ಪೋಸ್ಟ್‌ಗಳು

ನೂತನ ವಿಧಾನ ಪರಿಷತ್ ಸದಸ್ಯ ರಘು ಕೌಟಿಲ್ಯರಿಗೆ ಸಂತೇಮರಹಳ್ಳಿಯಲ್ಲಿ ಅದ್ಧೂರಿ ಸನ್ಮಾನ.

ಇಮೇಜ್
ವರದಿ: ಗುರುರಾಜ್ ತೆಳ್ಳನೂರು  ನೂತನ ವಿಧಾನ ಪರಿಷತ್ ಸದಸ್ಯ ರಘು ಕೌಟಿಲ್ಯರಿಗೆ ಸಂತೇಮರಹಳ್ಳಿಯಲ್ಲಿ ಅದ್ಧೂರಿ ಸನ್ಮಾನ ಸಂತೇಮರಹಳ್ಳಿ, ಜುಲೈ 5: ನೂತನವಾಗಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವ ಶ್ರೀ ರಘು ಕೌಟಿಲ್ಯ ಅವರು ಪ್ರಥಮ ಬಾರಿಗೆ ಸಂತೇಮರಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ಥಳೀಯರ ಅಭಿಮಾನ ಮತ್ತು ಪ್ರೀತಿಗೆ ಪಾತ್ರರಾದರು. ಅವರನ್ನು ಗ್ರಾಮದ ಅಭಿಮಾನಿ ಬಳಗ ಮತ್ತು ಹಿಂದುಳಿದ ವರ್ಗಗಳ ಸಮಾಜದ ಮುಖಂಡರು ಅದ್ಧೂರಿಯಾಗಿ ಸನ್ಮಾನಿಸಿ ಗೌರವ ಸಲ್ಲಿಸಿದರು. ಗ್ರಾಮದ ಪ್ರವೇಶ ದ್ವಾರದಲ್ಲಿಯೇ ಬ್ಯಾನರ್‌ಗಳು, ಹೂಮಾಲೆಗಳೊಂದಿಗೆ ರಘು ಕೌಟಿಲ್ಯ ಅವರನ್ನು ಕಾರ್ಯಕರ್ತರು ಸ್ವಾಗತಿಸಿದರು. ನಂತರ ಸನ್ಮಾನ ಕಾರ್ಯಕ್ರಮದಲ್ಲಿ ಪೇಟ, ಶಾಲು, ಹೂಮಾಲೆ ಹಾಕಿ, ಸಿಹಿ ಹಂಚಿ ಅಭಿನಂದನೆ ಸಲ್ಲಿಸಲಾಯಿತು. ಹಿಂದುಳಿದ ವರ್ಗಗಳ ಮುಖಂಡರು ರಘು ಕೌಟಿಲ್ಯ ಅವರು ಸಮಾಜದ ಏಳಿಗೆಗೆ ನೀಡಿದ ಕೊಡುಗೆಯನ್ನು ಈ ಸಂದರ್ಭದಲ್ಲಿ ಸ್ಮರಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ನೂತನ ವಿಧಾನ ಪರಿಷತ್ ಸದಸ್ಯರಾದ ಶ್ರೀ ರಘು ಕೌಟಿಲ್ಯ ಅವರು, ಸಣ್ಣ ಸಮುದಾಯದಿಂದ ಬಂದಿರುವ ನನ್ನನ್ನು ಗುರುತಿಸಿ, ಮೊದಲ ಬಾರಿಗೆ ವಿಧಾನ ಪರಿಷತ್‌ಗೆ ಆಯ್ಕೆ ಮಾಡಿ ಗೌರವಿಸಿದ ಬಿಜೆಪಿ ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯ ವರಿಷ್ಠರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು. ನನಗೆ ಸಿಕ್ಕಿರುವ ಈ ಅವಕಾಶವನ್ನು ಜನರ ಸೇವೆಗಾಗಿ ಸಮರ್ಪಿಸುತ್ತ...

