ದಾರೆ. ಆರೋಪಿಯಿಂದ ₹9,000 ಮೌಲ್ಯದ ಒಟ್ಟು 180 ಲಾಟರಿ ಟಿಕೆಟ್‌ಗಳು ಹಾಗೂ ಲಾಟರಿ ಮಾರಾಟದ ₹15,200 ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಯಳಂದೂರು ಪೊಲೀಸ್ ಠಾಣೆಯಲ್ಲಿ ಬಂಧಿತ ಆರೋಪಿ ಎಂ.ಸಿ. ಸಿದ್ದರಾಜು ಮೇಲೆ ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಅತ್ಯುತ್ತಮವಾಗಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ. ಮುಂದಿನ ದಿನಗಳಲ್ಲೂ ಇಂತಹ ಅಕ್ರಮಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ನಿಷೇಧಿತ ಕೇರಳ ಲಾಟರಿ ಮಾರಾಟಗಾರನ ಬಂಧನ.ಯಳಂದೂರು

ಚಾಮರಾಜನಗರ ಜಿಲ್ಲೆಗೆ ಹೆಮ್ಮೆ JEE Main ನಲ್ಲಿ ರಾಷ್ಟ್ರಮಟ್ಟದ Rank ಪಡೆದ ಮಲೆಯೂರು ವಿದ್ಯಾರ್ಥಿ ಎಂ ಜಿ ನಾಗದೇವ್ IIT ಮದ್ರಾಸ್ ಗೆ ಆಯ್ಕೆ

ಇಮೇಜ್
ನಿರಂತರ ಅಧ್ಯಯನ ಹಾಗೂ ಉಪನ್ಯಾಸಕರ ಮಾರ್ಗದರ್ಶನದಿಂದ ಜೆಇಇ ಯಂತಹ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಬಹುದು ಎಂದು ಮಲೆಯೂರಿನ ಎಂ.ಜಿ.‌ ನಾಗದೇವ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಮಲೆಯೂರಿನ ಸ್ವಗೃಹದಲ್ಲಿ ದುಗ್ಗಹಟ್ಟಿ ರಾಜೇಶ್ ಗೆಳೆಯರ ಬಳಗ, ಚಾಮರಾಜನಗರ ಬಸವ ಕೇಂದ್ರ ಹಾಗೂ ಗೂಳಿ ಗ್ರೂಪ್ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಚಿಕ್ಕ ವಯಸ್ಸಿನಿಂದಲೇ ಏನಾದ್ರೂ ದೊಡ್ಡ ಸಾಧನೆ ಮಾಡಬೇಕು ಅನ್ನೋ ಹಠ ನನ್ನಲ್ಲಿತ್ತು. ನಮ್ಮ ತಂದೆ-ತಾಯಿ ಮತ್ತು ಶಿಕ್ಷಕರು ಕೊಟ್ಟ ಪ್ರೋತ್ಸಾಹದಿಂದಲೇ ಇವತ್ತು ಈ ಹಂತಕ್ಕೆ ಬಂದಿದ್ದೀನಿ" ಎಂದು ನಾಗದೇವ್ ಹೇಳಿದರು.  ಮುಂದಿನ ಯೋಜನೆ ಬಗ್ಗೆ ಕೇಳಿದಾಗ, "IIT ಮದ್ರಾಸ್ ನಲ್ಲಿ  ಓದಿ ಜ್ಞಾನ ಸಂಪಾದಿಸಿ ಒಳ್ಳೆಯ ಕಂಪನಿಯಲ್ಲಿ ಕೆಲಸಕ್ಕೆ ಸೇರಬೇಕು. ಸಂಪಾದಿಸಿ ಸಮಾಜಕ್ಕೆ ಏನಾದರೂ ಒಳ್ಳೆಯ ಕೊಡುಗೆ ನೀಡಬೇಕು ಅನ್ನೋದು ನನ್ನ ದೊಡ್ಡ ಕನಸು" ಎಂದು ತಿಳಿಸಿದರು ದಾನಿಗಳಾದ ದುಗ್ಗಹಟ್ಟಿ ರಾಜೇಶ್ ಮಾತನಾಡಿ, ಎಂಜಿ ನಾಗದೇವ ಪ್ರತಿಷ್ಠಿತ ಜೆಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ  ಉದ್ಯೋಗಿಗಳಾಗಿರುವ ಮಲೆಯೂರು ಗ್ರಾಮದ ಗುರುಸ್ವಾಮಿ ಮತ್ತು ನೇತ್ರಾವತಿಯವರ ಸುಪುತ್ರನಾಗಿದ್ದಾನೆ. ಜೆ ಇ ಇ ಪರೀಕ್ಷೆಯಲ್ಲಿ ದೇಶಕ್ಕೆ ಮೊದಲ ರಾಂಕ್ ಪಡೆದಿರುವ ಈತ ತನ್ನ ಶಿಕ್ಷಣವನ್ನು ಮೈಸೂರು ಹಾಗೂ ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ಶಿಕ್ಷಣ ಪಡೆದಿದ್ದು ಇತ್ತೀಚಿಗೆ ನಡೆದ ಸಿ ಇ ಟಿ ಪರೀಕ್ಷೆಯಲ್ಲೂ  28ನೇ ರಾಂಕ್...

ಏ ರಿಚ್ ಫೌಂಡೇಶನ್, ಚಾಮರಾಜನಗರ, ಮೈಸೂರು ಹಾಗೂ ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಅರ್ಪಿಸುವ 'ದ ಸ್ಟೋನ್ ರಿಂಗ್ಸ್'

ಇಮೇಜ್
ವರದಿ: ಮಣಿಕಂಠ ನಾಯಕ್ ಗೂಳಿಪುರ                                                                                                                                                  ಏ ರಿಚ್ ಫೌಂಡೇಶನ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅರ್ಪಿಸುವ 'ದ ಸ್ಟೋನ್ ರಿಂಗ್ಸ್' ಜಲವರ್ಣ ಕಲಾಶಿಬಿರ.            ಯಳಂದೂರು: ಪಟ್ಟಣದ ಪ್ರತಿಷ್ಠಿತ ಕಲಾ ಮತ್ತು ಸಾಂಸ್ಕೃತಿಕ ಸಂಸ್ಥೆ ಏ ರಿಚ್ ಫೌಂಡೇಶನ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ 2026, ಜೂನ್ 28, ಭಾನುವಾರ ಏಷ್ಯಾದ ಅತ್ಯುನ್ನತ ಐತಿಹಾಸಿಕ ತಾಣವಾಗಿರುವ, ಪ್ರಸಿದ್ಧ ಬಳೆಮಂಟಪದ ಆವರಣದಲ್ಲಿ ಕರ್ನಾಟಕದ ಬೇರೆ ಬೇರೆ ಭಾಗದ ಇಪ್ಪತ್ತಕ್ಕೂ ಹೆಚ್ಚು ಕಲಾವಿದರಿಂದ ಜಲವರ್ಣ ಕಲಾ ಶಿಬಿರ ಆಯೋಜಿಸಲಾಗಿದೆ.ಸ್ಥಳೀಯವಾಗಿ ಕಲೆ, ಕಲಾವಿದರನ್ನು ಪ್ರೋತ್ಸಾಹ...

ಯಳಂದೂರು ವೀರಶೈವ ಲಿಂಗಾಯತ ನೌಕರರ ಸಂಘದಿಂದ SSLC-PUC ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕರೆಯೋಲೆ.

ಇಮೇಜ್
SSLC-PUC ಯಲ್ಲಿ 85% ಗಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಅಹ್ವಾನ.     ಯಳಂದೂರು :2025-26ನೇ ಸಾಲಿನ SSLC ಮತ್ತು ದ್ವಿತೀಯ PUC ಪರೀಕ್ಷೆಯಲ್ಲಿ ಶೇ.85 ಕ್ಕಿಂತ ಹೆಚ್ಚು ಅಂಕ ಗಳಿಸಿದ ವೀರಶೈವ ಲಿಂಗಾಯತ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ಯಳಂದೂರು ತಾಲ್ಲೂಕು ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘವು ಅರ್ಜಿ ಆಹ್ವಾನಿಸಿದೆ. ಈ ಕುರಿತು ಸಂಘದ ಅಧ್ಯಕ್ಷರು ಬಿ ನಂಜುಂಡಸ್ವಾಮಿ ದಿನಪತ್ರಿಕೆಗೆ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.  ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘವು ದಿನಾಂಕ 09-08-2026 ರಂದು ಭಾನುವಾರ   ಸಂಘದ 22ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಯಳಂದೂರು ತಾಲ್ಲೋಕಿನ  ಕೆಸ್ತೂರು ಗ್ರಾಮದ ಶ್ರೀ ಪಟ್ಟದ ಮಠದಲ್ಲಿ ಯಳಂದೂರು ತಾಲ್ಲೂಕಿನ ಮಠಾಧೀಶರುಗಳ ದಿವ್ಯ ಸಮ್ಮುಖದಲ್ಲಿ ನಡೆಸಲಾಗುತ್ತಿದ್ದು ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಗುವುದು ಎಂದು ತಿಳಿಸಿದ್ದಾರೆ. ಯಳಂದೂರು ತಾಲ್ಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳು ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಸಂಘದ ಅಧ್ಯಕ್ಷರಾದ ಬಿ ನಂಜುಂಡಸ್ವಾಮಿ ಕಾರ್ಯದರ್ಶಿಗಳಾದ ಮಲ್ಲಣ್ಣ ಹಾಗೂ ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:...

