ಸಿದ್ದರಾಮಯ್ಯರವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿರುವ ಹೈಕಮಾಂಡ್ ನಡೆಗೆ ಆಕ್ರೋಶ.
ಸಿದ್ದರಾಮಯ್ಯರವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿರುವ ಹೈಕಮಾಂಡ್ ನಡೆಗೆ ಆಕ್ರೋಶ : ರೈತ ಮುಖಂಡ ಮಹೇಶ್ ಕುಮಾರ್
ಸಂತೇಮರಹಳ್ಳಿ : ಮುಖ್ಯ ಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯರವರನ್ನು ಕೆಳಗೆ ಇಳಿಸಿರುವುದನ್ನು ಖಂಡಿಸಿ ಸಂತೆಮರಹಳ್ಳಿ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ( ಹಸಿರು ಸೇನೆ ) ಹಾಗೂ ವಿಶ್ವ ರೈತ ಸಂಘಟನೆ ಸದಸ್ಯ ಮಹೇಶ್ ಕುಮಾರ್ ಪತ್ರಿಕಾಗೋಷ್ಠಿಯನ್ನು ನಡೆಸಿದರು.
ಕರ್ನಾಟಕದಲ್ಲಿ ಸುಭದ್ರಾ ಸರ್ಕಾರ ನಡೆಸುತ್ತಿದ್ದ ಸಿದ್ದರಾಮಯ್ಯರವರನ್ನು ಹೊರಗೆ ಹಾಕಿರುವ ಕಾಂಗ್ರೆಸ್ ಹೈಕಮಾಂಡ್ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಡವರ ಹಾಗೂ ದೀನ ದಲಿತ, ರೈತರ ಆಶಾ ಕಿರಣವಾಗಿ ಕರ್ನಾಟಕ ಸರ್ಕಾರವನ್ನು ಅತ್ಯುತ್ತಮವಾಗಿ ನಿರ್ವಹಿಸುತ್ತಿದ್ದರು ಕೇವಲ ಮೂರು ವರ್ಷಗಲ್ಲಿ ಅಧಿಕಾರದಿಂದ ಕೆಳಗೆ ಹಾಕಿರುವುದು ಖಂಡನೀಯ ಎಂದರು.
ಇಂದಿಗೂ ಸಿದ್ದರಾಮಯ್ಯ ಹೆಸರಲ್ಲಿ ಕರ್ನಾಟಕದಲ್ಲಿ ಎರಡು ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಕಳಂಕ ರಹಿತ ಮುಖ್ಯ ಮಂತ್ರಿ ಎಂದೇ ಕ್ಯಾತಿಯಾಗಿರುವ ಇವರನ್ನ ಕೇವಲ ಮೂರು ವರ್ಷದಲ್ಲಿ ಕಳೆಗೆ ಇಳಿಯಬೇಕು ಎಂದು ಒತ್ತಡ ಹಾಕಿ ಇಳಿಸಿರುವುದು ಹೈಕಮಾಂಡ್ ನಡೆ ಎಷ್ಟು ಸರಿ ಎಂದು ಕಿಡಿ ಕಾರಿದರು.
ಸಿದ್ದರಾಮಯ್ಯನವರ ಅವಧಿಯಲ್ಲಿ ಮಾಡಿರುವ ಗ್ಯಾರಂಟಿ ಯೋಜನೆಗೆ ಪ್ರತಿ ವರ್ಷ 60 ಸಾವಿರ ಕೋಟಿ ವೆಚ್ಚ ಮಾಡಿ ಬಡವರ ದಾರಿ ದೀಪವಾಗಿದ್ದರೆ ಅಂತವರನ್ನ ನಡೆಸಿಕೊಂಡ ರೀತಿ ನಿಜಕ್ಕೂ ರಾಜ್ಯದ ಜನತೆಗೆ ಬಹಳ ನೋವನ್ನುಂಟು ಮಾಡಿದೆ,
ದೇಶದ ಪ್ರತಿಯೊಂದು ರಾಜ್ಯಗಳಲ್ಲಿ ಇವರ ಗ್ಯಾರಂಟಿ ಯೋಜನೆಯನ್ನ ಮಾದರಿಯಾಗಿ ಅಳವಡಿಸಿಕೊಂಡು ಬೇರೆ ಪಕ್ಷಗಳು ಅಧಿಕಾರಕ್ಕೆ ನಡೆಸುತ್ತಿರುವುದನ್ನು ಕಣ್ಣಾರೆ ಕಂಡಿದ್ದೀವಿ.
ಒಬ್ಬ ಪ್ರಾಮಾಣಿಕ ಹಾಗೂ ದಕ್ಷ ಮುಖ್ಯ ಮಂತ್ರಿಯನ್ನು ಕೆಳಗೆ ಇಳಿಸಿ ಕಾಂಗ್ರೆಸ್ ಹೈಕಮಾಂಡ್ ತಪ್ಪು ಮಾಡಿದೆ ಆದರೆ ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಹಿನ್ನೆಡೆ ಅನುಭವಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.ಈ ಸಂದರ್ಭದಲ್ಲಿ ಎಲ್ ನಾಗರಾಜ್, ಮಲ್ಲೇಶ್ ಉಪಸ್ಥಿತರಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