ಶಾಸಕ ಎ ಆರ್ ಕೃಷ್ಣ ಮೂರ್ತಿಯವರಿಗೆ ಸಚಿವ ಸ್ಥಾನಕ್ಕೆ ಅಗ್ರಹ

 

ಶಾಸಕ ಎ ಆರ್ ಕೃಷ್ಣ ಮೂರ್ತಿಯವರಿಗೆ ಸಚಿವ ಸ್ಥಾನಕ್ಕೆ ಅಗ್ರಹ 

ಸಂತೇಮರಹಳ್ಳಿ : ಇಡೀ ರಾಜ್ಯದಲ್ಲಿಯೇ ಮೀಸಲು ಕ್ಷೇತ್ರದಿಂದ ಅತ್ಯಧಿಕ ಮತಗಳನ್ನು ಪಡೆದು ಆಯ್ಕೆಯಾಗಿರುವ ಹಾಗೂ ರಾಜಕೀಯ ಅಜಾತಶತ್ರು ಪ್ರಾಮಾಣಿಕ ದಕ್ಷ ಆಡಳಿತಗಾರರಾಗಿದ್ದ ದಿವಂಗತ ಶ್ರೀ ಬಿ ರಾಚಯ್ಯನವರ ಮಗನಾದ ಶ್ರೀ ಎ ಆರ್ ಕೃಷ್ಣಮೂರ್ತಿಯವರಿಗೆ ಮುಂಬರುವ ಸಚಿವ ಸಂಪುಟ ಪುನರ್ ರಚನೆ ಸಂದರ್ಭದಲ್ಲಿ ಸಚಿವರನ್ನಾಗಿ ಮಾಡಬೇಕೆಂದು ಕಾಂಗ್ರೆಸ್ ಹೈಕಮಾಂಡ್, ಕೆಪಿಸಿಸಿ ಅಧ್ಯಕ್ಷರು ಮತ್ತು ಸಂಭಾವ್ಯ ಮುಖ್ಯಮಂತ್ರಿಯವರನ್ನು ಒತ್ತಾಯಿಸುತ್ತೇವೆ..
 ಮಾನ್ಯ ಶಾಸಕರಾದ ಶ್ರೀ ಎ ಆರ್ ಕೃಷ್ಣಮೂರ್ತಿಯವರು ಮೈಸೂರು ಮತ್ತು ಬೆಂಗಳೂರು ವಿಭಾಗದಲ್ಲಿ ತನ್ನದೇಯಾದ ವರ್ಚಸ್ಸು ಹೊಂದಿದ್ದು ಚಾಮರಾಜನಗರ ಜಿಲ್ಲೆಯ ನಾಡಿಮಿಡಿತ ಅರಿತವರಾಗಿದ್ದಾರೆ ಇವರಿಗೆ ರಕ್ತಗತವಾಗಿ ಆಡಳಿತಾತ್ಮಕ ಅನುಭವವಿದ್ದು,ಇವರು ದಕ್ಷತೆ ಮತ್ತು ಪ್ರಾಮಾಣಿಕತೆವುಳ್ಳ ಜನಪರ ರಾಜಕಾರಣಿಯಾಗಿದ್ದಾರೆ.. ಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳು ತೊಡಗಿಸಿಕೊಂಡಿರುವ ಇವರನ್ನು ಸಚಿವರನ್ನಾಗಿ ಮಾಡುವ ಮೂಲಕ ಚಾಮರಾಜನಗರ ಜಿಲ್ಲಾ ಕೇಂದ್ರವಾದ ನಂತರ ಇದುವರೆಗೆ ಒಮ್ಮೆಯೂ ದಲಿತ ಸಮುದಾಯಕ್ಕೆ ಸೇರಿದ ಶಾಸಕರುಗಳಿಗೆ ಸಚಿವರಾಗುವ ಅವಕಾಶ ಸಿಕ್ಕಿರುವುದಿಲ್ಲ ಅಲ್ಲದೆ  ಕೊಳ್ಳೇಗಾಲ ಕ್ಷೇತ್ರದ ಯಾವೊಬ್ಬ ಜನಪ್ರತಿನಿಧಿಯೂ ಇದುವರೆಗೆ ಸಚಿವರಾಗಿಲ್ಲದಿರುವ ಕೊರತೆಯನ್ನು ನೀಗಿಸುವ ಸಲುವಾಗಿ ಬೇಕಾಗಿರುವ ಈ ಎಲ್ಲಾ ಹಿನ್ನೆಲೆಯನ್ನು ಕಾಂಗ್ರೆಸ್ ಹೈಕಮಾಂಡ್ ಮನಗಂಡು ಎ ಆರ್ ಕೃಷ್ಣಮೂರ್ತಿಯವರನ್ನು ಸಚಿವ ಸಂಪುಟ ಪುನರ್ ರಚನೆ ಸಂದರ್ಭದಲ್ಲಿ ಸಚಿವರನ್ನಾಗಿ ಮಾಡಿ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರ ಜವಾಬ್ದಾರಿ ವಹಿಸಬೇಕೆಂದು ಈ ಮೂಲಕ ಪ್ಯಾಕ್ಸ್ ಬ್ಯಾಂಕ್ ನಿರ್ದೇಶಕರ ಕೆ  ವಿ  ದೇವೇಂದ್ರ  ಹಾಗೂ ಕೆ ಎಸ್  ಮೂರ್ತಿ, ಕೆ ಎಂ ರಾಜು, ಕೆ ಎಸ್ ರಂಗಸ್ವಾಮಿ, ಕೇಶವ ಮೂರ್ತಿ  ಒತ್ತಾಯ ಮಾಡಿದ್ದಾರೆ. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹರವೆ ಶ್ರೀ ಗುರುಮಲ್ಲೇಶ್ವರ ಅನುದಾನಿತ ಪ್ರೌಢಶಾಲೆ ಯಲ್ಲಿ, ಅಂತಾರಾಷ್ಟ್ರೀಯ ಯೋಗ ದಿನಾಚರಣೆ.

ಇನ್‌ಸ್ಪೈರ್ ಅವಾರ್ಡ್‌ಗೆ ಯಳಂದೂರಿನ 5 ವಿದ್ಯಾರ್ಥಿಗಳು ಆಯ್ಕೆ: ಮೆಲ್ಲಹಳ್ಳಿ ಸರ್ಕಾರಿ ಶಾಲೆಗೆ ರಾಷ್ಟ್ರಮಟ್ಟದ ಗರಿ`

ಹೊನ್ನೂರು ಪ್ರಕಾಶ್ ಬಿಗ್ ಬಾಸ್ ಕನ್ನಡಕ್ಕೆ ಬರಲಿ: ಚಾಮರಾಜನಗರ ರೈತ ಹೋರಾಟಗಾರನಿಗೆ ಅಭಿಮಾನಿಗಳ ಆಗ್ರಹ