ಪೋಸ್ಟ್‌ಗಳು

"ವಿದ್ಯುತ್ ದೀಪ: ಶೀಘ್ರ ದುರಸ್ತಿಗೆ ನಿವಾಸಿಗಳ ಆಗ್ರಹ"

ಇಮೇಜ್
ವರದಿ: ತೆಳ್ಳನೂರು ಗುರುರಾಜ್   ಕೆಟ್ಟು ನಿಂತು ಹೋಗಿರುವ ಹೈಮಾಸ್ಟ್ ವಿದ್ಯುತ್ ದೀಪ ರಿಪೇರಿಗೆ ನಿವಾಸಿಗಳ ಅಗ್ರಹ. ಸಂತೇಮರಹಳ್ಳಿ : ಸಮೀಪದ ತೆಳ್ಳನೂರು ಗ್ರಾಮದ ಕುರುಬರ ಬೀದಿಯಲ್ಲಿರುವ ಹೈಮಾಸ್ಟ್  ಬೀದಿ ದೀಪ ಕೆಟ್ಟು ನಿಂತು ತಿಂಗಳಾದರೂ ರಿಪೇರಿಯಾಗಿಲ್ಲ ಎಂದು ಅಲ್ಲಿನ ನಿವಾಸಿಗಳು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೈಮಾಸ್ಟ್ ವಿದ್ಯುತ್ ದೀಪ ಕೆಟ್ಟು ನಿಂತು ತಿಂಗಳಾದರು ರಿಪೇರಿ ಮಾಡಿಲ್ಲ ಎಂದು ತೆಳ್ಳನೂರು ಗ್ರಾಮದ ಕುರುಬರ ಬೀದಿಯ ನಿವಾಸಿಗಳು ಗ್ರಾಮ ಪಂಚಾಯ್ತಿ ಅಧಿಕಾರಿಗಳ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮದ ಮದ್ಯದಲ್ಲಿ ಹೈಮಾಸ್ಟ್ ಈ ವಿದ್ಯುತ್ ದೀಪ ಅಳವಡಿಸಿರುವುದರಿಂದ ರಾತ್ರಿ ಪೂರ್ತಿ ಬೆಳಕಿನ ವಾತಾವರಣ ಇರುವುದರಿಂದ ಯಾವುದೇ ಅಹಿತಕರ ಘಟನೆಗಳು ನಡಿಯುವುದಿಲ್ಲ ಎಂದು ಅಲ್ಲಿನ ನಿವಾಸಿ ನಾಗೇಶ್ ತಿಳಿಸಿದರು. ಸಂಬಂಧ ಪಟ್ಟ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಎಚ್ಚೆತ್ತು ಕೂಡಲೇ ಹೈಮಾಸ್ಟ್ ದೀಪವನ್ನು ರಿಪೇರಿ ಮಾಡಿಸಿ ಕೊಡಬೇಕೆಂದು ಒತ್ತಾಯ ಮಾಡಿದ್ದಾರೆ.

ಜನತಾ ದರ್ಶನ: ಜನರ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ: ಶಾಸಕ ಎ.ಆರ್. ಕೃಷ್ಣಮೂರ್ತಿ

