ಸಂತೇಮರಹಳ್ಳಿ ಹೋಬಳಿ ವಿವಿಧ ಗ್ರಾಮಗಳ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆಗೆ ಚಾಲನೆ

ಸಂತೇಮರಹಳ್ಳಿ ಹೋಬಳಿ ವಿವಿಧ ಗ್ರಾಮಗಳ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆಗೆ ಚಾಲನೆ 

ಸಂತೇಮರಹಳ್ಳಿ: ಸಂತೇಮರಳ್ಳಿ-ಮೂಗೂರು, ಕಾವುದವಾಡಿ ಸೇತುವೆ ನಿರ್ಮಾಣ, ಬಾಗಳಿ, ಬಾಣಹಳ್ಳಿ- ಹೊಸೂರು ರಸ್ತೆ, ಜನ್ನೂರು-ಹೊಸೂರು ವ್ಯಾಪ್ತಿಯಲ್ಲಿರುವ  ರಸ್ತೆಗಳ ಅಭಿವೃದ್ದಿ ಹಾಗೂ ಗ್ರಾಮಾಂತರ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಆಯ್ದ ಭಾಗದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ 

ನಮ್ಮ ಕ್ಷೇತ್ರದ ವ್ಯಾಪ್ತಿಗೆ ಬರುವ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಿದ್ದೇನೆ ಎಂದು ಕ್ಷೇತ್ರದ ಶಾಸಕರಾದ ಎ ಆರ್ ಕೃಷ್ಣ ಮೂರ್ತಿ ತಿಳಿಸಿದರು.

ಸಂತೇಮರಹಳ್ಳಿ ಹೋಬಳಿಗೆ ಸೇರುವ ವಿವಿಧ ಗ್ರಾಮಗಳಲ್ಲಿ 10  ಕೋಟಿಗೂ ಅಧಿಕ  ರೂ. ವೆಚ್ಚದಲ್ಲಿ ಮೂಗೂರು ಸಂತೇಮರಹಳ್ಳಿ ರಸ್ತೆ,, ಬಾಗಳಿ ಬಾನಹಳ್ಳಿ ರಸ್ತೆ, ಜನ್ನೂರು ಹೊಸೂರು ರಸ್ತೆ ಸೇರಿದಂತೆ ಹಲವಾರು  ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ  ರಸ್ತೆ ಹಾಗೂ ಸೇತುವೆ ಅಭಿವೃದ್ಧಿ ಗಾಗಿ ಗುದ್ದಲಿ ಪೂಜೆ ನೆರವೇರಿಸಿ.

ನಂತರ  ಮಾತನಾಡಿದರು ಕಳೆದ ಮೂರು ವರ್ಷಗಳ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ನೂರಾರು ಕೋಟಿ ರೂ.ಗಳ ಅನುದಾನವನ್ನು ಜಾರಿ ಮಾಡಿ, ಕಾಮಗಾರಿ ಪ್ರಗತಿಯಲ್ಲಿದೆ. ಪಂಚ ಗ್ಯಾರಂಟಿ ಯೋಜನೆಗಳ ನಡುವೆಯೂ ಕ್ಷೇತ್ರದ ಅಭಿವೃದ್ಧಿಗೆ ಮಾಜಿ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ಅವರು ಹಾಗೂ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ಅನುದಾನ ನೀಡಿದ್ದಾರೆ ಎಂದರು.


 ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರೆಂಟಿ ಅಧ್ಯಕ್ಷ ಹೊಂಗನೂರು ಚಂದ್ರು,ಕಮರವಾಡಿ ರೇವಣ್ಣ, ಪಸಿ, ಡಿ ಪಿ ಪ್ರಕಾಶ್, ಬಸವಣ್ಣ ಕೆಂಪನಪುರ, ರಮೇಶ್ ಗಣಿಗನೂರು, ಗುರುಪ್ರಸಾದ್ ಕಾವುದವಾಡಿ, ಮಾದೇಶ್, ಬಾಗಳಿ ಚಂದ್ರು, ನಂಜುಂಡಪ್ಪ,ಚಂದನ್,   ಪಿಡಬ್ಲ್ಯೂಡಿ ಎಇಇ ಶಾಂತಮ್ಮ ಗ್ರಾಮದ ಮುಖಂಡರುಗಳು, ಗೌಡರು ಮೊದಲಾದವರು ಹಾಜರಿದ್ದರು.

ನಿಮ್ಮ ಧ್ವನಿ ನಮ್ಮ ಸುದ್ದಿ 📢

G1 NEWS Honnur - ಜನರ ಪರ ಸಮಸ್ಯೆ ಇದ್ರೆ ತಕ್ಷಣ ತಿಳಿಸಿ: 9964481518 Follow ಮಾಡಿ ಮತ್ತು Share ಮಾಡಿ 🙏



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹರವೆ ಶ್ರೀ ಗುರುಮಲ್ಲೇಶ್ವರ ಅನುದಾನಿತ ಪ್ರೌಢಶಾಲೆ ಯಲ್ಲಿ, ಅಂತಾರಾಷ್ಟ್ರೀಯ ಯೋಗ ದಿನಾಚರಣೆ.

ಇನ್‌ಸ್ಪೈರ್ ಅವಾರ್ಡ್‌ಗೆ ಯಳಂದೂರಿನ 5 ವಿದ್ಯಾರ್ಥಿಗಳು ಆಯ್ಕೆ: ಮೆಲ್ಲಹಳ್ಳಿ ಸರ್ಕಾರಿ ಶಾಲೆಗೆ ರಾಷ್ಟ್ರಮಟ್ಟದ ಗರಿ`

ಹೊನ್ನೂರು ಪ್ರಕಾಶ್ ಬಿಗ್ ಬಾಸ್ ಕನ್ನಡಕ್ಕೆ ಬರಲಿ: ಚಾಮರಾಜನಗರ ರೈತ ಹೋರಾಟಗಾರನಿಗೆ ಅಭಿಮಾನಿಗಳ ಆಗ್ರಹ