ಪೋಸ್ಟ್‌ಗಳು

ಪರಿಸರ ಸಂರಕ್ಷಣೆ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ : ಕದಂಬ ನಾ ಅಂಬರೀಷ್.

ಇಮೇಜ್
ವರದಿ: ಗೂಳಿಪುರ ಮಣಿಕಂಠ ನಾಯಕ್    ಚಾಮರಾಜನಗರ: ತಾಲ್ಲೂಕಿನ ದೊಡ್ಡರಾಯಪೇಟೆ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನ ಮಿತ್ರ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಕದಂಬ ನಾ ಅಂಬರೀಷ್ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಪರಿಸರದಲ್ಲಿ ಆಗುತ್ತಿರುವ ವೈಪರಿತ್ಯ ಮತ್ತು ಜಾಗತಿಕ ಮಟ್ಟದ ಉಷ್ಣತೆ ಹೆಚ್ಚಳದಿಂದ ಪರಿಸರ ನಾಶವಾಗುತ್ತಿದೆ ಅಲ್ಲದೆ ಜೀವಸಂಕುಲ ಅಳಿವಿನ ಅಂಚಿನಲ್ಲಿ ಇರುವ ಆತಂಕವಿದೆ ಆದ್ದರಿಂದ ಪರಿಸರದ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕರಾದ ವನಜಾಕ್ಷಿ ರವರು ವಹಿಸಿದ್ದರು  ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಹೆಲ್ತ್ ಇಂಡಿಯಾ ಜಿಲ್ಲಾ ಕೊರ್ಡಿನೇಟರ್ ಪ್ರಕಾಶ್, ಚೈತನ್ಯ ನೆಟ್ವರ್ಕ್ನಾ ಸಿಇಓ ಎಂ ಭಾಗ್ಯಮ್ಮ, ಜನ ಮಿತ್ರ ಸೇವಾ ಟ್ರಸ್ಟ್ ಆರ್‌ಪಿ ಮಣಿಕಂಠ, ಕಮ್ಯೂನಿಟಿ ಹೆಲ್ತ್ ಆಫೀಸರ್ ವಿನೋದ್ ಗ್ರಾಮದ ಯಜಮಾನರು ಮಾದೇವಯ್ಯ, ಮಾದೇವಸ್ವಾಮಿ ಆಶಾ ಕಾರ್ಯಕರ್ತರದ ಭಾಗ್ಯ ಶಿಕ್ಷಕರಾದ ಚಂದ್ರು ಹಾಗೂ ಇನ್ನಿತರರು ಭಾಗವಹಿಸಿದ್ದರು.