ನಂಜನಗೂಡು ದೇವಸ್ಥಾನದಲ್ಲಿ ಜನಪದ ಗೀತೆಗಳ ರಸದೌತಣ: ಯಳಂದೂರಿನ ಕೃಷ್ಣಮೂರ್ತಿ ತಂಡದಿಂದ ಮನರಂಜನೆ

 ವರದಿ: ಮಣಿಕಂಠ ನಾಯಕ್ ಗೂಳಿಪುರ 

ನಂಜನಗೂಡು ದೇವಸ್ಥಾನದಲ್ಲಿ ಜನಪದ ಗೀತೆಗಳ ರಸದೌತಣ ಯಳಂದೂರಿನ ಕೃಷ್ಣಮೂರ್ತಿ ತಂಡದಿಂದ ಮನರಂಜನೆ.

ನಂಜನಗೂಡು: ನಂಜನಗೂಡು ದೇವಸ್ಥಾನದಲ್ಲಿ ನಡೆದ ಗಿರಿಜಾ ಕಲ್ಯಾಣ ಮಹೋತ್ಸವದ ಸಮಾರೋಪ ದಿನದ ಅಂಗವಾಗಿ ಯಳಂದೂರು ತಾಲೂಕಿನ ಹೆಸರಾಂತ ಜನಪದ ಕಲಾವಿದ ಕೃಷ್ಣಮೂರ್ತಿ ಮತ್ತು ತಂಡದಿಂದ ಅದ್ಭುತ ಜನಪದ ಗೀತೆಗಳ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಭಕ್ತಿ, ಜನಪದ ಹಾಗೂ ಸಾಂಸ್ಕೃತಿಕ ಗೀತೆಗಳ ಮೂಲಕ ಕಲಾವಿದರು ನೆರೆದಿದ್ದ ಭಕ್ತರನ್ನು ರಂಜಿಸಿದರು. ವಿಶೇಷವಾಗಿ ಗ್ರಾಮೀಣ ಸಂಸ್ಕೃತಿಯನ್ನು ಬಿಂಬಿಸುವ ಹಾಡುಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು.


ಈ ಕಾರ್ಯಕ್ರಮದಲ್ಲಿ ಗಾಯಕ ಜೋಗಪ್ಪ, ತಬಲಾ ವಾದಕ ನಾರಾಯಣ್ (ಬದನವಾಳು), ಕೀಬೋರ್ಡ್ ವಾದಕ ವರಹಳ್ಳಿ ಪ್ರಕಾಶ್, ಕೀಬೋರ್ಡ್ ವಾದಕ ಇಮ್ಮವಿನಹುಂಡಿ ಶ್ರೀನಿವಾಸ್, ಹಾಗೂ ರಿದಮ್ ಪ್ಯಾಡ್ ವಾದಕ ಪುರುಷೋತ್ತಮ್ ತಮ್ಮ ಸಂಗೀತ ಸಹಕಾರದ ಮೂಲಕ ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು.

ಕಾರ್ಯಕ್ರಮದ ಬಳಿಕ ಕಲಾವಿದರಾದ ಕೃಷ್ಣಮೂರ್ತಿ ಹಾಗೂ ತಂಡವನ್ನು ದೇವಾಲಯದ ಆಡಳಿತ ಮಂಡಳಿ ಹಾಗೂ ಗಣ್ಯರು ಸನ್ಮಾನಿಸಿ ಗೌರವಿಸಿದರು. ಸಮಾರೋಪ ಸಮಾರಂಭದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜನಪದ ಸಂಗೀತದ ಸೊಬಗನ್ನು ಸವಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹರವೆ ಶ್ರೀ ಗುರುಮಲ್ಲೇಶ್ವರ ಅನುದಾನಿತ ಪ್ರೌಢಶಾಲೆ ಯಲ್ಲಿ, ಅಂತಾರಾಷ್ಟ್ರೀಯ ಯೋಗ ದಿನಾಚರಣೆ.

ಇನ್‌ಸ್ಪೈರ್ ಅವಾರ್ಡ್‌ಗೆ ಯಳಂದೂರಿನ 5 ವಿದ್ಯಾರ್ಥಿಗಳು ಆಯ್ಕೆ: ಮೆಲ್ಲಹಳ್ಳಿ ಸರ್ಕಾರಿ ಶಾಲೆಗೆ ರಾಷ್ಟ್ರಮಟ್ಟದ ಗರಿ`

ಹೊನ್ನೂರು ಪ್ರಕಾಶ್ ಬಿಗ್ ಬಾಸ್ ಕನ್ನಡಕ್ಕೆ ಬರಲಿ: ಚಾಮರಾಜನಗರ ರೈತ ಹೋರಾಟಗಾರನಿಗೆ ಅಭಿಮಾನಿಗಳ ಆಗ್ರಹ