ಇಮೇಜ್
  ಕೊಳ್ಳೇಗಾಲ: ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಎ.ಆರ್.ಕೃಷ್ಣಮೂರ್ತಿ ಅವರು ಯಳಂದೂರು ತಾಲ್ಲೂಕು ಪಂಚಾಯಿತಿ ಶಾಸಕರ ಕಚೇರಿಯಲ್ಲಿ ಜನತಾ ದರ್ಶನ ಕಾರ್ಯಕ್ರಮ ನಡೆಸಿ ಸಾರ್ವಜನಿಕರಿಂದ ಅಹವಾಲುಗಳು ಹಾಗೂ ಮನವಿಗಳನ್ನು ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಕ್ಷೇತ್ರದ ವಿವಿಧ ಭಾಗಗಳಿಂದ ಆಗಮಿಸಿದ್ದ ನಾಗರಿಕರು ಕುಡಿಯುವ ನೀರು, ರಸ್ತೆ, ವಿದ್ಯುತ್, ನಿವೇಶನ, ಪಿಂಚಣಿ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿದರು. ಶಾಸಕರು ಪ್ರತಿಯೊಂದು ಅಹವಾಲನ್ನು ಆಲಿಸಿ, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಜನತಾ ದರ್ಶನ ಕಾರ್ಯಕ್ರಮದ ಮೂಲಕ ಜನರೊಂದಿಗೆ ನೇರ ಸಂಪರ್ಕ ಸಾಧಿಸಿ, ಅವರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಒದಗಿಸುವ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಶಾಸಕರು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು, ಮುಖಂಡರು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದು, ಜನಪರ ಆಡಳಿತಕ್ಕೆ ಶಾಸಕರ ಬದ್ಧತೆಯನ್ನು ಶ್ಲಾಘಿಸಿದರು. ಜನತಾ ದರ್ಶನ ಕಾರ್ಯಕ್ರಮವು ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ ನೀಡುವ ಪರಿಣಾಮಕಾರಿ ವೇದಿಕೆಯಾಗಿದೆ ಎಂದು ನಾಗರಿಕರು ಅಭಿಪ್ರಾಯ ವ್ಯಕ್ತಪಡಿಸಿದರು.

ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ : ಕದಂಬ ನಾ ಅಂಬರೀಷ್.

ಇಮೇಜ್
ವರದಿ: ಗೂಳಿಪುರ ಮಣಿಕಂಠ ನಾಯಕ್    ಚಾಮರಾಜನಗರ: ತಾಲ್ಲೂಕಿನ ದೊಡ್ಡರಾಯಪೇಟೆ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನ ಮಿತ್ರ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಕದಂಬ ನಾ ಅಂಬರೀಷ್ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಪರಿಸರದಲ್ಲಿ ಆಗುತ್ತಿರುವ ವೈಪರಿತ್ಯ ಮತ್ತು ಜಾಗತಿಕ ಮಟ್ಟದ ಉಷ್ಣತೆ ಹೆಚ್ಚಳದಿಂದ ಪರಿಸರ ನಾಶವಾಗುತ್ತಿದೆ ಅಲ್ಲದೆ ಜೀವಸಂಕುಲ ಅಳಿವಿನ ಅಂಚಿನಲ್ಲಿ ಇರುವ ಆತಂಕವಿದೆ ಆದ್ದರಿಂದ ಪರಿಸರದ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕರಾದ ವನಜಾಕ್ಷಿ ರವರು ವಹಿಸಿದ್ದರು  ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಹೆಲ್ತ್ ಇಂಡಿಯಾ ಜಿಲ್ಲಾ ಕೊರ್ಡಿನೇಟರ್ ಪ್ರಕಾಶ್, ಚೈತನ್ಯ ನೆಟ್ವರ್ಕ್ನಾ ಸಿಇಓ ಎಂ ಭಾಗ್ಯಮ್ಮ, ಜನ ಮಿತ್ರ ಸೇವಾ ಟ್ರಸ್ಟ್ ಆರ್‌ಪಿ ಮಣಿಕಂಠ, ಕಮ್ಯೂನಿಟಿ ಹೆಲ್ತ್ ಆಫೀಸರ್ ವಿನೋದ್ ಗ್ರಾಮದ ಯಜಮಾನರು ಮಾದೇವಯ್ಯ, ಮಾದೇವಸ್ವಾಮಿ ಆಶಾ ಕಾರ್ಯಕರ್ತರದ ಭಾಗ್ಯ ಶಿಕ್ಷಕರಾದ ಚಂದ್ರು ಹಾಗೂ ಇನ್ನಿತರರು ಭಾಗವಹಿಸಿದ್ದರು.  

