ಚಾಮರಾಜನಗರ ಜಿಲ್ಲೆಗೆ ಹೆಮ್ಮೆ JEE Main ನಲ್ಲಿ ರಾಷ್ಟ್ರಮಟ್ಟದ Rank ಪಡೆದ ಮಲೆಯೂರು ವಿದ್ಯಾರ್ಥಿ ಎಂ ಜಿ ನಾಗದೇವ್ IIT ಮದ್ರಾಸ್ ಗೆ ಆಯ್ಕೆ
ನಿರಂತರ ಅಧ್ಯಯನ ಹಾಗೂ ಉಪನ್ಯಾಸಕರ ಮಾರ್ಗದರ್ಶನದಿಂದ ಜೆಇಇ ಯಂತಹ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಬಹುದು ಎಂದು ಮಲೆಯೂರಿನ ಎಂ.ಜಿ. ನಾಗದೇವ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಮಲೆಯೂರಿನ ಸ್ವಗೃಹದಲ್ಲಿ ದುಗ್ಗಹಟ್ಟಿ ರಾಜೇಶ್ ಗೆಳೆಯರ ಬಳಗ, ಚಾಮರಾಜನಗರ ಬಸವ ಕೇಂದ್ರ ಹಾಗೂ ಗೂಳಿ ಗ್ರೂಪ್ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಚಿಕ್ಕ ವಯಸ್ಸಿನಿಂದಲೇ ಏನಾದ್ರೂ ದೊಡ್ಡ ಸಾಧನೆ ಮಾಡಬೇಕು ಅನ್ನೋ ಹಠ ನನ್ನಲ್ಲಿತ್ತು. ನಮ್ಮ ತಂದೆ-ತಾಯಿ ಮತ್ತು ಶಿಕ್ಷಕರು ಕೊಟ್ಟ ಪ್ರೋತ್ಸಾಹದಿಂದಲೇ ಇವತ್ತು ಈ ಹಂತಕ್ಕೆ ಬಂದಿದ್ದೀನಿ" ಎಂದು ನಾಗದೇವ್ ಹೇಳಿದರು.
ಮುಂದಿನ ಯೋಜನೆ ಬಗ್ಗೆ ಕೇಳಿದಾಗ, "IIT ಮದ್ರಾಸ್ ನಲ್ಲಿ ಓದಿ ಜ್ಞಾನ ಸಂಪಾದಿಸಿ ಒಳ್ಳೆಯ ಕಂಪನಿಯಲ್ಲಿ ಕೆಲಸಕ್ಕೆ ಸೇರಬೇಕು. ಸಂಪಾದಿಸಿ ಸಮಾಜಕ್ಕೆ ಏನಾದರೂ ಒಳ್ಳೆಯ ಕೊಡುಗೆ ನೀಡಬೇಕು ಅನ್ನೋದು ನನ್ನ ದೊಡ್ಡ ಕನಸು" ಎಂದು ತಿಳಿಸಿದರು
ದಾನಿಗಳಾದ ದುಗ್ಗಹಟ್ಟಿ ರಾಜೇಶ್ ಮಾತನಾಡಿ, ಎಂಜಿ ನಾಗದೇವ ಪ್ರತಿಷ್ಠಿತ ಜೆಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಉದ್ಯೋಗಿಗಳಾಗಿರುವ ಮಲೆಯೂರು ಗ್ರಾಮದ ಗುರುಸ್ವಾಮಿ ಮತ್ತು ನೇತ್ರಾವತಿಯವರ ಸುಪುತ್ರನಾಗಿದ್ದಾನೆ. ಜೆ ಇ ಇ ಪರೀಕ್ಷೆಯಲ್ಲಿ ದೇಶಕ್ಕೆ ಮೊದಲ ರಾಂಕ್ ಪಡೆದಿರುವ ಈತ ತನ್ನ ಶಿಕ್ಷಣವನ್ನು ಮೈಸೂರು ಹಾಗೂ ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ಶಿಕ್ಷಣ ಪಡೆದಿದ್ದು ಇತ್ತೀಚಿಗೆ ನಡೆದ ಸಿ ಇ ಟಿ ಪರೀಕ್ಷೆಯಲ್ಲೂ 28ನೇ ರಾಂಕ್ ಪಡೆದಿದ್ದಾನೆ.ಮುಂದಿನ ದಿನಗಳಲ್ಲೂ ಕಠಿಣ ಶ್ರಮ ವಹಿಸಿ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡುವಂತಾಗಲಿ ಎಂದರು.
