ಯಳಂದೂರು ಗ್ರೀನ್ ವೇ ರೋಟರಿ 2026 27ನೇ ಸಾಲಿನ ಅಧ್ಯಕ್ಷರಾಗಿ ರೋ. ರಿತೇಶ್ ಎಂ ಎಸ್ ಅಧಿಕಾರ ಸ್ವೀಕಾರ.
ಯಳಂದೂರು ಗ್ರೀನ್ ವೇ ರೋಟರಿ 2026 27ನೇ ಸಾಲಿನ ಅಧ್ಯಕ್ಷರಾಗಿ ರೋ. ರಿತೇಶ್ ಎಂ ಎಸ್ ಪದಗ್ರಹಣ.
ಯಳಂದೂರು: ರೋಟರಿ ಸಂಸ್ಥೆ ಯಳಂದೂರು ರೋಟರಿ ಗ್ರೀನ್ ವೇ ವತಿಯಿಂದ 2026-27ನೇ ಸಾಲಿನ ಅಧ್ಯಕ್ಷರಾಗಿ ರೋ. ರಿತೇಶ್ ಎಂ ಎಸ್ ಹಾಗೂ ನೂತನ ಪದಾಧಿಕಾರಿಗಳ ಪದವಿ ಪ್ರಧಾನ ಸಮಾರಂಭವು ಸೋಮವಾರ ಪಟ್ಟಣದ ಶಂಕರ ಭವನದಲ್ಲಿ ಅದ್ದೂರಿಯಾಗಿ ನಡೆಯಿತು ಕಾರ್ಯಕ್ರಮವನ್ನು ಜಿಲ್ಲಾ ಗವರ್ನರ್ 2027-28 ಎಂ ಪಿ ಎಚ್ ಎಫ್ ರೋ. ಯಶಸ್ವಿ ಎಸ್ ಸೋಮಶೇಖರ್ ಅವರು ಉದ್ಘಾಟಿಸಿ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಪದವಿ ಪ್ರಮಾಣವಚನ ಬೋಧಿಸಿದರು.
ಸಹಾಯಕ ಗವರ್ನರ್ ಎಂ ಪಿ ಹೆಚ್ ಎಫ್ ರೋ. ವೈ ಹೆಚ್ ಹನುಮಂತೇಗೌಡ ಹಾಗೂ ವಲಯ ಸೇನಾನಿ ಪಿ ಹೆಚ್ ಎಫ್ ರೋ. ಆರ್ ದಕ್ಷಿಣಮೂರ್ತಿ ಅವರು ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು
ನಿಕಟ ಪೂರ್ವ ಅಧ್ಯಕ್ಷರು ರೋ. ನಿರಂಜನಸ್ವಾಮಿ ವೈ ಜಿ ಹಾಗೂ ಕಾರ್ಯದರ್ಶಿ ರೋ. ಪುಟ್ಟರಾಜು ಸಿ ಅವರು ಸ್ವಾಗತಿಸಿದರು ನೂತನ ಕಾರ್ಯದರ್ಶಿ ನಾಗರಾಜು ವೈ ಕೆ ಮೋಳೆ ಅವರು ಅಧಿಕಾರ ಸ್ವೀಕರಿಸಿದರು.
2026-27ನೇ ಸಾಲಿನ ಇತರೆ ಪದಾಧಿಕಾರಿಗಳಾಗಿ ಉಪಾಧ್ಯಕ್ಷರು ರೋ ಶಿವಕುಮಾರ್ ಎನ್, ಖಜಾಂಚಿ ರೋ ಬಂಗಾರಸ್ವಾಮಿ ಆರ್, ದಂಡಯುಧಪಾಣಿ ರೋ.ಮಹದೇವ ಎಸ್ ಅವರು ಆಯ್ಕೆಯಾಗಿದ್ದಾರೆ. ಸಂಘ ಸೇವೆ, ವೃತ್ತಿ ಸೇವೆ ಅಂತರಾಷ್ಟ್ರೀಯ ಸೇವೆ ಮತ್ತು ಯುವಜನ ಸೇವೆಗೆ ಪ್ರತ್ಯೇಕ ನಿರ್ದೇಶಕರನ್ನು ನೇಮಿಸಲಾಗಿದೆ "ರೋಟರಿ ಸೇವಾ ಕಾರ್ಯದಲ್ಲಿ ನಾವೆಲ್ಲರೂ ಭಾಗಿಯಾಗೋಣ" ಎಂಬ ಧ್ಯೇಯದೊಂದಿಗೆ ಈ ವರ್ಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ನೂತನ ಅಧ್ಯಕ್ಷರಾದ ರೋ. ರಿತೇಶ್ ತಿಳಿಸಿದರು. ಕಾರ್ಯಕ್ರಮದಲ್ಲಿ ರೋಟರಿ ಸದಸ್ಯರು ಹಿತೈಷಿಗಳು ಹಾಗೂ ಗಣ್ಯರು ಭಾಗವಹಿಸಿದ್ದರು.
G1News ವತಿಯಿಂದ ಅಧ್ಯಕ್ಷರಾದ ರೋ. ರಿತೇಶ್ ಮತ್ತು ಪದಾಧಿಕಾರಿಗಳಿಗೆ ಅಭಿನಂದನೆಗಳು 💐💐
ನಿಮ್ಮ ಧ್ವನಿ ನಮ್ಮ ಸುದ್ದಿ 📢
G1 NEWS Honnur - ಜನರ ಪರ ಸಮಸ್ಯೆ ಇದ್ರೆ ತಕ್ಷಣ ತಿಳಿಸಿ: 9964481518 Follow ಮಾಡಿ ಮತ್ತು Share ಮಾಡಿ 🙏

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