ಮಾದಕ ದ್ರವ್ಯ ಕುರಿತು ಜಾಗೃತಿ ಕಾರ್ಯಕ್ರಮ

ಇಮೇಜ್
     ಸಂತೇಮರಹಳ್ಳಿ : ಸರ್ಕಾರಿ ಪ್ರೌಢ ಶಾಲೆ ಹಾಗೂ ಸಂಯುಕ್ತ ಪದವಿ ಪೂರ್ವ ಕಾಲೇಜು ವತಿಯಿಂದ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಹಾಗೂ ಜಾಗೃತಿ ಕುರಿತು ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು ಈ ವೇಳೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿ ಬಹುಮಾನ ವಿತರಣೆ ಮಾಡಲಾಯಿತು ಮಾದಕ ದ್ರವ್ಯ ಜಾಗೃತಿ ಕಾರ್ಯಕ್ರಮವನ್ನು ಸಂಯುಕ್ತ ಪದವಿ ಪೂರ್ವ ಕಾಲೇಜು, ಸಂತೇಮರಹಳ್ಳಿ ಗ್ರಾಮ ಆಡಿಟೋರಿಯಂ ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.  ಈ ಸಂದರ್ಭದಲ್ಲಿ ಸಂತೇಮರಹಳ್ಳಿ ಪಿ ಎಸ್ ಐ ಮೋಹನ್ ಕುಮಾರ್ ಮಾತನಾಡಿ ಇತ್ತೀಚಿನ ಮಾದಕ ದ್ರವ್ಯದ ಕುರಿತು ಸಾರ್ವಜನಿಕರು ಸೇರಿದಂತೆ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮವನ್ನು ಆಯೋಜನೆ ಮಾಡಿ ಅರಿವು ಮೂಡಿಸಲಾಯಿತು. ಮಾದಕ ವಸ್ತುಗಳಿಂದ ಆರೋಗ್ಯದ ಮೇಲೆ ವಿಪರೀತ ಪರಿಣಾಮ ಬೀರುವುದರಿಂದ ಜಾಗೃತರಾಗುವುದು ಅತ್ಯಮೂಲ್ಯ ಎಂದರು.  ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಪುಟ್ಟ ಗೌರಮ್ಮ, ಎ ಎಸ್ ಐ ಆಕಾಶ್ ಬಾಬು, ಪ್ರೊ ಪಿ ಎಸ್ ಶಂಕರ್ ಪ್ರಾಂಶುಪಾಲರು ಸಂಯುಕ್ತ ಪದವಿ ಪೂರ್ವ ಕಾಲೇಜು ಸಂತೇಮರಹಳ್ಳಿ, ಪ್ರಭುಸ್ವಾಮಿ ಪ್ರಾಧ್ಯಾಪಕರು ಹಾಗೂ ಸಂತೇಮರಹಳ್ಳಿ ಪೊಲೀಸ್ ಠಾಣಾ ಸಿಬ್ಬಂದಿಗಳಾದ ರಮೇಶ್, ಚಿಕ್ಕರಾಜು ಹಾಗೂ ಜೆಎಸ್ಎಸ್ ಪ್ರೌಢಶಾಲಾ, ಸಂಯುಕ್ತ ಪದವಿ ಪೂರ್ವ ಕಾಲೇಜು, ಕರ್ನಾಟಕ ಪಬ್ಲಿಕ್ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವರದಿ: G1 ನ್ಯೂಸ್ ...

ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ ಖಂಡ್ರೆ ಮಹಾಸಭಾ ರಾಷ್ಟ್ರೀಯ ಸದಸ್ಯರಾದ ಎನ್ ರಿಚ್ ಮಹದೇವಸ್ವಾಮಿ ಹಾಗೂ ಮುಖಂಡರುಗಳಿಂದ ಅಭಿನಂದಿಸಲಾಯಿತು

ಇಮೇಜ್
 ಬೆಂಗಳೂರು: ನೂತನವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ಶರಣ ಈಶ್ವರ ಬಿ ಖಂಡ್ರೆ ಅವರನ್ನು ಮಹಾಸಭಾ ರಾಷ್ಟ್ರೀಯ ಸದಸ್ಯರಾದ ಎನ್ ರಿಚ್ ಮಹದೇವಸ್ವಾಮಿ ಹಾಗೂ ರಾಜ್ಯ ಪದಾಧಿಕಾರಿಗಳ ನಿಯೋಗ ಮಂಗಳವಾರ ಭೇಟಿ ಮಾಡಿ ಅಭಿನಂದಿಸಿಲಾಯಿತು  ಸೆವೆನ್ ಮಿನಿಸ್ಟರ್ಸ್ ಕ್ವಾಟರ್ಸ್‌ನಲ್ಲಿ ನಡೆದ ಈ ಭೇಟಿಯಲ್ಲಿ, ಸಚಿವರಿಗೆ ಶಾಲು ಹೊದಿಸಿ, ಹೂಗುಚ್ಛ ನೀಡಿ ಗೌರವ ಸಲ್ಲಿಸಲಾಯಿತು. ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿ, ಯಳಂದೂರು, ಕೊಳ್ಳೇಗಾಲ, ಹನೂರು ಭಾಗದ ಮಹಾಸಭಾದ ರಾಜ್ಯ ಉಪಾಧ್ಯಕ್ಷರು, ಜಿಲ್ಲಾ ಅಧ್ಯಕ್ಷರು ಸೇರಿದಂತೆ ಹಲವು ಪ್ರಮುಖ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಗ್ರಾಮೀಣ ಭಾಗದ ಬೇಡಿಕೆಗಳ ಮನವಿ ಭೇಟಿಯ ವೇಳೆ ಸಚಿವರೊಂದಿಗೆ ಮುಖಂಡರುಗಳು ಚಾಮರಾಜನಗರ ಜಿಲ್ಲೆಯ ಗ್ರಾಮೀಣ ಭಾಗದ ಹಲವು ಜ್ವಲಂತ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿ ಚರ್ಚಿಸಿದರು.  ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿ, ಯಳಂದೂರು, ಕೊಳ್ಳೇಗಾಲ ಹನೂರು ತಾಲ್ಲೂಕುಗಳ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ, ರಸ್ತೆ ಅಭಿವೃದ್ಧಿ, ಗ್ರಾಮ ಪಂಚಾಯತ್‌ ಗಳಿಗೆ ಹೆಚ್ಚಿನ ಅನುದಾನ, ನರೇಗಾ ಕೂಲಿ ಬಾಕಿ ಪಾವತಿ" ಸೇರಿದಂತೆ ಹಲವು ವಿಷಯಗಳ ಬಗ್ಗೆ ಸಚಿವರ ಗಮನ ಸೆಳೆಯಲಾಯಿತು ಎಂದು ರಾಷ್ಟ್ರೀಯ ಮಹಾಸಭಾ ಸದಸ್ಯರಾದ ಎನ್ ರಿಚ್ ಮಹದೇವಸ್ವಾಮಿ ತಿಳಿಸಿದರು. ಸಚಿವರ ಭರವಸೆ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವ...

