ಶಿವನ ಶೋಕ ದಕ್ಷ ಯಜ್ಞದ ಶಾಖ...🔥


 ದಕ್ಷನ ಯಜ್ಞದ ಕಥೆ ಕೇರಳದ ಕೊಟ್ಟಿಯೂರು ದೇವಸ್ಥಾನವನ್ನು ದಕ್ಷಯಜ್ಞ ನಡೆದ ಜಾಗ ಅಂತ ನಂಬುತ್ತಾರೆ.


1. ದಕ್ಷನ ಅಹಂಕಾರ ದಕ್ಷ ಪ್ರಜಾಪತಿಯು ದೊಡ್ಡ ಯಜ್ಞ ಮಾಡ್ತಾನೆ. ತನ್ನ ಮಗಳು ಸತಿ, ಅಳಿಯ ಶಿವ – ಇವರನ್ನ ಯಜ್ಞಕ್ಕೆ ಕರೆಯೋದಿಲ್ಲ. ಕಾರಣ, ಶಿವನಿಗೆ ತಲೆಬಾಗಿ ನಮಸ್ಕಾರ ಮಾಡೋಕೆ ಅವನಿಗೆ ಇಷ್ಟ ಇರಲ್ಲ. ಶಿವನನ್ನೂ ಅವಮಾನ ಮಾಡೋಕೆ ಈ ಪ್ಲಾನ್.

2. ಸತಿಯ ತ್ಯಾಗ ಸತಿ ಗಂಡನಿಗೆ ಆದ ಅವಮಾನ ಸಹಿಸಿಕೊಳ್ಳೋಕಾಗದೆ, ತಂದೆಯ ಮನೆಗೆ ಹೋಗ್ತಾಳೆ. ಅಲ್ಲಿಯೂ ಶಿವನಿಗೆ ಅವಮಾನ ಆಗೋದನ್ನ ನೋಡಿ, ಯಜ್ಞದ ಬೆಂಕಿಯಲ್ಲೇ ಹಾರಿ ಪ್ರಾಣ ಬಿಡುತ್ತಾಳೆ ಅದೇ ಕೊಟ್ಟಿಯೂರು ಜಾಗ ಅಂತ ನಂಬಿಕೆ.

3. ಶಿವನ ರುದ್ರ ತಾಂಡವ ಸತಿ ಸತ್ತ ಸುದ್ದಿ ಕೇಳಿ ಶಿವನಿಗೆ ಸಿಟ್ಟು ಬರುತ್ತೆ. ವೀರಭದ್ರ ಮತ್ತು ಭದ್ರಕಾಳಿ ಸೃಷ್ಟಿ ಮಾಡಿ ದಕ್ಷನ ಯಜ್ಞ ನಾಶ ಮಾಡಿಸ್ತಾನೆ. ದಕ್ಷನ ತಲೆಯೇ ಕತ್ತರಿಸಿ, ಆಮೇಲೆ ಆಡಿನ ತಲೆ ಕಟ್ಟಿಸುತ್ತಾನೆ.



4. ಕೊಟ್ಟಿಯೂರು ಮಹಿಮೆ ಸತಿಯ ದೇಹ 51 ತುಂಡಾಗಿ ಬಿದ್ದ ಜಾಗಗಳಲ್ಲಿ ಕೊಟ್ಟಿಯೂರು ಕೂಡ ಒಂದು ಅಂತ ಹೇಳ್ತಾರೆ. ಇಲ್ಲಿ ಸತಿಯ “ಕೇಶ್” – ಕೂದಲು ಬಿದ್ದಿದೆ ಅಂತ ನಂಬಿಕೆ. ಹಾಗಾಗಿ ಕೊಟ್ಟಿಯೂರು ದೇವಸ್ಥಾನ ಶಿವನಿಗೂ, ದೇವಿಗೂ ಸಮಾನವಾಗಿ ಮುಖ್ಯ.

ಇವತ್ತಿಗೂ ಕೊಟ್ಟಿಯೂರು ದೇವಸ್ಥಾನ ಅಲ್ಲಿ “ವೈಶಾಖ ಮಹೋತ್ಸವ ” ಅಂತ ದೊಡ್ಡ ಜಾತ್ರೆ ನಡೆಯುತ್ತೆ. ಅಲ್ಲಿ ದಕ್ಷ ಯಜ್ಞದ ಕಥೆಯನ್ನ ನಾಟಕ ಮಾಡಿ ತೋರಿಸ್ತಾರೆ.