ವಿದ್ಯಾರ್ಥಿಗಳ ಮೂಲಕ ವಿಶ್ವ ಪರಿಸರ ದಿನಾಚರಣೆ

ಇಮೇಜ್
  ವಿಶ್ವ ಪರಿಸರ ದಿನಾಚರಣೆ ಚಾಮರಾಜನಗರ: ತಾಲ್ಲೂಕಿನ ಹರವೆ ಗ್ರಾಮದ ಶ್ರೀ ಗುರುಮಲ್ಲೇಶ್ವರ ಅನುದಾನಿತ ಪ್ರೌಢಶಾಲೆ ಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನೂ ವಿದ್ಯಾರ್ಥಿಗಳ ಕೈಯಲ್ಲಿ ಗಿಡ ನೆಡುವುದರ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಹೊಸದಾಗಿ ಶಾಲೆಗೆ ಸೇರಿದ ವಿದ್ಯಾರ್ಥಿಗಳಿಗೆ ಶಿಕ್ಷಕರು ಹಾಗೂ ಹಿರಿಯ ವಿದ್ಯಾರ್ಥಿಗಳು ಮತ್ತು ಅತಿಥಿಗಳು ಸೇರಿ ಶ್ರೀಗಂಧ ತಿಲಕವನ್ನಿಟ್ಟು ವಿವಿಧ ಹೂವುಗಳಿಂದ ಪುಷ್ಪದ ಮಳೆಗೆರೆದು, ಬ್ಯಾಂಡ್ ಸೆಟ್ ವಾದ್ಯದ ನಾದದ ಮೂಲಕ ಸ್ವಾಗತಿಸಿದರು. ಈ ತರಹದ ಕಾರ್ಯಕ್ರಮ ಮಕ್ಕಳಿಗೆ ತುಂಬಾ ಖುಷಿ ತಂದಿತು. ಗ್ರಾಮದ ಮುಖಂಡರು ಮತ್ತು ನಿವೃತ್ತ ಶಿಕ್ಷಕರಾದ ಬಸವರಾಜಪ್ಪ ಮತ್ತು ಮಹದೇವಸ್ವಾಮಿ ಅವರು ವಿದ್ಯಾರ್ಥಿಗಳ ಜೊತೆಗೂಡಿ ವಿವಿಧ ಗಿಡಗಳನ್ನು ನೆಟ್ಟು ನೀರೆದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಬಸವರಾಜಪ್ಪ ರವರು ಮಾತನಾಡಿ ವಿದ್ಯಾರ್ಥಿಗಳಿಗೆ, “ಉತ್ತಮ ಪರಿಸರವಿಲ್ಲದೆ ಉತ್ತಮ ಆರೋಗ್ಯವಿಲ್ಲ. ಪರಿಸರವೇ ಮನುಷ್ಯ ಕುಲದ ರಕ್ಷಕ. ನಾವು ಪರಿಸರವನ್ನು ರಕ್ಷಿಸಿದರೆ ಪರಿಸರ ನಮ್ಮನ್ನು ರಕ್ಷಿಸುತ್ತದೆ” ಎಂದು ಪರಿಸರದ ಬಗ್ಗೆ ವಿಶ್ಲೇಷಣಾತ್ಮಕವಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು,ನಿವೃತ್ತ ಶಿಕ್ಷಕರಾದ ಬಸವರಾಜಪ್ಪ, ಮಹದೇವಸ್ವಾಮಿ, ಮುಖ್ಯ ಶಿಕ್ಷಕರಾದ ಪ್ರಭುಸ್ವಾಮಿ,.ಸಹಶಿಕ್ಷಕರು ಮತ್ತು ಸಿಬ್ಬಂದಿ ವೃಂದದವರು  ಉಪಸ್ಥಿತರಿದ್ದರು.

ಸಚಿವ ಸ್ಥಾನ ನೀಡುವಂತೆ ಕಾಂಗ್ರೆಸ್ ಕಾರ್ಯಕರ್ತರಿಂದ ಅಗ್ರಹ.

