ಭೂಮಿ ಪೂಜೆಗೆ ಚಾಲನೆ ನೀಡಿದ ಶಾಸಕ ಎ ಆರ್ ಕೃಷ್ಣ ಮೂರ್ತಿ



ಸಂತೇಮರಹಳ್ಳಿ : ಹೋಬಳಿಗೆ ಒಳಪಡುವ ವಿವಿಧ ಗ್ರಾಮಗಳಿಗೆ ಭೂಮಿ ಪೂಜೆಗೆ ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣ ಮೂರ್ತಿ ಚಾಲನೆ ನೀಡಿದರು.

ವಿವಿಧ ಗ್ರಾಮಗಳಾದ ಚುಂಗಡಿಪುರ, ಹೊಸಮೋಳೆ, ನಡಕಲುಮೋಳೆ, ಕಾವುದವಾಡಿ,ತೆಳ್ಳನೂರು, ಬಾನಹಳ್ಳಿ ಗ್ರಾಮಗಳಿಗೆ 3 ಕೋಟಿಗೂ ಅಧಿಕ ರೂ ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ ಕಳೆದ ಮೂರು ವರ್ಷದಲ್ಲಿ 500 ಕೋಟಿಗೂ ಹೆಚ್ಚು ಅನುದಾನವನ್ನು ತಂದು ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ ಹಾಗೂ ಮುಂಬರುವ ದಿನಗಳಲ್ಲಿ ಹಲವಾರು ಯೋಜನೆಗಳಿಗೆ ಈಗಾಗಲೇ ಪ್ರಸ್ತಾವನೆ ನೀಡಲಾಗಿದೆ.

ಕಳೆದ ಮೂರು ವರ್ಷಗಲ್ಲಿ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ನಾಯಕತ್ವದಲ್ಲಿ ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನ ಕೈಗೊಂಡು ಅಭಿವೃದ್ಧಿ ಮಾಡಿದ್ದಾರೆ.ದೇಶದಲ್ಲಿ ಅತ್ಯಂತ ಜನಪ್ರಿಯ ಮುಖ್ಯ ಮಂತ್ರಿ ಎಂದೇ ಕ್ಯಾತಿಯಾಗಿದ್ದಾರೆ, ಮ್ಯಾನ ಮುಖ್ಯ ಮಂತ್ರಿ 

ಡಿ ಕೆ ಶಿವಕುಮಾರ್ ರವರು ರಾಜ್ಯವನ್ನು ಮುನ್ನೆಡೆಸುವ ಅದಿಯಲ್ಲಿ ಮುನ್ನಡೆಯಲ್ಲಿದ್ದಾರೆ ಎಂದರೆ ತಪ್ಪಾಗಲಾರದು.ಬಾಕಿ ಇರುವ ಎರಡು ವರ್ಷದಲ್ಲಿ ನಮ್ಮ ಕಾಂಗ್ರೆಸ್ ಪಕ್ಷ ಜನಪರ ಕೆಲಸಗಳಿಗೆ ಒತ್ತು ನೀಡುವುದಾಗಿ ತಿಳಿಸಿದರು.

ಕ್ಷೇತ್ರದ ಎಲ್ಲಾ ವರ್ಗದ ಸಮುದಾಯಗಳಿಗೂ ಅನುದಾನ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮ ಕೈಗೊಂಡಿದ್ದೇನೆ.ಈಗಾಗಲೇ ಹಲವಾರು ನೀರಾವರಿ ಯೋಜನೆ ಸರ್ಕಾರಕ್ಕೆ ಪ್ರಸ್ತಾವನೆಗೆ ಚಾಲನೆ ನೀಡಲಾಗಿದೆ ಎಂದರು. 

ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆ ಅಧ್ಯಕ್ಷ ಎಚ್ ವಿ ಚಂದ್ರು, ಚಾಮುಲ್ ನಿರ್ದೇಶಕ ಕಮರವಾಡಿ ರೇವಣ್ಣ, ಮಹಾದೇವ ಪ್ರಸಾದ್, ಕಣ್ಣೆಗಾಲ ಮಾದೇಶ್, ಲಕ್ಷ್ಮಣ, ಸವಿತಾ ಚುಂಗಡಿಪುರ ನಟರಾಜ್, ಪಟೇಲ್ ನಟರಾಜ್, ಟಿ ಎಸ್ ಕುಮಾರ್, ಲೋಕೇಶ್, ಸುಗಂಧ ರಾಜ್, ಸೋಮಣ್ಣ, ಶಿವಕುಮಾರ್ ಎ ಇ ಇ ಚಿಕ್ಕಲಿಂಗಯ್ಯ ಉಪಸ್ಥಿತರಿದ್ದರು.

 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹರವೆ ಶ್ರೀ ಗುರುಮಲ್ಲೇಶ್ವರ ಅನುದಾನಿತ ಪ್ರೌಢಶಾಲೆ ಯಲ್ಲಿ, ಅಂತಾರಾಷ್ಟ್ರೀಯ ಯೋಗ ದಿನಾಚರಣೆ.

ಇನ್‌ಸ್ಪೈರ್ ಅವಾರ್ಡ್‌ಗೆ ಯಳಂದೂರಿನ 5 ವಿದ್ಯಾರ್ಥಿಗಳು ಆಯ್ಕೆ: ಮೆಲ್ಲಹಳ್ಳಿ ಸರ್ಕಾರಿ ಶಾಲೆಗೆ ರಾಷ್ಟ್ರಮಟ್ಟದ ಗರಿ`

ಹೊನ್ನೂರು ಪ್ರಕಾಶ್ ಬಿಗ್ ಬಾಸ್ ಕನ್ನಡಕ್ಕೆ ಬರಲಿ: ಚಾಮರಾಜನಗರ ರೈತ ಹೋರಾಟಗಾರನಿಗೆ ಅಭಿಮಾನಿಗಳ ಆಗ್ರಹ