ಶಿವಶರಣ ಹಡಪದ ಅಪ್ಪಣ್ಣ ಜಯಂತಿ
ಶಿವಶರಣ ಹಡಪದ ಅಪ್ಪಣ್ಣ ಜಯಂತಿ
ಗುಂಡ್ಲುಪೇಟೆ : ತಾಲೂಕಿನ ಬೇಗೂರು ಹೋಬಳಿಯ ಸವಿತಾ ಸಮಾಜ ಬಳಗದ ವತಿಯಿಂದ ಶ್ರೀ ಶಿವಶರಣ ಹಡಪದ ಅಪ್ಪಣ್ಣ ಅವರ ಜಯಂತಿ ಆಚರಿಸಲಾಯಿತು.
ಬೇಗೂರು ಗ್ರಾಮದ ನಾಗಶೆಟ್ಟಿ ಕಾಂಪ್ಲೆಕ್ಸ್ ಆವರಣದಲ್ಲಿ ಸಮಾವೇಶಗೊಂಡ ಬೇಗೂರು ಹೋಬಳಿಯ ಸುತ್ತಮುತ್ತಲ ಗ್ರಾಮಗಳ ಸವಿತಾ ಸಮಾಜ ಬಳಗದ ಕುಲ ಬಾಂಧವರು ಶ್ರೀ ಶಿವಶರಣ ಹಡಪದ ಅಪ್ಪಣ್ಣ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸಿಹಿ ಹಂಚಿ ಜಯಂತಿ ಆಚರಿಸಿದರು.
ನಂತರ ಸಂಘದ ಅಧ್ಯಕ್ಷರಾದ ಸುರೇಶ್ ಮಾತನಾಡಿ, ಹೋಬಳಿಯ ಸಮಾಜ ಕುಲಬಾಂಧವರು ಒಟ್ಟಾಗಿ ಒಗ್ಗಟ್ಟಿನಿಂದ ಅಪ್ಪಣ್ಣ ಅವರ ಜಯಂತಿಯನ್ನು ಇಂದು ಆಚರಿಸಲಾಗಿದೆ. ಮುಂದಿನ ದಿನಗಳಲ್ಲಿ ಸಮಾಜದ ಮೇಲೆ ಬೆಳಕು ಚೆಲ್ಲುವಂತಹ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಹಾಗೂ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು ಎಂದರು.
ಸವಿತಾ ಸಮಾಜದ ಕುಲಬಾಂಧವರಿಗೆ ರಾಜಕೀಯ ಸ್ಥಾನಮಾನ ಕಲ್ಪಿಸುವಂತೆ ಆಗ್ರಹಿಸಿ ಬೇಗೂರು ಹೋಬಳಿ ಕೇಂದ್ರದಲ್ಲಿ ಸವಿತಾ ಸಮಾಜದ ಸಭೆ ಸಮಾರಂಭ, ಅಪ್ಪಣ್ಣ ಅವರ ಜಯಂತಿ ಹಾಗೂ ವಿವಿಧ ಕಾರ್ಯಕ್ರಮಗಳಿಗಾಗಿ ಸಮುದಾಯ ಭವನ ನಿರ್ಮಿಸಿ ಕೊಡುವಂತೆ ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ರವರಲ್ಲಿ ಮನವಿ ಮಾಡಿದ್ದು ಮುಂದಿನ ದಿನಗಳಲ್ಲಿ ಸಮುದಾಯ ಭವನವನ್ನು ನಿರ್ಮಿಸುವುದಾಗಿ ತಿಳಿಸಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ವಿಜಯ ಕರ್ನಾಟಕ ಪತ್ರಿಕೆ ವರದಿಗಾರ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಖಜಾಂಜಿ ಮಾಜಿ ಸಚಿವ ದಿವಂಗತ ಎಚ್,ಎಸ್ ಮಹದೇವ ಪ್ರಸಾದ್ ದತ್ತಿ ಪ್ರಶಸ್ತಿ ಪುರಸ್ಕೃತಗೆ ಭಾಜನರಾದ ಬೇಗೂರು ಮಣಿಕಂಠ ಅವರನ್ನು ಸವಿತಾ ಸಮಾಜದ ವತಿಯಿಂದ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು.
ಜಯಂತಿಯ ಸಮಾರಂಭದಲ್ಲಿ ಕಾರ್ಯದರ್ಶಿ ರಾಜೇಂದ್ರ, ಉಪಾಧ್ಯಕ್ಷ ರಮೇಶ್, ಶಿವಣ್ಣ, ಶಿವಮೂರ್ತಿ, ಖಜಾಂಜಿ ಸತೀಶ್, ಸಂಚಾಲಕ ಗಿರೀಶ್, ಸಿದ್ದರಾಜು, ಪ್ರಧಾನ ಸಂಚಾಲಕ ವೆಂಕಟೇಶ್, ಕೇರಳ ವೆಂಕಟೇಶ್, ಗೋಪಾಲಣ್ಣ, ಮಾಲ್ ಶೆಟ್ಟರು, ನಾಗ ಶೆಟ್ಟರು, ಸಿದ್ದಶೆಟ್ರು, ಸಂಚಾಲಕ ಸುನಿಲ್, ಗುಂಡ್ಲುಪೇಟೆ ಚಂದ್ರಣ್ಣ, ಗಣೇಶ್, ಕಸುವಿನಹಳ್ಳಿ ಮಹದೇವ, ಮಹದೇವಸ್ವಾಮಿ, ರಾಘವಾಪುರ ಮಾದಶೆಟ್ಟರು, ನಾಗೇಂದ್ರ, ಸೇರಿದಂತೆ ಸಮಾಜದ ಹಿರಿಯ ಮುಖಂಡರು ಹಾಗೂ ಹೋಬಳಿಯ ಸುತ್ತ ಮುತ್ತಲ ಗ್ರಾಮಗಳಾದ ಸೋಮಹಳ್ಳಿ, ಹೊರೆಯಾಲ, ಕಬ್ಬಹಳ್ಳಿ, ಯಡವನಹಳ್ಳಿ, ರಾಘವಾಪುರ, ನಿಟ್ರೆ, ಕುಲಗಾಣ, ಚಿಕ್ಕಾಟಿ, ಸೇರಿದಂತೆ ಹೋಬಳಿಯ ಹಲವು ಗ್ರಾಮಗಳ ಸವಿತಾ ಸಮಾಜದ ಕುಲಬಾಂಧವರು ಹಿರಿಯ ಮುಖಂಡರು ಹಾಜರಿದ್ದರು.
ನಿಮ್ಮ ಧ್ವನಿ ನಮ್ಮ ಸುದ್ದಿ 📢
G1 NEWS Honnur - ಜನರ ಪರ ಸಮಸ್ಯೆ ಇದ್ರೆ ತಕ್ಷಣ ತಿಳಿಸಿ: 9964481518 Follow ಮಾಡಿ ಮತ್ತು Share ಮಾಡಿ 🙏

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