ನೂತನ ವಿಧಾನ ಪರಿಷತ್ ಸದಸ್ಯ ರಘು ಕೌಟಿಲ್ಯರಿಗೆ ಸಂತೇಮರಹಳ್ಳಿಯಲ್ಲಿ ಅದ್ಧೂರಿ ಸನ್ಮಾನ.
ವರದಿ: ಗುರುರಾಜ್ ತೆಳ್ಳನೂರು ನೂತನ ವಿಧಾನ ಪರಿಷತ್ ಸದಸ್ಯ ರಘು ಕೌಟಿಲ್ಯರಿಗೆ ಸಂತೇಮರಹಳ್ಳಿಯಲ್ಲಿ ಅದ್ಧೂರಿ ಸನ್ಮಾನ ಸಂತೇಮರಹಳ್ಳಿ, ಜುಲೈ 5: ನೂತನವಾಗಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವ ಶ್ರೀ ರಘು ಕೌಟಿಲ್ಯ ಅವರು ಪ್ರಥಮ ಬಾರಿಗೆ ಸಂತೇಮರಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ಥಳೀಯರ ಅಭಿಮಾನ ಮತ್ತು ಪ್ರೀತಿಗೆ ಪಾತ್ರರಾದರು. ಅವರನ್ನು ಗ್ರಾಮದ ಅಭಿಮಾನಿ ಬಳಗ ಮತ್ತು ಹಿಂದುಳಿದ ವರ್ಗಗಳ ಸಮಾಜದ ಮುಖಂಡರು ಅದ್ಧೂರಿಯಾಗಿ ಸನ್ಮಾನಿಸಿ ಗೌರವ ಸಲ್ಲಿಸಿದರು. ಗ್ರಾಮದ ಪ್ರವೇಶ ದ್ವಾರದಲ್ಲಿಯೇ ಬ್ಯಾನರ್ಗಳು, ಹೂಮಾಲೆಗಳೊಂದಿಗೆ ರಘು ಕೌಟಿಲ್ಯ ಅವರನ್ನು ಕಾರ್ಯಕರ್ತರು ಸ್ವಾಗತಿಸಿದರು. ನಂತರ ಸನ್ಮಾನ ಕಾರ್ಯಕ್ರಮದಲ್ಲಿ ಪೇಟ, ಶಾಲು, ಹೂಮಾಲೆ ಹಾಕಿ, ಸಿಹಿ ಹಂಚಿ ಅಭಿನಂದನೆ ಸಲ್ಲಿಸಲಾಯಿತು. ಹಿಂದುಳಿದ ವರ್ಗಗಳ ಮುಖಂಡರು ರಘು ಕೌಟಿಲ್ಯ ಅವರು ಸಮಾಜದ ಏಳಿಗೆಗೆ ನೀಡಿದ ಕೊಡುಗೆಯನ್ನು ಈ ಸಂದರ್ಭದಲ್ಲಿ ಸ್ಮರಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ನೂತನ ವಿಧಾನ ಪರಿಷತ್ ಸದಸ್ಯರಾದ ಶ್ರೀ ರಘು ಕೌಟಿಲ್ಯ ಅವರು, ಸಣ್ಣ ಸಮುದಾಯದಿಂದ ಬಂದಿರುವ ನನ್ನನ್ನು ಗುರುತಿಸಿ, ಮೊದಲ ಬಾರಿಗೆ ವಿಧಾನ ಪರಿಷತ್ಗೆ ಆಯ್ಕೆ ಮಾಡಿ ಗೌರವಿಸಿದ ಬಿಜೆಪಿ ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯ ವರಿಷ್ಠರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು. ನನಗೆ ಸಿಕ್ಕಿರುವ ಈ ಅವಕಾಶವನ್ನು ಜನರ ಸೇವೆಗಾಗಿ ಸಮರ್ಪಿಸುತ್ತ...