ಅಧಿಕಾರಿಗಳ ಗೈರು ವಿರೋಧಿಸಿ SC/ST ಹಿತರಕ್ಷಣಾ ಸಭೆ ಬಹಿಷ್ಕಾರ - ದಲಿತ ಮುಖಂಡರ ಆಕ್ರೋಶ

ಇಮೇಜ್

ಇನ್‌ಸ್ಪೈರ್ ಅವಾರ್ಡ್‌ಗೆ ಯಳಂದೂರಿನ 5 ವಿದ್ಯಾರ್ಥಿಗಳು ಆಯ್ಕೆ: ಮೆಲ್ಲಹಳ್ಳಿ ಸರ್ಕಾರಿ ಶಾಲೆಗೆ ರಾಷ್ಟ್ರಮಟ್ಟದ ಗರಿ`

ಇಮೇಜ್
ಸಾನ್ವಿ ಎಸ್ ಜಿ ದಿಗಂತ್ ವೈ ಪಿ ರಾಜವರ್ಧನ      ಯಳಂದೂರು: 2024-25 ಮತ್ತು 2025-26ನೇ ಸಾಲಿನ ರಾಷ್ಟ್ರಮಟ್ಟದ ಅತ್ಯುನ್ನತ ವಿಜ್ಞಾನ ಸ್ಪರ್ಧಿಯಾದ 'ಇನ್‌ಸ್ಪೈರ್ ಅವಾರ್ಡ್ ಮಾನಕ್' ಸ್ಪರ್ಧೆಗೆ ಯಳಂದೂರು ತಾಲ್ಲೂಕಿನ ಮೆಲ್ಲಹಳ್ಳಿ ಸರ್ಕಾರಿ ಆದರ್ಶ ವಿದ್ಯಾಲಯವು ನೋಂದಣಿಯಾಗಿರುವುದರಿಂದ, ಐದು ವಿದ್ಯಾರ್ಥಿಗಳು ಆಯ್ಕೆಯಾಗಿರುತ್ತಾರೆ, ಆಯ್ಕೆಯಾದ ವಿದ್ಯಾರ್ಥಿಗಳ ಮಾದರಿ ಈ ಕೆಳಕಂಡಂತೆ ಇದ್ದು ಶಾಲೆಗೆ ಕೀರ್ತಿ ತಂದು ಕೊಟ್ಟಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಾರಯ್ಯ ಮತ್ತು ಶಾಲೆಯ ಮುಖ್ಯಶಿಕ್ಷಕರು ವಿನಯ್ ಹಾಗೂ ಸಹಶಿಕ್ಷಕರು ಅಭಿನಂದನೆಗಳನ್ನು ತಿಳಿಸಿದ್ದಾರೆ. ಆಯ್ಕೆಯಾದ ವಿದ್ಯಾರ್ಥಿಗಳು  1. ದಿಗಂತ್ ವೈ. ಪಿ - ಆಟೋಮ್ಯಾಟಿಕ್ ವೀಲ್ ಚೇರ್ 2. ಸಾನಿಕ ಎಸ್ - ಸಿಟ್ಟಿಂಗ್ ಅಲರ್ಟ್, ರೆಡ್ ಅಲರ್ಟ್ 3. ನಂದಿನಿ ಎನ್ - ಫಾರ್ಮರ್ ಅಂಬ್ರಲ್ಲಾ 4. ರಾಜವರ್ಧನ್ - ರಿಮೋಟ್ ಕಂಟ್ರೋಲ್ ಹೋಮ್ ಅಪ್ಲೈಯನ್ಸಸ್ 5. ಸಾನ್ವಿ ಎಸ್. ಜಿ - ಬ್ಲೈಂಡ್ ಗ್ಲಾಸ್ ಫಾರ್ ಆಲ್    ವಿದ್ಯಾರ್ಥಿಗಳ ಈ ಸಾಧನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಮಾರಯ್ಯ, ಶಾಲೆಯ ಮುಖ್ಯಶಿಕ್ಷಕ ವಿನಯ್ ಹಾಗೂ ಸಹಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ. 🙏 🙏✍️ವಿನಂತಿ: ಯಳಂದೂರಿನ ಈ ಸಾಧಕ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಈ ಸುದ್ದಿಯನ್ನು ನಿಮ್ಮ WhatsApp Status ಹಾಗೂ Groups ಗಳಿಗೆ Share ಮಾಡಿ. ಧನ್ಯವಾದಗಳು - G1 NEWS Honnur...

ಕನಕಪುರ ದೇಗುಲ ಮಠದ ಶ್ರೀ ಶ್ರೀ ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳಿಗೆ ಚಾಮರಾಜನಗರದಲ್ಲಿ ಭಕ್ತಿ ಪೂರ್ವಕ ಶ್ರದ್ಧಾಂಜಲಿ

ಇಮೇಜ್
  ಕನಕಪುರ ದೇಗುಲ ಮಠದ  ಶ್ರೀ ಶ್ರೀ ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳಿಗೆ ಚಾಮರಾಜನಗರದಲ್ಲಿ  ಭಕ್ತಿ ಪೂರ್ವಕ ಶ್ರದ್ಧಾಂಜಲಿ    ಚಾಮರಾಜನಗರ: ಸುಮಾರು 700 ವರ್ಷಗಳ ಐತಿಹಾಸಿಕ ಪರಂಪರೆಯನ್ನು ಹೊಂದಿರುವ ಕನಕಪುರದ ಶ್ರೀ ದೇಗುಲ ಮಠದ ಪೀಠಾಧ್ಯಕ್ಷರಾಗಿದ್ದ ಪರಮಪೂಜ್ಯ ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳು (84) ಅವರು ಜೂನ್ 22ರಂದು ವಯೋಸಹಜ ಅನಾರೋಗ್ಯದಿಂದ ಶಿವೈಕ್ಯರಾದ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲಾ ಕೇಂದ್ರದ ಶ್ರೀ ಸಿದ್ಧಮಲ್ಲೇಶ್ವರ ವಿರಕ್ತ ಮಠದ ಮುಂಭಾಗದಲ್ಲಿ ಬಸವ ಬಳಗಗಳ ಒಕ್ಕೂಟದ ವತಿಯಿಂದ ಭಕ್ತಿ ಪೂರ್ವಕ ಶ್ರದ್ಧಾಂಜಲಿ ಹಾಗೂ ನುಡಿ ನಮನ ಕಾರ್ಯಕ್ರಮ ನಡೆಯಿತು. ಎನ್ ರಿಚ್ ಮಹದೇವಸ್ವಾಮಿ ಕಾರ್ಯಕ್ರಮದ ಪ್ರಸ್ತಾವಿಕವಾಗಿ ಮಾತನಾಡಿದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೇಂದ್ರ ಸಮಿತಿ ಸದಸ್ಯರು ಹಾಗೂ ಚಾಮರಾಜನಗರ ಜಿಲ್ಲಾ ಬಸವ ಕೇಂದ್ರದ ಅಧ್ಯಕ್ಷರಾದ ಎನ್ ರಿಚ್ ಮಹದೇವಸ್ವಾಮಿ ಅವರು, ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳು ತ್ರಿವಿಧ ದಾಸೋಹದ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಮಠದ ಸೇವೆಯನ್ನು ತಲುಪಿಸಿದ ಮಹಾನ್ ಸಮಾಜಮುಖಿ ಸಂತರು ಎಂದು ಸ್ಮರಿಸಿದರು. ಬಡ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಉಚಿತ ವಸತಿ ಮತ್ತು ಶಿಕ್ಷಣ ಸೌಲಭ್ಯ ಕಲ್ಪಿಸುವ ಮೂಲಕ ಸಾವಿರಾರು ಕುಟುಂಬಗಳ ಬದುಕಿನಲ್ಲಿ ಬೆಳಕು ಮೂಡಿಸಿದವರು ಎಂದು ಹೇಳಿದರು. ಅವರ ಜೀವನವು ಸೇವೆ, ಸರಳತೆ ಮತ್ತು ಸಮಾನತೆಯ ಸಂದೇಶದ ಪ್ರ...

