ಹಿರಿಯರನ್ನು ಗೌರವಿಸಿ, ಅವರ ‘ನೆಮ್ಮದಿ’ಗೆ ಸಹಕರಿಸಿ: ಕದಂಬ ನಾ. ಅಂಬರೀಷ್ ಮನವಿ
ವರದಿ: ಗೂಳಿಪುರ ಮಣಿಕಂಠ ನಾಯಕ್
ಚಾಮರಾಜನಗರ: ಜೀವನದುದ್ದಕ್ಕೂ ಕುಟುಂಬ ಮತ್ತು ಸಮಾಜದ ಏಳಿಗೆಗಾಗಿ ಶ್ರಮಿಸಿದ ಹಿರಿಯ ನಾಗರಿಕರನ್ನು ಗೌರವದಿಂದ ಕಾಣುವುದು ಪ್ರತಿಯೊಬ್ಬರ ಕರ್ತವ್ಯ. ಅವರ ಜೀವನದ ಸಂಧ್ಯಾಕಾಲ ನೆಮ್ಮದಿ ಮತ್ತು ಸಂತೋಷದಿಂದ ಕೂಡಿರಲು ಎಲ್ಲರೂ ಸಹಕಾರ ನೀಡಬೇಕು ಎಂದು ಜನಮಿತ್ರ ಸೇವಾ ಟ್ರಸ್ಟ್ ಅಧ್ಯಕ್ಷ ಕದಂಬ ನಾ. ಅಂಬರೀಷ್ ಮನವಿ ಮಾಡಿದರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಉದ್ಯಾನವನದ ಸಮೀಪ ಜನಮಿತ್ರ ಸೇವಾ ಟ್ರಸ್ಟ್ ವತಿಯಿಂದ ನಡೆಸಲಾಗುತ್ತಿರುವ ನೆಮ್ಮದಿ ಹಿರಿಯ ನಾಗರಿಕರ ಆರೈಕೆ ಕೇಂದ್ರದ ಕುರಿತು ಮಾತನಾಡಿದ ಅವರು, ವೃದ್ಧಾಪ್ಯದಲ್ಲಿ ಹಿರಿಯರಿಗೆ ಪ್ರೀತಿ, ಆರೈಕೆ ಮತ್ತು ಆತ್ಮೀಯತೆಯ ಅಗತ್ಯ ಹೆಚ್ಚಿರುತ್ತದೆ. ಅವರನ್ನು ನಿರ್ಲಕ್ಷಿಸದೆ ಗೌರವಯುತ ಜೀವನ ನಡೆಸಲು ನೆರವಾಗಬೇಕು ಎಂದರು.
ಹಿರಿಯರ ಮುಖದಲ್ಲಿ ನಗು ಮೂಡಿಸುವ ಸೇವೆಯೇ ನಿಜವಾದ ಮಾನವೀಯ ಸೇವೆ. ಅನಾಥ, ನಿರ್ಗತಿಕ ಹಾಗೂ ಆರೈಕೆಯ ಅಗತ್ಯವಿರುವ ಹಿರಿಯರ ನೆಮ್ಮದಿಗಾಗಿ ನಮ್ಮ ಕೇಂದ್ರ ಶ್ರಮಿಸುತ್ತಿದೆ. ಸಾರ್ವಜನಿಕರು, ದಾನಿಗಳು ಹಾಗೂ ಸಂಘ-ಸಂಸ್ಥೆಗಳು ಈ ಮಾನವೀಯ ಕಾರ್ಯಕ್ಕೆ ಕೈಜೋಡಿಸಬೇಕು” ಎಂದು ಕದಂಬ ನಾ. ಅಂಬರೀಷ್ ಕೋರಿದರು.
ನೆಮ್ಮದಿ ಕೇಂದ್ರದಲ್ಲಿ ಹಿರಿಯ ನಾಗರಿಕರಿಗೆ ಸುರಕ್ಷಿತ ಹಾಗೂ ಶಾಂತಿಯುತ ವಾತಾವರಣ ಕಲ್ಪಿಸುವ ಉದ್ದೇಶ ಹೊಂದಲಾಗಿದ್ದು, ಸಮಾಜದ ಸಹೃದಯರು ಕೇಂದ್ರದ ಸೇವಾ ಚಟುವಟಿಕೆಗಳಿಗೆ ಪ್ರೋತ್ಸಾಹ ಮತ್ತು ಸಹಕಾರ ನೀಡುವಂತೆ ಮನವಿ ಮಾಡಿದರು.
ನಿಮ್ಮ ಧ್ವನಿ ನಮ್ಮ ಸುದ್ದಿ 📢
G1 NEWS Honnur - ಜನರ ಪರ ಸಮಸ್ಯೆ ಇದ್ರೆ ತಕ್ಷಣ ತಿಳಿಸಿ: 9964481518 Follow ಮಾಡಿ ಮತ್ತು Share ಮಾಡಿ 🙏

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