ಬೆಲ್ಲ ಉತ್ಪಾದನೆ ಕುರಿತು ಪಿಎಚ್.ಡಿ. ಪಡೆದ ಕೆಂಪನಪುರ ಮಹದೇವಸ್ವಾಮಿಗೆ ಬಸವಪರ ಸಂಘಟನೆಗಳಿಂದ ಸನ್ಮಾನ
ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಪಂಡಿತರು ಹಾಗೂ ಎಮ್ ಸಿ ಎಸ್ ಶಾಲೆಯ ಮುಖ್ಯೋಪಾಧ್ಯಾಯರಾದ ಮಹಾದೇವಸ್ವಾಮಿ ಅವರು ಚಾಮರಾಜನಗರ ಜಿಲ್ಲೆಯ ಪ್ರಮುಖ ಕೃಷಿ ಆಧಾರಿತ ಉತ್ಪನ್ನವಾದ ಬೆಲ್ಲ ಉತ್ಪಾದನೆ ಕುರಿತು ಪಿ ಎಚ್ ಡಿ ಪಡೆದಿರುವುದು ಇಡೀ ಜಿಲ್ಲೆಯ ಹೆಮ್ಮೆ ಹಾಗೂ ಸಂತಸದ ವಿಷಯವಾಗಿದೆ ಎಂದು ಹೇಳಿದರು
ಡಾಕ್ಟರ್ ಮಹದೇವಸ್ವಾಮಿ ಕೆಂಪನಪುರ ಅವರು ಕೃಷಿ ಪ್ರಧಾನ ಕುಟುಂಬದಲ್ಲಿ ಜನಿಸಿ ಬೆಳೆದವರಾಗಿದ್ದು ಇಂದಿಗೂ ಕೃಷಿಯನ್ನೇ ತಮ್ಮ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಂಡಿದ್ದಾರೆ ತಮ್ಮ ಜೀವನಾನುಭವ, ರೈತರ ಬದುಕಿನೊಂದಿಗೆ ಇರುವ ನಿಕಟ ಬಾಂಧವ್ಯ ಹಾಗೂ ಅಲೆಮನೆಗಳಲ್ಲಿ ಬೆಲ್ಲ ತಯಾರಿಕೆಯ ಅನುಭವವನ್ನು ಸಂಶೋಧನೆಯ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡಿರುವುದು ತಿಳಿಸಿದರು
ಬೆಲ್ಲ ಉತ್ಪಾದನೆಯಲ್ಲಿ ಎದುರಾಗುವ ಸವಾಲುಗಳು, ಉತ್ಪಾದನಾ ವಿಧಾನಗಳು, ಗುಣಮಟ್ಟ ಸುಧಾರಣೆ, ಮಾರುಕಟ್ಟೆ ಸಮಸ್ಯೆಗಳು, ಅವುಗಳಿಗೆ ಅಗತ್ಯವಾದ ಪರಿಹಾರೋಪಾಯಗಳು ಕುರಿತು ನಡೆಸಿರುವ ಅಧ್ಯಯನವು ಮುಂದಿನ ಪೀಳಿಗೆಗೆ ರೈತ ಸಮುದಾಯಕ್ಕೆ ಹಾಗೂ ಸರ್ಕಾರದ ನೀತಿ ರೂಪಿಸುವ ಪ್ರಕ್ರಿಯೆಗೆ ಉಪಯೋಗ ಮಾರ್ದರ್ಶನವಾಗಲಿದೆ ಎಂದು ಅಭಿಪ್ರಾಯಪಟ್ಟರು
ನಂತರ ಮಾತನಾಡಿದ ದುಗ್ಗಹಟ್ಟಿ ಜಮೀನ್ದಾರ್ ರಾಜೇಶ್ ಅವರು ನಾನು ಮತ್ತು ಮಹದೇವಸ್ವಾಮಿ ಅವರು ಮೈಸೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ದಿನಗಳಿಂದಲೂ ಅವರ ಪರಿಚಯವಿದೆ ಆಗಿನಿಂದಲೇ ಯಾವುದೇ ಕೆಲಸವನ್ನು ಅತ್ಯಂತ ಶ್ರದ್ಧಾ ಪ್ರಾಮಾಣಿಕತೆ ಮತ್ತು ವೃತ್ತಿ ಪರತೆಯಿಂದ ನಿರ್ವಹಿಸುವ ವ್ಯಕ್ತಿತ್ವ ಅವರದು. ಅವರ ಪರಿಶ್ರಮ ಹಾಗೂ ಅಧ್ಯಯನದ ಬದ್ಧತೆಯೇ ಇಂದು ಪಿ ಎಚ್ ಡಿ ಪದವಿಯಾಗಿ ಫಲ ನೀಡಿದೆ ಈ ಸಾಧನೆ ಯುವ ಜನತೆಗೆ ಮಾದರಿಯಾಗಿದೆ ಎಂದು ಹೇಳಿದರು
ಜಿಲ್ಲಾ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಕೆ ವೀರಭದ್ರ ಸ್ವಾಮಿ ಅವರು ಶುಭಾಶಯಗಳನ್ನು ತಿಳಿಸಿ ಗ್ರಾಮೀಣ ಬದುಕು ಮತ್ತು ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಸಂಶೋಧನೆಗಳು ಸಮಾಜದ ಅಭಿವೃದ್ಧಿಗೆ ಪೂರಕವಾಗಿದ್ದು ಮಹಾದೇವಸ್ವಾಮಿ ಅವರ ಅಧ್ಯಯನ ರೈತ ಸಮುದಾಯಕ್ಕೆ ಬಹಳ ಉಪಯುಕ್ತವಾಗಲಿದೆ ಎಂದು ಹೇಳಿದರು