ಒತ್ತಡ ಹಾಗೂ ಮುಕ್ತ ಜೀವನಕ್ಕೆ ಯೋಗ ತಳಹದಿ ನಂಜನಗೂಡು JSS ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಇಮೇಜ್
  ನಂಜ ನಗೂಡು:   ಆಧುನಿಕ ಜ್ಞಾನ, ವಿಜ್ಞಾನ ಮತ್ತು  ತಾಂತ್ರಿಕ ಯುಗದ     ಒತ್ತಡದ     ಜೀವನದಲ್ಲಿ    ಯೋಗದ.   ಮಹತ್ವ ಅರಿಯುವುದು.     ಅವಶ್ಯಕತೆಯಿದ್ದು,    ಆಂತರಿಕ.    ಶಾಂತಿ, ಆರೋಗ್ಯಕರ ಮತ್ತು ಒತ್ತಡ ಮುಕ್ತ ಜೀವನಕ್ಕೆ ಯೋಗಾಭ್ಯಾಸ ತಳಹದಿಯಾಗಿದೆ  ಎಂದು ಮೈಸೂರು ಹಿಮಾಲಯ ಪ್ರತಿಷ್ಠಾನ ಸಂಸ್ಥಾಪಕರಾದ ಎನ್. ಅನಂತ ಅಭಿಪ್ರಾಯಪಟ್ಟರು.   ನಗರದ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ಹಾಗೂ ಓಂ ಪ್ರಣಮ್ಯ ಯೋಗ ಶಾಲೆಯ ಸಹಯೋಗದಲ್ಲಿ ಆಯೋಜಿಸಿದ್ದ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿಶ್ವದಾದ್ಯಂತ ಆಚರಿಸುತ್ತಿರುವ ಯೋಗ ದಿನಾಚರಣೆಯು ಪ್ರತಿಯೊಬ್ಬರೂ ಅರಿವು, ಆರೋಗ್ಯ ಮತ್ತು ಸಂತೋಷದ ಸಮಾನತೆ ಕಾಪಾಡಿಕೊಂಡು ಜೀವನವನ್ನು ಅರ್ಥ ಪೂರ್ಣವಾಗಿಸಿಕೊಳ್ಳಲು ಯೋಗಾಭ್ಯಾಸದ ಅವಶ್ಯಕತೆ ಇದೆ ಎಂದು ಅವರು ತಿಳಿಸಿದರು. ಯೋಗ ರಮೇಶ್  ಧ್ಯಾನವೇ ಆರೋಗ್ಯದ ಔಷಧಿ    ಓಂ ಪ್ರಣಮ್ಯ ಯೋಗ ಶಾಲೆಯ ಸಂಸ್ಥಾಪಕರಾದ ಬಿ.ಎಂ. ರಮೇಶ್ ಮಾತನಾಡಿ, ಪ್ರಸ್ತುತ ವರ್ಷದ ವೇದ ವಾಕ್ಯ  "ಒಂದು ಭೂಮಿ ಆರೋಗ್ಯಕ್ಕಾಗಿ ಯೋಗ" (Yoga for One Earth, One Health) ಎನ್ನುವುದು ವ್ಯಕ್ತಿಗತ ಯೋಗಕ್ಷೇಮ ಮತ್ತು ಭೂಮಿಯ ಪರಿಸರ ಆರೋಗ್ಯದ ನಡುವಿನ ನಿಕಟ...

ಹರವೆ ಶ್ರೀ ಗುರುಮಲ್ಲೇಶ್ವರ ಅನುದಾನಿತ ಪ್ರೌಢಶಾಲೆ ಯಲ್ಲಿ, ಅಂತಾರಾಷ್ಟ್ರೀಯ ಯೋಗ ದಿನಾಚರಣೆ.

ಇಮೇಜ್
  ಶಿಕ್ಷಕರು ಯೋಗಾಸನದಲ್ಲಿ ಹರವೆ ಶ್ರೀ ಗುರುಮಲ್ಲೇಶ್ವರ ಶಾಲೆಯಲ್ಲಿ ಯೋಗ ದಿನ: ಮೊಬೈಲ್ ಬಿಟ್ಟು ಯೋಗ ಮಾಡಿ ಎಂದ ಮುಖ್ಯ ಶಿಕ್ಷಕರು ಪ್ರಭುಸ್ವಾಮಿ  ಚಾಮರಾಜನಗರ : ತಾಲ್ಲೂಕಿನ ಹರವೆ ಗ್ರಾಮದ ಶ್ರೀ ಗುರುಮಲ್ಲೇಶ್ವರ ಅನುದಾನಿತ ಪ್ರೌಢಶಾಲೆಯಲ್ಲಿ, ಜೂನ್ 21 ನೇ ಭಾನುವಾರ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಮತ್ತು ವಿಜೃಂಭಣೆಯಿಂದ ಆಚರಿಸಲಾಯಿತು. 2026ನೇ ವರ್ಷದ ಅಂತರರಾಷ್ಟ್ರೀಯ ಯೋಗ ದಿನದ ಧ್ಯೇಯವಾಕ್ಯ "ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ" (Yoga for Healthy Ageing). ಎಲ್ಲಾ ವಯೋಮಾನದ ಜನರಲ್ಲಿ ದೈಹಿಕ ಫಿಟ್‌ನೆಸ್, ಮಾನಸಿಕ ಸ್ಥೈರ್ಯ ಮತ್ತು ಸಮಗ್ರ ಯೋಗ ಕ್ಷೇಮವನ್ನು ನಡುವಿನ ನಿಕಟ ಸಂಬಂಧವನ್ನು ಸಾರುವ ಜಾಗತಿಕ ದೃಷ್ಟಿಕೋನವಾಗಿದೆ. ಇದು ನಮ್ಮ ವೈಯಕ್ತಿಕ ಆರೋಗ್ಯ ಕಾಳಜಿ ಮತ್ತು ಪ್ರಕೃತಿಯ ಸಂರಕ್ಷಣೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಪ್ರತಿಪಾದಿಸುತ್ತದೆ. ಈ ಕಾರ್ಯಕ್ರಮವು ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಯೋಗದ ಬಗ್ಗೆ ಹೊಸ ಅರಿವು ಮೂಡಿಸಿತು. ಬೆಳಗ್ಗೆ 7 ಗಂಟೆಗೆ ಶಾಲಾ ಆವರಣದಲ್ಲಿ ಎಲ್ಲ ವಿದ್ಯಾರ್ಥಿಗಳು, ಶಿಕ್ಷಕ ವೃಂದ ಮತ್ತು ಬೋಧಕೇತರ ಸಿಬ್ಬಂದಿ ಒಟ್ಟಾಗಿ ಸೇರುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ, ಮೊದಲು ಎಲ್ಲರೂ ಸೇರಿ ಯೋಗ ಪ್ರತಿಜ್ಞೆ ಸ್ವೀಕರಿಸಿದರು. ಕಾರ್ಯಕ್ರಮದ ಮುಖ್ಯ ಸಂಪನ್ಮೂಲ ವ್...

ಯೋಗವೇ ಆರೋಗ್ಯ, ಯೋಗವೇ ಶಕ್ತಿ, ಸರ್ವರಿಗೂ ಅಂತರರಾಷ್ಟ್ರೀಯ ಯೋಗ ದಿನದ ಹಾರ್ದಿಕ ಶುಭಾಶಯಗಳು 🧘‍♂️

ಇಮೇಜ್
ಯೋಗ ರಮೇಶ್  ಅಂತರರಾಷ್ಟ್ರೀಯ ಯೋಗ ದಿನ: ಪ್ರತಿದಿನ 20 ನಿಮಿಷ ಯೋಗ ಮಾಡಿದರೆ ಆಗುವ 10 ಅದ್ಭುತ ಪ್ರಯೋಜನಗಳು ಭಾರತದ ಸಾವಿರಾರು ವರ್ಷಗಳ ಪರಂಪರೆಯಾದ ಯೋಗ, ಇಂದು ವಿಶ್ವದಾದ್ಯಂತ ಕೋಟ್ಯಂತರ ಜನರ ಜೀವನ ಶೈಲಿ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯತ್ನದಿಂದ ಜೂನ್ 21 ಅನ್ನು ವಿಶ್ವಸಂಸ್ಥೆ ಅಂತರರಾಷ್ಟ್ರೀಯ ಯೋಗ ದಿನ ಎಂದು ಘೋಷಿಸಿದೆ.  ಭಾರತದ ಸಾವಿರಾರು ವರ್ಷಗಳ ಪರಂಪರೆಯಾದ ಯೋಗ, ಇಂದು ವಿಶ್ವದಾದ್ಯಂತ ಕೋಟ್ಯಂತರ ಜನರ ಜೀವನ ಶೈಲಿ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯತ್ನದಿಂದ ಜೂನ್ 21 ಅನ್ನು ವಿಶ್ವಸಂಸ್ಥೆ ಅಂತರರಾಷ್ಟ್ರೀಯ ಯೋಗ ದಿನ ಎಂದು ಘೋಷಿಸಿದೆ. ಆದರೆ ಯೋಗ ಕೇವಲ ಒಂದು ದಿನದ ಆಚರಣೆ ಅಲ್ಲ. ಇದು ನಮ್ಮ ಜೀವನದ ಭಾಗವಾಗಬೇಕು.  ಇಂದಿನ ಒತ್ತಡದ ಜೀವನದಲ್ಲಿ ಬೆನ್ನು ನೋವು, ಸಕ್ಕರೆ ಕಾಯಿಲೆ, ಬೊಜ್ಜು, ನಿದ್ರಾಹೀನತೆ ಸಾಮಾನ್ಯ ಆಗಿದೆ. ಇದಕ್ಕೆಲ್ಲಾ ರಾಮಬಾಣ ಒಂದೇ - ಯೋಗ. ದಿನಕ್ಕೆ ಕೇವಲ 20 ನಿಮಿಷ ಯೋಗ ಮಾಡಿದರೆ ನಿಮ್ಮ ಜೀವನವೇ ಬದಲಾಗುತ್ತೆ. ಹೇಗೆ ಅಂತ ನೋಡೋಣ. ಯೋಗ ಎಂದರೇನು ? ಯೋಗ ಎಂದರೆ ಕೇವಲ ದೇಹವನ್ನು ಬಳುಕಿಸುವುದು ಅಲ್ಲ. 'ಯುಜ್' ಎಂಬ ಸಂಸ್ಕೃತ ಶಬ್ದದಿಂದ ಬಂದ ಯೋಗದ ಅರ್ಥ 'ಜೋಡಿಸುವುದು' ಅಥವಾ 'ಒಂದಾಗಿಸುವುದು'. ಅಂದರೆ ನಮ್ಮ ದೇಹ, ಮನಸ್ಸು ಮತ್ತು ಆತ್ಮವನ್ನು ಒಂದಾಗಿಸುವ ಪ್ರಾಚೀನ ಪದ್ಧತಿಯೇ ಯೋಗ. ಮಹರ್ಷಿ ಪತಂಜಲಿ ಅವರು ಯೋಗಸೂತ್ರದಲ್ಲಿ ಯೋಗದ 8 ಅಂಗಗಳನ್ನು ವಿವರಿಸಿ...

