72 ವರ್ಷಗಳ ಸೇವೆ ವೆಂಕಟೇಶ ಬೇಕರಿ ಮಾಲೀಕ ಬದ್ರಿ ನಾರಾಯಣ್‌ಗೆ ಸನ್ಮಾನ.
ವರದಿ: ಗೂಳಿಪುರ ಮಣಿಕಂಠ ನಾಯಕ್
ಚಾಮರಾಜನಗರ: ನಗರದ ಶ್ರೀ ವೆಂಕಟೇಶ ಬೇಕರಿಯ 72ನೇ ವರ್ಷದ ಸಂಭ್ರಮದ ಅಂಗವಾಗಿ ಜೈಹಿಂದ್ ಪ್ರತಿಷ್ಠಾನ ಹಾಗೂ ಋಗ್ವೇದಿ ಯೂತ್ ಕ್ಲಬ್ ವತಿಯಿಂದ ಬೇಕರಿ ಮಾಲೀಕ ಬದ್ರಿ ನಾರಾಯಣ್ ಅವರನ್ನು ಸುರೇಶ್ ಎನ್ ಋಗ್ವೇದಿ ಸನ್ಮಾನಿಸಿದರು.
1954ರಲ್ಲಿ ಆರಂಭವಾದ ವೆಂಕಟೇಶ ಬೇಕರಿ ಗುಣಮಟ್ಟದ ಪದಾರ್ಥಗಳ ಮೂಲಕ ದೇಶ-ವಿದೇಶಗಳಲ್ಲಿ ಪ್ರಸಿದ್ಧಿ ಪಡೆದು ಚಾಮರಾಜನಗರದ ಕೀರ್ತಿ ಹೆಚ್ಚಿಸಿದೆ. ಸಂಕಷ್ಟದ ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಬ್ರೆಡ್, ಬನ್ ವಿತರಿಸಿ ಸೇವೆ ಸಲ್ಲಿಸಿರುವುದು ಸ್ಮರಣೀಯ ಎಂದು ಸುರೇಶ್ ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಬದ್ರಿ ನಾರಾಯಣ್, ತಂದೆ ವೆಂಕಟವರದಾಚಾರ್ ಹಾಗೂ ತಾಯಿ ಪದ್ಮ ಸ್ಥಾಪಿಸಿದ ಬೇಕರಿ 72 ವರ್ಷಗಳಿಂದ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಕಾರ್ಯಕ್ರಮದಲ್ಲಿ ಚೇತನ್, ಸುರೇಶ್ ಕುಮಾರ್, ಶರಣ್ಯ, ಸಾನಿಕ ಹಾಗೂ ಶಾವ್ಯ ಉಪಸ್ಥಿತರಿದ್ದರು.
ನಿಮ್ಮ ಧ್ವನಿ ನಮ್ಮ ಸುದ್ದಿ 📢
G1 NEWS Honnur - ಜನರ ಪರ ಸಮಸ್ಯೆ ಇದ್ರೆ ತಕ್ಷಣ ತಿಳಿಸಿ: 9964481518 Follow ಮಾಡಿ ಮತ್ತು Share ಮಾಡಿ 🙏

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