ಮೇಕೆ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಕಳ್ಳ ಮಂಜ @ ಕೋಳಿ ಮಂಜ ಬಂಧನ ಟೌನ್ ಪೊಲೀಸರ ಮಿಂಚಿನ ಕಾರ್ಯಾಚರಣೆ - ಕಳ್ಳತನದ ಬೈಕ್, ಮೇಕೆ ವಶ

ಇಮೇಜ್
  ವರದಿ:ಮಣಿಕಂಠ ನಾಯಕ್ ಗೂಳಿಪುರ  ಮೇಕೆ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಕಳ್ಳ ಮಂಜ @ ಕೋಳಿ ಮಂಜ ಬಂಧನ ಟೌನ್ ಪೊಲೀಸರ ಮಿಂಚಿನ ಕಾರ್ಯಾಚರಣೆ - ಕಳ್ಳತನದ ಬೈಕ್, ಮೇಕೆ ವಶ ಹುಣಸೂರು: ಪಟ್ಟಣ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಮೇಕೆ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಆರೋಪಿ ಮಂಜ @ ಕೋಳಿ ಮಂಜ ಎಂಬಾತನನ್ನು ಬಂಧಿಸಿದ್ದಾರೆ. ದಿನಾಂಕ 13/06/2026 ರಂದು ಹುಣಸೂರು ಟೌನ್‌ನಲ್ಲಿ ಒಂದು ಮೇಕೆಯನ್ನು ಕಳ್ಳತನ ಮಾಡಿಕೊಂಡು ಮಾರುಕಟ್ಟೆಗೆ ಮಾರಾಟಕ್ಕೆ ತೆಗೆದುಕೊಂಡು ಹೋಗುತ್ತಿರುವ ಬಗ್ಗೆ ಬಾತ್ಮೀದಾರರಿಂದ ಖಚಿತ ಮಾಹಿತಿ ಬಂದಿತ್ತು. ಈ ಮಾಹಿತಿ ಮೇರೆಗೆ ನೂತನ ಇನ್ಸ್ಪೆಕ್ಟರ್ ಎಂ.ಶಿವಮಾದಯ್ಯ ರವರ ಮಾರ್ಗದರ್ಶನದಲ್ಲಿ, ನೂತನ ಪಿಎಸ್ಐ ಟಿ.ಎಂ. ತಾಜುದ್ದೀನ್ ರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಅರುಣ್ H.C 130, ಇರ್ಫಾನ್ PC 363, ದಿಲೀಪ್ PC 502, ಮಹೇಂದ್ರ PC 525, ಚಂದು PC 120 ರವರು ದಾಳಿ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯಿಂದ ಹುಣಸೂರು ಟೌನ್ ಠಾಣೆಯಲ್ಲಿ ದಾಖಲಾಗಿದ್ದ ಕಳ್ಳತನದ ಒಂದು ಬೈಕ್ ಮತ್ತು ಒಂದು ಮೇಕೆಯನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಮಂಜ @ ಕೋಳಿ ಮಂಜ ಮೇಲೆ ಈಗಾಗಲೇ ಬಿಳಿಕೆರೆ ಠಾಣೆಯಲ್ಲಿ 3 ಪ್ರಕರಣಗಳು, ಹುಣಸೂರು ಗ್ರಾಮಾಂತರ ಠಾಣೆಯಲ್ಲಿ 1 ಪ್ರಕರಣ, ಹುಣಸೂರು ಪಟ್ಟಣ ಠಾಣೆಯಲ್ಲಿ 2 ಪ್ರಕರಣಗಳು ಮತ್ತು ಪಿರಿಯಾಪಟ್ಟಣ ಠಾಣೆಯಲ್ಲಿ 2 ಪ್ರಕರಣಗಳು ದಾಖಲಾಗಿವೆ. ಬೈಕ್ ...