ಹೊನ್ನೂರು ಪ್ರಕಾಶ್ ಬಿಗ್ ಬಾಸ್ ಕನ್ನಡಕ್ಕೆ ಬರಲಿ: ಚಾಮರಾಜನಗರ ರೈತ ಹೋರಾಟಗಾರನಿಗೆ ಅಭಿಮಾನಿಗಳ ಆಗ್ರಹ

ಇಮೇಜ್
ಕರ್ನಾಟಕದ ದಕ್ಷಿಣ ಭಾಗದ ಚಾಮರಾಜನಗರ ಜಿಲ್ಲೆಯಲ್ಲಿ ಕಳೆದ ಮೂವತ್ತು ವರ್ಷಗಳಿಂದ ರೈತರ ಜಮೀನು, ನೀರಾವರಿ, ಬೆಳೆ ಪರಿಹಾರ ಮತ್ತು ಕನಿಷ್ಠ ಬೆಂಬಲ ಬೆಲೆ ವಿಚಾರದಲ್ಲಿ ಸರ್ಕಾರದ ವಿರುದ್ಧ ನಿರಂತರ ಜನಪರ ಹೋರಾಟ ನಡೆಸುತ್ತಿರುವ ಹೊನ್ನೂರು ಗ್ರಾಮದ ಪ್ರಸಿದ್ಧ ರೈತ ಹೋರಾಟಗಾರ ಪ್ರಕಾಶ್ ಅವರಿಗೆ ಈ ಬಾರಿಯ ಬಿಗ್ ಬಾಸ್ ಕನ್ನಡ ಕಾರ್ಯಕ್ರಮದಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಜಿಲ್ಲೆಯ ಪ್ರಮುಖ ಯುವ ರೈತ ಮುಖಂಡರಾದ ಚಿಕ್ಕಬಸಪ್ಪ ಹಾಗೂ ಪಣೀಶ್ ಕುಮಾರ್ ಕುದೇರು ಅವರು ಬಲವಾದ ಆಗ್ರಹ ಮಾಡಿದ್ದಾರೆ.  G1 News ಜೊತೆ ಮಾತನಾಡಿದ ಉಮ್ಮತ್ತೂರಿನ ರೈತ ಯುವ ಮುಖಂಡ ಚಿಕ್ಕಬಸಪ್ಪ, ನಮ್ಮ ಪ್ರಕಾಶ್ ಅಣ್ಣ ದಿನ ರಾತ್ರಿ ಅಂತ ನೋಡದೆ ರೈತರಿಗಾಗಿ ಹೋರಾಟ ನಡೆಸುತ್ತಾರೆ. ಅವರಿಗೆ ಬಿಗ್ ಬಾಸ್ ನಲ್ಲಿ ಅವರಿಗೆ ಒಂದು ಅವಕಾಶ ಕೊಡಿ ಎಂದು ಮನವಿ ಮಾಡಿದರು. ಮಣ್ಣಿನ ಮಗನಿಗೆ ಬಿಗ್ ಬಾಸ್ ವೇದಿಕೆ ಕೊಡಿ, ಒಂದು ಕೋಟಿ ಜನಕ್ಕೆ ರೈತರ ಕಷ್ಟ ತಿಳಿಯಲಿ ಎಂದು ಚಾಮರಾಜನಗರ, ಮೈಸೂರು ಭಾಗದ ಸಾವಿರಾರು ಯುವಕರು ಮತ್ತು ರೈತರು ಪೋಸ್ಟ್ ಹಾಕಿ ಬೆಂಬಲ ಸೂಚಿಸುತ್ತಿದ್ದಾರೆ. ಹೊನ್ನೂರು ಪ್ರಕಾಶ್ ಅವರು ಕಳೆದ ಮೂವತ್ತು ವರ್ಷಗಳಿಂದ ರೈತರ ಭೂಮಿ, ನೀರು ಮತ್ತು ಬೆಳೆಗಳಿಗೆ ನ್ಯಾಯ ಒದಗಿಸಲು ಶ್ರಮಿಸುತ್ತಿದ್ದಾರೆ. ಬೆಳೆ ನಷ್ಟ ಪರಿಹಾರ, ಕನಿಷ್ಠ ಬೆಂಬಲ ಬೆಲೆ ಮತ್ತು ಸಾಲ ಮನ್ನಾ ವಿಚಾರದಲ್ಲಿ ಸರ್ಕಾರದ ಗಮನ ಸೆಳೆಯಲು ಅನೇಕ ಪ್ರತಿಭಟನೆಗಳನ್ನು ಮುನ್ನಡೆಸಿದ್ದಾರೆ. ...

ಸಂತೇಮರಹಳ್ಳಿಯಲ್ಲಿ ಚಾಮುಂಡೇಶ್ವರಿ ವಿದ್ಯುತ್ ನಿಗಮ ನಿಯಮಿತ ಜನ ಸಂಪರ್ಕ ಸಭೆ: 24 ಗಂಟೆ ಸೇವೆಗೆ ಅಧಿಕಾರಿಗಳ ಭರವಸೆ, ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಸಭೆಗೆ ರೈತ ಮುಖಂಡರ ಆಗ್ರಹ

ಇಮೇಜ್
CESC ಮುಖ್ಯ ಇಂಜಿನಿಯರ್ ಪ್ರದೀಪ್ ಸಾರ್ವಜನಿಕರ ಸಮಸ್ಯೆ ಆಲಿಸುತ್ತಿರುವುದು`  ಸಂತೇಮರಹಳ್ಳಿ, 16 ಜೂನ್ 2026 ರಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ, ಸಂತೇಮರಹಳ್ಳಿ ಶಾಖಾ ಕಚೇರಿ ವತಿಯಿಂದ ಇಲ್ಲಿನ ಕಚೇರಿ ಆವರಣದಲ್ಲಿ ಸೋಮವಾರ ಮಧ್ಯಾಹ್ನ 3 ಗಂಟೆಗೆ ಜನ ಸಂಪರ್ಕ ಸಭೆ ಹಮ್ಮಿಕೊಳ್ಳಲಾಗಿತ್ತು. ಈ ಸಭೆಗೆ ಸಂತೇಮರಹಳ್ಳಿ ಸುತ್ತಲಿನ ಹೆಗ್ಗವಾಡಿಪುರ, ತೆಳ್ಳನೂರು, ಹೊನ್ನೂರು ಸೇರಿದಂತೆ ಹಲವು ಗ್ರಾಮಗಳ ರೈತರು ಹಾಗೂ ಸ್ಥಳೀಯ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ತಮ್ಮ ತಮ್ಮ ಊರಿನ ವಿದ್ಯುತ್ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರು **24 ಗಂಟೆ ಸೇವೆಗೆ ಭರವಸೆ ಸಭೆಯನ್ನುದ್ದೇಶಿಸಿ...**  ಇಪ್ಪತ್ತು ನಾಲ್ಕು ಗಂಟೆ ಸೇವೆಗೆ ಭರವಸೆ ಸಭೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯ ಇಂಜಿನಿಯರ್ ಶ್ರೀ ಪ್ರದೀಪ್ ಅವರು, ಸಾರ್ವಜನಿಕರಿಗೆ ಯಾವುದೇ ರೀತಿಯ ವಿದ್ಯುತ್ ಸಮಸ್ಯೆಗಳಿದ್ದರೂ ನಮ್ಮ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ದಿನದ 24 ಗಂಟೆಯೂ ಸೇವೆ ಸಲ್ಲಿಸಲು ಸದಾ ಸಿದ್ಧರಾಗಿರುತ್ತಾರೆ. ತುರ್ತು ಸಂದರ್ಭದಲ್ಲಿ ನಮ್ಮ ಸಹಾಯವಾಣಿ 1912 ಗೆ ಕರೆ ಮಾಡಿ" ಎಂದು ತಿಳಿಸಿದರು. ಜೊತೆಗೆ, "ವಿದ್ಯುತ್ ತಂತಿಯಲ್ಲಿ ಏನಾದರೂ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡರೆ ಅಥವಾ ವಿದ್ಯುತ್ ಕಂಬ ಮುರಿದು ಬಿದ್ದರೆ, ಸಾರ್ವಜನಿಕರು ತಾವಾಗಿಯೇ ಸರಿಪಡಿಸುವ ಕೆಲಸಕ್ಕೆ ಕೈಹಾಕಬಾರದು" ಎಂದು ಅವರು ಖಡಕ್ ಎಚ್ಚರಿಕೆ ನೀಡಿದರು. *ಮ...

