ಒತ್ತಡ ಹಾಗೂ ಮುಕ್ತ ಜೀವನಕ್ಕೆ ಯೋಗ ತಳಹದಿ ನಂಜನಗೂಡು JSS ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

 
ನಂಜನಗೂಡು:  ಆಧುನಿಕ ಜ್ಞಾನ, ವಿಜ್ಞಾನ ಮತ್ತು  ತಾಂತ್ರಿಕ ಯುಗದ     ಒತ್ತಡದ     ಜೀವನದಲ್ಲಿ    ಯೋಗದ.   ಮಹತ್ವ ಅರಿಯುವುದು.     ಅವಶ್ಯಕತೆಯಿದ್ದು,    ಆಂತರಿಕ.    ಶಾಂತಿ, ಆರೋಗ್ಯಕರ ಮತ್ತು ಒತ್ತಡ ಮುಕ್ತ ಜೀವನಕ್ಕೆ ಯೋಗಾಭ್ಯಾಸ ತಳಹದಿಯಾಗಿದೆ  ಎಂದು ಮೈಸೂರು ಹಿಮಾಲಯ ಪ್ರತಿಷ್ಠಾನ ಸಂಸ್ಥಾಪಕರಾದ ಎನ್. ಅನಂತ ಅಭಿಪ್ರಾಯಪಟ್ಟರು.

  ನಗರದ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ಹಾಗೂ ಓಂ ಪ್ರಣಮ್ಯ ಯೋಗ ಶಾಲೆಯ ಸಹಯೋಗದಲ್ಲಿ ಆಯೋಜಿಸಿದ್ದ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿಶ್ವದಾದ್ಯಂತ ಆಚರಿಸುತ್ತಿರುವ ಯೋಗ ದಿನಾಚರಣೆಯು ಪ್ರತಿಯೊಬ್ಬರೂ ಅರಿವು, ಆರೋಗ್ಯ ಮತ್ತು ಸಂತೋಷದ ಸಮಾನತೆ ಕಾಪಾಡಿಕೊಂಡು ಜೀವನವನ್ನು ಅರ್ಥ ಪೂರ್ಣವಾಗಿಸಿಕೊಳ್ಳಲು ಯೋಗಾಭ್ಯಾಸದ ಅವಶ್ಯಕತೆ ಇದೆ ಎಂದು ಅವರು ತಿಳಿಸಿದರು.

ಧ್ಯಾನವೇ ಆರೋಗ್ಯದ ಔಷಧಿ
ಯೋಗ ರಮೇಶ್ 
ಧ್ಯಾನವೇ ಆರೋಗ್ಯದ ಔಷಧಿ

   ಓಂ ಪ್ರಣಮ್ಯ ಯೋಗ ಶಾಲೆಯ ಸಂಸ್ಥಾಪಕರಾದ ಬಿ.ಎಂ. ರಮೇಶ್ ಮಾತನಾಡಿ, ಪ್ರಸ್ತುತ ವರ್ಷದ ವೇದ ವಾಕ್ಯ  "ಒಂದು ಭೂಮಿ ಆರೋಗ್ಯಕ್ಕಾಗಿ ಯೋಗ" (Yoga for One Earth, One Health) ಎನ್ನುವುದು ವ್ಯಕ್ತಿಗತ ಯೋಗಕ್ಷೇಮ ಮತ್ತು ಭೂಮಿಯ ಪರಿಸರ ಆರೋಗ್ಯದ ನಡುವಿನ ನಿಕಟ ಸಂಬಂಧವನ್ನು ಸಾರುವ ಜಾಗತಿಕ ದೃಷ್ಟಿಕೋನವಾಗಿದೆ. ಇದು ನಮ್ಮ ವೈಯಕ್ತಿಕ ಆರೋಗ್ಯ ಕಾಳಜಿ ಮತ್ತು ಪ್ರಕೃತಿಯ ಸಂರಕ್ಷಣೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಪ್ರತಿಪಾದಿಸುತ್ತದೆ. ಹಾಗೂ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಪ್ರತಿಯೊಬ್ಬರು ಒತ್ತಡದ ಬದುಕನ್ನು ಸಾಗಿಸುತ್ತಿದ್ದು, ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು ಇಂದಿನ ಅಗತ್ಯವಾಗಿದೆ ಎಂದರು. ಆರೋಗ್ಯದ ಮಹತ್ವದ ಮೂಲ ಬೇರು 'ಅರಿವು' ಎಂಬ ಔಷಧಿಯಾಗಿದ್ದು, ಈ ಔಷಧಿ ಧ್ಯಾನ ಮತ್ತು ಯೋಗಾಭ್ಯಾಸದಿಂದ ಮಾತ್ರ ಸಾಧ್ಯವಾಗುತ್ತದೆ. ಓಂಕಾರ ಮಂತ್ರದ ಭೂಮಿಕೆಯಾದ ಭ್ರಮರಿ ಪ್ರಾಣಾಯಾಮವನ್ನು ಪ್ರತಿದಿನ ಅಭ್ಯಾಸ ಮಾಡುವುದು ಉತ್ತಮ ಎಂದು ಹೇಳಿದ ಅವರು, ವಿವಿಧ ಯೋಗ ಪ್ರಕಾರಗಳನ್ನು ಪ್ರಾತ್ಯಕ್ಷಿಕೆ ಮೂಲಕ ಪರಿಚಯಿಸಿದರು.

