ಕೊಳ್ಳೇಗಾಲ ಬಸ್ ನಿಲ್ದಾಣ ಶೌಚಾಲಯದ ಅಸ್ವಚ್ಛತೆಗೆ ಕ್ರಮಕ್ಕೆ ಆಗ್ರಹಿಸಿದ ಎಸ್.ಎಂ.ವಿ ರಾಜ್ಯಾಧ್ಯಕ್ಷ ಪೂರ್ವಿತ್ ನಾಯಕ
ಕೊಳ್ಳೇಗಾಲ: ಕೊಳ್ಳೇಗಾಲ ಬಸ್ ನಿಲ್ದಾಣದಲ್ಲಿರುವ ಸಾರ್ವಜನಿಕ ಶೌಚಾಲಯದಲ್ಲಿ ತೀವ್ರ ಅಸ್ವಚ್ಛತೆ, ದುರ್ವಾಸನೆ ಹಾಗೂ ನೀರಿನ ಕೊರತೆ ಉಂಟಾಗಿದೆ. ತಕ್ಷಣ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸೇವಾ ಸಮಿತಿ(ರಿ) ರಾಜ್ಯಾಧ್ಯಕ್ಷರಾದ ಶ್ರೀ ಪೂರ್ವಿತ್ ನಾಯಕ ಅವರು ಕೊಳ್ಳೇಗಾಲ ನಗರಸಭೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ನಂತರ ಮಾತನಾಡಿ ಬಸ್ ನಿಲ್ದಾಣಕ್ಕೆ ಪ್ರತಿದಿನ ಸಾವಿರಾರು ಪ್ರಯಾಣಿಕರು, ಮಹಿಳೆಯರು, ಮಕ್ಕಳು ಹಾಗೂ ಹಿರಿಯ ನಾಗರಿಕರು ಬರುತ್ತಾರೆ. ಆದರೆ ಶೌಚಾಲಯವನ್ನು ನಿಯಮಿತವಾಗಿ ಸ್ವಚ್ಛಗೊಳಿಸದ ಕಾರಣ ಅಸ್ವಚ್ಛತೆ ಹೆಚ್ಚಾಗಿದೆ. ಸಮರ್ಪಕ ನೀರಿನ ವ್ಯವಸ್ಥೆ ಇಲ್ಲದ ಕಾರಣ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಿದೆ. ಜೊತೆಗೆ ಕೆಲವರು ಶೌಚಾಲಯದ ಒಳಗೆ ಧೂಮಪಾನ ಮಾಡುತ್ತಿರುವುದು ಸಾರ್ವಜನಿಕರಿಗೆ ಅಸೌಕರ್ಯ ಉಂಟುಮಾಡುತ್ತಿದೆ ಎಂದು ಅವರು ದೂರಿದರು. ಹಾಗಾಗಿ ಶೌಚಾಲಯವನ್ನು ದಿನನಿತ್ಯ ಸ್ವಚ್ಛಗೊಳಿಸುವುದು, 24 ಗಂಟೆ ನೀರಿನ ವ್ಯವಸ್ಥೆ ಕಲ್ಪಿಸುವುದು, ಸಮರ್ಪಕ ನಿರ್ವಹಣೆ ಮಾಡುವುದು ಮತ್ತು "ಧೂಮಪಾನ ನಿಷೇಧ" ಫಲಕಗಳನ್ನು ಅಳವಡಿಸುವಂತೆ ಒತ್ತಾಯಿಸಿ ಸಾರ್ವಜನಿಕರ ಆರೋಗ್ಯ ಮತ್ತು ಅನುಕೂಲದ ದೃಷ್ಟಿಯಿಂದ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿಯಲ್ಲಿ ಕೋರಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಶ್ರೀ ಮಹರ್ಷಿ ವಾಲ್ಮೀಕಿ ಸೇವಾ ಸಮಿತಿ ರಿ ರಾಜ್ಯಾಧ್ಯಕ್ಷರಾದ ಪೂರ್ವಿತ್, ಉಪಾಧ್ಯಕ್ಷರು ಜಯರಾಮ್, ಕಾರ್ಯದರ್ಶಿ ಹರ್ಷ, ಅಧ್ಯಕ್ಷರು ಸಿದ್ದರಾಜು, ಕಾರ್ಯದರ್ಶಿ ಸಿದ್ದರಾಜು, ಮಹೇಶ್ ಖಜಾಂಚಿ ಇದ್ದರು.
ನಮ್ಮ ಸ್ಥಳೀಯ ಸುದ್ದಿಗಳಿಗಾಗಿ G1 NEWS Honnur ಗೆ Follow ಮಾಡಿ 🙏
ನಿಮ್ಮ ಸುತ್ತಮುತ್ತಲಿನ ಸಮಸ್ಯೆ ಇದ್ರೆ ನಮಗೆ WhatsApp ಮಾಡಿ: { 9964481518 }


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