ಗಡಿನಾಡು ವೈದ್ಯಶ್ರೀ ಪ್ರಶಸ್ತಿಗೆ ಭಾಜನರಾದ ಯಳಂದೂರಿನ ವೈದ್ಯ ದಂಪತಿ
ಯಳಂದೂರು, ಆ.7: ಚಾಮರಾಜನಗರ ಜಿಲ್ಲಾ ರಂಗದೇಗುಲ ಕಲಾ ವೇದಿಕೆ (ರಿ.) ವತಿಯಿಂದ ಆಯೋಜಿಸಿದ್ದ "ಜನಪದ ಸಾಂಸ್ಕೃತಿಕ ಉತ್ಸವ–2025-26" ಕಾರ್ಯಕ್ರಮದಲ್ಲಿ ಯಳಂದೂರಿನ ಖ್ಯಾತ ವೈದ್ಯರಾದ ಡಾ. ರಮೇಶ್ ಉಡುಪ ಹಾಗೂ ಡಾ. ಶಶಿಕಲಾ ರಮೇಶ್ ಅವರಿಗೆ ಗಡಿನಾಡು ವೈದ್ಯಶ್ರೀ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸಿರುವ ವಿಶಿಷ್ಟ ಸೇವೆ, ಸಮಾಜಮುಖಿ ಕಾರ್ಯಗಳು ಹಾಗೂ ಮಾನವೀಯ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಗಣ್ಯರು ಶಾಲು ಹೊದಿಸಿ, ಮಾಲಾರ್ಪಣೆ ಮಾಡಿ ಪ್ರಶಸ್ತಿ ಫಲಕ ನೀಡಿ ಅಭಿನಂದಿಸಿದರು.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಡಾ. ರಮೇಶ್ ಉಡುಪ, ಈ ಗೌರವವು ವೈದ್ಯಕೀಯ ಸೇವೆಯನ್ನು ಇನ್ನಷ್ಟು ಜವಾಬ್ದಾರಿಯಿಂದ ಮುಂದುವರಿಸಲು ಪ್ರೇರಣೆ ನೀಡಿದೆ ಎಂದು ಹೇಳಿದರು. ಡಾ. ಶಶಿಕಲಾ ರಮೇಶ್ ಅವರೂ ಈ ಪ್ರಶಸ್ತಿಯನ್ನು ತಮ್ಮ ಮೇಲಿಟ್ಟಿರುವ ವಿಶ್ವಾಸದ ಸಂಕೇತವೆಂದು ತಿಳಿಸಿ, ಮುಂದೆಯೂ ಜನಸೇವೆಗೆ ಬದ್ಧರಾಗಿರುವುದಾಗಿ ಹೇಳಿದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