ಭಾರತ ವಿಶ್ವಗುರುವಿನತ್ತ

   ಪ್ರಾಂಶುಪಾಲ ಡಾ.ಸಿ.ಎಸ್. ಹೊನ್ನೇಗೌಡ ಮಾತನಾಡಿ, ಶ್ರೇಷ್ಠ ಸಂಸ್ಕೃತಿ ಹಾಗೂ ಪರಂಪರೆ ಹೊಂದಿರುವ ಭಾರತ ದೇಶ ವಿಶ್ವದಾದ್ಯಂತ ಯೋಗದ ಮಹತ್ವವನ್ನು ಸಾರುವ ಮೂಲಕ 'ವಿಶ್ವಗುರು' ಸ್ಥಾನದತ್ತ ದಾಪುಗಾಲು ಹಾಕುತ್ತಿದೆ ಎಂದರು. ಜೀವನದ ಸಂಕೋಲೆಗಳನ್ನು ಮುರಿದು, ಇಡೀ ಜಗತ್ತನ್ನು ಅರ್ಥ ಮಾಡಿಕೊಂಡು ಸಹಬಾಳ್ವೆಯಿಂದ ಬದುಕಲು ಧ್ಯಾನ ಮತ್ತು ಯೋಗದ ಮಹತ್ವ ಸಾರ್ವಕಾಲಿಕ ಸತ್ಯವಾಗಿದೆ ಎಂದು ಅವರು ನುಡಿದರು.

    ಈ ಸುಸಂದರ್ಭದಲ್ಲಿ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ವತಿಯಿಂದ ಮುಖ್ಯ ಅತಿಥಿಗಳಾದ ಯೋಗ ತಜ್ಞರು ಎನ್. ಅನಂತ್ ಹಾಗೂ  ಬಿ.ಎಂ. ರಮೇಶ್ ಅವರಿಗೆ ಗಿಡ ನೀಡಿ ಸನ್ಮಾನಿಸಲಾಯಿತು. ಈ ಮೂಲಕ ಪ್ರಕೃತಿ ಸಂರಕ್ಷಣೆಯ ಸಂದೇಶವನ್ನು ಸಾರಲಾಯಿತು

   ಕಾರ್ಯಕ್ರಮದಲ್ಲಿ ಅಶ್ವಿನಿ ಮತ್ತು ತಂಡದವರು ಪ್ರಾರ್ಥಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಪಿ.ಎಂ. ವಿಕ್ರಮ ಸ್ವಾಗತಿಸಿದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಎಚ್.ಆರ್. ಗುರು ವಂದಿಸಿದರು. ಪಿಯು ಕಾಲೇಜು ಪ್ರಾಂಶುಪಾಲ ಕೆ.ಎನ್. ಶಿವಕುಮಾರ್, ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.      ಎನ್. ಜಯಶೀಲ ಕಾರ್ಯಕ್ರಮ ನಿರೂಪಿಸಿದರು.


🙏🙏✍️ವಿನಂತಿ: ಈ ಸುದ್ದಿ ಉಪಯುಕ್ತ ಎನಿಸಿದರೆ ನಿಮ್ಮ WhatsApp Status ಹಾಗೂ Groups ಗಳಿಗೆ Share ಮಾಡಿ. ನಿಮ್ಮ ಒಂದು Share ನಮ್ಮ ಸಾವಿರಕ್ಕೂ  ಹೆಚ್ಚು ವೀಕ್ಷಕರನ್ನು ತಲುಪಬಹುದು. ಧನ್ಯವಾದಗಳು- G1 NEWS Honnur


ವರದಿ:G1 News ಹೊನ್ನೂರು 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹರವೆ ಶ್ರೀ ಗುರುಮಲ್ಲೇಶ್ವರ ಅನುದಾನಿತ ಪ್ರೌಢಶಾಲೆ ಯಲ್ಲಿ, ಅಂತಾರಾಷ್ಟ್ರೀಯ ಯೋಗ ದಿನಾಚರಣೆ.

ಇನ್‌ಸ್ಪೈರ್ ಅವಾರ್ಡ್‌ಗೆ ಯಳಂದೂರಿನ 5 ವಿದ್ಯಾರ್ಥಿಗಳು ಆಯ್ಕೆ: ಮೆಲ್ಲಹಳ್ಳಿ ಸರ್ಕಾರಿ ಶಾಲೆಗೆ ರಾಷ್ಟ್ರಮಟ್ಟದ ಗರಿ`

ಹೊನ್ನೂರು ಪ್ರಕಾಶ್ ಬಿಗ್ ಬಾಸ್ ಕನ್ನಡಕ್ಕೆ ಬರಲಿ: ಚಾಮರಾಜನಗರ ರೈತ ಹೋರಾಟಗಾರನಿಗೆ ಅಭಿಮಾನಿಗಳ ಆಗ್ರಹ