ಸಂತೇಮರಹಳ್ಳಿ: ಜ್ಞಾನ ಸಿಂಧು ವೃದ್ಧಾಶ್ರಮದಲ್ಲಿ ಹಿರಿಯ ನಾಗರಿಕರಿಗೆ ಕಾನೂನು ಅರಿವು ಕಾರ್ಯಕ್ರಮ - ಆಸ್ತಿ ವಾಪಸ್ ಪಡೆಯಬಹುದು ಎಂದ ನ್ಯಾಯಾಧೀಶರು.

ಇಮೇಜ್
  ಸಂತೇಮರಹಳ್ಳಿ ಜ್ಞಾನ ಸಿಂಧು ವೃದ್ಧಾಶ್ರಮದಲ್ಲಿ ವಿಶ್ವ ಹಿರಿಯ ನಾಗರಿಕರ ನಿಂದನೆ ಜಾಗೃತಿ ದಿನ. ಆಸ್ತಿ ಬರೆಸಿಕೊಂಡು ತಂದೆ-ತಾಯಿಯನ್ನು ದೂರ ತಳ್ಳಿದ್ರೆ ಕಾನೂನು ಕ್ರಮ - ನ್ಯಾಯಾಧೀಶ ಈಶ್ವರ್ ಎಚ್ಚರಿಕೆ. ಸಂತೇಮರಹಳ್ಳಿ: ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿಯ ಜ್ಞಾನ ಸಿಂಧು ವೃದ್ಧಾಶ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘ(ರಿ) ಚಾಮರಾಜನಗರ ಇವರ ವತಿಯಿಂದ ವಿಶ್ವ ಹಿರಿಯ ನಾಗರಿಕರ ನಿಂದನೆ ಜಾಗೃತಿ ದಿನದ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಜ್ಞಾನ ಸಿಂಧು ವೃದ್ಧಾಶ್ರಮಕ್ಕೆ ಆಗಮಿಸಿದ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀಯುತ ಈಶ್ವರ್ ರವರು ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ನ್ಯಾಯಾಧೀಶ ಈಶ್ವರ್ "ಹಿರಿಯ ನಾಗರಿಕರಲ್ಲಿ ಕಾನೂನು ಅರಿವು ಹೆಚ್ಚಿಸಿ, ಹಿರಿಯ ನಾಗರಿಕರ ಹಕ್ಕುಗಳು, ಕಾನೂನು ರಕ್ಷಣೆ, ಪಿಂಚಣಿ ಸೌಲಭ್ಯಗಳ ಬಗ್ಗೆ ತಿಳಿಸಿ ಅವರ ಜೀವನವನ್ನು ಸುರಕ್ಷಿತ ಹಾಗೂ ಗೌರವಯುತವಾಗಿಸುವುದು ಈ ಕಾರ್ಯಕ್ರಮದ ಉದ್ದೇಶ" ಎಂದರು. "ಹಿರಿಯರನ್ನು ಆಸ್ತಿ ಬರೆಸಿಕೊಂಡು ಪೋಷಕರನ್ನು ದೂರ ತಳ್ಳುವ ಮಕ್ಕಳ ವಿರುದ್ಧ ಕಾನೂನು ರೀತಿಯಲ್ಲಿ ಆಸ್ತಿಯನ್ನು ವಶಕ್ಕೆ ಪಡೆದುಕೊಳ್ಳುವ ಅವಕಾಶವಿದೆ. ಇಲ್ಲವಾದಲ್ಲಿ ಕಾನೂನು ರೀತಿಯಲ್ಲಿ ತಕ್ಕ ಪಾಠ ಕಲಿಸಬಹುದು. ಚಿಕ್ಕವ...

ನಿಧನ ವಾರ್ತೆ

ಇಮೇಜ್
ನಿಧನ ವಾರ್ತೆ  ಮಹಮ್ಮದ್ ಅನ್ವರ್ ಸಾಬ್ (90ವರ್ಷ ) ಯಳಂದೂರು:ತಾಲ್ಲೂಕಿನ ಮಾಂಬಳ್ಳಿ ಗ್ರಾಮದ ಕರಿಕಲ್ಲು ಉದ್ಯಮಿ ಮಹಮ್ಮದ್ ಅನ್ವರ್ ರವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೈಸೂರು ಜೆ ಎಸ್ ಎಸ್ ಆಸ್ಪತ್ರೆಯಲ್ಲಿ ಸೋಮವಾರ ಮೃತ ಪಟ್ಟಿದ್ದಾರೆ.ಇವರು ಉದ್ಯಮಿ ಹಾಗೂ ರಾಜಕಾರಣಿ ಮಹಮ್ಮದ್ ಮುಜಾಯಿದ್ (ಮುಜು )ಸೇರಿದಂತೆ ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಇವರ ಅಂತ್ಯಕ್ರಿಯೆ ಸ್ವ ಗ್ರಾಮ ಮಾಂಬಳ್ಳಿಯಲ್ಲಿ ಮುಸ್ಲಿo ಧರ್ಮದ ವಿಧಿ ವಿಧಾನದಂತೆ ಮಂಗಳವಾರ ಸಮಯ 1ಗಂಟೆಗೆ ನೆರವೇರಲಿದೆ ಎಂದು ಕುಟುಂಬ ಮೂಲದವರು ತಿಳಿಸಿದ್ದಾರೆ. ವರದಿ: ಗೂಳಿಪುರ ಮಣಿಕಂಠ ನಾಯಕ್ 

ಭೂಮಿ ಪೂಜೆಗೆ ಚಾಲನೆ ನೀಡಿದ ಶಾಸಕ ಎ ಆರ್ ಕೃಷ್ಣ ಮೂರ್ತಿ

ಇಮೇಜ್
ಸಂತೇಮರಹಳ್ಳಿ : ಹೋಬಳಿಗೆ ಒಳಪಡುವ ವಿವಿಧ ಗ್ರಾಮಗಳಿಗೆ ಭೂಮಿ ಪೂಜೆಗೆ ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣ ಮೂರ್ತಿ ಚಾಲನೆ ನೀಡಿದರು. ವಿವಿಧ ಗ್ರಾಮಗಳಾದ ಚುಂಗಡಿಪುರ, ಹೊಸಮೋಳೆ, ನಡಕಲುಮೋಳೆ, ಕಾವುದವಾಡಿ,ತೆಳ್ಳನೂರು, ಬಾನಹಳ್ಳಿ ಗ್ರಾಮಗಳಿಗೆ 3 ಕೋಟಿಗೂ ಅಧಿಕ ರೂ ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ ಕಳೆದ ಮೂರು ವರ್ಷದಲ್ಲಿ 500 ಕೋಟಿಗೂ ಹೆಚ್ಚು ಅನುದಾನವನ್ನು ತಂದು ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ ಹಾಗೂ ಮುಂಬರುವ ದಿನಗಳಲ್ಲಿ ಹಲವಾರು ಯೋಜನೆಗಳಿಗೆ ಈಗಾಗಲೇ ಪ್ರಸ್ತಾವನೆ ನೀಡಲಾಗಿದೆ. ಕಳೆದ ಮೂರು ವರ್ಷಗಲ್ಲಿ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ನಾಯಕತ್ವದಲ್ಲಿ ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನ ಕೈಗೊಂಡು ಅಭಿವೃದ್ಧಿ ಮಾಡಿದ್ದಾರೆ.ದೇಶದಲ್ಲಿ ಅತ್ಯಂತ ಜನಪ್ರಿಯ ಮುಖ್ಯ ಮಂತ್ರಿ ಎಂದೇ ಕ್ಯಾತಿಯಾಗಿದ್ದಾರೆ, ಮ್ಯಾನ ಮುಖ್ಯ ಮಂತ್ರಿ  ಡಿ ಕೆ ಶಿವಕುಮಾರ್ ರವರು ರಾಜ್ಯವನ್ನು ಮುನ್ನೆಡೆಸುವ ಅದಿಯಲ್ಲಿ ಮುನ್ನಡೆಯಲ್ಲಿದ್ದಾರೆ ಎಂದರೆ ತಪ್ಪಾಗಲಾರದು.ಬಾಕಿ ಇರುವ ಎರಡು ವರ್ಷದಲ್ಲಿ ನಮ್ಮ ಕಾಂಗ್ರೆಸ್ ಪಕ್ಷ ಜನಪರ ಕೆಲಸಗಳಿಗೆ ಒತ್ತು ನೀಡುವುದಾಗಿ ತಿಳಿಸಿದರು. ಕ್ಷೇತ್ರದ ಎಲ್ಲಾ ವರ್ಗದ ಸಮುದಾಯಗಳಿಗೂ ಅನುದಾನ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮ ಕೈಗೊಂಡಿದ್ದೇನೆ.ಈಗಾಗಲೇ ಹಲವಾರು ನೀರಾವರಿ ಯೋಜನೆ ಸರ್ಕಾರಕ್ಕೆ ಪ್ರಸ್ತಾವನೆಗೆ ಚಾಲನೆ ನೀಡಲಾಗಿದೆ ಎಂದರು.  ಈ ಸಂದರ್ಭದ...