ಮಹಾಮನೆ ಬಳಗದ ವತಿಯಿಂದ ಹೊನ್ನ ಮೇಟಿ ಸುಂದ್ರಪ್ಪ ಅವರು ಮಾತನಾಡಿ ನೆಲದ ಬದುಕಿಗೆ ಸಂಬಂಧಿಸಿ ವಿಷಯವನ್ನು ಸಂಶೋಧನೆ ಈ ರೂಪಿಸಿರುವುದು ಇಂತಹ ಅಧ್ಯಯನಗಳು ಕೃಷಿ ಪರಂಪರೆಯನ್ನು ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಹೇಳಿದರು
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಚಾಮರಾಜನಗರ ಜಿಲ್ಲೆ ಬಸವ ಕೇಂದ್ರ ಅಧ್ಯಕ್ಷ ಹಾಗೂ ವೀರಶೈವ ಮಹಾಸಭೆ ಕೇಂದ್ರ ಸಮಿಶಿ ಸದಸ್ಯ ಎನ್ ರಿಚ್ ಮಹದೇವಸ್ವಾಮಿ ರವರು ನಾವೆಲ್ಲರೂ ಇಂದು ತಮ್ಮನ್ನು ಭೇಟಿಯಾಗಿ ಅಭಿನಂದಿಸಿರುವುದು ಕೇವಲ ಸನ್ಮಾನಕ್ಕಾಗಿ ಅಲ್ಲ ತಮ್ಮ ಸಾಧನೆ ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಸಂಶೋಧನೆ ಮಾಡಲು ತಾವುಗಳು ಅಶಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬೇಕು ತಮ್ಮಂತಹ ಪ್ರತಿಭಾವಂತರು ಸಮಾಜದ ಅಮೂಲ್ಯ ಆಸ್ತಿಯಾಗಿದ್ದು ಯುವಜನತೆಗೆ ಪ್ರೇರಣೆಯಾಗಬೇಕು ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಬಸವ ಬಳಗಗಳ ಒಕ್ಕೂಟದ ಕಾರ್ಯದರ್ಶಿ, ದೊಡ್ಡರಾಯ ಪೇಟೆ ಗಿರೀಶ್ ಅಖಿಲ ಭಾರತ ವೀರಶೈವ ಮಹಾಸಭೆಯ ಜಿಲ್ಲಾ ಪ್ರತಿನಿಧಿಗಳಾದ ಮೂಡಲಪುರ ಮಂಜೇಶ್ ಕಾವುದವಾಡಿ ಗುರು, ಶರಣ ಸಾಹಿತ್ಯ ಪರಿಷತ್ತಿನ ಮಾಸ್ಟರ್ ಲಿಂಗರಾಜು, ಮಹಾಮನೆಯ ಪೊಲೀಸ್ ಜಯಶಂಕರ್ ಸೇರಿದಂತೆ ಜಿಲ್ಲೆಯ ಬಸವಪರ ಸಂಘಟನೆಗಳ ಮುಖಂಡರು ಶಿಕ್ಷಣ ಪ್ರೇಮಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಡಾಕ್ಟರ್ ಮಹದೇವಸ್ವಾಮಿ ಕೆಂಪನಪುರ ರವರ ಈ ಸಾಧನೆ ಚಾಮರಾಜನಗರ ಜಿಲ್ಲೆಯ ಶಿಕ್ಷಣ ಕ್ಷೇತ್ರ ಕೃಷಿ ಸಮುದಾಯ ಹಾಗೂ ಬೆಲ್ಲ ಉತ್ಪಾದನೆ ಕ್ಷೇತ್ರಕ್ಕೆ ಹೊಸ ಗೌರವ ತಂದುಕೊಟ್ಟಿದ್ದು ಗ್ರಾಮೀಣ ಬದುಕಿನ ಅನುಭವವನ್ನು ವೈಜ್ಞಾನಿಕ ಸಂಶೋಧನೆಗೆ ಬೆಸೆದ ಅಪರೂಪದ ಸಾಧನೆಯಾಗಿ ಎಲ್ಲರಿಂದಲೂ ಪ್ರಸಂಶೆಗೆ ಪಾತ್ರರಾಗಿದ್ದಾರೆ.
ನಿಮ್ಮ ಧ್ವನಿ ನಮ್ಮ ಸುದ್ದಿ 📢
G1 NEWS Honnur - ಜನರ ಪರ ಸಮಸ್ಯೆ ಇದ್ರೆ ತಕ್ಷಣ ತಿಳಿಸಿ: 9964481518 Follow ಮಾಡಿ ಮತ್ತು Share ಮಾಡಿ 🙏


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