ಇಮೇಜ್
  ಯಳಂದೂರು : ಕೊಳ್ಳೇಗಾಲ ಶಾಸಕರಾದ ಎ ಆರ್ ಕೃಷ್ಣಮೂರ್ತಿ ರವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯ.                                      ರಾಜ್ಯದಲ್ಲಿಯೇ ಮೀಸಲು ಕ್ಷೇತ್ರದಿಂದ ಅತ್ಯಧಿಕ ಮತಗಳನ್ನು ಪಡೆದು ಆಯ್ಕೆಯಾಗಿರುವ ಪ್ರಾಮಾಣಿಕ ದಕ್ಷ ಆಡಳಿತ ಗಾರ ರಾಗಿದ್ದ ದಿವಂಗತ ಶ್ರೀ ಬಿ ರಾಚಯ್ಯನವರ ಪುತ್ರ ಎ ಆರ್ ಕೃಷ್ಣಮೂರ್ತಿ ರವರಿಗೆ ಮುಂಬರುವ ಸಚಿವ ಸಂಪುಟ ಪುನರ್ ರಚನೆ ಸಂದರ್ಭದಲ್ಲಿ ಸಚಿವರನ್ನಾಗಿ ಮಾಡಿ ಕ್ಷೇತ್ರದ ಅಭಿವೃದ್ಧಿಗೆ ಮುಂದಾಗಬೇಕು ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಸದಸ್ಯರು ಹಾಗೂ ಅಖಿಲ ಭಾರತ ವೀರಶೈವ ಮಹಸಭಾ ಜಿಲ್ಲಾ ಯುವ ಘಟಕ ಚಾಮರಾಜನಗರ   ನಿರ್ದೇಶಕ ರಾದ  ಆನಂದ್ ಹೊನ್ನೂರು ರವರು  ಒತ್ತಾಯ ಮಾಡಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಹಾಗೂ ಕೆಪಿಸಿಸಿ ಅಧ್ಯಕ್ಷರು ಮತ್ತು ಮುಖ್ಯಮಂತ್ರಿರವರನ್ನು ಒತ್ತಾಯಿಸುತ್ತೇನೆ. ಶಾಸಕರಾದ ಎ ಆರ್ ಕೃಷ್ಣಮೂರ್ತಿ ರವರು ಮೈಸೂರು ಮತ್ತು ಬೆಂಗಳೂರು ವಿಭಾಗದಲ್ಲಿ ತನ್ನದೇಯಾದ ವರ್ಚಸ್ಸು ಹೊಂದಿದ್ದು ಚಾಮರಾಜನಗರ ಜಿಲ್ಲೆಯ ನಾಡಿಮಿಡಿತ ಅರಿತವರಾಗಿದ್ದಾರೆ ಇವರಿಗೆ ರಕ್ತಗತವಾಗಿ ಆಡಳಿತಾತ್ಮಕ ಅನುಭವವಿದ್ದು,ಇವರು ದಕ್ಷತೆ ಮತ್ತು ಪ್ರಾಮಾಣಿಕತೆವುಳ್ಳ ಜನಪರ ರಾಜಕಾರಣಿಯಾಗಿದ್ದಾರೆ ಹಾಗೂ ಕ್ಷೇತ್ರದ ಅಭಿವೃದ್ಧಿಗಾಗಿ ಹಗ...

ಜಿಲ್ಲಾ ಯುವ ಘಟಕದ ನಿರ್ದೇಶಕರಾಗಿ ಆಯ್ಕೆ.

ಇಮೇಜ್
  ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಯುವ ಘಟಕದ ನಿರ್ದೇಶಕರಾಗಿ ಆಯ್ಕೆ ಯಳಂದೂರು: ತಾಲ್ಲೂಕಿನ ಹೊನ್ನೂರು ಗ್ರಾಮದ ಆನಂದ್ ರವರನ್ನು ಜಿಲ್ಲಾ ಅಧ್ಯಕ್ಷರಾದ ಎಂ.ಎನ್. ನಂದೀಶ್ ಕುಮಾರ್ (ಮೂಡ್ಲುಪುರ) ಇವರ ಆದೇಶದ ಮೇರೆಗೆ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಯುವ ಘಟಕದ ನಿರ್ದೇಶಕರಾಗಿ ಆಯ್ಕೆ ಮಾಡಲಾಗಿದೆ  ಈ ಸಂದರ್ಭದಲ್ಲಿ ಆನಂದ್ ರವರು ಮಾತನಾಡಿ ನನ್ನನ್ನೂ ಆಯ್ಕೆ ಮಾಡಿದ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರು ಹಾಗೂ ನಿರ್ದೇಶಕರು ಹಾಗೂ ಯುವಘಟಕದ ಸಹೋದರರು ಹಾಗೂ ಸಮುದಾಯದವರೆಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿ. “ಕಾಯ ವಾಚಾ ಮನಸ” ತತ್ವದಂತೆ ನಾವೆಲ್ಲರೂ ಶ್ರಮಿಸಿ ಸಂಘವನ್ನು ಬಲಪಡಿಸೋಣ ಯುವಕರನ್ನು ಸಂಘಟಿಸಿ ಸಮಾಜ ಸೇವೆಗೆ ಮುಂದಾಗುವಂತೆ ಎಂದು ಕರೆ ನೀಡಿದರು.