ಚಾಮರಾಜನಗರದ ಎಂಸಿಎಸ್ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಹೆಗ್ಗವಾಡಿಪುರ ಮಹದೇವಸ್ವಾಮಿ ಮಾತನಾಡಿ, ಯುವಕರು ಶ್ರದ್ಧೆ ಛಲ ಪರಿಶ್ರಮ ರೂಢಿಸಿಕೊಂಡು ಗುರಿಯತ್ತ ಸಾಗಿದರೆ ಅಸಾಧ್ಯವಾದುದನ್ನೂ ಸಾಧಿಸಬಹುದಾಗಿದೆ ಎಂದು ಅಭಿಪ್ರಾಯ ಪಟ್ಟರು. ತಾಲೂಕಿನ ಮಲೆಯೂರು ಗ್ರಾಮದ ಜೆ ಇ ಇ ಮೇನ್ಸ್ ನ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ಸ್ಥಾನ ಪಡೆದು ಜಿಲ್ಲೆಯ ಕೀರ್ತಿ ಎತ್ತಿ ಹಿಡಿದಿದ್ದಾರೆ.
ಈಗಿನ ವಿದ್ಯಾರ್ಥಿಗಳು Mobile, TV ಬಿಟ್ಟು ಓದಿನ ಕಡೆ ಗಮನ ಕೊಡಬೇಕು. ಒಂದು ಗುರಿ ಇಟ್ಕೊಂಡು ದಿನಕ್ಕೆ 6-8 ಗಂಟೆ ಶ್ರದ್ಧೆಯಿಂದ ಓದಿದ್ರೆ IIT ಅಲ್ಲ, ಯಾವ ಪರೀಕ್ಷೆ ಬೇಕಾದ್ರೂ Pass ಆಗಬಹುದು. ಕಷ್ಟಪಟ್ಟವರಿಗೆ ದೇವರು ಖಂಡಿತಾ ಒಳ್ಳೇದು ಮಾಡ್ತಾನೆ" ಎಂದು ಹಿರಿಯ ಶಿಕ್ಷಕರೊಬ್ಬರು ಕಿವಿಮಾತು ಹೇಳಿದರು.
ಹಿರಿಯ ಸಹಕಾರಿ ಧುರೀಣ ಕೋಡಿಮೋಳೆ ರಾಜಶೇಖರ್ ಮಾತನಾಡಿ, ಶಿಕ್ಷಣ ಇಂದು ಸ್ಪರ್ಧಾತ್ಮಕವಾಗಿದ್ದು ಉದ್ಯೋಗ ಕೇಂದ್ರೀಕೃತವಾಗುತ್ತಿದೆ. ಹೀಗಾಗಿ ಪರಿಶ್ರಮವೇ ವಿದ್ಯಾರ್ಥಿ ಯಶಸ್ಸಿನ ಗುಟ್ಟಾಗಿದೆ.
ಚಾಮರಾಜನಗರ ತಾಲೂಕಿನ ಮಲೆಯೂರು ಗ್ರಾಮದ ನಾಗದೇವ JEE ಪರೀಕ್ಷೆಯಲ್ಲಿ ಅದ್ಭುತ Rank ಪಡೆದು ರಾಜ್ಯಕ್ಕೇ ಕೀರ್ತಿ ತಂದಿದ್ದಾನೆ. "ಇವನಂತಹ ಪ್ರತಿಭೆಗಳಿಗೆ ಎಲ್ಲರ ಸಹಕಾರ ಸಿಕ್ಕರೆ ನಮ್ಮ ಜಿಲ್ಲೆಯ ಹೆಸರು ದೇಶಾದ್ಯಂತ ಪಸರಿಸುತ್ತೆ. ನಾಗದೇವನ ಮುಂದಿನ ಜೀವನಕ್ಕೆ ಒಳ್ಳೆಯದಾಗಲಿ" ಎಂದು ಗ್ರಾಮಸ್ಥರು ಶುಭ ಹಾರೈಸಿದರು.ಮುಂದಿನ ದಿನಗಳಲ್ಲಿ ಮತ್ತಷ್ಟು ಸ್ಪರ್ಧಾತ್ಮಕ ಪರೀಕೆ ಎದುರಿಸಿ ರಾಷ್ಟ್ರದಲ್ಲಿ ಉನ್ನತ ಸ್ಥಾನ ಗಳಿಸಲಿ ಮತ್ತು ಹಳ್ಳಿ ಮಕ್ಕಳಿಗೆ ಓದಿನ ಬಗ್ಗೆ ಸರಿಯಾದ ದಾರಿ ತೋರಿಸಿ, ಅವರ ಜೀವನ ರೂಪಿಸೋಕೆ ಸಹಾಯ ಮಾಡಬೇಕು ಅಂತ ಶಿಕ್ಷಕರು ಕರೆ ನೀಡಿದರು.
