ನೂತನ ಸಿಎಂ ಪದಗ್ರಹಣ ಸಂಭ್ರಮಾಚರಣೆ.
ನೂತನ ಸಿಎಂ ಆಗಿ ಡಿ.ಕೆ.ಶಿವಕುಮಾರ್ ಪದಗ್ರಹಣ ಸಂತೇಮರಹಳ್ಳಿಯಲ್ಲಿ ಡೈರಿ ನೌಕರರಿಂದ ಸಂಭ್ರಮಾಚರಣೆ
ಸಂತೇಮರಹಳ್ಳಿ : ರಾಜ್ಯದ 25ನೇ ನೂತನ ಮುಖ್ಯಮಂತ್ರಿ ಆಗಿ ಡಿ.ಕೆ.ಶಿವಕುಮಾರ್ ಪದಗ್ರಹಣ ಸ್ವೀಕರಿಸಿದ ಅಂಗವಾಗಿ ಚಾಮರಾಜನಗರ ಜಿಲ್ಲಾ ಹಾಲು ಉತ್ಪಾದಕ ಸಹಕಾರ ಸಂಘಗಳ ನೌಕಕರು ಸಂಭ್ರಮಾಚರಣೆ ಮಾಡಿದರು.
ಸಂತೇಮರಹಳ್ಳಿಯ ವೃತ್ತದಲ್ಲಿ ಜಮಾಯಿಸಿದ ನೌಕರರು ಪಟಾಕಿ ಸಿಡಿಸಿ, ಸಿಹಿಹಂಚಿ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪರ ಜೈಕಾರ ಕೂಗಿ ಸಂಭ್ರಮಿಸಿದರು.
ಚಾಮುಲ್ ಅಧ್ಯಕ್ಷ ಎಂ.ನಂಜುಂಡಸ್ವಾಮಿ ಮಾತನಾಡಿ, ರಾಜ್ಯದ ನೂತನ ಮುಖ್ಯಮಂತ್ರಿ ಆಗಿ ಡಿ.ಕೆ.ಶಿವಕುಮಾರ್ ಪದಗ್ರಹಣ ಸ್ವೀಕರಿಸಿದ ಹಿನ್ನಲೆಯಲ್ಲಿ ಚಾಮರಾಜನಗರ ಹಾಲು ಒಕ್ಕೂಟ, ನೌಕರರ ವರ್ಗ, ಅಭಿಮಾನಿಗಳ ಬಳಗದ ವತಿಯಿಂದ ಡಿ.ಕೆ.ಶಿವಕುಮಾರ್ ಅವರು ಪದಗ್ರಹಣ ಸ್ವೀಕರಿಸಿ ಬಳಿಕವೇ ವಿದ್ಯಾರ್ಥಿಗಳು, ಯವಕರು, ದಲಿತರು, ಶೋಷಿತರ ಪರ ಕೊಡುಗೆ ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾದರಿಯಲ್ಲಿ ಇನ್ನೂ ಅನೇಕ ಜನಪರ ಕಾರ್ಯಕ್ರಮಗಳನ್ನು ರೂಪಿಸಿ ಅವರ ಅವಧಿಯಲ್ಲಿ ಯಶ್ವಸಿಯಾಗಿ ಪೂರ್ಣಗೊಳಿಸಲಿ ಎಂದು ಆಶಿಸಿದರು.
ಬೂದಂಬಳ್ಳಿ ಶಂಕರ್ ಮಾತನಾಡಿ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಹಾಲು ಉತ್ಪಾದಕರ ಸಹಕಾರ ಸಂಘದ ನೌಕರರ ವತಿಯಿಂದ ಅಭಿನಂದನೆ ಸಲ್ಲಿಸುತ್ತೇವೆ. ಸಂಘದಲ್ಲಿ ರಾಜ್ಯಾದ್ಯಂತ ಲಕ್ಷಾಂತರ ನೌಕರರು ದುಡಿಯುತ್ತಿದ್ದೇವೆ. ನಮಗೆ ಯಾವುದೇ ಸೇವಾ ಭದ್ರತೆ ಇಲ್ಲ ಆಗಾಗಿ ಕೇವಲ 4,5 ಸಾವಿರ ಸಂಬಳದಿಂದ ಜೀವನ ಕಷ್ಟಕರವಾಗಿದೆ. ಈ ಕಡೆ ಒಕ್ಕೂಟದ ನಿರ್ದೇಶನ, ಸರ್ಕಾರದ ಆದೇಶಗಳನ್ನು ಪಾಲಿಸಿಕೊಂಡು ತುಂಬಾ ಕಷ್ಟದಿಂದ ಕೆಲಸ ಮಾಡಬೇಕಾದ ಪರಿಸ್ಥಿತಿ ಇದೆ. ಆಗಾಗಿ ನೂತನ ಮುಖ್ಯಮಂತ್ರಿಗಳು ಉದ್ಯೋಗ ಭದ್ರತೆ ಕಲ್ಪಿಸಿಕೊಡಬೇಕು ದಿವಗಂತ ಮಾಜಿ ಸಹಕಾರ ಇಲಾಖೆಯ ಸಚಿವರಾಗಿದ್ದ ಹೆಚ್.ಎಸ್.ಮಹದೇವಪ್ರಸಾದ್ ಅವರು ನೌಕರರಿಗೆ 10 ಪೈಸೆಯನ್ನು ಪ್ರೋತ್ಸಾಹ ಧನ ನೀಡುತ್ತಿದ್ದರು. ಅದನ್ನು ಸರ್ಕಾರ ಏಕಾಏಕಿ ನಿಲ್ಲಿಸಿದೆ. ನೀವು ಕನಿಷ್ಠ, ಲೀಟರ್ 50 ಪೈಸೆಯನ್ನು ಪ್ರೋತ್ಸಾಹ ಧನ ಕೊಡಿಸಿ ನೌಕರರ ಹಿತಕಾಯಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಚಾಮುಲ್ ನಿರ್ದೇಶಕ ಸದಾಶಿವಮೂರ್ತಿ, ನಾಮ ನಿರ್ದೇಶಕ ಕಮರವಾಡಿ ರೇವಣ್ಣ, ಎನ್ ರಿಚ್ ಮಹದೇವಸ್ವಾಮಿ ಹಾಗೂ ಚಾಮರಾಜನಗರ ಜಿಲ್ಲಾ ಹಾಲು ಉತ್ಪಾದಕರ ಸಂಘದ ನೌಕರರು ಭಾಗವಹಿಸಿದ್ದರು

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