ಮೊಬೈಲ್ ಬಳಕೆ ಮಿತಿಗೊಳಿಸಿ, ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ: ರಾಜೇಶ್ ನಾಯಕ

ಇಮೇಜ್
  ವರದಿ:ಮಣಿಕಂಠ ನಾಯಕ್ ಗೂಳಿಪುರ  ಮೊಬೈಲ್ ಬಳಕೆ ಮಿತಿಗೊಳಿಸಿ, ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ: ರಾಜೇಶ್ ನಾಯಕ ಯಳಂದೂರು:ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ರಾದೇ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ನಡೆದ "ಮೊಬೈಲ್ ಬಿಡಿ ಪುಸ್ತಕ ಹಿಡಿ" ಸಂವಾದ ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀ ಈಶ್ವರ್ ನೆರವೇರಿಸಿದರು. ನಂತರ ಮಾತನಾಡಿ ವಿದ್ಯಾರ್ಥಿಗಳು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ, ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಸಂಪನ್ಮೂಲ ವ್ಯಕ್ತಿ ಹಾಗೂ ರಾದೇ ಪ್ರತಿಷ್ಠಾನ ಸಂಸ್ಥಾಪಕ ರಾಜೇಶ್ ನಾಯಕ್ ಜಿ.ಆರ್. ಮೊಬೈಲ್ ದುಷ್ಪರಿಣಾಮಗಳು ಹಾಗೂ ಪುಸ್ತಕ ಓದಿನ ಮಹತ್ವದ ಕುರಿತು ಸಂವಾದದ ಮೂಲಕ ಮಾಹಿತಿ ನೀಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶೈಲಕುಮಾರ್ ಎಂ. ರಾದೇ ಪ್ರತಿಷ್ಠಾನ ವತಿಯಿಂದ 50 ಪುಸ್ತಕಗಳನ್ನು ಶಾಲೆಯ ಗ್ರಂಥಾಲಯಕ್ಕೆ ನ್ಯಾಯಧೀಶರಿಂದ ವಿತರಿಸಿದರು. ನಂತರ ಮಾತನಾಡಿ ಪುಸ್ತಕ ಓದುವುದು ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಅತ್ಯುತ್ತಮ ಸಾಧನವಾಗಿದೆ. ಪುಸ್ತಕಗಳಿಂದ ಜ್ಞಾನ, ಸಾಮಾನ್ಯ ಅರಿವು, ಏಕಾಗ್ರತೆ, ನೆನಪಿನ ಶಕ್ತಿ ಹಾಗೂ ಭಾಷಾ ಕೌಶಲ್ಯ ವೃದ್ಧಿಯಾಗುತ್ತದೆ. ಉತ್...

3-4 ವರ್ಷಗಳಿಂದ ಸ್ಥಗಿತ ಶುದ್ಧ ಕುಡಿಯುವ ನೀರಿನ ಘಟಕ ಕುಡಿಯುವ ನೀರಿಗಾಗಿ ಪರದಾಟ; ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ

ಇಮೇಜ್
  ವರದಿ:ಮಣಿಕಂಠ ನಾಯಕ್ ಗೂಳಿಪುರ  3-4 ವರ್ಷಗಳಿಂದ ಸ್ಥಗಿತ ಶುದ್ಧ ಕುಡಿಯುವ ನೀರಿನ ಘಟಕ ಕುಡಿಯುವ ನೀರಿಗಾಗಿ ಪರದಾಟ; ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ ಚಾಮರಾಜನಗರ: ತಾಲೂಕಿನ ಹರದನಹಳ್ಳಿ ಗ್ರಾಮದ ನಾಯಕರ ಬಡಾವಣೆಯಲ್ಲಿರುವ ಕಲ್ಯಾಣಿ ಕೊಳದ ಪಕ್ಕ ಹಾಗೂ ವೇಣುಗೋಪಾಲಸ್ವಾಮಿ ದೇವಸ್ಥಾನದ ಸಮೀಪ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಕಳೆದ 3-4 ವರ್ಷಗಳಿಂದ ಸ್ಥಗಿತಗೊಂಡಿದ್ದು, ಸಾರ್ವಜನಿಕರು ಶುದ್ಧ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಘಟಕದ ಸುತ್ತಮುತ್ತ ಕಳೆ ಬೆಳೆದು, ನಿರ್ವಹಣೆ ಇಲ್ಲದ ಕಾರಣ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಶುದ್ಧ ಕುಡಿಯುವ ನೀರಿನ ಘಟಕ ಇದ್ದರೂ ಅದರ ಪ್ರಯೋಜನ ಜನರಿಗೆ ಸಿಗದಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ಶುದ್ಧ ಕುಡಿಯುವ ನೀರಿನ ಘಟಕವನ್ನು ದುರಸ್ತಿ ಮಾಡಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರಾದ ಚಂದ್ರಶೇಖರ ಎಚ್ಚರಿಕೆ ನೀಡಿದ್ದಾರೆ.