ಶಿಕ್ಷಕರಿಗೆ ಗೌರವ ಸಮರ್ಪಣೆ

ಇಮೇಜ್
ಮೈಸೂರಿನ ಜಾಕಿ ಕ್ವಾಟ್ರಸ್‌ನ ಪಿಎಂಶ್ರೀ ಸರ್ಕಾರಿ ಆದರ್ಶ ವಿದ್ಯಾಲಯದ ಸ್ಮಿತಾ ವಿದ್ಯಾರ್ಥಿನಿ 2026-27 ನೇ ಸಾಲಿನಲ್ಲಿ ನ್ಯಾಷನಲ್ ಮೀನ್ಸ್-ಕಮ್-ಮೆರಿಟ್ ಸ್ಕಾಲರ್‌ಶಿಪ್ (ಎನ್.ಎಂ.ಎಂ.ಎಸ್) ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವಿದ್ಯಾರ್ಥಿವೇತನಕ್ಕೆ ಆಯ್ಕೆ ಆಗಿರುತ್ತಾರೆ. ಮೈಸೂರಿನ  ಕಾವ್ಯ ಮತ್ತು ಶಿವಸ್ವಾಮಿ ರವರ ಪುತ್ರಿಯಾಗಿದ್ದು, ಇದಕ್ಕೆಲ್ಲ ಸಹಕಾರ ನೀಡಿದ ಪಿಎಂಶ್ರೀ ಸರ್ಕಾರಿ ಆದರ್ಶ ವಿದ್ಯಾಲಯದ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರಿಗೆ ಸ್ಮಿತಾ ಅವರ ತಂದೆ-ತಾಯಿಯವರು ಅಭಿನಂದನೆ ಸಲ್ಲಿಸಿದ್ದಾರೆ.

ನಿಧನ ವಾರ್ತೆ

ಇಮೇಜ್
ನಿಧನ ವಾರ್ತೆ  ನರಸಿನಾಗನಾಯಕ (77ವರ್ಷ ) ಚಾಮರಾಜನಗರ ತಾಲ್ಲೂಕಿನ ಗೂಳಿಪುರ ಗ್ರಾಮದ ನರಸಿ ನಾಗನಾಯಕ ಎಂಬುವವರು ವಯೋಸಹಜವಾಗಿ ಮೃತ ಪಟ್ಟಿದ್ದಾರೆ. ಇವರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಮೊಮ್ಮಗ ಆಂದೋಲನ ಪತ್ರಿಕೆ ವರದಿಗಾರ ಮಣಿಕಂಠನಾಯಕ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಶನಿವಾರ ಅವರ ಜಮೀನಿನಲ್ಲಿ ನೆರವೇರಿತು.

ಸಚಿವ ಸ್ಥಾನಕ್ಕಾಗಿ ಅಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ

ಇಮೇಜ್
                                       ಸಂತೇಮರಹಳ್ಳಿ: ಶಾಸಕ ಎ ಆರ್ ಕೃಷ್ಣ ಮೂರ್ತಿ ಅಭಿಮಾನಿ ಬಳಗದ ವತಿಯಿಂದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಸಂತೇಮರಹಳ್ಳಿ ವೃತ್ತದಲ್ಲಿ ಜಮಾಯಸಿ ಘೋಷಣೆ ಕೂಗುತ್ತ ಈ ಬಾರಿ ಸಚಿವ ಸಂಪುಟದಲ್ಲಿ ಎ ಆರ್ ಕೃಷ್ಣ ಮೂರ್ತಿಯವರಿಗೆ ಸಚಿವ ಸ್ಥಾನ ನೀಡಬೇಕೆಂದು ಅಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನಾ  ಅಧ್ಯಕ್ಷ ಎಚ್ ವಿ ಚಂದ್ರು ಮಾತನಾಡಿ ವಿವಿಧ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ಲಭಿಸಿದೆ ಜಿಲ್ಲೆಯಲ್ಲಿ ಲಭಿಸಿದೆ ಆದರೆ ಜಿಲ್ಲೆಯ ದಲಿತ ಶಾಸಕರಿಗೆ ಒಮ್ಮೆಯೂ ಸಚಿವ ಸ್ಥಾನ ಲಭಿಸಿಲ್ಲಿ ಹಾಗಾಗಿ ಬಾರಿ  ಶಾಸಕ ಎ ಆರ್ ಕೃಷ್ಣ ಮೂರ್ತಿಯವರಿಗೆ ಮಾನ್ಯ ಮುಖ್ಯ ಮಂತ್ರಿ ಡಿ ಕೆ ಶಿವಕುಮಾರ್ ಹಾಗೂ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಪರಿಗಣಿಸಿ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯ ಮಾಡಿದ್ದಾರೆ. ನಂತರ ಕೊಳ್ಳೇಗಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್ ಮಾತನಾಡಿ ಈ ಕ್ಷೇತ್ರ ಕಂಡ ಅಪ್ರತಿಮ ರಾಜಕಾರಣಿ ಗುರುತಿಸಿಕೊಂಡು ಕ್ಷೇತ್ರಕ್ಕೆ 500 ಕೋಟಿಗೂ ಅಧಿಕ ಅನುದಾನ ತಂದು ಕ್ಷತ್ರದ ಅಭಿವೃದ್ಧಿಯಾಗಲು ಸಾಕ್ಷಿಯಾಗಿದ್ದರೆ ಹಾಗಾಗಿ ಈ ಬಾರಿ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯ ಮಾಡಿದ್ದಾರೆ. ನಂತರ ಕಾಂಗ್ರೆಸ್ ಮುಖಂಡ ಮಹಾದೇವ ಪ್ರಸ...

