ಗಣಿಗನೂರು ಸುರೇಶ್‌ಗೆ ರಾಷ್ಟ್ರಮಟ್ಟದ ಜಾನಪದ ಕಣ್ಮಣಿ ಪ್ರಶಸ್ತಿ
ವರದಿ: ಗೂಳಿಪುರ ಮಣಿಕಂಠ ನಾಯಕ್
ಗಣಿಗನೂರು ಸುರೇಶ್‌ಗೆ ರಾಷ್ಟ್ರಮಟ್ಟದ ಜಾನಪದ ಕಣ್ಮಣಿ ಪ್ರಶಸ್ತಿ
ಯಳಂದೂರು: ಬೆಳಕು ಸಾಹಿತ್ಯಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ (ರಿ) ವತಿಯಿಂದ ಆಯೋಜಿಸಿದ್ದ 125ನೇ ಬೆಳಕು ಸಮ್ಮೇಳನದಲ್ಲಿ ಯಳಂದೂರು ತಾಲ್ಲೂಕಿನ ಗಣಿಗನೂರು ಸುರೇಶ್ ಅವರಿಗೆ ರಾಷ್ಟ್ರಮಟ್ಟದ ಜಾನಪದ ಕಣ್ಮಣಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕು ಗಣಿಗನೂರು ಗ್ರಾಮದ ಶ್ರೀ ಡಿ. ಸುರೇಶ್ ರವರು ಜಾನಪದ ಗಾಯಕರಾಗಿ ಮತ್ತು ಚಿತ್ರ ಬರಹಗಾರರಾಗಿ ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಜಾನಪದ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಯಿತು.
12-07-2026 ರಂದು ಹುಬ್ಬಳ್ಳಿಯ ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
G1 NEWS ವತಿಯಿಂದ ಸುರೇಶ್ ರವರಿಗೆ ಹೃತ್ಪೂರ್ವಕ ಅಭಿನಂದನೆಗಳು 💐💐💐💐💐
ನಿಮ್ಮ ಧ್ವನಿ ನಮ್ಮ ಸುದ್ದಿ 📢
G1 NEWS Honnur - ಜನರ ಪರ ಸಮಸ್ಯೆ ಇದ್ರೆ ತಕ್ಷಣ ತಿಳಿಸಿ: 9964481518 Follow ಮಾಡಿ ಮತ್ತು Share ಮಾಡಿ 🙏


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