ತಿ.ನರಸೀಪುರ ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಹಿರಿಯ ವಕೀಲ ಜಗದೀಶ್ ಸೋಸಲೆ ಆಯ್ಕೆ.

ಇಮೇಜ್
    ತಿ.ನರಸೀಪುರ ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಹಿರಿಯ  ವಕೀಲ ಜಗದೀಶ್ ಸೋಸಲೆ  ರವರು ಆಯ್ಕೆ. ಮೈಸೂರು, ಜುಲೈ 5: ತಿ.ನರಸೀಪುರ ತಾಲೂಕು ವಕೀಲರ  ಸಂಘದ ನೂತನ ಅಧ್ಯಕ್ಷರಾಗಿ ಹಿರಿಯ ವಕೀಲರಾದ  ಸೋಸಲೆ ಗ್ರಾಮದ ಶ್ರೀ ಜಗದೀಶ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.  ವಕೀಲರ ಸಂಘದ ಸಭಾಂಗಣದಲ್ಲಿ ನಡೆದ ಸಂಘದ ವಾರ್ಷಿಕ  ಚುನಾವಣೆಯಲ್ಲಿ ಸಂಘದ ಸದಸ್ಯರು ಬಹುಮತದ ಬೆಂಬಲ  ನೀಡುವ ಮೂಲಕ ಶ್ರೀ ಜಗದೀಶ್ ಅವರನ್ನು ಸರ್ವಾನುಮತದಿಂದ ಅವಿರೋಧವಾಗಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದರು. ಅವರ ಈ ಆಯ್ಕೆಯನ್ನು ವಕೀಲ ಸಮುದಾಯ ಹರ್ಷದಿಂದ ಸ್ವಾಗತಿಸಿದೆ.  ಸಂಘದ ಅಭಿವೃದ್ಧಿ, ವಕೀಲರ ಕಲ್ಯಾಣ, ನ್ಯಾಯಾಂಗದೊಂದಿಗೆ ಸಮನ್ವಯ ಹಾಗೂ ಸಾರ್ವಜನಿಕ ಸೇವಾ ಚಟುವಟಿಕೆಗಳಿಗೆ ಹೊಸ ಚೈತನ್ಯ ದೊರೆಯಲಿದೆ ಎಂಬ ವಿಶ್ವಾಸವನ್ನು ಸದಸ್ಯರು ವ್ಯಕ್ತಪಡಿಸಿದ್ದಾರೆ. ಶ್ರೀ ಜಗದೀಶ್ ಅವರು ಕಾನೂನು ಕ್ಷೇತ್ರದಲ್ಲಿ ಅಪಾರ ಅನುಭವ ಮತ್ತು ಜನಮೆಚ್ಚುಗೆ ಹೊಂದಿದ್ದಾರೆ. ಸಂಘದಲ್ಲಿ ಈ ಹಿಂದೆ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ ಎಲ್ಲಾ ವರ್ಗದ ವಕೀಲರ ವಿಶ್ವಾಸ ಗಳಿಸಿದ್ದಾರೆ. ಚುನಾವಣಾ ಫಲಿತಾಂಶ ಪ್ರಕಟವಾದ ಕೂಡಲೇ ಸಂಘದ ಪದಾಧಿಕಾರಿಗಳು, ಹಿರಿಯ ವಕೀಲರು ಹಾಗೂ ಸದಸ್ಯರು ನೂತನ ಅಧ್ಯಕ್ಷರಿಗೆ ಹೂಮಾಲೆ ಹಾಕಿ, ಸಿಹಿ ಹಂಚಿ ಅಭಿನಂದನೆ ಸಲ್ಲಿಸಿದರು. ಸಂಘದ ಕಚೇರಿ ಎದುರು ಸನ್ಮಾನ ಕಾರ್ಯಕ್ರಮವೂ ನಡೆಯಿತು.  ಅಭಿನ...

