ಕೆಪಿಎಸ್ ಯಳಂದೂರು ಟೌನ್ ಶಾಲೆಯಲ್ಲಿ ಎನ್‌ಸಿಸಿ ವಾಯು ದಳದ ಅಧಿಕಾರಿಗಳಿಂದ ಆಯ್ಕೆ ಪ್ರಕ್ರಿಯೆ

ವರದಿ: ಮಣಿಕಂಠ ನಾಯಕ್ ಗೂಳಿಪುರ 

ಕೆಪಿಎಸ್ ಯಳಂದೂರು ಟೌನ್ ಶಾಲೆಯಲ್ಲಿ ಎನ್‌ಸಿಸಿ ವಾಯು ದಳದ ಅಧಿಕಾರಿಗಳಿಂದ ಆಯ್ಕೆ ಪ್ರಕ್ರಿಯೆ

ಯಳಂದೂರು: ಪಟ್ಟಣದ ಕೆಪಿಎಸ್ (KPS) ಶಾಲೆಗೆ ಎನ್‌ಸಿಸಿ ವಾಯು ದಳದ ಅಧಿಕಾರಿಗಳಾದ GCI ದಿವ್ಯ ಕೆ.ಪಿ., SGT ವಿವೇಕ್ ರಂಜನ್ ಹಾಗೂ SGT ಮಾರುತಿ ಭೇಟಿ ನೀಡಿ, 8ನೇ ತರಗತಿ ವಿದ್ಯಾರ್ಥಿಗಳಿಗೆ ಎನ್‌ಸಿಸಿ ಸೇರ್ಪಡೆ ಕುರಿತು ಅರಿವು ಮೂಡಿಸಿದರು.



ಈ ವೇಳೆ ಎನ್‌ಸಿಸಿ ನೋಂದಣಿ ವಿಧಾನ, ಆಯ್ಕೆ ಪ್ರಕ್ರಿಯೆ, ತರಬೇತಿ ಹಂತಗಳು ಹಾಗೂ ಎನ್‌ಸಿಸಿಯಿಂದ ವಿದ್ಯಾರ್ಥಿಗಳಿಗೆ ದೊರೆಯುವ ಅವಕಾಶಗಳ ಕುರಿತು ಅಧಿಕಾರಿಗಳು ಸಂಕ್ಷಿಪ್ತ ಮಾಹಿತಿ ನೀಡಿದರು.

ನಂತರ ಎನ್‌ಸಿಸಿಗೆ ಹೊಸದಾಗಿ ಸೇರ್ಪಡೆಯಾಗಲು ಆಸಕ್ತಿ ವ್ಯಕ್ತಪಡಿಸಿದ ವಿದ್ಯಾರ್ಥಿಗಳಿಗೆ ದೈಹಿಕ ಪರೀಕ್ಷೆ, ಲಿಖಿತ ಪರೀಕ್ಷೆ ಹಾಗೂ ಮೌಖಿಕ ಪರೀಕ್ಷೆ ನಡೆಸಿ, ಅರ್ಹ ವಿದ್ಯಾರ್ಥಿಗಳ ನೋಂದಣಿ ಪ್ರಕ್ರಿಯೆಯನ್ನು ಕೈಗೊಂಡರು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಲೆಯ ಉಪ ಪ್ರಾಂಶುಪಾಲರಾದ ಶ್ರೀ ನಂಜುಂಡಯ್ಯ, ಎನ್‌ಸಿಸಿ 'ಎ' ಪ್ರಮಾಣಪತ್ರ ಪಡೆಯುವುದರಿಂದ ಉನ್ನತ ಶಿಕ್ಷಣ, ಉದ್ಯೋಗ ಹಾಗೂ ಸಶಸ್ತ್ರ ಪಡೆಗಳ ನೇಮಕಾತಿಯಲ್ಲಿ ದೊರೆಯುವ ಅನುಕೂಲಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಶಾಲೆಯ ಸಹ ಶಿಕ್ಷಕರು ಉಪಸ್ಥಿತರಿದ್ದು, ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹರವೆ ಶ್ರೀ ಗುರುಮಲ್ಲೇಶ್ವರ ಅನುದಾನಿತ ಪ್ರೌಢಶಾಲೆ ಯಲ್ಲಿ, ಅಂತಾರಾಷ್ಟ್ರೀಯ ಯೋಗ ದಿನಾಚರಣೆ.

ಇನ್‌ಸ್ಪೈರ್ ಅವಾರ್ಡ್‌ಗೆ ಯಳಂದೂರಿನ 5 ವಿದ್ಯಾರ್ಥಿಗಳು ಆಯ್ಕೆ: ಮೆಲ್ಲಹಳ್ಳಿ ಸರ್ಕಾರಿ ಶಾಲೆಗೆ ರಾಷ್ಟ್ರಮಟ್ಟದ ಗರಿ`

ಹೊನ್ನೂರು ಪ್ರಕಾಶ್ ಬಿಗ್ ಬಾಸ್ ಕನ್ನಡಕ್ಕೆ ಬರಲಿ: ಚಾಮರಾಜನಗರ ರೈತ ಹೋರಾಟಗಾರನಿಗೆ ಅಭಿಮಾನಿಗಳ ಆಗ್ರಹ