ಏ ರಿಚ್ ಫೌಂಡೇಶನ್, ಚಾಮರಾಜನಗರ, ಮೈಸೂರು ಹಾಗೂ ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಅರ್ಪಿಸುವ 'ದ ಸ್ಟೋನ್ ರಿಂಗ್ಸ್'
ವರದಿ: ಮಣಿಕಂಠ ನಾಯಕ್ ಗೂಳಿಪುರ ಏ ರಿಚ್ ಫೌಂಡೇಶನ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅರ್ಪಿಸುವ 'ದ ಸ್ಟೋನ್ ರಿಂಗ್ಸ್' ಜಲವರ್ಣ ಕಲಾಶಿಬಿರ.
ಯಳಂದೂರು: ಪಟ್ಟಣದ ಪ್ರತಿಷ್ಠಿತ ಕಲಾ ಮತ್ತು ಸಾಂಸ್ಕೃತಿಕ ಸಂಸ್ಥೆ ಏ ರಿಚ್ ಫೌಂಡೇಶನ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ 2026, ಜೂನ್ 28, ಭಾನುವಾರ ಏಷ್ಯಾದ ಅತ್ಯುನ್ನತ ಐತಿಹಾಸಿಕ ತಾಣವಾಗಿರುವ, ಪ್ರಸಿದ್ಧ ಬಳೆಮಂಟಪದ ಆವರಣದಲ್ಲಿ ಕರ್ನಾಟಕದ ಬೇರೆ ಬೇರೆ ಭಾಗದ ಇಪ್ಪತ್ತಕ್ಕೂ ಹೆಚ್ಚು ಕಲಾವಿದರಿಂದ ಜಲವರ್ಣ ಕಲಾ ಶಿಬಿರ ಆಯೋಜಿಸಲಾಗಿದೆ.ಸ್ಥಳೀಯವಾಗಿ ಕಲೆ, ಕಲಾವಿದರನ್ನು ಪ್ರೋತ್ಸಾಹಿಸುವ ಮತ್ತು ಸಾಮಾಜಿಕ ಬದ್ಧತೆ, ಕಳಕಳಿಯಿಂದ ಮೌಲ್ಯಯುತ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಉದ್ದೇಶದಿಂದ ಹುಟ್ಟಿಕೊಂಡಿರುವ ಏ ರಿಚ್ ಫೌಂಡೇಶನ್ ಸಂಸ್ಥಾಪಕ ಶ್ರೀನಿವಾಸ್ ಎಚ್.ಆರ್. ಅವರು ಶಿಬಿರದ ಕುರಿತು ಮಾಹಿತಿ ನೀಡಿದ್ದು, ಖ್ಯಾತ ಜಲವರ್ಣ ಕಲಾವಿದ ಕಾಂತರಾಜ್ ಎನ್. ಅವರ ನಿರ್ದೇಶನದಲ್ಲಿ ಶಿಬಿರ ನಡೆಯಲಿದೆ ಎಂದು ತಿಳಿಸಿದ್ದಾರೆ.
ಮೈಸೂರು ಶೈಲಿಯ ಜನಪ್ರಿಯ ಕಲಾವಿದ ಶ್ರೀಹರಿ ಕೆ.ಎಸ್., ಬೆಂಗಳೂರಿನ ಯುವ ಕಲಾವಿದರಾದ ಗಣೇಶ್ ಧಾರೇಶ್ವರ್, ಅಭ್ಯಾಸಿ ಟ್ರಸ್ಟ್ ಸಂಸ್ಥಾಪಕ ಕಿರಣ್ ಗಿರ್ಗಿ ಅವರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ವರ್ಣಶ್ರೀ ಪ್ರಶಸ್ತಿಗೆ ಭಾಜನರಾದ ಟ್ಯಾಬ್ಲೊ ಮಹಾದೇವ್ ಮತ್ತು ಹಾವು ತಜ್ಞ ಎಂ.ಎಸ್.ಮಹೇಶ್ ಅವರನ್ನು ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮ ಸಂತೇಮರಹಳ್ಳಿಯ ಶ್ರೀ ಫಾರ್ಮ್ ಹೌಸ್ನಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ, ಚಾಮರಾಜನಗರದ ಅಭ್ಯಾಸಿ ರಂಗ ತಂಡ 'ನೆಲ ತಾಯಿ' ರಂಗ ರೂಪಕ ಮತ್ತು ಗೀತ ಗಾಯನ ಕಾರ್ಯಕ್ರಮ ಪ್ರಸ್ತುತಪಡಿಸಲಿದ್ದಾರೆ. ಕಲಾ ಶಿಬಿರದಲ್ಲಿ, ತುಮಕೂರಿನ ಲೋಕೇಶ್ ಆರ್, ಮನೋಜ್ ಎಂ.ಎಸ್., ಕಲಬುರಗಿಯ ಶಿವಕುಮಾರ್ ಎಸ್.ಜಕ್ಕನಳ್ಳಿ, ಯಾದಗಿರಿಯ ವಿಶ್ವ, ಬೆಳಗಾವಿಯ ಮಲ್ಲಿಕಾರ್ಜುನ್ ತೋರಣಗಟ್ಟಿ, ಬೆಂಗಳೂರಿನ ವಿನೋದ್ ಕುಮಾರ್ ಎಂ., ಚೇತನ್ ಚುಕ್ಕಿ ಆರ್, ಮಂಡ್ಯದ ಬೈರವ್ ಬಿ.ಎಂ., ಚಾಮರಾಜನಗರದ ಮಹೇಶ್, ರಾಜೇಂದ್ರ, ಮಾದಪ್ಪ, ಶಿವಕುಮಾರಸ್ವಾಮಿ, ಅನಿಲ್ ಕುಮಾರ್, ಗುಂಡ್ಲುಪೇಟೆಯ ರಾಜೇಂದ್ರ, ಯಳಂದೂರಿನ ಮಾದೇಶ್, ದುಂದು, ಲೋಕೇಶ್, ರಾಚಪ್ಪ ಪಾಲ್ಗೊಳ್ಳಲಿದ್ದಾರೆ. ಅಲ್ಲದೆ, ಮೈಸೂರಿನ ರವಿವರ್ಮ ಆರ್ಟ್ ಇನ್ಸ್ಟಿಟ್ಯೂಟ್ನ ಸಿಂಧು ಎನ್., ಸ್ವಾಮಿ ಟಿ., ಶೃತಿ ಎಂ., ಆಕಾಶ್ ಬಿ., ಮಹೇಂದರ್ ಆರ್. ಮತ್ತು ಧನುಷ್ ಶಿಬಿರದಲ್ಲಿ ಕಲಾಕೃತಿಗಳನ್ನು ರಚಿಸಲಿದ್ದಾರೆ.
ಧನ್ಯವಾದಗಳು
ಶ್ರೀನಿವಾಸ್ ಎಚ್.ಆರ್.
ಸಂಸ್ಥಾಪಕರು, ಏ ರಿಚ್ ಫೌಂಡೇಶನ್
ಯಳಂದೂರು, ಚಾಮರಾಜನಗರ
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