ಇಲ್ಲಿ ಎರಡು ದೇವಸ್ಥಾನಗಳಿವೆ, ಬಾವಲಿ ನದಿಯ ಎರಡು ದಡದಲ್ಲಿ:

1. ಇಕ್ಕರೆ ಕೊಟ್ಟಿಯೂರು / ತೃಚ್ಚೆರುಮನ ಕ್ಷೇತ್ರ – ಪಶ್ಚಿಮ ದಡದಲ್ಲಿ, ವರ್ಷಪೂರ್ತಿ ತೆರೆದಿರುವ ಶಾಶ್ವತ ದೇವಸ್ಥಾನ 

2. ಅಕ್ಕರೆ ಕೊಟ್ಟಿಯೂರು – ಪೂರ್ವ ದಡದಲ್ಲಿ, ಕಾಡಿನ ನಡುವೆ ಕೊಳದಲ್ಲಿರುವ ಸ್ವಯಂಭೂ ಶಿವಲಿಂಗ. ಇದು ವರ್ಷಕ್ಕೆ ಕೇವಲ 27-28 ದಿನ ಮಾತ್ರ ತೆರೆದಿರುತ್ತದೆ

ಕೊಟ್ಟಿಯೂರು ವೈಶಾಖ ಮಹೋತ್ಸವದ ಮಾರ್ಕೆಟ್ ಸ್ಟಾಲ್. ನೇತಾಡುತ್ತಿರುವ ಬಿಳಿ ಗೊಂಚಲುಗಳು ಒಡಪ್ಪು / ಒಡಾಪೂವು / ಚಂದನತಿರಿ ಅಂತ ಕರೆಯುವ ವಸ್ತು.


ಇದು ಬಿದಿರಿನ ಚೂರುಗಳಿಂದ ಕೈಯಲ್ಲೇ ಮಾಡಿದ ಒಂದು "ಹೂವು". ದಕ್ಷಯಜ್ಞದಲ್ಲಿ ಭೃಗು ಮಹರ್ಷಿಯ ಗಡ್ಡವನ್ನು ಕಿತ್ತ ಕಥೆಯ ನೆನಪಿಗೆ, ಭಕ್ತಿಯ ಸಂಕೇತವಾಗಿ ಇದನ್ನು ಮಾಡುತ್ತಾರೆ. ಪ್ರತಿ ಭಕ್ತರು ಇದನ್ನು ಕೊಂಡು ಮನೆಗೆ ತೆಗೆದುಕೊಂಡು ಹೋಗಿ ಒಂದು ವರ್ಷ ನೇತು ಹಾಕುತ್ತಾರೆ – ವಾಸ್ತು / ಶನಿ ದೋಷ ಪರಿಹಾರ ಆಗುತ್ತೆ ಅನ್ನೋ ನಂಬಿಕೆ



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹರವೆ ಶ್ರೀ ಗುರುಮಲ್ಲೇಶ್ವರ ಅನುದಾನಿತ ಪ್ರೌಢಶಾಲೆ ಯಲ್ಲಿ, ಅಂತಾರಾಷ್ಟ್ರೀಯ ಯೋಗ ದಿನಾಚರಣೆ.

ಇನ್‌ಸ್ಪೈರ್ ಅವಾರ್ಡ್‌ಗೆ ಯಳಂದೂರಿನ 5 ವಿದ್ಯಾರ್ಥಿಗಳು ಆಯ್ಕೆ: ಮೆಲ್ಲಹಳ್ಳಿ ಸರ್ಕಾರಿ ಶಾಲೆಗೆ ರಾಷ್ಟ್ರಮಟ್ಟದ ಗರಿ`

ಹೊನ್ನೂರು ಪ್ರಕಾಶ್ ಬಿಗ್ ಬಾಸ್ ಕನ್ನಡಕ್ಕೆ ಬರಲಿ: ಚಾಮರಾಜನಗರ ರೈತ ಹೋರಾಟಗಾರನಿಗೆ ಅಭಿಮಾನಿಗಳ ಆಗ್ರಹ