ಡಿವೈಎಸ್‌ಪಿ ಸ್ನೇಹರಾಜ್ ಎಸ್ ಬಿ ಸಿಬ್ಬಂದಿಗಳಿಗೆ ಕಾನೂನು ಸುವ್ಯವಸ್ಥೆ ಕಾಪಾಡಲು ಮಾರ್ಗದರ್ಶನ.

ಇಮೇಜ್
ವರದಿ: ಮಣಿಕಂಠ ನಾಯಕ್ ಗೂಳಿಪುರ  ಎಸ್‌ಬಿ ಸಿಬ್ಬಂದಿಗೆ ಡಿವೈಎಸ್‌ಪಿ ಮಾರ್ಗದರ್ಶನ: ಕಾನೂನು ಸುವ್ಯವಸ್ಥೆ ಕಾಪಾಡಲು ಪರಿಣಾಮಕಾರಿ ಮಾಹಿತಿ ಸಂಗ್ರಹಕ್ಕೆ ಸೂಚನೆ ಚಾಮರಾಜನಗರ ಜು.3: ಉಪವಿಭಾಗದ ಡಿವೈಎಸ್‌ಪಿ ಅವರು ಇಂದು ತಮ್ಮ ವ್ಯಾಪ್ತಿಗೆ ಬರುವ ಪೊಲೀಸ್ ಠಾಣೆಗಳ ವಿಶೇಷ ಶಾಖೆ (SB) ಸಿಬ್ಬಂದಿಯೊಂದಿಗೆ ಸಭೆ ನಡೆಸಿ, ಇಲಾಖೆಯ ಕಾರ್ಯವೈಖರಿ ಹಾಗೂ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಮಹತ್ವದ ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ಎಸ್‌ಬಿ ವಿಭಾಗದ ವಿವಿಧ ರಿಜಿಸ್ಟರ್‌ಗಳನ್ನು ಪರಿಶೀಲಿಸಿದ ಡಿವೈಎಸ್‌ಪಿ ಸ್ನೇಹಾರಾಜ್ ಅವರು, ಅವುಗಳನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಸಿಬ್ಬಂದಿಗೆ ಸೂಚಿಸಿದರು. ಅಲ್ಲದೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯುವ ಬೆಳವಣಿಗೆಗಳ ಬಗ್ಗೆ ಪರಿಣಾಮಕಾರಿಯಾಗಿ ಗುಪ್ತ ಮಾಹಿತಿಯನ್ನು ಸಂಗ್ರಹಿಸಿ, ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಿದರು. ಸಾರ್ವಜನಿಕರ ಸುರಕ್ಷತೆ ಹಾಗೂ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಸಿಬ್ಬಂದಿ ಜಾಗರೂಕತೆಯಿಂದ ಕಾರ್ಯನಿರ್ವಹಿಸಬೇಕು. ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವ ಚಟುವಟಿಕೆಗಳ ಬಗ್ಗೆ ನಿಗಾ ವಹಿಸಿ ಸಮಯಕ್ಕೆ ಸರಿಯಾಗಿ ಮಾಹಿತಿ ನೀಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು. ಸಭೆಯಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಎಸ್‌ಬಿ ಸಿಬ್ಬಂದಿ ಉಪಸ್ಥಿತರಿದ್ದರು.