ಶಿವನ ಶೋಕ ದಕ್ಷ ಯಜ್ಞದ ಶಾಖ...🔥

ಇಮೇಜ್
  ದಕ್ಷನ ಯಜ್ಞದ ಕಥೆ ಕೇರಳದ ಕೊಟ್ಟಿಯೂರು ದೇವಸ್ಥಾನವನ್ನು ದಕ್ಷಯಜ್ಞ ನಡೆದ ಜಾಗ ಅಂತ ನಂಬುತ್ತಾರೆ. 1. ದಕ್ಷನ ಅಹಂಕಾರ ದಕ್ಷ ಪ್ರಜಾಪತಿಯು ದೊಡ್ಡ ಯಜ್ಞ ಮಾಡ್ತಾನೆ. ತನ್ನ ಮಗಳು ಸತಿ, ಅಳಿಯ ಶಿವ – ಇವರನ್ನ ಯಜ್ಞಕ್ಕೆ ಕರೆಯೋದಿಲ್ಲ. ಕಾರಣ, ಶಿವನಿಗೆ ತಲೆಬಾಗಿ ನಮಸ್ಕಾರ ಮಾಡೋಕೆ ಅವನಿಗೆ ಇಷ್ಟ ಇರಲ್ಲ. ಶಿವನನ್ನೂ ಅವಮಾನ ಮಾಡೋಕೆ ಈ ಪ್ಲಾನ್. 2. ಸತಿಯ ತ್ಯಾಗ ಸತಿ ಗಂಡನಿಗೆ ಆದ ಅವಮಾನ ಸಹಿಸಿಕೊಳ್ಳೋಕಾಗದೆ, ತಂದೆಯ ಮನೆಗೆ ಹೋಗ್ತಾಳೆ. ಅಲ್ಲಿಯೂ ಶಿವನಿಗೆ ಅವಮಾನ ಆಗೋದನ್ನ ನೋಡಿ, ಯಜ್ಞದ ಬೆಂಕಿಯಲ್ಲೇ ಹಾರಿ ಪ್ರಾಣ ಬಿಡುತ್ತಾಳೆ ಅದೇ ಕೊಟ್ಟಿಯೂರು ಜಾಗ ಅಂತ ನಂಬಿಕೆ. 3. ಶಿವನ ರುದ್ರ ತಾಂಡವ ಸತಿ ಸತ್ತ ಸುದ್ದಿ ಕೇಳಿ ಶಿವನಿಗೆ ಸಿಟ್ಟು ಬರುತ್ತೆ. ವೀರಭದ್ರ ಮತ್ತು ಭದ್ರಕಾಳಿ ಸೃಷ್ಟಿ ಮಾಡಿ ದಕ್ಷನ ಯಜ್ಞ ನಾಶ ಮಾಡಿಸ್ತಾನೆ. ದಕ್ಷನ ತಲೆಯೇ ಕತ್ತರಿಸಿ, ಆಮೇಲೆ ಆಡಿನ ತಲೆ ಕಟ್ಟಿಸುತ್ತಾನೆ. 4. ಕೊಟ್ಟಿಯೂರು ಮಹಿಮೆ ಸತಿಯ ದೇಹ 51 ತುಂಡಾಗಿ ಬಿದ್ದ ಜಾಗಗಳಲ್ಲಿ ಕೊಟ್ಟಿಯೂರು ಕೂಡ ಒಂದು ಅಂತ ಹೇಳ್ತಾರೆ. ಇಲ್ಲಿ ಸತಿಯ “ಕೇಶ್” – ಕೂದಲು ಬಿದ್ದಿದೆ ಅಂತ ನಂಬಿಕೆ. ಹಾಗಾಗಿ ಕೊಟ್ಟಿಯೂರು ದೇವಸ್ಥಾನ ಶಿವನಿಗೂ, ದೇವಿಗೂ ಸಮಾನವಾಗಿ ಮುಖ್ಯ. ಇವತ್ತಿಗೂ ಕೊಟ್ಟಿಯೂರು ದೇವಸ್ಥಾನ ಅಲ್ಲಿ “ವೈಶಾಖ ಮಹೋತ್ಸವ ” ಅಂತ ದೊಡ್ಡ ಜಾತ್ರೆ ನಡೆಯುತ್ತೆ. ಅಲ್ಲಿ ದಕ್ಷ ಯಜ್ಞದ ಕಥೆಯನ್ನ ನಾಟಕ ಮಾಡಿ ತೋರಿಸ್ತಾರೆ. ಇಲ್ಲಿ ಎರಡು ದೇವಸ್ಥಾನಗಳಿವೆ, ಬಾವಲಿ ನದ...

ಶ್ರೀ ಬಿಳಿಗಿರಿರಂಗನಾಥಸ್ವಾಮಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ಗುಂಬಳ್ಳಿ ರಾಜಣ್ಣ ಆಯ್ಕೆ

ಇಮೇಜ್
ವರದಿ: ಮಣಿಕಂಠ ನಾಯಕ್   ಶ್ರೀ ಬಿಳಿಗಿರಿರಂಗನಾಥಸ್ವಾಮಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ಗುಂಬಳ್ಳಿ ರಾಜಣ್ಣ ಆಯ್ಕೆ. ಯಳಂದೂರು:ಚಾಮರಾಜನಗರ ಜಿಲ್ಲೆಯ ಪ್ರಸಿದ್ದ ಯಾತ್ರಾ ಸ್ಥಳವಾದ ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದ ಶ್ರೀ ಶ್ರೀ ಬಿಳಿಗಿರಿ ರಂಗನಾಥಸ್ವಾಮಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ಗುಂಬಳ್ಳಿ ರಾಜಣ್ಣ ಆಯ್ಕೆಯಾಗಿದ್ದಾರೆ.ನಂತರ ರಾಜಣ್ಣ ಮಾತನಾಡಿ ಅಧ್ಯಕ್ಷನಾಗಲು ಸಹಕರಿಸಿದ ಕ್ಷೆತ್ರದ ಜನಪ್ರಿಯ ಶಾಸಕರಾದ ಎ ಆರ್ ಕೃಷ್ಣಮೂರ್ತಿ ಹಾಗೂ ಸಮಿತಿಯ ಸದಸ್ಯರುಗಳಿಗೆ ಕೃತಜ್ಞತೆ ಸಲ್ಲಿಸಿದರು.           ಈ ಸಂದರ್ಭದಲ್ಲಿ ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್, ಪುರೋಹಿತರು ರವಿಕುಮಾರ್, ಸಮಿತಿಯ ಸದಸ್ಯರು ಹಾಗೂ ಸಿಬ್ಬಂದಿಗಳು ಹಾಜರಿದ್ದರು.  

ರಾಜ್‌ ಪರಿವಾರ ರಸಮಂಜರಿ ಕಾರ್ಯಕ್ರಮ

ಇಮೇಜ್
  ವರದಿ: ಗೂಳಿಪುರ ಮಣಿಕಂಠ ನಾಯಕ್   ಪೇಕ್ಷಕರನ್ನು ರಂಜಿಸಿದ ರಾಜ್‌ ಪರಿವಾರ ರಸಮಂಜರಿ ಕಾರ್ಯಕ್ರಮ     ಚಾಮರಾಜನಗರ: ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಭಾನುವಾರ ನಾದಶ್ರೀ ಮೆಲೋಡಿಸ್ ವತಿಯಿಂದ ಡಾ. ರಾಜ್ ಕುಮಾರ್ ಅವರ 20ನೇವರ್ಷದ ಪುಣ್ಯಸ್ಮರಣೆ ಹಾಗೂ ನಾದಶ್ರೀ ಮೆಲೋಡಿಸ್ 25ನೇ ವಾರ್ಷಿಕೋತ್ಸವ ಪ್ರಯುಕ್ತ ನಡೆದ ರಾಜ್ ಪರಿವಾರ ರಸಮಂಜರಿ ಕಾರ್ಯಕ್ರಮವನ್ನು ಕೆಲ್ಲಂಬಳ್ಳಿ ಸೋಮನಾಯಕ ಉದ್ಘಾಟನೆ ಮಾಡಿ ಪುಷ್ಪಾರ್ಚನೆ ನೆರವೇರಿಸಿದರು. ನಂತರ ಮಾತನಾಡಿ  ವರನಟ ಡಾ. ರಾಜ್‌ಕುಮಾರ್ ಅವರು ಕನ್ನಡ ಬೆಳವಣಿಗಾಗಿ ಶ್ರಮಿಸಿದ್ದರು. ಅವರು ಜಿಲ್ಲೆಯಲ್ಲಿ ಹುಟ್ಟಿ ಕನ್ನಡ ಚಿತ್ರರಂಗದ ಮೂಲಕ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದರು. ಅವರನ್ನು ಶ್ರೀ ಚಾಮರಾಜೇಶ್ವರ ಕೊಟ್ಟ ಕೊಡುಗೆ ಎಂದರೆ ತಪ್ಪಾಗಲಾರದು. ಚಾಮರಾಜನಗರ ಕಲೆಗಳ ತವರೂರಾಗಿದ್ದು. ಜಿಲ್ಲೆಯಲ್ಲಿ ಎಲ್ಲಾ ಬಗೆಯ ಕಲಾವಿದರು ಇದ್ದಾರೆ. ಕಲಾಸೇವೆ ಮಾಡಿ ಕೆಲವರು ಅನಾರೋಗ್ಯಕ್ಕೊಳಾಗಿದ್ದು, ತುಂಬಾ ತೊಂದರೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ ಎಂದರು. ಎಲ್ಲಾ  ಕಲಾವಿದರಿಗೆ ಸರ್ಕಾರ ಮಾಸಾಶಾಸನ ನೀಡಬೇಕು. ಇಲ್ಲದಿದ್ದರೆ ಕಲಾವಿದರೊಂದಿಗೆ ಸರ್ಕಾರದ ವಿರುದ್ಧ ಮುಂದಿನ ದಿನಗಳಲ್ಲಿ ಚಳವಳಿ ರೂಪಿಸಬೇಕಾಗುತ್ತದೆ ಎಂದರು.        ಮುಖಂಡರಾದ ಸಿಂಗನಪುರ ಮಹೇಶ್ ಮಾತನಾಡಿ  ಡಾ.ರಾಜ್‌ಕುಮಾರ್ ಅವರಂತಹ ಕಲಾವಿದರು ಇಡೀ ಪ್ರಪ...