ನೂತನ ಸಿಎಂ ಪದಗ್ರಹಣ ಸಂಭ್ರಮಾಚರಣೆ.

ಇಮೇಜ್
  ನೂತನ ಸಿಎಂ ಆಗಿ ಡಿ.ಕೆ.ಶಿವಕುಮಾರ್ ಪದಗ್ರಹಣ ಸಂತೇಮರಹಳ್ಳಿಯಲ್ಲಿ ಡೈರಿ ನೌಕರರಿಂದ ಸಂಭ್ರಮಾಚರಣೆ ಸಂತೇಮರಹಳ್ಳಿ : ರಾಜ್ಯದ 25ನೇ ನೂತನ ಮುಖ್ಯಮಂತ್ರಿ ಆಗಿ ಡಿ.ಕೆ.ಶಿವಕುಮಾರ್ ಪದಗ್ರಹಣ ಸ್ವೀಕರಿಸಿದ ಅಂಗವಾಗಿ ಚಾಮರಾಜನಗರ ಜಿಲ್ಲಾ ಹಾಲು ಉತ್ಪಾದಕ ಸಹಕಾರ ಸಂಘಗಳ ನೌಕಕರು  ಸಂಭ್ರಮಾಚರಣೆ ಮಾಡಿದರು. ಸಂತೇಮರಹಳ್ಳಿಯ ವೃತ್ತದಲ್ಲಿ ಜಮಾಯಿಸಿದ ನೌಕರರು ಪಟಾಕಿ ಸಿಡಿಸಿ, ಸಿಹಿಹಂಚಿ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪರ ಜೈಕಾರ ಕೂಗಿ ಸಂಭ್ರಮಿಸಿದರು. ಚಾಮುಲ್‌ ಅಧ್ಯಕ್ಷ ಎಂ.ನಂಜುಂಡಸ್ವಾಮಿ ಮಾತನಾಡಿ, ರಾಜ್ಯದ ನೂತನ ಮುಖ್ಯಮಂತ್ರಿ ಆಗಿ ಡಿ.ಕೆ.ಶಿವಕುಮಾರ್ ಪದಗ್ರಹಣ ಸ್ವೀಕರಿಸಿದ ಹಿನ್ನಲೆಯಲ್ಲಿ  ಚಾಮರಾಜನಗರ ಹಾಲು ಒಕ್ಕೂಟ, ನೌಕರರ ವರ್ಗ, ಅಭಿಮಾನಿಗಳ ಬಳಗದ ವತಿಯಿಂದ  ಡಿ.ಕೆ.ಶಿವಕುಮಾರ್ ಅವರು ಪದಗ್ರಹಣ ಸ್ವೀಕರಿಸಿ ಬಳಿಕವೇ ವಿದ್ಯಾರ್ಥಿಗಳು, ಯವಕರು, ದಲಿತರು, ಶೋಷಿತರ ಪರ ಕೊಡುಗೆ ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾದರಿಯಲ್ಲಿ ಇನ್ನೂ ಅನೇಕ ಜನಪರ ಕಾರ್ಯಕ್ರಮಗಳನ್ನು ರೂಪಿಸಿ ಅವರ ಅವಧಿಯಲ್ಲಿ ಯಶ್ವಸಿಯಾಗಿ ಪೂರ್ಣಗೊಳಿಸಲಿ ಎಂದು ಆಶಿಸಿದರು. ಬೂದಂಬಳ್ಳಿ ಶಂಕ‌ರ್ ಮಾತನಾಡಿ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಹಾಲು ಉತ್ಪಾದಕರ ಸಹಕಾರ ಸಂಘದ ನೌಕರರ ವತಿಯಿಂದ ಅಭಿನಂದನೆ ಸಲ್ಲಿಸುತ್ತೇವೆ. ಸಂಘದಲ್ಲಿ ರಾಜ್ಯಾದ್ಯಂತ ಲಕ್ಷಾಂತರ ನೌಕರರು ದುಡಿಯುತ್ತಿದ್ದೇವೆ. ನಮಗೆ ಯಾವುದೇ ...