ನೂತನ ವರ್ಷದ ವಿದ್ಯಾರ್ಥಿಗಳಿಗೆ ಪರಿಚಯಾತ್ಮಕ ಕಾರ್ಯಕ್ರಮ

ಇಮೇಜ್
  ನೂತನ ವರ್ಷದ ವಿದ್ಯಾರ್ಥಿಗಳಿಗೆ ಪರಿಚಯಾತ್ಮಕ ಕಾರ್ಯಕ್ರಮ ಜೆಎಸ್ಎಸ್ ಪಾಲಿಟೆಕ್ನಿಕ್ ಕಾಲೇಜು ನಂಜನಗೂಡಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಪರಿಚಯಾತ್ಮಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.   ಈ ಕಾರ್ಯಕ್ರಮವನ್ನು ನಂಜನಗೂಡಿನ ಜೆಎಸ್ಎಸ್ ಪದವಿ ಕಾಲೇಜು ಪ್ರಾಚಾರ್ಯರಾದ ಡಾಕ್ಟರ್ ಹೊನ್ನೇಗೌಡ ರವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ನಂತರ ಮಾತನಾಡಿ ವಿದ್ಯಾರ್ಥಿಗಳನ್ನು ಕುರಿತು ವಿದ್ಯಾರ್ಥಿ ಜೀವನದಲ್ಲಿ ಎಲ್ ಎಸ್ ಆರ್ ಡಬ್ಲ್ಯೂ ಅಂದರೆ ಕೇಳುವ ಆಸಕ್ತಿ, ಮಾತನಾಡುವ ಆಸಕ್ತಿ, ಓದುವ ಆಸಕ್ತಿ ಹಾಗೂ ಬರೆಯುವ ಆಸಕ್ತಿಗಳನ್ನು ಅಳವಡಿಸಿಕೊಂಡರೆ  ಉತ್ತಮ ವಿದ್ಯಾರ್ಥಿಯಾಗಿ ಭವಿಷ್ಯದಲ್ಲಿ ಉನ್ನತ ಮಟ್ಟಕ್ಕೆ ತಲುಪಬಹುದು ಎಂದರು.  ಕಾರ್ಯಕ್ರಮದ ಪ್ರಾಸ್ತವಿಕ ನುಡಿಯನ್ನು ಸಂಯೋಜನಾಧಿಕಾರಿಗಳಾದ ಶ್ರೀ ಜಿ ಪ್ರಭು ಪ್ರಸಾದ್ ರವರು ಕಾಲೇಜಿನಲ್ಲಿ ಇರುವ ಸೌಲಭ್ಯಗಳ ಉಪಯೋಗ ಹಾಗೂ ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆಯನ್ನು ಕ್ರೀಡಾ ಚಟುವಟಿಕೆಗಳು ಮತ್ತು ಸಂಸ್ಥೆಯ ಚಟುವಟಿಕೆಗಳ ಮುಖಾಂತರ ಅನಾವರಣಗೊಳಿಸಲು ಈ ಕಾರ್ಯಕ್ರಮ ವೇದಿಕೆಯಾಗಿದೆ ಎಂದು ತಿಳಿಸಿದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯರಾದ ಶ್ರೀ ಎನ್ ವಿದ್ಯಾಶಂಕರ್ ರವರು ಡಿಪ್ಲೋಮಾ ಕೋರ್ಸ್ ಗಳನ್ನು ವ್ಯಾಸಂಗ ಮಾಡುವುದರಿಂದ ಪ್ರತಿಷ್ಠಿತ ಕೈಗಾರಿಕೆಗಳಲ್ಲಿ ಉದ್ಯೋಗಗಳನ್ನು ...