ಸುತ್ತೂರು ಶಾಲೆಯಲ್ಲಿ ಶಿಕ್ಷಕಿಯಾಗಿರುವ ತಾಯಿ ಎ ಸಿ ನೇತಾವತಿ ಮಾತನಾಡಿ, ನಮ್ಮ ಪುತ್ರ ಮೊಬೈಲ್ ಮತ್ತು ಟಿವಿಯಿಂದ ದೂರವಿದ್ದು, ಕೆಲ ಕಾಲ ಹೈಸ್ಕೂಲ್ ಹಂತದಲ್ಲಿ ಕ್ರೀಡಾ ಚಟುವಟಿಕೆಗಳಲ್ಲೂ ಭಾಗವಹಿಸುತ್ತಾ ಉತ್ತಮ ಅಂಕಗಳಿಸುತ್ತಿದ್ದ. ಪಿಯುಸಿ ಹಂತದಲ್ಲಿ ಸಂಪೂರ್ಣ ಒದಿನಕಡೆ ಗಮನಹರಿಸಿದ್ದರಿಂದ ಜೆಇಇ ಪರೀಕ್ಷೆಯಲ್ಲಿ ರಾಷ್ಟ್ರದ ಗಮನಸೆಳೆಯುವ ಸಾಧನೆ ಮಾಡಿದ್ದಾನೆ ಎಂದರು.
ನಾಗದೇವ್ ತಂದೆ ಗುರುಸ್ವಾಮಿ, ಬಸವಕೇಂದ್ರದ ಅಧ್ಯಕ್ಷ ಎನ್ ರಿಚ್ ಮಹದೇವಸ್ವಾಮಿ, ದಾನಿಗಳಾದ ದುಗ್ಗಹಟ್ಟಿ ರಾಜೇಶ್,ಜಿಲ್ಲಾಭಿವೃದ್ದಿ ಹೋರಾಟ ಸಮಿತಿ ಅಧ್ಯಕ್ಷ ಕೆ.ವೀರಭದ್ರಸ್ವಾಮಿ, ದೂರದರ್ಶನ ವರದಿಗಾರ ಗೂಳೀಪುರ ನಂದೀಶ್, ಸೋಮವಾರಪೇಟೆ ಗೌ.ಸೋಮಣ್ಣ, ಲಕ್ಷ್ಮಿಪುರ ಮುಖ್ಯ ಶಿಕ್ಷಕ ಮೂಕಳ್ಳಿ ಬಸವಣ್ಣ, ವಿಸಿ ಹೊಸೂರು ನಟೇಶ್,ಬೆಂಡರವಾಡಿ ಮಹೇಶ್ ಪಟೇಲ್, ಗೂಳೀಪುರ ಬಾಬು, ಸೇರಿದಂತೆ ಇತರರು ಹಾಜರಿದ್ದರು.
ಜೆಇಇ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಚಾಮರಾಜನಗರ ತಾಲೂಕಿನ ಮಲೆಯೂರು ಗ್ರಾಮದ ನಾಗದೇವ್, ಪೋಷಕರಾದ ಗುರುಸ್ವಾಮಿ ಮತ್ತು ನೇತ್ರಾವತಿ ಅವರನ್ನು ಸನ್ಮಾನಿಸಲಾಯಿತು.
🙏🙏✍️ವಿನಂತಿ: ಯಳಂದೂರಿನ ಈ ಸಾಧಕ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಈ ಸುದ್ದಿಯನ್ನು ನಿಮ್ಮ WhatsApp Status ಹಾಗೂ Groups ಗಳಿಗೆ Share ಮಾಡಿ. ಧನ್ಯವಾದಗಳು - G1 NEWS Honnur
ವರದಿ: G1News

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